Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅವಳ ಪ್ರೇಮದ ￿ಅಲೆಮಾರಿ ನಾ...

ವಿರಹದ ಕಾಡಲ್ಲಿ ಅಲೆಯುತ್ತಾ..
ನೆನಪಿನ ಗೂಡಲ್ಲಿ ಬದುಕುತ್ತಾ..
ಸುತ್ತುತ್ತಿರುವೆ ಅಲೆಮಾರಿಯಂತೆ..
ನಾ ಮೆಚ್ಚಿದ ಹುಡುಗಿ...
ಅಕ್ಷತಾಳ ಸುತ್ತಾ-ಮುತ್ತಾ..
~ಅಭಿಅಕ್ಷತ~

- AbhiAksh

11 Apr 2015, 09:03 am

ಅವಳು ನನಗೆ ಬರೆದ ಕವನ

ಈ ದಿನ ನನಗ ವಿ಼ಶೇಷವಾದ ದಿನ
ನಾಳೆ ಏನೆಂಬುದು ಗೊತ್ತಿಲ್ಲ.
ಈ ದಿನ ನೀ ನನ್ನೊಡನಿರುವೆ
ನಾಳೆ ನೀ ನನ್ನೊಡನಿರದಿರಬಹುದು.

ಹಲವು ಬಾರಿ ನೀ ನನ್ನೊಡನಿದ್ದು
ನನ್ನ ಬದುಕಿನ ಸಂಪತ್ತು ಹೆಚ್ಚಿತು.
ನಾನು ಶ್ರೀಮಂತಳಾದೆ
ಬದುಕಿನ ಅರ್ಥ ನಿನ್ನಿಂದ ತಿಳಿದೆ.

ಮಾತನಾಡುತ್ತಾ ನಾವು ನಮ್ಮನ್ನ ಮರೆತೆವು
ನಮ್ಮ ಸುತ್ತಲು ಹೊಸ ಜಗತ್ತು ಕಟ್ಟಿದೆವು.
ನೀನಾಡಿದ ಮಾತುಗಳು ಈಗಲೂ ಕೇಳುತ್ತಿವೆ
ಮತ್ತು ಅವುಗಳನ್ನು ಕೊನೆಯವರೆಗೂ ಮರೆಯುವುದಿಲ್ಲ.

ಕನಸುಗಳನ್ನು ಹಂಚಿಕೊಂಡೆವು
ನಮ್ಮ ಮುಂದಿನ ಜೀವನವನು ಕಂಡೆವು.
ಹೊಸ ಹಾಡನ್ನು ಹಾಡುತ್ತ
ನಮ್ಮ ನಮ್ಮ ನೋವುಗಳನು ಮರೆತೆವು.

ಹಾಡು ಹಾಡುತ್ತಿರುವಾಗಲೇ
ಅಯ್ಯೋ ಹಾಡಿನ ಶೃತಿ ಹಾಳಾಯಿತು.
ಕಣ್ಣೊಳಗಿದ್ದ ಕನಸುಗಳೆಲ್ಲವು
ಅಯ್ಯೋ ನೆನಪು ಬಾರದೆ ನಾಶವಾದವು.

ನಾಳೆ ಎನ್ನುವುದರಲ್ಲಿ ಎಲ್ಲವು ಅಡಗಿರುವುದು.
ಇಂದಿನಂತಿಲ್ಲದಿದ್ದರು ನಾಳೆ
ಜೀವನ ಸಾಗುವುದು ಕೊನೆಯವರೆಗೆ.
ಆದರೆ....
ಕಣ್ಗಳಿಂದ ಹರಿಯುವ ನೀರಿಗೆ ಕೊನೆಯಿಲ್ಲ.

ಚೇತನ್ ಬಿ ಸಿ

- ಚೇತನ್ ಬಿ ಸಿ

10 Apr 2015, 05:17 pm

ಜೀವನ

ಮೂಡಿದ ಕನಸುಗಳ ಹಾರಿಬಿಡಲು ಏಕೋ ಮನಸ್ಸಾಗಲ್ಲಿಲ್ಲ, ಭಾವಗಳೊಂದಿಗೆ ಹೊರಟ ಜೀವಕ್ಕೆ ನೋವ ಬರೆಗಳ ಭಾರ, ಒಣತತ್ವಗಳ ಬೆನ್ನೆರಿ ಬದುಕು ಬರಿದಾಯಿತು.ಅಂದುಕೊಂಡಂತಾಗದು ಜೀವನ, ಅರಿತು ನೆಡೆವುದೇ ಒಳಿತಿಗೆ ದಾರಿ..

- ಸುನಾಗ್

10 Apr 2015, 04:38 pm

ವಿರಹ

ತಂಪಾಗಿ ತವರಿನಲಿ ನನ್ನಾಕೆ ಎನ್ನ ಮರೆತಿಹಳು

ಮಳೆಬಿಲ್ಲು ಮಳೆ ತೊರೆದು ವಿರಹದ ಬಾಣ ಹೂಡಿದಂತಿದೆ

ಸೊನೆ ಮಳೆ ಪ್ರೀತಿಯ ಜೇನ ಮರೆತು ಬೆಂಕಿ ಮಳೆ ಸುರಿದಿದೆ

ಎನ್ನ ಪ್ರೀತಿಯ ಚಿಗುರೆಲೆ ವಿರಹ ತಾಪಕೆ ಸಿಲುಕಿ ತರಗಲೆಯಾಗಿದೆ

ಓ ಸ್ವರ ತರಂಗಗಳೆ ನನ್ನವಳ ಬಳಿ ಹೋಗಿ
ನನ್ನ ವಿರಹದ ನಾದ ಅವಳ ಕಿವಿಯಲ್ಲಿ ಕೂಗಿ

..........ಮಧುಗಿರಿ ಬದರಿ

- K.Badarinatha

10 Apr 2015, 01:36 pm

ನೀ ಎಂದು ಬರುವೆ...

ಮನದಾಳದ ಮಾತುಗಳು
ಮರೆಯಾಗಿವೆ ಕಣ್ಗಳಲಿ....
ಎದೆಯಾಳದ ಹಾಡುಗಳು
ಮರೆಯಾಗಿವೆ ಮಿಡಿತದಲಿ....
ನಿನ್ನೊಡನಾಡಿದ ನೆನಪುಗಳು
ಉಸಿರಾಗಿವೆ ಬದುಕಿನಲಿ....
ಬದುಕಿರುವೆ ನಾ ಬದುಕಿಗಾಗಿ.....
ಕಾಯುತಿರುವೆ ನಾ ನಿನಗಾಗಿ.....

- ಚೇತನ್ ಬಿ ಸಿ

10 Apr 2015, 02:08 am

ನಾ ದಾಸನು ಅವನಿಗೆ

ನಾ ದಾಸನು ಅವನಿಗೆ
ಆ ದೇವರ ಒಲುಮೆಗೆ
ನಾ ಸೇವಕನು ಅವನಿಗೆ
ಆ ಪುರುಷೋತ್ತಮನಿಗೆ
ಸದಾ ಕಾಯುವ
ಭಕ್ತೋದ್ದಾರಕನಿಗೆ

ಪ್ರತಿಯೊಂದು ಅವನದೆ
ಅವನಿಲ್ಲದೆ ಎನೂ ಇಲ್ಲ
ಅವನನು ಮರೆತರೆ
ಶೂನ್ಯವೆ ