ನನ್ನಜ್ಜನಿಗೆ ಪ್ರತಿ
ರಾತ್ರಿಯಿಡೀ ಕೆಮ್ಮು
ಎಷ್ಟು ಹೇಳಿದರೂ ಕೇಳಲಾರನು
ಹೊಡೆಯಬೇಡವೆಂದರೂ ಧಮ್ಮು
...........................................................................................................
ಸಾಹಿತ್ಯ ಸಮ್ಮೇಳನದಲ್ಲಿ
ಕೊಡ್ತಾರಂತೆ ಭಾರಿ ಭೋಜನ
ಮೊದಲ ದಿನವೇ ಸೇರಿದ್ದಾರೆ
ಭಾರೀ ಜನ!!!
ನನಗೂ
ಕವಿಯಾಗುವ
ಆಸೆಯಿಂದ
ಕುಂತು ನಿಂತು ಮಲಗಿ
ಆತರ ಈತರ ಎಲ್ಲಾತರ
ಯೋಚಿಸಿ ಚಿಂತಿಸಿ ವಿಶ್ಲೇಷಿಸಿ
ಬರೆದೆ ಒಂದು ಕವನ
" ಕ ತೆಗೆದರೆ ವನ
ವ ತೆಗೆದರೆ ಕನ
ನ ತೆಗೆದರೆ ಕವ "
ಇದುವೆ ನಾನು ಬರೆದ ಕವನ
ನನ್ನ ಮೊದಲ ಕವನ
ಇಷ್ಟವಾದರೆ ಇಷ್ಟಪಡಿ
ಕಷ್ಟವಾದರೆ ಬಿಟ್ಟುಬಿಡಿ
ನನ್ನ ಕವನದ ಹಾವಳಿ ನಿಮ್ಮ ಕಿವಿಗಳಿಗಿಲ್ಲ
ನಾ ಬರೆದ ಕವನಗಳ ಯಾರೂ ಹಾಡುವುದಿಲ್ಲ
ಕರ್ಣ ಕಠೊರವಾಗಿ ಉಚ್ಚರಿಸುವುದಿಲ್ಲ
ಗೊಣಗುವಂತೆ ಯಾರೂ ಗುನುಗುಟ್ಟುವುದಿಲ್ಲ
ಏಕೆಂದರೆ ಮನಕ್ಕೆ ನಾಟುವಂತೆ ನಾ ಬರೆಯುವುದಿಲ್ಲ
ಒಮ್ಮೆ ಓದಿದರೆ ಮತ್ತೊಮ್ಮೆ ಕಣ್ಣು ಹಾಯಿಸುವ
ತವಕ ತರುವುದಿಲ್ಲ
ಮಗದೊಮ್ಮೆ ಓದುವ ಸಂಕಷ್ಟ ನಿಮಗಿಲ್ಲ
ಮರೆತು ಹೋಯಿತೆಂಬ ನೋವ ನಾ ಕೊಡುವುದಿಲ್ಲ
ಏಕೆಂದರೆ ನೆನಪಲ್ಲುಳಿವ ಕವನ ನಾ ಬರೆಯುವುದೇ ಇಲ್ಲ
ಬದುಕಿನ ನೂರು ನೋವ ಅರುಹಿ ತಲ್ಲಣಗೊಳಿಸುವುದಿಲ್ಲ
ಪ್ರೇಮ ಪುರಾಣ ಕೊರೆದು ನಿಮ್ಮ ತಲೆ ತಿನ್ನುವುದಿಲ್ಲ
ಸುಖದ ಸುಪ್ಪತ್ತಿಗೆಯ ಸವಿಗನಸ ಬಿತ್ತುವುದಿಲ್ಲ
ಕಾಮ ಕ್ರೋಧದ ಗಂದ ಗಾಳಿಯ ಕವನಗಳಿಲ್ಲ
ಏಕೆಂದರೆ ನನಗಾವ ಭಾವನೆಗಳೂ ಇಲ್ಲ.