Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನಸೊಂದು ಕತ್ತಲಕೋಣೆ....

ಕತ್ತಲೆಯ ಕೊಣೆಗೆ ಬೆಳದಿಂಗಳು ಬಿದ್ದಾಂಗ
ನನ್ನ ಮನದ ಕಡುಕತ್ತಲೆ ನಿನ್ನಿಂದ ದೂರಾಯಿತು ಗೆಳತಿ...,

ಬಿರುಬಿಸಿಲ ವೇಳೆಯಲಿ ಅರವಟಿಗೆ ಕಂಡಂಗ
ನಿನ್ನ ನಗು ನನ್ನ ಸೊಕಿದೆ ಒಡತಿ.....

ಹಸಿವಾದರೆನು ನಿರಡಿಕೆಯಾದರೆನು
ಬತ್ತದಾ ಬುಗ್ಗೆಯ ನಗೆಯಶಲೆ ನಿನ್ನಲ್ಲಿದೆ..,
ಹಗಲು ಉರಿಳಿದರೆನು ಚಂದ್ರಮೂಡಿದರೆನು
ನಿನ್ನಾಗಮನಕೆ ನಾ ಕಾಯುವೆ ಒಲವೇ....

- Dharmu.s.m

04 Feb 2015, 09:16 am

ಧರ್ಮ ಧರ್ಮವೆಂದು ಹೊಡೆದಾಡಿದೆ

ಧರ್ಮ ಧರ್ಮವೆಂದು ಹೊಡೆದಾಡಿದೆವು

ಧರ್ಮದ ಮರ್ಮವ ತಿಳಿಯದೆ ಹೋದೆವು

ಧರ್ಮ ಧರ್ಮವೆಂದು ಹೋರಾಡಿದೆವು

ಧರ್ಮದ ತತ್ವವ ಅನುಸರಿಸದೆ ಹೋದೆವು

ಧರ್ಮದ ನಾಮದಿ ನಾವೇ ತುರುಕಿದ ಸಿದ್ಧಾಂತದಿ
ಯಾರನ್ನೋ ಕೊಂದೆವು

ನೈಜ ಧರ್ಮದಿ ತತ್ವವು ಇಂದು
ಬರೀ ಗ್ರಂಥದಿ ಹುದುಗಿಹೋಗಿದೆ

ಹೆಸರ ದುರ್ಬಳಕೆಯ
ನೋಡಿ ಮೌನದಿ ರೋಧಿಸತೊಡಗಿದೆ

ಎಂ.ಐ.ಕೆ

- ishak

04 Feb 2015, 06:20 am

ಜೀವನ ಒಂದು ಪರೀಕ್ಷೆ

ಜೀವನ ಒಂದು ಪರೀಕ್ಷೆ

ವಿಜಯದ ಹಾದಿ

ಒಂದೇ

ತಾಳ್ಮೆ

ತಾಳಿದವನು ಬಾಳಿಯಾನು

ಎಂ.ಐ.ಕೆ

- ishak

04 Feb 2015, 03:09 am

ಗುಬ್ಬಿ ಗೂಡು

ಗುಬ್ಬಿ ಗೂಡು ಇಂಚರ ಅವು ನಿನ್ ಇದ್ದಾಗ ಸುಂದರ
ನರಕ ಇಂದು ಗೋಚರ ನನ್ನ ನೀ ಬಿಟ್ಟ್ ಹೋದ ನಂತರ....!

- Vinayprathap

03 Feb 2015, 01:10 pm

ಮನಸಲ್ಲಿ ನೆನಪಾಗಿ

ಮನಸಲ್ಲಿ ನೆನಪಾಗಿ
ಹೃದಯದಲ್ಲಿ ಹಾಡಾಗಿ
ಕಣ್ಣಲ್ಲಿ ನೀರಾಗಿ
ಎಂದಿಗೂ ಇರುವೇ ನಿನು
ಎಂದೆಂದಿಗೂ ಇರುವೆ ನಿನು.......

- Vinayprathap

03 Feb 2015, 01:09 pm

ಹೃದಯ ಸಾಯೊದು ಒಂದೇಸರಿ.....!

ಸತ್ತರೂ ನನಸಾಗದ ಕನಸುಗಳ ಹಿಂಡು
ಬದಲಾಗಿದೆ ಜೀವನ ಇಂದು
ನೀನೆ ಕೊಂದೆ ಇದ್ದದೊಂದು ಪ್ರೀತಿಯ
ಮರುಹುಟ್ಟು ಇನ್ನೆಲಿ ಹೃದಯ ಸಾಯೊದು ಒಂದೇಸರಿ.....

