ಗೆಲ್ಲಬೇಕಿತ್ತು ಸಾವ
ನೀ ಹೋರಾಡಿದೆಯಣ್ಣ
ಜೀವವ ಪಣಕ್ಕಿಟ್ಟು
ಕಾಡು ಕೊತ್ತಲಲ್ಲಿ
ಮಂಜು ಬೆಟ್ಟದಲ್ಲಿ
ಅರೆ ಹೊಟ್ಟೆಯಲ್ಲಿ
ಕಿರು ನಿದ್ದೆಯಲ್ಲಿ.
ನೀ ಹೋರಾಡಿದೆಯಣ್ಣ
ಜೀವವ ಪಣಕ್ಕಿಟ್ಟು
ದೇಶ ಗಡಿಯಲ್ಲಿ
ಭಾಷೆ ಬಾರದೆಡೆಯಲ್ಲಿ
ರೋಷದ ಮಡುವಲ್ಲಿ
ಧೈರ್ಯದ ಸಿಡಿಯಲ್ಲಿ
ಕೊನೆವರೆಗೂ
ನೀ ಹೋರಾಡಿದೆಯಣ್ಣ
ಜೀವವ ಪಣಕ್ಕಿಟ್ಟು
ಮಂಜಿನಡಿಯಲ್ಲಿ
ರಕ್ಕಸ ಚಳಿಯಲ್ಲಿ
ಹಿಂಜಿದ ನರಗಳಲಿ
ಕುಂದಿದ ಅಂಗಗಳಲಿ
ಆದರೂ ನೀ ಗೆಲ್ಲಬೇಕಿತ್ತು ಸಾವ
ಮರೆಸಬೇಕಿತ್ತು ನಿನ್ನವರ ನೋವ!
(ಮರೆಯಾದ ವೀರ ಯೋಧನ ಹನುಮಂತಪ್ಪ ಕೊಪ್ಪದ ಅವರನ್ನು ನೆನೆದು)
- ಶ್ರೀಗೋ.
11 Feb 2016, 11:45 am
Download App from Playstore: