ನೀನು-ನಾನು ಎಂಬ ಸುಳಿ ಬರಲು
ನನ್ನ ಉಸಿರು ಸುಂಟರಗಾಳಿಯಾಗದು..
ಹೆಣ್ಣಲ್ಲ ಗಂಡು ಎಂಬುದು ಬಾಗಿಲ ನೆತ್ತಿಯ ಕಟ್ಟಳೆ ಕಾಯಿ ಕಟ್ಟಲ್ಲ..
ನನ್ನವಳೆ, ನೀ ಯಾರಾದರೂ ಸರಿಯೆ..
ತಾಯಿಯಾಗುವ ತಾಯಲ್ಲವೆ ನೀನು
ನನ್ನನ್ನು ಕರುಳಲ್ಲಿ ಸುತ್ತಿಕೊ
ಕಣ್ಣ ರೆಪ್ಪೆಯಾಗುವೆ..
ಪ್ರಶ್ನಿಸುವ ಗಂಡಲ್ಲ ,ನಿನ್ನ ಸ್ಪೂರ್ತಿ
ಪ್ರವೇಶದಲ್ಲಿ ಪ್ರಯಣಿಸುವ ಪ್ರಯಾಣಿಕ..
ನನ್ನವಳೆ, ನೀ ಯಾರಾದರೂ ಸರಿಯೆ..
ಪಾತ್ತರಗಿತ್ತಿ ಹಾಗೆ ಬಣ್ಣ, ಹಾರಾಡುವ
ಸ್ವಂತತೆ ಅದುಮುವುದಿಲ್ಲ..
ನಿನ್ನ ಭಾಷೆಯನ್ನು ಅನ್ಯಥ ಭಾವಿಸದೆ
ಬಾನಿನಲ್ಲಿ ಬರೆಯುವೆ..
ನಿನ್ನ ದೋಣಿಯ ದೂರಕ್ಕೆ
ನೀರಾಗಿ ಜಾಗ್ರತೆಯಿಂದ ದಡ ಸೇರಿಸುವೆ..
ನನ್ನವಳೆ, ನೀ ಯಾರಾದರೂ ಸರಿಯೆ..
ಗುಡಿಸಲು ಇಲ್ಲದಿದ್ದರೂ ಗುಡಿಯ ಕಟ್ಟುವೆ
ನನ್ನ ಪಕ್ಕೆಲುಬುಗಳ ಜೋಡಿಸಿ..
ಕೂಳಿನ ಕೊರತೆಯಾದರೆ ಕೇಳದೆ ಪ್ರೀತಿಯ ಪಾತ್ರೆಯಲಿ ಊಣಬಡಿಸುವೆ.
ನಿನ್ನ ಕಟ್ಟಡ, ಕಾಮದ ಕೋನಕ್ಕೆ ವಾಸ್ತುವಾಗಿಸದೆ
ಶತಮಾನದ ಶಿಲೆಯಾಗಿಸುವೆ..
ನನ್ನವಳೆ, ನೀ ಯಾರಾದರೂ ಸರಿಯೆ..
ನಿನ್ನ ಸೌಂದರ್ಯ ಸೊಗಸು ನೋಡಲು
ಕಣ್ಣಿನ ಕನ್ನಡಿ ತೆರೆಯುವೆ..
ಮುಂಗುರುಳು ಮುದುಡಿದರೆ
ಕಣ್ಣೀರಿನ ಎಣ್ಣೆಯಲ್ಲಿ ಕೈ ಬೆರಳಿಂದ ಬಾಚುವೆ,
ನಿನ್ನ ಉಸಿರು ಹಸಿರಾಗಿರುವಾಗಲೆ
ಮನ್ನಿಸು ನನ್ನುಸಿರು ಗಾಳಿಪಟಕ್ಕೆ ಕೊಡುವೆ...
ಸಾಕೇನಿಸಿದರು ದೇಹ ಬಾಡಿಲ್ಲ
ಸಾಕಾಗುತ್ತಿಲ್ಲ ವ್ಯಾಪಾರ .
ಜೀವನ ಜಿನುಗದ ಬಾಚಣಿಕೆ
ಸಂಬಂಧದ ಸಂದರ್ಭ
ಸಾಕೇನುವಷ್ಟು ಬಾಯಾರಿಕೆ
ಆದರೂ ಬಾಯಾರಿಲ್ಲ ಬಯಕೆ.
ಸರಪಳಿಯ ಸುತ್ತಲೂ
ಆಸೆಯ ಸಂಜೀವಿನಿ
ಮರುಜೀವ ತುಂಬುತ್ತದೆ
ಮರು ಘಳಿಗೆಯಲ್ಲಿ .
ಜಾಗ್ರತೆಯ ಜಾಗಕೆ
ಯಾರು ಬಂದರೂ
ಬಾರದೇ ಬದಿಗಿದ್ದರು.
ಬಾವಿಯಲ್ಲಿ ಬಾನಿಲ್ಲವೇ
ಅಲ್ಲಿ ನನ್ನ ಆಕೃತಿಯ ಆಕಾರದಲ್ಲಿ
ಕನ್ನಡಿ ಆಗದೆ ಕನಸಿನ ಅಲೆಯಾಗಿ
ಮತ್ತೊಮ್ಮೆ ತಿಳಿಯಾಗಿ.
ಚಳಿಗೆ ಚರ್ಮ
ಮಳೆಗೂ ಚರ್ಮ
ಬೇಸಿಗೆಗೂ ಚರ್ಮವೇ
ಅಂದ ಆಕಾರ ಅರಳಿ ಕೆರಳಿ
ಮಾಂಸದ ಮನಸಿಗೆ ರಕ್ಷಿಸುತ್ತದೆ.
ಹಾಗೇ ಸಾಕೆನಿಸಿಲ್ಲ.......