Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬಿಸಿಲು

ಬಾಯಾರಿದಾಗ
ಬಿಸಿಲೇರಿ
ಮನಸ್ಸೆನ್ನುವುದು
ಆಹಾ ಏನ್ ಬಿಸ್ಲೂ ರೀ..
ಕಾಸಿದ್ದರೆ
ಬಿಸ್ಲೆರಿ
ಇಲ್ಲದಿದ್ದರೆ
ನೆನಪಾಗುವುದು
ತುಂಗಾ ಕಾವೇರಿ.

ಕ್ರಷ್ಣಮೂರ್ತಿ ಚಿತ್ರಶೆಟ್ಟಿಹಳ್ಳಿ

- ಕ್ರಷ್ಣಮೂರ್ತಿ ಚಿತ್ರಶೆಟ್ಟಿಹಳ್ಳಿ

07 Mar 2015, 02:21 pm

ಮೀಸೆ

ಮೀಸೆ ಚಿಗುರಿದಾಗ ಖುಷಿ ಖುಷಿ
ಬಲಿತಾಗ ಕಸಿವಿಸಿ
ಹಣ್ಣಾದಾಗ ಬಳಿಯುವಿರೇಕೆ
ಕಪ್ಪು ಮಸಿ?


ಕ್ರಷ್ಣಮೂರ್ತಿ ಚಿತ್ರಶೆಟ್ಟಿಹಳ್ಳಿ

- ಕ್ರಷ್ಣಮೂರ್ತಿ ಚಿತ್ರಶೆಟ್ಟಿಹಳ್ಳಿ

07 Mar 2015, 02:18 pm

ಅವಶೇಷ

ಧನ ಧನ ಧನ
ಕನಕ ಕನಕ
ಭಕ್ತಿ ಮುಕ್ತಿ
ಎಲ್ಲಾದಕ್ಕು ಸೂಚನೆ
ಕಾರಣವಿಲ್ಲದ ಯಾತನೆ
ಅದೇ ಕಲ್ಪನೆಯ
ಅಂತರಂಗದ ಅಧ್ಯಯನ
ಮತ್ತದೇ ಚಪ್ಪಲಿ
ಅದೇ ಪಂಚೆ
ತೂರಿ ಎಸೆದ ದಿಂಬು ಹಾಸಿಗೆ
ಇವೇ ಉಳಿಯೋದು

- ಗುರು

03 Mar 2015, 11:34 am

ಮಂಥನ

ಗಳಿಗೆಗಳ ಕೊಂದ
ಮನದ ಇಂಗಿತ
ಬನಗಳ ತೂರಿದ
ಕಾವಿದ ಸಾಂಗತ
ತೋರೆದ ಗತಕಾಲ
ತೂರಿ ಹೋದ
ಮಂದ ಬುಧ್ಧಿ
ಬದುಕೀಗೇ ದೀಘ್ರ
ಮಂಥನ.,

- ಗುರು

03 Mar 2015, 11:06 am

ನಾವೆಷ್ಟು ಮೂರ್ಖರು

ನರಕ ಪಾಪಿಯ ಬೀಡೆಂದು
ಅರಿತೂ ಮಾಡುತಿದ್ದೇವೆ
ಕೆಡುಕನ್ನು

ಮಾಡದೆ ಒಳಿತ
ಬೇಡುತಿದ್ದೇವೆ ಸ್ವರ್ಗದ
ಸುಖವನ್ನು

ಎಂ.ಐ.ಕೆ

- ishak

03 Mar 2015, 10:35 am

ನೆನಪು

ಮರೆಯೋದು ಮರೆಸೋದು ಮಾತುಗಳನ್ನು ಮಾತ್ರ, ಮರೆಯದೇ ಮನಸ್ಸಲ್ಲಿ ಮನೆ ಮಾಡೋದು ಮರೆಯಲಾಗದ ನೆನಪುಗಳನ್ನು
ಮಾತ್ರ.

- ಸುನಾಗ್

02 Mar 2015, 02:36 pm

ಮರೆತರೆ?

