Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಪ್ರತಿಯೊಂದು ಕ್ರಿಕೆಟ್ ತಂಡದಲ್ಲೂ
ಇರುವಂತೆ ಒಬ್ಬಿಬ್ಬರು ಸ್ಪಿನ್ನರು
ಪ್ರತಿಯೊಂದು ರಾಜಕೀಯ ಪಕ್ಷದಲ್ಲೂ
ಇರುತ್ತಾರೆ ನೂರಾರು ಭಿನ್ನರು
- ಶ್ರೀನಿವಾಸ ಮೂರ್ತಿ ಎಸ್ ವಿ
29 Dec 2014, 01:51 am
ಸರ್ಕಾರಿ ಕೆಲಸಕ್ಕಾಗಿ ಶ್ರೀಮಂತರು
ತೋರಿಸುತ್ತಾರೆ ಹಣದ ಆಮಿಷ
ಆದರೆ ಮುಂದೊಂದು ದಿನ
ಬಡವರನ್ನು ಸುಡುತ್ತದೆ ಆ ವಿಷ
- ಶ್ರೀನಿವಾಸ ಮೂರ್ತಿ ಎಸ್ ವಿ
29 Dec 2014, 01:46 am
ಮಾಡಿದ ಅಡುಗೆಯಲ್ಲಿ ಪ್ರತಿದಿನ ಆತನಿಗೆ
ಸಿಂಹಪಾಲನ್ನು ಎತ್ತಿಡಬೇಕು
ಪರಿಣಾಮ ಈಗ ಅವನನ್ನು ಕುಳಿತಲ್ಲಿಂದ
ನಾಲ್ವರು ಸೇರಿ ಎತ್ತಿಡಬೇಕು...
- ಶ್ರೀನಿವಾಸ ಮೂರ್ತಿ ಎಸ್ ವಿ
28 Dec 2014, 02:01 pm
ಆತ ಸಭೆಯಲ್ಲಿ ಭಾಷಣ ಬಿಗಿಯುತ್ತಿದ್ದ
'ಹೋರಾಡಬೇಕು ನಾವು ನಮ್ಮ ಸ್ವಾತಂತ್ರ್ಯದ ಹಕ್ಕಿಗಾಗಿ'
ಮನೆಗೆ ಬಂದೊಡನೆ ಮಾಡಿಸಿದ
ಒಂದು ಬಂಗಾರದ ಪಂಜರ ಹಾಡುವ ಹಕ್ಕಿಗಾಗಿ
- ಶ್ರೀನಿವಾಸ ಮೂರ್ತಿ ಎಸ್ ವಿ
28 Dec 2014, 01:36 pm
ಹುಡುಗ ಕೇಳಿದ 'ಪ್ರಿಯೆ, ನನ್ನ ಪ್ರೀತಿಗೆ
ಸಾಟಿ ಯಾವುದು ಹೇಳು, ಮುಗಿಲೆ? ಕಡಲೆ?'
ಹುಡುಗಿ ಹೇಳಿದಳು 'ನಿಲ್ಲಿಸು ನಿನ್ನ ಬಡಾಯಿ,
ಕೊಡಿಸಲಿಲ್ಲ ನೀನು ತಿನ್ನಲು ಎಂಟಾಣೆ ಕಡಲೆ'
- ಶ್ರೀನಿವಾಸ ಮೂರ್ತಿ ಎಸ್ ವಿ
28 Dec 2014, 01:18 pm
ಕಾಯುತ್ತಿರುವೆ ಕೆಂಪಿ
ನಿನಗಾಗಿ ನಾ ಹೀಗೆ
ಹತಾಶ ಹೃದಯವ
ಹೊತ್ತುಕೊಂಡು
ಕವಾಟದ ಬಿಸಿ ರಕ್ತಕೆ
ಮಂಜು ಮೆತ್ತಿಕೊಂಡು
ನಿನ್ನ ಗೆಜ್ಜೆಕಾಲಿನ
ಹೆಜ್ಜೆ ಗುರುತಿನ ಮೇಲೆ
ಕೈಯಿಟ್ಟು ಕಣ್ಣೀರಿನ
ಮುತ್ತಿನ ಹನಿಗಳಿಂದ
ಸಿಂಗರಿಸಿಕೊಂಡು
ಆ ದರಿದ್ರ ಬಾಗಿಲು ಯಾಕೋ
ನನ್ನನ್ನೇ ಮೋಹಿಸುತ್ತಿದೆ
ಪದೇ ಪದೆ ನಾನಿಟ್ಟ ನೋಟಕೆ
ಭೂಗರ್ಭದಲ್ಲಿ ಅಲ್ಲೆಲ್ಲೋ
ಇದೆಯಂತೆ ಲಾವಾ
ಅದಕ್ಕೇನು ಕೆಲಸ ಅಲ್ಲಿ?
