ಅರಿವಿನ ಹೊರೆಯ ಕಟ್ಟಬೇಕು ಸಾಕಾಗುತ್ತಿಲ್ಲ ಕಟ್ಟಿಗೆ
ಸಾಲ ಕೊಡುವಿರ! ದಾನ ಕೊಡುವಿರ !!
ಕೊಟ್ಟದ್ದು ಕೊಡುವೆ ನಿಮಗಲ್ಲದಿದ್ದರೂ ನಿಮ್ಮವರಿಗೆ, ಇಂದಲ್ಲದಿದ್ದರು ನಾಡಿದ್ದು.
ಬಡ್ಡಿಯಲ್ಲದಿದ್ದರು ಮರಿಬಡ್ಡಿ ಸಮೇತ.
ದಾರಿಹೋಕರು ಕೊಡುವೆನೆಂದರು ಷರತ್ತಿಗೆ.
ಅವರು ಷರತ್ತಿಗೆ ಕೇಳಿದ್ದು ಪಾಂಚಜನ್ಯ,
ಅಭಿಮನ್ಯುವಿನ ಹಾಗೆ ಹೆಬ್ಬೆರಳ
ಹರಿಶ್ಚಂದ್ರನ ಹಾಗೆ ಶಿರವನ್ನ
ಕೇಳಿದರೆ ಕೊಡಬಹುದಿತ್ತು .
ಸಕಲ ಜೀವಿಗೆ ಪ್ರಾಣವಾಗಿರುವಾಗ
ಪ್ರಾಣಪ್ರೀಯನ ಕೊಡುವುದಾದರೂ ಹೇಗೆ?
ಕೊರಳನ್ನು ಕೊಡುವೆ ಎಂದು ಕೋರಲೆ ಎಂದನಿಸಿತ್ತು . ಅದರೆ ನನ್ನದೆಂಬುದು ಎನಿದೆ ? ನೆರಳು ಬಿಟ್ಟು ...
ಇದಾ.. ಕೊಡುವೆ ಎಂದೆ. ಮಣಿಯಲಿಲ್ಲ ಮರುಳ.
ನನ್ನ ಹೊರೆಗೆ ನಾನು ಪವಣಿಸಬೇಕು
ಇತಿಹಾಸ ತಿರುವಿದಾಗ ದಾನಕ್ಕಿಂತ ಸಾಲ,
ಸಾಲಕ್ಕಿಂತ ಕೋಲಾಹಲ.
ಇಂದು ಮೂರರ ಮುಡಿಗೆ ಮುತ್ತಿಕುತ್ತರೆ ಎಂದುಕೊಂಡಿದೆ
ಆದರೆ ಪಂಚಭೂತಗಳೆಡೆಗೆ ಕೈ ಚಾಚಿದಂತೆ ಕಾಣುತ್ತದೆ ಕರ್ಮ....
ಮರೆಯಲಾರೆ ನಿನ್ನ ನಾನು
ಬರೆಯಲಾರೆ ಕವಿತೆಯಾ
ಮರೆಯಲ್ಹೇಗೆ ಅಂದು ನೀನು
ಸನಿಹ ಬಂದ ಸಮಯವಾ "ಮ"
ನಾವು ಕಾದ ಸಮಯವೆಲ್ಲ
ಆಯಿತಿಂದು ಸಾರ್ಥಕ
ವಿರಹದಿಂದ ಬೆಂದೆವಲ್ಲ
ಪ್ರೀತಿಗದುವೆ ಪ್ರೇರಕ. "ಮ"
ನಮ್ಮ ಬಾಳ ಬಹಳ ಪಾಲು
ಇರಲಿ ನಮ್ಮ ಪ್ರೀತಿಗೆ
ಕೂಡಿದಂತೆ ಹಾಲು ಜೇನು
ಎನಲಿ ನಮ್ಮ ರೀತಿಗೆ "ಮ"
ಕಷ್ಟ ನಷ್ಟ ಯಾವುದಿರಲಿ
ಜೊತೆಯಲೆಂದು ಬಾಳುವಾ
ಪ್ರೀತಿ,ಸ್ನೇಹ, ಸಹನೆ ಕೊಡಲಿ
ದೇವರನ್ನು ಬೇಡುವಾ "ಮ"
ಪಿ.ಕೆ.ಸುರೇಶ
#೧೬೫/೧, ಕೃಷ್ಣ
ವಿಜಯನಗರ
ಕೋ.ಚಿ.ಗ.ಪ್ರದೇಶ. ಕೋಲಾರ'ಜಿಲ್ಲೆ