ಸೌಭಾಗ್ಯದಿ
ಬಂದ ಹಾದಿಯ
ಅಧಿಕಾರದಿ
ಸ್ವಂತ ಜನರ
ಕಂಡವಳಿಗಾಗಿ
ಕಟ್ಟಿಕೊಂಡವಳ
ಯವ್ವನದಿ ಹೆತ್ತವ್ವಳ
ಕಷ್ಟದಿ ಕೈ ಹಿಡಿದವರ
ವಿದ್ಯೆ ಕಲಿಸಿದ ಗುರುವ
ಮರೆತರೆ
ನೀ ಹೇಗೆ ಮಾನವನಾಗುವಿ

ಎಂ.ಐ.ಕೆ

- ishak

02 Mar 2015, 05:20 am

ಮಾತೇ

ಮಾತೇ....

ಕತ್ತಲೆಯಲ್ಲಿದ್ದವರು
ಬೆಳಕ ಬೇಡಲು.
ಕಿರಣ ಬೀರಲು
ಕದವ ತೆರೆದಳು
ಕರುಣಮಾಯಿ ಅಮ್ಮ...

ಮಮತೆಯ ಮರೆತ
ಮನುಜನ ಕೊರೆತೆ
ಅಮೃತವೆಲ್ಲ ವಿಷವಾಗಿರಲು
ವಿಷಾದಾವೆಲ್ಲ ವಿದ್ಯೆಯಂತೆ
ಪ್ರೇಮವನ್ನಿತ್ತ ಅಮ್ಮ...

ಜಗದ ನಾಲಿಗೆ
ಕಹಿಯಾಗಿದೆ ಇಂದು
ರುಚಿಕಾಣದ ಮನಸ್ಸು
ರೋಚ್ಚಿನಲ್ಲಿದ್ದ ಕಣ್ಣುಗಳಿಗೆ
ಶಾಂತಿಸಿದಳೀ ಅಮ್ಮ...

ಬೇದಭಾವದ ಬದುಕಿನಲಿ
ಬೇಧಿಸಲಾಗದೀ ನಾಲಿಗೆಗೆ
ಬಂಧಿಯಾದ ಅತ್ಮಗಳಿಗೆ
ಭಾವೈಕತೆಯ ಸಮಸ್ಯೆಯನ್ನು
ಭಾವುಗಳಿಂದ ಬೇಸೆದಳೀ ಅಮ್ಮ...

ಲೋಕನಾಯಕಿ ಲೇಪದಲಿ
ಲೋಕಾಮೃತೆ ಪ್ರೀತಿಯಲಿ
ಗೋಮಾತೆ ತ್ಯಾಗದಲಿ
ಆನಂದಮಾಯಿ ಆರ್ದ್ರತೆಯಲಿ
ಅದೆಲ್ಲವು ಈ ಅಮ್ಮನಲಿ....

-ಈಶ, ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

01 Mar 2015, 03:46 am

ಕಳ್ಳಿ

ಕಳ್ಳತನ ನಡೆದಿದೆ
ಆದರೆ ಜರುಗಿದ
ಒಂದು ಕುರುಹು
ಸಿಕ್ಕಿಲ್ಲ.

ಬೀಗ ಹೊಡೆದಿಲ್ಲ
ಗೋಡೆ ಕೆಡವಿಲ್ಲ
ಖೂನಿ ನಡೆದಿಲ್ಲ
ರಕ್ತದ ನಿಶಾನೆ ಇಲ್ಲ.

ಎದೆಯೊಳಗೆ ಹೃದಯದ
ವಿಳಾಸವೇ ಇಲ್ಲ.
ವಿಚಿತ್ರವೆಂದರೆ ಕಳೆದುಕೊಂಡ
ದುಃಖವಿಲ್ಲ.
ವಿ

- Vinod Kumar Y V

28 Feb 2015, 07:03 pm

ಮರೆವು

ಕಾಲಿಗೆ ಅಂಟಿಕೊಂಡಿದ್ದ
ಚಪ್ಪಲಿಗಾಗಿ
ಕೈ, ಕಿಸೆಯಲ್ಲಿದ್ದ ವಸ್ತುವಿಗಾಗಿ
ಎಲ್ಲೆಲ್ಲಿ ಅಲೆದಾಡಿಸಿತು

ಎಂ.ಐ.ಕೆ

- ishak

28 Feb 2015, 04:40 pm