ಸಿಡಿದು ಕಾರಂಜಿಯಾಗಬಾರದೇ ಇಲ್ಲಿ?
ನಿನ್ನ ವಿರಹದುರಿಯಿಂದ
ಕೊಂಚ ತಂಪು ಕಂಡೇನು...
ಬದುಕುವಾಸೆ ಕಳೆದುಬಿಟ್ಟೆ ನೀನು
ಸಾಯೋಣವೆಂದರೆ ಇನ್ನೂ
ಬದುಕಿರುವೆ ನೀನು
ಮಲ್ಲಿಗೆಯ ಹಾರ ಹಿಡಿದು
ಇಂದು ಸಂಜೆ ಕರೆಮಾಡು
ನಾ ಬದುಕಿದ್ದರೆ
ಮುಡಿದು ಕೊಂಡುಬಿಡು
ಇಲ್ಲದಿದ್ದರೆ ನನ್ನ
ಭಾವಚಿತ್ರಕ್ಕೆ ಹಾಕಿಬಿಡು
ಆ ಮಲ್ಲಿಗೆಯಾದರೂ
ನೆಮ್ಮದಿ ಕಾಣಲಿ
ನಿನ್ನ ಸನಿಹದಲಿ
-ಸೂರ್ಯಸಾರಥಿ
- ಅರುಣ್ ಜಾವಗಲ್
27 Dec 2014, 04:28 am
* ಹಸಿವನ್ನು ವರ್ಣಿಸುವ ನಾನು *
ಹಸಿವನ್ನು ವರ್ಣಿಸುವ ನಾನು!
ಓಲೆಯ ಬೆಂಕಿ ಹಚ್ಚಲಿಲ್ಲ
ಮಾಷಣದಲ್ಲಿ ಬೆಂಕಿ ಇಟ್ಟೆ
ಮಡಿಕೆಯಲಿ ಬೂದಿ ಕೊಟ್ಟೆ.
ನಿರ್ಗತಿಕರ ಹಾಡು ಹೇಳುವ ನಾನು!
ನೆರಳಿನ ಪಾಯ ಹಾಕಲಿಲ್ಲ
ವರುಣನಾ ನೆತ್ತಿ ಮೇಲೆ ಬಿಟ್ಟೆ
ಕರುಳಿಗೆ ಕೊಚ್ಚೆ ನೀರ ಕೊಟ್ಟೆ.
ತತ್ವ ಸಿದ್ಧಾಂತ ಬೋಧಿಸುವ ನಾನು!
ಸಿದ್ಧಾಂತದ ಮಂಟಪ ಕಟ್ಟಲಿಲ್ಲ
ಪುಸ್ತಕದ ಅಳೆ ಖಾಲಿ ಬಿಟ್ಟೆ
ಹತ್ತು ಬೆರಳ ಅತಂತ್ರ ಕಾಲು ಕೊಟ್ಟೆ.
ಹೆಣ್ಣನ್ನು ಪೂಜಿಸುವ ನಾನು!
ಹೆತ್ತವಳ ಜಗನ್ಮತೆಯಂತೆ ಕಾಣಲಿಲ್ಲ
ಕಾಮದ ಕಣ್ಣಿನ ಬಾಣ ಬಿಟ್ಟೆ
ಶೋಷಣೆಯ ಸೆರಮನೆ ಕಟ್ಟಿ ಇಟ್ಟೆ.
ಎಲ್ಲವು ನನ್ನದಲ್ಲ ಎಂದು ಹೇಳುವ ನಾನು
ಮನೆ ಮಠ ಮಣ್ಣ ಬಿಡಲಿಲ್ಲ
ಭೋಗದ ಬಾಗಿಲ ಬಡಿಗಿಯಾಗಿ ಬಿಟ್ಟೆ
ನಾನು ನನ್ನದೆಂಬ ಬಾವಿಯ ತೆಗೆದುಕೊಂಡೆ....
