ಸ್ವರದ ಬಾಗಿಲಮೇಲೆ ನಾ ನಿಂತು
ಕೂಗಿದೆ ಪಿಸುಮಾತೊಂದು
ಶ್ರುತಿ ಮೀರಿದ ಹಾಡೊಂದು
ಪ್ರೇಮ ಸುಳಿವ ಜಾಡು
ಎದ್ದುನೊಡಿದಾಗ ನಾ ಮಲಗಿದ್ದೆ
ನೀ ಕಟ್ಟಿರುವ ಕನಸಿನ ಮನೆಯ
ಬಾಗಿಲ ಮುಂದೆ ತಿಳಿಯದೆ ಗೆಳತಿ...
————— ಮೂರ್ತಿರಾಜ್
ಓ ಬ್ರಹ್ಮ ಏಳೇಳು ಜನ್ಮಕೂ
ಅವಳನ್ನು ನನ್ನವಳಾಗಿಸು..
ಎಷ್ಟೊಂದು ಪ್ರೇಮಿಸುತ್ತಿರುವೆ
ಹೇಗಾದರು ಅವಳಿಗೆ ತಿಳಿಸು,
ಪ್ರತೀ ದಿನ ಪ್ರತೀ ಕ್ಷಣ ಕಾಣಲಿಚ್ಚಿಸುವೆ
ಅವಳದೇ ಸ್ವಪ್ನ..
ಉಸಿರು ನಿಂತರೂ ನಿಲ್ಲಲಿ,
ಆ ಗಾಢವಾದ ನಿದ್ರೆಯಲ್ಲಿ
ನೀ ನನ್ನ ಮಲಗಿಸು..
~ಅಭಿಅಕ್ಷತಾ~
ನನ್ನ ಹಣೆಬರಹದ ಪ್ರತಿಯೊಂದು
ಹಾಳೆಯಲ್ಲು,
ನಾ ಬದುಕಿರೋವರೆಗೂ
ನನ್ನ ಮರಣದ ನಂತರವೂ,
ನೀ ಅವಳನ್ನೇ ಬರೆದಿಡು..
ಅವಳಿಗಾಗಿಯೇ ಬರೆದಿಡು..
ನನ್ನ ಕಥೆಯಲ್ಲು,
ನನ್ನ ಪ್ರತಿಯೊಂದು ವ್ಯೆಥೆಯಲ್ಲೂ,
ಈ ಹೃದಯ ಪ್ರಪಂಚದ
ಪವಿತ್ರ ಬಂಧನದ ಬೆಸುಗೆಯಲ್ಲೂ,
ನೀ ಅವಳನ್ನೇ ಬರೆದಿಡು..
ಅವಳಿಗಾಗಿಯೇ ಬರೆದಿಡು..
~ಅಭಿಅಕ್ಷತಾ~