ಗದ್ದಲ ಗಳಲ್ಲಿ
ಕಳೆದು ಹೋದ ಸದ್ದಲ್ಲವೀ
ಪ್ರೇಮ ಹೃದಯದ
ಪಿಸುಮಾತುಗಳ ಕಣ್ಣಲೆ
ಹೇಳುವ ಮಧುರ ಕಲೆ ಪ್ರೇಮ.......
ಒಂದೇ ನೋಟದಲ್ಲಿ
ಅಡಗಿ ಕುಳಿತ ಕಾಮಾನೆಯೋ
ತಿಳಿಯದು ಜೀವನ
ನೌಕೆಯ ಮಧುರ ಪಯಣಕೆ
ನಾವಿಕನೆ ಪ್ರೇಮ ...........
ಹೃದಯದ ಹಿಮ
ಬಂಡೆಯ ಕರಗಿಸುವ
ಬಿಸಿ ಕಾವೇ ಪ್ರೇಮ......
ಸುಪ್ತ ಮನ-ಭಾವದ
ಅಭಿವಕ್ತಿಯೇ ಪ್ರೇಮ
ಮೌನ ತಾಲ್ಮೆಗಳ
ಮಿಲನ ತ್ಯಾಗದ ಇ
ಟ್ಟಿಗೆಯ ಸೌಧ ಸಂವತ್ಸ್ಸ
ರ ಗಳಿಗೆ ಚೈತ್ರ ಕಾಲವೀ ಪ್ರೇಮ.......
ಅದರ ಪ್ರೀತಿಯ ಚಿಂತನೆ ಬಹು ಸುಮದುರ..!
ಬಾನಲಿ ಬೆಳ್ಳಕ್ಕಿ ಮುಗಿಲ ಚುಂಬಿಸೆ ಪ್ರೇಮ..
ಅಂಗೈಯಲಿ ಅಸುಗೊಸು ಅಳುತ ಮುಸುನಕ್ಕೊಡೆ ಪ್ರೇಮ..
ಹೊವಿನೊಳು ಮಕರಂದವ ಹೀರುವ ಧುಂಬಿಯಲಿ ಪ್ರೇಮ..
ಪ್ರಕ್ರುತಿಯ ಸೌಂದರ್ಯವ ಸವೆವ ಕಂಗಳಲಿಹಿದು ಪ್ರೇಮ..
ಪರಿ ಪರಿಯ ಪರಿಚಯ ಪ್ರೇಮಕ್ಕೆ..!
ಪ್ರಾಂತ್ಯವದು ಇರದು ಈ
ಅನುಭವಕೆನೊಂದ ಮೊಗದಲು
ಮಲ್ಲಿಗೆಯ ಮೊಗ್ಗರಳಿದಣಿದ ಉಸಿರಿನಲಿ
ಅಕ್ಕರೆಯು ನಲಿಯುತಲಿನಾಚುವ
ತುಟಿಗಳಲಿ ತಂಪಾದ ಮುತ್ತಿಡುತ..
ಅಮ್ರುತದ ಸವಿಯ ಸದಾಸೊಸುವುದರಲ್ಲೆ ಪ್ರೇಮ..!!
ಮುಸೂಕಿದ ಮಬ್ಬನು ಸೀಳಿ
ಭೂಮಿಗಿಲಿದ ಮೊದಲ
ಬೆಳ್ಳಿಕಿರಣ
ಅರಳಿನಿಂಥ ಹೂವಿಗಿತ್ಟಾ
ಇಬ್ಬನಿಯ ಮುತ್ತುಪ್ರೇಮ.....
ಬಿಸಿಲಿನಿಂದ ಬೆಂಡು
ಕೆಂಪಾದ ಧಾರೆಗೆ
ತಂಪೆರೇದ ಮಳೆ
ಹನಿ ಇಂದಹೊಮ್ಮಿಡ
ಮಣ್ಣಿನ ಘಮಪ್ರೇಮ......
ಕೇಕ್ಚಲಲ್ಲಿ ಕಾರು
ಹಾಲುನ್ಣುತಿರಲು
ತೀರು ತಿರುಗಿ ನೊಾಡುವ
ಆಕಲ ಕಣ್ಣಲ್ಲಿಚಿಮ್ಮುವ
ಮಮತೆಪ್ರೇಮ.....
