ಕಣ್ತುಂಬಿಕೊಳ್ಳಲು ಆಗದಷ್ಟು ಸೊಬಗು,
ನಿನ್ನ ಅಂದವನ್ನು ಕಂಡು ಆದೆವು ಬೆರಗು,
ಸುಳ್ಳನ್ನೆ ಸುಡುವ ಶಕ್ತಿ ನಿನ್ನಲ್ಲಿದೆ,
ಎಲ್ಲರನ್ನು ಒಂದಾಗಿ ಕಾಣುವ ಗುಣ ನಿನಗಿದೆ,
ನಿನಗಾಗಿ ಸೃಷ್ಟಿಸಬಹುದು ಕ್ಷಣಕೊಂದು ಹೊಸ ಕಾವ್ಯ,
ಭರತ ಮಾತೆ, ನಿನ್ನ ಮಡಿಲಲ್ಲಿ ಜನಿಸಿದ ನಾನೆ ಧನ್ಯ....
ಯಾರಿಗೆ ಯಾರಲ್ಲಿ ವಿಶ್ವಾಸ
ತಂದೆಗೆ ಮಗನಲ್ಲಿ
ಪತಿಗೆ ಪತ್ನಿಯಲ್ಲಿ
ಶಿಷ್ಯನಿಗೆ ಗುರುವಲ್ಲಿ
ಇದರ ವಿರುದ್ದವೂ.........
ಕೊನೆಗೆ ನಮಗೆ ನಮ್ಮಲ್ಲಿ
ಎನ್ನುವಲ್ಲಿಗೆ.....!!!!
ಬಂದು ಬಿಟ್ಟಿದೆ
ಜೀವನ ಅನ್ನೋ ಅಂಧವಾದ ಭೋಗಿಯಲ್ಲಿ ಚಿತ್ರ ವಿಚಿತ್ರ ಪಾತ್ರಧಾರಿಗಳನ್ನ
ಅನುಗಾಲವು ನೋಡುತ್ತಿರುತ್ತೇವೆ
ಪ್ರತಿಯೊಂದು ಪಾತ್ರಕ್ಕು
ನಾವೇ ಎನ್ನುವ ಭ್ರಮೆಯಲ್ಲಿ ಬದುಕುತ್ತಿರುತ್ತೇವೆ
ಅದು ಭ್ರಮೆಯು
ಅಥವಾ ನಿಜವೂ
ತಿಳಿಯೋದಕ್ಕೆ ಮಾತ್ರ
ನೂರಾರು ಪುರಾವೆಗಳುಆದರೂ ಬರೆಯಲೇಬೇಕೆಂಬಉಮೇದು
ನಾವು ನಮ್ಮತನವನ್ನೆ ಬದಿಗಿಟ್ಟು ನೋಡುದಾದ್ರೇ ನಮ್ಮಲ್ಲೆ ಇಷ್ಟೇ ಉಳಿದಿರೋದು ಅದಕ್ಕೊಂದು ಕೊನೆಯಿಲ್ಲ ಮೊದಲು ಇಲ್ಲ ಆದರೂ ತಿಳಿಯುತ್ತಿದ್ದಂತೆಲ್ಲಾ ನಮ್ಮಯ ಕನಸುಗಳನ್ನೆ ಹೆಕ್ಕಿ ಹೆಕ್ಕಿ ಮುಜುಗರ ಉಂಟಾಗುವುದು ನಮ್ಮಯ ಮುಜುಗರ ಕೆಲವರಿಗೆ ಅಸಹ್ಯ ತರಿಸುವುದು