ನನ್ನನ್ನು ನಾ ತಿಳಿದಿದ್ದೆ ಹುಣ್ಣಿಮೆಯ ಚಂದ್ರನೆಂದು.ಜಭದಿಂದ ತಿರುಗುತಿದ್ದೆ ಜಗತ್ತಿನ ಬೇಳಕು ನನ್ನದೆಂದು.ಗಹಗಹಿಸಿ ನಗುದಿಂದ ಹೇಳುತಿದ್ದೆ ನಾನಿಲ್ಲದೆ ಏನು ಇಲ್ಲಾ ಎಂದು.ಕೂನೆಗು ಆ ದೇವರಿಗು ಹೂಟ್ಟೇ ಉರಿದು ನಾ ಕಟ್ಟಿದ ಸುಂದರ ಸರೂವರದಲ್ಲಿ ಎಸೆದಾ ಕಲ್ಲೂಂದು.ಆಗ ತಿಳಿಯಿತು ನನಗೆ .ನಾ ಚಂದ್ರನಲ್ಲಾ
ಆ ಚಂದ್ರನಿಂದ ಬಿದ್ದ ನಿರೂಳಗಿನ ಪ್ರತಿಬಿಂಬ ಎಂದು ನಾ ಪ್ರತಿಬಿಂಬ ಎಂದು
ನಾನು ಕವನವ ಬಿಳಿ ಹಾಳೆಯ ಮೇಲೆ ನೀಲಿ ಶಾಯಿಯಿಂದ ಬರೆದು ಅವಳಿಗೆ ಕೊಟ್ಟೆ.....
ಅವಳು ನನ್ನ ನೋಡಿ, ಚೂರು ಚೂರು ಮಾಡಿ ಮೋರಿಗೆಸೆದಳು.
ಅವನು ಕವನವ ಬಿಳಿ ಹಾಳೆಯ ಮೇಲೆ
ಕೆಂಪು ಶಾಯಿಯಿಂದ ಬರೆದು ಅವಳಿಗೆ ಕೊಟ್ಟನು ....
ಅವಳು ಆತನ ನೋಡದೆ , ಅವನ ಹಿಂದೆ ಹೋದಳು.
ಅದಕ್ಕೆ
ಇಂದು ನಾನು ಇಲ್ಲಿ , ಅವಳು ಅಲ್ಲಿ !
ನೀ ಚೆಲುವೆಯೆಂದು ಬಿಗಬೇಡ
ಚೆಲುವಿನಿಂದ ಅಲೆಯಲಾಗುವುದಿಲ್ಲ ಭಾವನೆಗಳ
ಅರಿತರೆ ನೀ ಚೆಲುವಿನಡಿಯಲ್ಲಿರುವ ಭಾವನೆಗಳ
ಒಳಿತು ನಿನಗೆ ಜೀವನದ ಹಾದಿಯಲ್ಲಿ
ಕುರೂಪಿ ನಾ ನಾಗಿರಬಹುದು
ನನ್ನ ಭಾವನೆ ಕುರೂಪಿಯಲ್ಲ
ನೀ ನನ್ನ ಅರಿಯದಿದ್ದರು ಚಿಂತೆಯಿಲ್ಲ
ನಿನ್ನ ಅರಿತವರ ನೊಯಿಸಬೆಡ
ನೀ ಹೇಳಬಹುದು ನೀನು ಕುರೂಪಿ
ನೀ ನೋಡು ನಿನ್ನ ಮುಖವನ್ನ ಕನ್ನಡಿಯಲ್ಲಿ
ಅಷ್ಟೆ ಸಾಕು ಕನ್ನಡಿಯಂತ ಮನಸ್ಸು ಒಡೆದು ನುಚ್ಚುನೂರಾಗಲು
ಒಡೆದ ಮನಸ್ಸು ಉದುರಿದ ಹೂ
ಮತ್ತೆ ಒಂದಾಗಲು ಸಾಧ್ಯವಿಲ್ಲ
ನೀನು ನಿನ್ನ ಚೆಲುವಿಗಿಂತ ಜೀವನದ ಚೆಲುವನ್ನ ಕಾಪಡಿಕೊ
ನಿನ್ನ ಒಂದು ಮಾತು ನಿನ್ನ ಜೀವನವನ್ನು ರೂಪಿಸಬಹುದು
ಹಾಗೆ ಒಂದು ಮಾತು ನಿನ್ನ ಜೀವನವನ್ನು ಮುಗಿಸಬಹುದು
ಮತ್ತೆ ಮತ್ತೆ ಹೇಳುತ್ತೆನೆ ನಿನಗೆ
ಅರಿಯಬೆಕು ನೀನು ನಿನ್ನ
ಅಳೆಯಬೇಕು ನಿನ್ನ ಜೀವನವನ್ನ
ಚೆಲುವು ನಿನಗಿರಬಹುದು
ನಿನ್ನ ಚೆಲುವೆ ನಿನಗೆ ಮುಳ್ಳಾಗಬಹುದು
ನೀನು ನಿನಗೆ ಮುಳ್ಳಾಗಬೆಡ
ಇತರರ ನೊವಿನ ಮುಳ್ಳನ್ನು ತೆಗೆಯುವ ಮುಳ್ಳಾಗು
ಚೆಲುವೆ ನಿನ್ನ ಜೇನಿನಂತ ಜೀವನ
ಚೆಲುವಾಗಿರಲಿ ಚೆಲುವಾಗಿರಲಿ