- Vinayprathap

03 Feb 2015, 01:07 pm

ನಿದಿರೆ

ನಿದಿರೆ
ಬಾರದ
ಈ ರಾತ್ರಿ
ನಿನ್ನೆಯ
ಕನಸುಗಳ
ಮೆಲುಕು
ಹಾಕುತಿದೆ

ಮೊಝವಿ

- ಮೊಝವಿ

03 Feb 2015, 11:52 am

ಸ್ನೇಹ ಯಾತ್ರೆ

ತಿರುಗುತ್ತಿರುವ ಧರೆಯಲ್ಲಿ
ಯಾತ್ರೆ ಹೊರಡಲೇ
ಬೇಕಾದವರು ನಾವೆಲ್ಲಾ

ಆಡಂಭರದ ಇಹಲೋಕದ
ಆಹ್ಲಾದದ ನಡುವೆ
ಮರೆತೆವು ನಾವು ಪರಲೋಕವ

ಬರೋವಾಗ ತರೋಕೆ
ನೆನಪಿರಲಿಲ್ಲ ಏನನ್ನೂ
ಹೋಗುವವರು ಕೊಂಡು
ಒಯ್ಯುವುದು ಕಾಣ್ತಿಲ್ಲ ಏನನ್ನೂ

ಇದ್ದಷ್ಟು ದಿನ ಗಳಿಸಬೇಕು
ಸದಾ ನೆನಪಿರೋ
ನಿಮೆಲ್ಲರ ಸ್ನೇಹವನ್ನೂ

ಮೊಝವಿ

- ಮೊಝವಿ

03 Feb 2015, 11:50 am

ನನ್ನ ನಗುಮೊಗವ ನೋಡಿ

ಅಮ್ಮಾ ಎಂದರ್ಥದ
ಸನ್ನೆಯ ಮನಗಂಡು

ಎದೆಗಪ್ಪಿದ ಬಿಗಿ ಅಪ್ಪುಗೆಯಿಂದ
ಮೆಲ್ಲನೆ ಬಿಡಿಸಿ
ನೀ ದೂರ ಹೋದೆಯಲ್ಲಾ

ಹೇಗೆ ಮನಸ್ಸು ಬಂತು ಹೇಳು

ಬಾಲ್ಯದ ನೆನಪು ನಿನಗಾಗಲಿಲ್ಲವೇ

ಮಾತೆಯ ಮಮತೆಯ
ಅನುಭವಿಸಿಲ್ಲವೇ ನೀ

ಕಾಮ ಎನ್ನುವ ಎರಡಕ್ಷರಕೆ
ಬಲಿಯಾದೆಯಾ ನೀ

ನನ್ನ ಬವಣೆಯ ಮರೆತು ನೀನೆಲ್ಲಿ ಸುಖಪಡುತಿರುವೆ

ಬದುಕು ಬರೆಯುವ ಆಸೆ ನಿನ್ನದು
ನನ್ನ ಕೊಂದು

ನಾ ಎಳೆಯ ಚಿಗುರು
ನೂರು ನೂರು ಕನಸು ಹೊತ್ತು
ಈ ಧರೆಗೆ ಬಂದವಳು

ನೀ ಕೇಳಲಿಲ್ಲ

ನನ್ನ ಆರ್ತನಾದದಲಿ
ನಿನ್ನ ಮೈ ಮಾರಾಟದಲಿ
ಅಮ್ಮಾ
ಎನ್ನುವ ಕೂಗಿನಲಿ

ಕರುಣಿದ ಕಾಮ ಪಿಶಾಚಿ
ನನ್ನಂತೆ ಮಗುವಾಗಿದ್ದ

ಪ್ರೀತಿಯ ಬೆಲೆ ಅರಿಯದ
ಕಠೋರ ಬಾಯಿಗೆ ತುತ್ತಾಗಿ
ನೀ ಬೆಂದು ಹೋದೆಯಲ್ಲಾ

ನನ್ನ ನಿನ್ನೊಂದಿಗೆ ಸೇರಿಸಿ

ಎಂ. ಇಸ್ಹಾಕ್ ಕೌಸರಿ
ಪರ್ಲೋಟು

- ishak

02 Feb 2015, 05:36 pm

ಸ್ನೇಹಾನಾ ಪ್ರೀತೀನಾ...? ಪ್ರ

ನೋವ್ ಮಾಡೋ "ಫ್ರೆಂಡ್" ನ ಪ್ರೀತಿ ಮಾಡಿ
ಆದರೆ
"ಪ್ರೀತಿ" ಮಾಡೋ ಫ್ರೆಂಡ್ ಗೆ ನೋವ್ ಮಾಡ್ಬ್ಡ್ ಬೇಡಿ


~ಪ್ರಭಾಕರ ನನ್ ರೋಜ್ 

- ಪ್ರಭಾಕರ್ ರೋಜ್

02 Feb 2015, 02:29 pm