Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸ್ನೇಹಾನಾ ಪ್ರೀತೀನಾ...? ಪ್ರ

ನೋವ್ ಮಾಡೋ ಫ್ರೆಂಡ್ ನ ಪ್ರೀತಿ ಮಾಡಿ
ಆದರೆ
ಪ್ರೀತಿ ಮಾಡೋ ಫ್ರೆಂಡ್ ಗೆ ನೋವ್ ಮಾಡ್ಬ್ಡ್ ಬೇಡಿ
~ಪ್ರಭಾಕರ ನನ್ ರೋಜ್ 

- ಪ್ರಭಾಕರ್ ರೋಜ್

02 Feb 2015, 02:29 pm

ಹಾಗೆ ಸುಮ್ಮನೆ

ಜಾಗೃತೆ ಮಾಡಿಡಿ ಒಳ್ಳೆಯದು ಅಂತಾರೆ
ಎಲ್ಲಾ ಸುಳ್ಳು

ನನ್ನ ಚಿಕ್ಕಪ್ಪ ಭಾರಿ ಜಾಗೃತೆ ಮಾಡಿಟ್ಟಿದ್ದರು 5 ಕಿಲೋ ಗಾಂಜಾ

ಪೋಲಿಸರು ಅವರನ್ನು ಎತ್ಕೊಂಡು ಹೋದರು

MIK

- ishak

01 Feb 2015, 04:26 pm

ನೆನಪು..!!

ಬಿಳಿಯ ಹಾಳೆಯ ಮೇಲಿನ ಬರಹಗಳು
ನಿನ್ನ ಮುದ್ದಾದ ಮಾತುಗಳು
ಹುಣ್ಣಿಮೆಯ ಬೆಳದಿಂಗಳ ಚಂದ್ರನು
ನಿನ್ನ ಮುದ್ದಾದ ನಗುವು
ಹೂವಿನ ಮೇಲಿನ ಮಂಜಿನ ಹನಿಯೂ
ನಿನ್ನ ಮುಖದಲ್ಲಿ ಮೂಡುವ ನಾಚಿಕೆಯು
ಮುಗಿಲಲ್ಲಿ ಮೂಡುವ ಮೌನವೂ
ನಿನಗೇ ಹೇಳಲಾಗದ ಪ್ರೀತಿಯು
ನಾಳೆಯ ಸೊಗಸ ಚಿತ್ರ ಬಿಡಿಸಲಾಗುತ್ತಿಲ್ಲ
ನಿನ್ನೆಯ ನೆನಪು ,ಮರೆತು ಗೀಚಲು ಸಾಧ್ಯವಿಲ್ಲ
ನನ್ನ ಪ್ರೀತಿಯು ನಾಲಿಗೆಗೆ ತಿಳಿಯದು
ನನ್ನ ಹೃದಯಕೆ ಮಾತು ಬರದು.

