Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಣ್ಣೀರ ಧಾರೆ

ಜಮ್ಮುವಿನಲ್ಲಿ ಝೇಂಕರಿಸಿದೆ ಝೇಲಂ

ಬಿಹಾರದಲಿ ಭೋರ್ಗರೆದು ಅಬ್ಬರಿಸಿದೆ ಬ್ರಂಹ್ಮಪುತ್ರಾ

ನಸುನಗುತ ನಲಿದಿದೆ ಕೊಡಗಿನ ಕಾವೇರಿ ಜಲಧಾರೆ

ಆದರೂ ಏಕೆ ನಮ್ಮ ರೈತರ ಕಣ್ಣಲ್ಲಿ ನೆತ್ತರ ಕಣ್ಣೀರಧಾರೆ ?

........ಮಧುಗಿರಿ ಬದರಿ

- K.Badarinatha

01 Apr 2015, 04:26 am

ಪ್ರೀತಿ

ಉಸಿರಿನ ಕಣ
ನಿನ್ನ ಹೃದಯದ ಬಡಿತವಾಗುವ ಆಸೆ,
ನಿನ್ನ ಉಸಿರಿನ ಕಣವಾಗುವ ಆಸೆ,
ನಿನ್ನ ಪ್ರೀತಿಗೆ ಮುತ್ತಾಗುವ ಆಸೆ,
ನಿನ್ನಲೀ ನೀ ಆಗುವಾಸೆ.

- ಶಿವಕುಮಾರ್ ಅಚ್ಚು

01 Apr 2015, 02:20 am

ನಿರೀಕ್ಷೆ

ಚೈತ್ರ ಮಾಸದಲಿ ಚಿಗುರೊಡೆದ ನಮ್ಮ ಶ್ರುಂಗಾರ ಲಹರಿ

ವೈಶಾಖದ ಸುಡು ಬೇಸಿಗೆಯಲ್ಲೂ ಬಿಸಿಅಪ್ಪುಗೆಯ ಬೆಸುಗೆ ಹಿತವೆನಿಸಿತು

ಆಹ್ಲಾದಕರ ಅನುಭವ ಜೇಷ್ಠಮಾಸದಿ ಶ್ರೇಷ್ಠ ತಲುಪುವಷ್ಟರಲ್ಲಿ

ಸುಯ್ಯನೆ ಬಂದ ಆಷಾಢದ ಸಳಿಗಾಳಿಗೆ ಹಾರಿ ಬೆದರಿ ಬೇರೆಯಾದೆವು

ಕಾದಿಹೆನು ನಿನಗಾಗಿ ಪ್ರೀತಿಯ ಹೆದ್ದಾರಿಯಲ್ಲಿ ನಸುನಗುತ ಬಾ ಸುಂದರ ಶ್ರಾವಣದಲ್ಲಿ

.........ಮಧುಗಿರಿ ಬದರಿ

- K.Badarinatha

31 Mar 2015, 12:36 pm

ಪರಿಸರ ಪ್ರೇಮಿ

ಮಾತು ಮಾತಿಗೂ
ಪರಿಸರ ಎನ್ನುತಿದ್ದ
ನಮ್ಮ
ಪರಿಸರ ವಾದಿಯ ತಮ್ಮ;
ಮನೆ ಹಿತ್ತಿಲ
ಮರ
ಕದಿದು ತಂದುಕೊಟ್ಟ
ನಲ್ಲೆಗೆ
ಪರಿ ಪರಿಯಾಗಿ ಸರ......

- ಸುಪಿಕಾ.ಕಿನ್ನಿಮೇರು

31 Mar 2015, 12:29 pm

ಟಾಟ

ಓ ನನ್ನ ನಲ್ಲೆ
ನಮ್ಮಿಬ್ಬರ ಅಗಲುವಿಕೆಯ ಮೊದಲ ನೋಟ,
ನಾನೇಕೆ ಮಡ್ಲಿಲ್ಲ ಎನ್ನುವಿಯೆ ಟಾಟ...
ಮೊದಲೊಮ್ಮೆ ಟಾಟ ಮಡಿ ಕಲಿತಿದ್ದೆ
ಅದರ ಪಾಠ.......
...

- ಸುಪಿಕಾ.ಕಿನ್ನಿಮೇರು

31 Mar 2015, 12:15 pm

ಮರೆವು

ಮೊದಲ ಬಾರಿ ನೀನು ನನ್ನ ನೋಡಿ
ನಕ್ಕಾಗ ನನ್ನನ್ನೇ ನಾ ಮರೆತಿದ್ದೆ,
ಏರಡನೇ ಬಾರಿ ನಾನು ನಿನ್ನ ನೋಡಿ
ನಕ್ಕಾಗ ನನ್ನನ್ನೇ ನೀ ಮರೆತಿದ್ದೆ.....

