Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನೂರೊಂದು ಭಾವನೆಗಳ ಹಂದರವು
ಹಾಸುಹೊಕ್ಕಾಗಿದೆ ಮನದಲಿ
ಕಲ್ಪನಾ ಲೋಕದಲಿ ಮಿಂದ್ದೆದ್ದು
ಆಸೇಗಳು ನರ್ತಿಸುತ್ತಿವೆ ಇಲ್ಲಿ..
ಹೊಲಸು ಮಾತುಗಳು
ಅಪ್ಪಳಿಸುತಿವೆ "ರಣವೇಗದಲಿ"
ಎದೆಯಗೊಡೆಗೆ.
ನನ್ನ ಹುಟ್ಟಿನ ಪಾಪಪ್ರಜ್ಣೆಯ ಸೂಚಿ
ಚಪ್ಪರಿಸಿ ಎಬ್ಬಿಸಿದೆ
ನಡುಮದ್ಯದ ನಡುನಿದ್ರೆಯಲಿ..
ಮನಸಿನಾಸೆಯ ವ್ಯಾಪ್ತಿ ಅಕಾಶದಗಲ
ವ್ಯಕ್ತಪಡಿಸುವ ಮಾರ್ಗ ಸಿಗದೆ
ಬಳಲಿದೆ,ತೊಳಲಿದೆo
ಆತ್ಮಸಂತೃಪ್ತಿಯೆಡೆಗೆ ಮನನಡೆದಿದೆ
ಜೀವನವೆ ಸಾಕಾಗಿದೆ ಎತಕಿ ಸಂತೃಪ್ತಿ ಅಲ್ಲವೆ...
- Dharmu.s.m
08 Feb 2015, 10:33 am
ನಗುತಿದ್ದೆ, ನಗಿಸಿದ್ದೆ,ನರ್ತಿಸುತಿದ್ದೆ
ಕರುಣೆ ಎಂಬ ದೀಪದ ಬೆಳಕಿನೊಂದಿಗೆ
ಮರುಗುತಿದ್ದ ಮನಗಳೆರಡ ಕದವ ತಟ್ಟಿದೆ
ಬೆಳಕ ನಿಡಿದೆ,ಮನಕೆ ಬೆಳಕ ನಿಡಿದೆ.
ಪ್ರತಮ ಪ್ರೀತಿ ಸಿಹಿಯ ರೀತಿ
ತನಿಸಿ,ಕುನಿಸಿತು
ನಗುತ,ಅಳುತ, ದಿನವ ದೂಡುತ
ಮುಂದೆ ಸಾಗಿತು.
ಮೊದಲ ಸ್ಪರ್ಶ,ಮೊದಲ ಚುಂಬನ
ಹರುಶ ತಂದವು
ಕಣ್ಣನೋಟ,ಹೆಜ್ಜೆಓಟ
ಉತ್ಸಾಹದ ಎರಕ ಹೊಯ್ದವು...
ಎಕೊ,ಎನೊ ಕಾಣದಾದೆ
ಪ್ರೇಮ ಪುಸ್ಪ ಬಾಡಿಬಳುಕಿತು
ಹರುಶ ನಿಡಿದ ಪ್ರೇಮಪುಸ್ಪದ ಎಲೆಯುಕಿತ್ತು
ಮಣ್ಣು ಮೆತ್ತಿತು ಪ್ರೇಮಲತೆಯು ಮುದುಡಿಹೊಯಿತು ಮತ್ತೆಂದು ಅರಳದಾಯಿತು.
- Dharmu.s.m
08 Feb 2015, 10:27 am
ಸೂರ್ಯನಾ ಬೆಳಕಿಗೂ ಚಂದ್ರನಾ ಬೆಳದಿಂಗಳಿಗೂ
ಯಾಕಿಲ್ಲ ಅಸ್ಪೃಶ್ಯತೆ
ಬಿಸುವಾ ತಂಗಾಳಿಗೂ ಜೀವನಾಡಿ ನಿರಿಗೂ
ತಟ್ಟಿಲ್ಲ ಜಾತಿ ಬೇಗೆ...
ಓಡಲ ನಿಡಿದ ಭೂಮಿಗೂ
ದೇವವರದ ಕಡಲಿಗೂ
ಭೂಮಿ ಓಡಲ ತನಿಸುವ ಮಳೆರಯಾನ
ಮುದ್ದು ಮನಕೂ
ತಟ್ಟದಿರುವ ಇ ಗೂಳು
ನನ್ನನೆಕೆ ಮೆತ್ತಿತು,ಬಿಟ್ಟುಹೊಗದಾಯಿತು...
ನಾನು ಮನುಜನೇ ,ನನ್ನದು ಜೀವವೆ
ಮೃಗಿಯ ಮನಗಳು ಅರಿತು ನಡೆದರೆ
ಅಳೀಸಿತೀ ಬೆಗೆ...