ಹಾಳುಗಲ್ಳ ಹಸುಳೆ,
ಕಿಲಕಿಲನ ನಗುತ
ತೋಡಳ ಮಾತಲಿ ಕರೆದ
"ಅಮ್ಮ" ಎಂಬ ಕೂಗುಪ್ರೇಮ.....
ನೋಾಟಗಳು
ಬೆರೆತಾಗ ತುಟಿಯಂಚಲಿ
ಮಿಂಚಿ, ವಿನಿಮಯ
ವಾದಒಲವಿನ ಮುಗುಳ್ನಾಗೆಪ್ರೇಮ....
ಪದಗಳಿಗೆ ನಿಲುಕಡೆ
ಎದೆಯಲ್ಲೇ ಉಳಿದ
ನೂರು ಮಾತುಗಳ
ಬೆಚ್ಚಾಗಿನ ಭಾವ ಲಹರಿಪ್ರೇಮ......
*ಪ್ರೀತಿಯೆಂದರೆ* ...
ಅವರ ಪ್ರಕಾರ
ಪ್ರೀತಿಯೆಂದರೆ
ಒಂದು ನದಿ,ಹತ್ತಾರು
ಮುಗ್ಧಜೊಂಡುಗಳನ್ನು
ಮುಳುಗಿಸುತ್ತಾಸಾಗುವ ತೊರೆ!
ಮತ್ತೆ ಕೆಲವರಿಗೆ,
ಇಡಿ ಎದೆಯನ್ನೇ
ರಕ್ತದಲ್ಲಿ ಅದ್ದುವ
ಕತ್ತಿಯ ಅಲುಗು!
ಮಿಕ್ಕವರ ಪಾಲಿಗೆ
ಅದು ಎಲ್ಲವನ್ನೂ
ನುಂಗುವ ಒಂದು
ಅನಿವಾರ್ಯ ಹಸಿವು!
ಆದರೆ, ಹುಡುಗಿ!
ನನ್ನ ಪಾಲಿಗೆ
ಪ್ರೀತಿಯೊಂದು ಸ್ನಿಗ್ಧ
ಹೂವು ಹಾಗು
ನೀನೆಅದರ ತಾಯಿ ಬೇರು! .....
ಒದ್ದೆಯಾದ ಕಣ್ಣು ಮತ್ತೆ ಕದ್ದು ಅಳುತ್ತಲೇಇದೆ
ಹ್ರದಯದಾಳದಲ್ಲೆಲ್ಲೋ ಅಳಲ ಬಚ್ಚಿಟ್ಟುಕೊಂಡು
ಮಂದ ಬೆಳಕಿನ ಆ ಸಂಜೆ ಕಣ್ಮುಚ್ಚಿ ಕುಳಿತೇ ಇದ್ದೆ
ಮರುದಿನ ಇಬ್ಬನಿ ಚುಂಬಿಸುವವರೆಗೂ..
ಮುಚ್ಚಿದ್ದ ಕಣ್ಣು ತೆರೆದು ಸುತ್ತಲೂ ದಿಟ್ಟಿಸಿದೆ
ಕಂಡಿತು ಆ ಹಳೆ ನೆನಪು ಸಾಲು ಸಾಲಾಗಿ
ಅಂದು ನೀನಿರೆ ಆ ಮಧುರ ಉದ್ಯಾನದಿ
ಅದೆಷ್ಟೋ ಹೊತ್ತು ತಿಳಿಯದೆ ಸರಿದವು
ಆ ಉದ್ಯಾನದ ಮೊಗ್ಗು, ಹೂವುಗಳ ನಡುವೆ
ನಮ್ಮ ಸ್ನೇಹದ, ಮೌನ ಭಾಷೆಯ,
ಆತ್ಮೀಯತೆಯ ಸವಿನೆನಪಿನ ಹಸಿರು
ಹೂವಾಗಿ ನನ್ನಲ್ಲಿದೆ ಇಂದು
ಮರೆಯದೆ ಜೊತೆಗೊಯ್ಯುವೆ
ಯಾವಾಗಲೂಇದೇ ತಾನೆ ನನ್ನ ನಿನ್ನ ಸ್ನೇಹದ ಕುರುಹುಗಳು.