- manu

01 Feb 2015, 02:50 pm

ನಿನ್ನದೆಲ್ಲವೂ ಶಾಶ್ವತವಲ್ಲ

ನಿನ್ನದೆಲ್ಲವೂ ಶಾಶ್ವತವಲ್ಲ
ನನ್ನ ಹಾರೈಕೆಯೇ

ನೀ ಅಹಂಭಾವ ಪಡಬೇಡ
ನನಗೂ ಬರುವುದು ಒಂದು ಘಳಿಗೆ

ನಿನಂಗಿತ ಮೇಲಿನ ಘಳಿಗೆ

ಸೂರ್ಯ ಅಹಂಭಾವ ಪಟ್ಟರೆ
ಕತ್ತಲೆ ಬೀರುವುದು ಜಗವೆಲ್ಲಾ

ಗಾಳಿ ಬೀಸದಿದಿದ್ದರೆ
ನಿಂತು ಹೋಗುವುದು ಉಸಿರು

ಏರಿಳಿತ ಸಹಜ ಪ್ರಕ್ರಿಯೆ
ಇಂದು ನೀನು
ನಾಳೆ ನಾನು ಆಗಬಾರದೆಂದಿಲ್ಲ

ಪ್ರಕೃತಿಯ ಕಾರುಣ್ಯವ

ಅದು ಸೃಷ್ಟಿಸಿದ ಸೃಷ್ಟಿಕರ್ತನ ಮನದಭಾವವಾ
ತಿಳಿ ನೀನು

ಮುಹಮ್ಮದ್ ಇಸ್ಹಾಕ್ ಕೌಸರಿ ಪರ್ಲೋಟು

- ishak

01 Feb 2015, 05:46 am

ತೋಚಿದ್ದು ಗೀಚಿದ್ದು

ನಾನು ಕವಿಯಲ್ಲ ಕವಿತೆಯ ಬರೆದಿಲ್ಲ

ಕಾವ್ಯದ ಸವಿಯ ನಾ ಉಣ್ಣಲೂ ಇಲ್ಲ

ಇದು ಬರೀ ಮನಸ್ಸಿನ ಹುಚ್ಚು

ತೋಚಿದ್ದು ಗೀಚಿದ್ದು

ಎಂ.ಐ.ಕೆ

- ishak

31 Jan 2015, 04:58 pm

ಹುಚ್ಚು ಪ್ರೀತಿ


ಹುಚ್ಚು ಪ್ರೀತಿ ಮೆಚ್ಚಿ ಹೋದಾಗ

ಕೊಚ್ಚಿ ಹೊಯ್ತು ನನ್ನ ಹಣವು

ಹುಚ್ಚು ಪ್ರೀತಿ ಮುಚ್ಚಿ ಹೋದಾಗ

ಸತ್ತು ಹೋಯ್ತು ನನ್ನ ಮನವು

ಹೊತ್ತು ಹೋಯ್ತು ನನ್ನ ಹೆಣವು

ಎಂ.ಐ.ಕೆ

- ishak

31 Jan 2015, 07:09 am

ಜೀವನ ಧನ್ಯತೆ


ಕುರುಡರ ಕಣ್ಣಾಗು

ದೀನದಲಿತರ ಧ್ವನಿಯಾಗು

ಹೆಣ್ಣಿನ ಸಂರಕ್ಷಕನಾಗು

ನಿರಾಶ್ರಿತರ ಆಸರೆಯಾಗು

ದುರ್ಬಲರ ಬಾಳಬೆಳಕಾಗು

ಮಣ್ಣಾಗುವ ಮುನ್ನ ಮನುಜ
ನೀ ಧನ್ಯನಾಗು

ಮುಹಮ್ಮದ್ ಇಸ್ಹಾಕ್ ಕೌಸರಿ

- ishak

30 Jan 2015, 02:23 pm

ಹೀಗಿರಲಿ

ಸ್ನೇಹ ಕಬ್ಬಿನೊಳು ಬೆರೆತ ಸಿಹಿಯಂತಿರಬೇಕು
ಗುಣ ನೀರಿನೊಳು ಬೆರೆತ ಬಣ್ಣದಂತಿರಬೇಕು

ಕಬ್ಬಿನಿಂದ ಸಿಹಿಯನು
ನೀರಿನಿಂದ ಬಣ್ಣವನು
ಬೇರ್ಪಡಿಸಲಾಗದು

ಮುಹಮ್ಮದ್ ಇಸ್ಹಾಕ್ ಕೌಸರಿ ಪಿ.ಎಚ್

- ishak

30 Jan 2015, 02:02 am

ಗುರಿ



ಗುರಿ ಇಲ್ಲದ ಜೀವನ ಗರಿ ಇಲ್ಲದ ಹಕ್ಕಿಯಂತೆ ಹಾರದು

ಗುರಿ ಇದ್ದೂ ಶ್ರಮವಿಲ್ಲದ ಜೀವನ
ಮೇಲೆ ಏರದು

ಗುರು ಇರಲಿ ಗುರಿ ಇರಲಿ
ಶ್ರಮದೊಂದಿಗೆ ಮೇಲೆ ಮೇಲೆ ಹಾರುತ್ತಿರಲಿ

ಮುಹಮ್ಮದ್ ಇಸ್ಹಾಕ್ ಕೌಸರಿ

- ishak

29 Jan 2015, 11:26 am

ಹೃದಯವಿರಲಿ ಚಂದ

ನಾನು ಬಿಳಿಯ

ನೀನು ಕರಿಯ

ಹೊರ ಬಿಳಿಯಾದರೇನು
ಒಳ ಕಪ್ಪಾಗಿ

ದೇವ ನೋಡುವನು ಮನದ ಅಂದ

ಜನ ನೋಡುವರು ಬಾಹ್ಯ ಅಂದ

ಹೊರ ಅಂದ ಕೆಲಕಾಲದಲಿ ದುರ್ಗಂಧ

ಮನದಿ ಅಂದ ಎಂದೂ ಸುಗಂಧ

ಕರಿಯನಿರಲಿ ಬಿಳಿಯನಿರಲಿ

ಬಡವನಿರಲಿ ಶ್ರೀಮಂತನಿರಲಿ

ಹೃದಯವಿರಲಿ ಚಂದ


ಮುಹಮ್ಮದ್ ಇಸ್ಹಾಕ್ ಕೌಸರಿ ಪಿ.ಎಚ್

- ishak

29 Jan 2015, 11:20 am