ನಾ ಕಂಡ ಕನಸಿದು ನನಸಾದಿತೇ
ನಿರ್ಮಲ ಕಲ್ಪನೆ ನನದಾದಿತೆ
ಕರುಣಿಸು ಈ ಬಡವನ ಜೀವನಕೆ
ನಿನ್ನ "ಕರುಣೆ" ಎಂಬ ವರವನು
ಅಳಿಸು ಈ ಜಾತಿಯಾ
ನನ್ನ ದೇವರೆ,ನನ್ನ ಮುದ್ದು ದೇವರೆ...
ಧರ್ಮು...
- Dharmu.s.m
08 Feb 2015, 10:20 am
ನಾ ಸಿರಿವಂತ
ನೋಡಿದಾಗ ಬಡವನ
ನನಗಿಂತ
ನಾ ಆರೋಗ್ಯವಂತ
ಕಂಡಾಗ ರೋಗಿಯ
ನನಗಿಂತ
ಎಲ್ಲ ಜನರ
ನೋಡಲು
ಪಾಪಿ ಇಲ್ಲ ನನಗಿಂತ
M.I.K
- ishak
06 Feb 2015, 11:14 am
ದುಗುಡದಿ ನಡುಗಿ, ನಡುರಾತ್ರಿ ಎದ್ದು,
ಅರೆನಿದ್ದೇಲಿ ಕುಗುರಿ ಕುಳಿತೆ....,
ರಾತ್ರಿಯ ಮೌನವು ಮೌನವನ್ನೇ ಹೊದ್ದು
ಮದದಿ ಮಲಗಿದಂತಿತ್ತು....;
ದುಗುಡದ ಕಾರಣ ಹೊಳೆಯದೆ
ತೂಗುತ್ತ ಕುಳಿತೇ ಇದ್ದೆ.....,
ತಲೆಕೊಡವಿ, ಕಣ್ಣುಜ್ಜಿ ಯೋಚಿಸಲು,
ಹೊಳೆದದ್ದು .... ಆ ಹುಡುಗಿ...;
ದಿನಾಲು ಬೆಳಗ್ಗೆ ಬಾಗಿಲಲಿ ಹಾಲಿರಿಸಿ,
'ಹಾಲು ಸಾರ್' ಎಂದು ರಾಗದಿ ಕೂಗುತ್ತಿದ್ದ
ಏಳನೆಯ ತರಗತಿಯ ಆ ಮುದ್ದು ಹುಡುಗಿ,
ಕಳೆದೈದು ದಿನದಿಂದ ಬಂದಿಲ್ಲ....!
ಈಗ ಈ ವಿಷಯ ಹೊಳೆದದ್ದೇಕೆ !?
ಥಟ್ಟನೆ, ಮನದಲಿ ನತದೃಷ್ಟೆ ನಂದಿತಾಳ
ದಾರುಣ ಕಥೆ ತೇಲಿ ಬಂದು
ನಿದ್ದೆಯೇ ನಂದಿ ಹೋಯಿತು ...;
ಕತ್ತಲೆಯಲಿ ಕೈಸವರಿ
ಮಗ್ಗುಲಲಿ ಮಲಗಿದ್ದ
ನಾಲ್ಕು ವರ್ಷದ ಮಗಳ
ತಲೆ ನೇವರಿಸಿ, ನೀಳ ನಿಟ್ಟುಸಿರಿಟ್ಟೆ....;
ಈ ಜಗದ ಹೆತ್ತವರದೆಷ್ಟು ಜನ
ಹೀಗೆ ನಿದ್ರೆಯಲಿ ಕಳವಳಿಸುವರೋ ?
ಎಂದ ಮನ, ಕತ್ತಲೆಯ ಮೌನದಲಿ
ಮೌನವಾಗಿ ರೋಧಿಸಿತು....;
- ಡಾ. ರವೀಂದ್ರ ಅಂಗಡಿ
05 Feb 2015, 09:11 am
ಅಪರೂಪಕ್ಕೊಮ್ಮೆ
ನೀ ಮುಡಿವ ಮಲ್ಲಿಗೆಯರಳು
ಮನದಿ ನಿಂತು ಮುದವೀಯಲು ,
ನನಗೆ ಅಮಲೋ ಅಮಲು.
ಮಲ್ಲಿಗೆ ಸರದ
ತುದಿಯ ತುಂಟ ಹೂವೊಂದು
ಎಡೆಬಿಡದೆ ನಿನ್ನ ಕೆನ್ನೆ ಚುಂಬಿಸುವಾಗ
ಹೂವಿಗೇ ಖಟ್ಲೆ ಹಾಕುವ ಹುನ್ನಾರ ನನಗೆ.
ಈ ಹುನ್ನಾರವರಿತ ಎಲ್ಲ ಹೂಗಳು
ಒಟ್ಟಾಗಿ...