-ಈಶ, ಎಂ.ಸಿ.ಹಳ್ಳಿ
- ಈಶ, ಎಂ.ಸಿ.ಹಳ್ಳಿ
23 Dec 2014, 03:16 am
* ಒಳಗೆ *
ನವರಸಗಳ ನೋಟ ಬಣ್ಣದೊಳಗೆ
ಬಣ್ಣಗಳ ನೋಟ ಕಣ್ಣಿನೊಳಗೆ
ಕಣ್ಣು ಬಣ್ಣಗಳೆರಡು ಬುದ್ಧಿಯೊಳಗೆ
ಬುದ್ಧಿ ಮನಸ್ಸು ನಮ್ಮೊಳಗೆ
ಸೂರ್ಯನ ಬೆಳಕು ಭೂಮಿಯೊಳಗೆ
ಭೂಮಿಯ ಆಕಾರ ಬೆಳಕಿನೊಳಗೆ
ಬೆಳಕು ಭೂಮಿಗಳೆರಡು ಸೂರ್ಯನೊಳಗೆ
ಸೂರ್ಯ ಕಿರಣಗಳು ಭೂಮಿಯೊಳಗೆ
ಬರವಣಿಗೆಯ ಅಕ್ಷರ ಲೇಖನಿಯೊಳಗೆ
ಲೇಖನಿಯ ಮಸಿ ಮನಸ್ಸಿನೊಳಗೆ
ಅಕ್ಷರ ಲೇಖನಿಗಳೆರಡು ವಿಷಯದೊಳಗೆ
ವಿಷಯ ಅಕ್ಷರಗಳು ಭಾವದೊಳಗೆ
ಬದುಕಿನ ಅಂದ ಇರುವಿಕೆಯೊಳಗೆ
ಇರುವಿಕೆಯ ನಡೆ ಸ್ಪಷ್ಟತೆಯೊಳಗೆ
ಅಂದ ನಡೆಗಳೆರಡು ಧ್ಯಾನದೊಳಗೆ
ಇರುವಿಕೆ ಸ್ಪಷ್ಟತೆ ಕಾಲದೊಳಗೆ
ವಾಯುವಿನ ಜೀವ ಜೀವಿಯೊಳಗೆ
ಜೀವಿಗಳ ಜೀವ ಪ್ರಕೃತಿಯೊಳಗೆ
ಪ್ರಕೃತಿ ಜೀವಿಗಳೆರಡು ಮಂಡಲದೊಳಗೆ
ವಾಯು ಜೀವಗಳು ನಮ್ಮೊಳಗೆ
- ಈಶ, ಎಂ.ಸಿ.ಹಳ್ಳಿ
- ಈಶ, ಎಂ.ಸಿ.ಹಳ್ಳಿ
21 Dec 2014, 05:50 am
ನಗುವಾಗಿ ಸೊಗಸಾಗಿ
ಕಂಪಾಗಿ ಇಂಪಾಗಿ
ಒಲವಾಗಿ ಚಲುವಾಗಿ
ಬದುಕಲ್ಲಿ ತಂಪಾಗಿ
ಬೆಳಕಾಗಿ ಒಳಿತಾಗಿ
ನಿನಗಾಗಿ ನೀನಾಗಿ
ನಿನ್ನಿಂದ ನಾನಾಗಿ
ಮಗುವಂತೆ ಖುಷಿಯಾಗಿ
ಮನದಂತೆ ಹಾಡಾಗಿ
ಖಷಿಯೆಲ್ಲ ಹೆಚ್ಚಾಗಿ
ಮನಸಲ್ಲಿ ಮನಸಾಗಿ
ಬದುಕೆಲ್ಲ ಹಸಿರಾಗಿ
ಉಸಿರಲ್ಲಿ ಉಸಿರಾಗಿ
ಜೀವಕ್ಕೆ ತಂಪಾಗಿ
ನಿನ್ನ ಪ್ರೀತಿಯ ತೋಳಲ್ಲಿ ನಾ ಬಂದಿಯಾಗಿ
ನೀನೇನೆ ನನ್ನವಳು
ನನಗಾಗಿ ಬಂದವಳು.
- ಶ್ರೀವತ್ಸ ಕೆ.ಎಸ್
17 Dec 2014, 04:32 am
ನಾನು ದಿನವೆಲ್ಲಾ ಕುಳಿತು
ಕೂಡಿದೆ, ಕಳೆದೆ, ಗಣಿಸಿದೆ, ಬಾಗಿಸಿದೆ
ನಿನ್ನ ಲೆಕ್ಕಾಚಾರದ ಮುಂದೆ
ನನ್ನ ಲೆಕ್ಕಚಾರ ಏನೇನು ಅಲ್ಲ ....
ಅವನ ಲೆಕ್ಕಚಾರದ ಮುಂದೆ
ನಮ್ಮ ಲೆಕ್ಕಾಚಾರ ಏನೇನು ನಡೆಯುವುದಿಲ್ಲ...
- ಚೇತನ್ ಬಿ ಸಿ
17 Dec 2014, 01:29 am