- ಸುಪಿಕಾ.ಕಿನ್ನಿಮೇರು

31 Mar 2015, 12:09 pm

ತನು-ಮನ

ಓ ನನ್ನ ನಲ್ಲ,
ನೀ ನೋಡಿ ಸೆಳೆದಾಗ ನನ್ನ ಮನ,
ನಾ ಸಲ್ಲಿಸಿ ಆಗಿತ್ತು ನಿನ್ನ ಗೆಳೆಯನಿಗೆ
ನನ್ನ ತನು.

- ಸುಪಿಕಾ.ಕಿನ್ನಿಮೇರು

31 Mar 2015, 11:11 am

ಕವಿತೆ ವ್ಯಥೆ

ದೊಡ್ಡ ದೊಡ್ಡ ಕವಿಗಳನ್ನು ನೋಡಿ ಕವಿತೆ ಬರೆಯಬೇಕೆನಿಸಿತು

ದೊಡ್ಡ ದೊಡ್ಡ ಕವಿಗಳನ್ನು ನೋಡಿ ಕವಿತೆ ಬರೆಯಬೇಕೆನಿಸಿತು

ತಪ್ಪೇನಿಲ್ಲ

ಅವರಂತೆ ಕೋಟು ನಿಲುವಂಗಿ ಧರಿಸಿದೆ
ಕವಿತೆ ಬರಲಿಲ್ಲ

ಅರೆ ಅವರು ಚಷ್ಮಾ ಧಾರಿಗಳು ನನಗಿಲ್ಲವಲ್ಲಾ ಎಂದು ಚಷ್ಮ ಧರಿಸಿದೆ
ಕವಿತೆ ಬರಲಿಲ್ಲ

ಛೆ ಅವರೆಲ್ಲಾ ಗಡ್ಡಧಾರಿಗಳು ಎಂದು ಕ್ಷೌರ ಮಾಡುವುದ ಬಿಟ್ಟೆ
ಕವಿತೆ ಬರಲಿಲ್ಲ

ನನ್ನ ವ್ಯಥೆ ನೋಡಿ ನನ್ನಾಕೆ ಎಂದಳು ರೀ ನಿಮ್ಮ ತಲೆಯೆಂಬ ಮೊಬೈಲ್ನಲ್ಲಿ ಸಿಮಕಾರ್ಡೆ ಇಲ್ಲ

ಇರುವುದೆಲ್ಲ ಬರಿ ಮಂಡ್ಯದ ಮುದ್ದೆ ಬೆಲ್ಲ

...........ಮಧುಗಿರಿ ಬದರಿ

- K.Badarinatha

31 Mar 2015, 09:53 am

ಕ್ರಿಕೆಟ್ ಆಘಾತ

ಅಂಜಿದಿರಿ ಅಳುಕಿದಿರಿ ಧೋನಿ ಪಡೆ

ನಾವೇ ಗೆಲುವಿನ ರೂವಾರಿಗಳು ಎಂಬ ನಿಮ್ಮ ಈ ಜಂಭದ ನಡೆಯಿಂದ

ಗೆಲುವಿನ ಹ್ರುದಯಾಘಾತವಾಗಿದ್ದರೆ ಸಂತಸದ ಅಮರ ಲೋಕ ಸೇರುತಿದ್ದೆವು

ಸೋಲಿನ ಮರ್ಮಾಘಾತ ದಖ:ದ ಮಡುವಿನಲ್ಲಿ ಮುಳುಗಿಸಿದೆ

ಕಾಪಾಡು ಮಧುಗಿರಿಯ ಮಲ್ಲೇಶ್ವರಾ.

....ಮಧಿಗಿರಿ ಬದರಿ

- K.Badarinatha

31 Mar 2015, 09:22 am

ಪ್ರೇಮ ನಿವೇದನೆ ಸಾಧನ

ಹಿಂದೊಮ್ಮೆ ಹುಡುಗರ ಪ್ರೇಮ ನಿವೇದನೆಗೆ ಪ್ರೇಮಕವಿತೆಗಳೇ ಬ್ರ್ಯಾಂಡ್ ಅಂಬ್ಯಾಸಿಡರ್ಸ್

ಹಿಂದೊಮ್ಮೆ ಹುಡುಗರ ಪ್ರೇಮ ನಿವೇದನೆಗೆ ಪ್ರೇಮಕವಿತೆಗಳೇ ಬ್ರ್ಯಾಂಡ್ ಅಂಬ್ಯಾಸಿಡರ್ಸ್

ಅದರೆ ಇಂದೀಗ
ಸ್ಕೋಡ , ಆಡಿ , ರೇಂಜ್ ರೋವರ್ಸ್, ಲ್ಯಾಂಡ್ ಕ್ರೂಸ್ನರ್ಸ್...


.....ಮಧುಗಿರಿಯ ಬದರಿ

- K.Badarinatha

31 Mar 2015, 09:17 am