ಘೋಷಣೆ ಕೂಗಿ....
ಇದು ತಮ್ಮ ಆಜನ್ಮಸಿದ್ಧ ಹಕ್ಕೆಂದು
ಪ್ರತಿಭಟಿಸಲು,
ನಾನು ಐಲುಪೈಲು.
ಸರಿ, ಸಂಧಾನದ ಮಾತಿಗೆ
ದಿನ ಗೊತ್ತಾಗಿ,
ಒಟ್ಟಾಗಿ ಸೇರಿರಲು,
ಹೂಗಳೆ ತಮ್ಮ ತೀರ್ಮಾನ
ನನ್ನ ಮೇಲೆ ಹೇರುವುದೇ.....!?
ತೀರ್ಮಾನ ಇಂತಿತ್ತು -
ನಿನ್ನವಳು ಮಲ್ಲಿಗೆ ಮುಡಿದಂದು
ನೀನವಳನ್ನ ನೋಡೋದು ನಿಷಿದ್ಧ .
ತೀರ್ಮಾನ ಪಾಲಿಸ್ದೇ ಇದ್ರೆ
ಇರು ಎಲ್ಲದಕೂ ಸಿದ್ಧ .
ಮಲ್ಲಿಗೆ ಸಾವಾಸ ಅಲ್ಲ ಮಾರಾಯ್ರೆ...
ಮಲ್ಲಿಗೆ ಮಾತಂದ್ರೆ ಮಾತು,
ಮೈಮೇಲೇ ಬರ್ತವೆ.....!!!!
ಅಂದಿನಿಂದ ಮಾರ್ಕೆಟಲ್ಲಿ ಮಲ್ಲಿಗೆ ಕಂಡ್ರೆ
ವಾರೆಗಣ್ಣಲ್ಲಿ ನೋಡತಾ, ಸೈಲೆಂಟಾಗಿ ಸೈಡಿಗ್ಹೋಗಿಬಿಡ್ತೀನಿ....
ಹೆಣ್ತಿ ಹೂ ತಂದಿಲ್ಲ ಅಂತ ಬೈದ್ರೂ ಪರ್ವಾಗಿಲ್ಲ .
- ಡಾ. ರವೀಂದ್ರ ಅಂಗಡಿ
05 Feb 2015, 05:04 am
ಮನಸ್ಸೆಂಬ ಗೂಡಿನಲಿ
ಬಚ್ಚಿಟ್ಟ ಸ್ನೇಹ
ಪಂಜರದೊಳು ಕೂಡಿಟ್ಟ
ಪಕ್ಷಿಯ ಹಾಗೆ
ಮನಸ್ಸೆಂಬ ಗೂಡಿನಲಿ
ಬಚ್ಚಿಟ್ಟ ಸ್ನೇಹ
ನೀರ ಹೊರಬಂದ ಮೀನಿನ
ಹಾಗೆ
ಎಂ.ಐ.ಕೆ
- ishak
05 Feb 2015, 03:30 am
ನೀನು ಹೇಳಬೇಕಾದದ್ದನ್ನು
ನಾನು ಕೇಳಬೇಕಾದದ್ದನ್ನು
ಹೇಳಿ ಮುಜುಗರ ಪಡಿಸದಿದ್ದಕ್ಕೆ,
ಹೇಳುವ ಮಾತುಗಳಿಗಿಂತ
ಹೇಳದ ಮೌನದ
ಮೊರೆ ಹೋಗಿದ್ದಕ್ಕೆ
ಧನ್ಯವಾದಗಳು ......
- Kiran Kumar R
04 Feb 2015, 08:54 pm
ಮಕ್ಕಳಿಗೆ ಪ್ರೀತಿಯ ಕೊಡಿ
ಇಲ್ಲದಿದ್ದರೆ........................
......................................
......................................
ಮಕ್ಕಳಿಲ್ಲದವರಿಗೆ ಕೊಡಿ
ಎಂ.ಐ.ಕೆ
- ishak
04 Feb 2015, 11:14 am
ಒಲವೇಂಬ ನವಿಲುಗರಿಯನು
ನಿನ್ನ ಮುಡಿಗೆ ಮುಡಿಸುವೆ,
ಆಸೇ ಎಂಬ ಕಡಲ ಆರಭಟಕೆ
ತಡೆಗೊಡೆಯು ನಿನ್ನ ಮುದ್ದು ಪ್ರೀತಿಯೇ....
ನನ್ನ ಮನದ ಕಷ್ಟದ ಕತ್ತಲೆಗೆ
ನೀ ಬೆಳಕಾಗಿ ಭಾ,
ನಿನ್ನ ಬೇಳಕಿನೊಂದಿಗೆ ನಾ
ನನ್ನಿ ಬಾಳದಿನಗಳನು ದೂಡುವೆ....
D.S.D
- Dharmu.s.m
04 Feb 2015, 10:04 am