ಎಂದೋ ಒಮ್ಮೆ ಕಂಡ
ನಿನ್ನ ಮೋಹಕ ನೋಟದ
ಬಲೆಗೆ ಸಿಲುಕಿಕೊಂಡು....
ಇಂದಿಗೂ ಅದರಿಂದ ಹೊರಬರಲಾರದೆ...
ಅದರೊಳಗೆ ಇರಲಾರದೆ.......
ವಿಲಿ ವಿಲಿ ಒದ್ದಡುವಂತಾಗಿದೆ,
ಮೈ ಛಳಿ ಬಿಟ್ಟು ಈಜದಂತಾಗಿದೆ.
ಭೂಮಿಯ ನದಿ ನಾನಾದರೆ...
ನಾ ಸಾಗಿದೆಡೆಯೆಲ್ಲಾ ಕಾಣುವ ಆಗಸ ನೀ..
ಆವಿಯಾಗಿ ನಿನ್ನ ಸೇರಬೇಕೆಂದೆ..
ಮಳೆಹನಿಯಾಗಿ ನಿನ್ನ ಪಡೆಯಬಯಸಿದೆ..
ನಾ ಆವಿಯಾಗುವ ಮುನ್ನ,
ನೀ ಮಳೆ ಹನಿಯಾಗಿ ಧರೆಗಿಳಿದೆ.
ನಿನ್ನ ಸೇರುವ ಕನಸು,ನಿನ್ನ ಪಡೆಯುವ ಆಸೆ..
ಮಳೆನೀರಾಗಿ ನದಿಯಲಿ ಕೊಚ್ಚಿ ಹೋಗಿದೆ..
ನೀರಿಲ್ಲದ ನದಿಯಾಗಿ ನಾ ಬರಿದಾಗಿರುವೆ,
ದಾಹ ತಣಿಸಲಾರದ ಬರೀ...ನೆಲವಾಗಿರುವೆ,
ನಾನಿಂದು ಭುವಿಯಾದರೇ....
ನೀನದೇ ಅಂಬರವಾಗಿರುವೆ.
ನಿನ್ನ ಪಡೆಯುವ ಮಾತೇ ಇಲ್ಲ.....
ನಾವಾಗಲೇ ಒಂದಾಗಿದ್ದೆವೆ....
ಅಂತ್ಯವೇ ಇಲ್ಲದ ದಿಗಂತದಂತೆ.
ಎಂದೆಂದೂ ಸೇರಿದಂತಿದ್ದರೂ,
ಎಂದೆಂದಿಗೂ ಒಂದಾಗಲಾರದಂತೆ.........
ಓ ಗೇಳತಿ ಮತ್ತೆ ಬರಬೇಡ ಬಾಳಲ್ಲಿ
ನನಗೆ ಕೊಡುವದಕ್ಕೆ ಮತ್ತೊಂದು ಹೃದಯವಿಲ್ಲ
ಹೊಸಪಾಠದ ಜೋತೆಗೆ ಸಾಕಷ್ಟು ಅನುಭವ ನೀಡಿದೆ
ಸತ್ತು ಹುಟ್ಟಿ ಬಂದೆನು ಸಾಧನೆ ಮಾಡಲು
ಈ ಜೀವ ಸಾಧನೆ ಮಾಡಿ ಸಾಧಕನಾಗಲು ಗೇಳತಿ.....................
ನನ್ನೆದೆಯ ತಂತಿ ಮೀಟಿ,ಭಾವವೀಣೆ ನುಡಿಸಿದೆ
ಹೃದಯದ ಅಂತರಾಳದಿ ಕೈ ಸೋಕಿಸಿ...
ಹೊಸ ಅಲೆ ಎಬ್ಬಿಸಿದೆ..
ನಿರಾಳ ಮನಕೆ ಹೊಸ ರಾಗ ಲಹರಿ ಕೆಳಿಸಿದೆ
ನಿನ್ನಂತರಂಗದ ಸಾಮಿಪ್ಯ ಬಯಸಿಬಂದಾಗ...
ನೀನೊಂದು ಮೌನವೀಣೆಯಾದೆ..
ನನ್ನಲ್ಲಿ ಮಾತಿನ ಪ್ರವಾಹ..
ನಿನ್ನಲ್ಲಿ...ಶಬ್ದಗಳ ಬರಗಾಲ.
ನಾನು ಬಿಟ್ಟುಬಿಡದ ಸುರಿಮಳೆ..
ನೀನು..ಕಾತರಿಸುವಂತೆ ಮಾಡುವ ಹನಿಮಳೆ.
ನಾನೆಷ್ಟೇ ಕನವರಿಸಿದರೂ..
ನಿನ್ನಲ್ಲಿ ಅಡಗಿದೆಯೊಂದು...ದಿವ್ಯಮೌನ.....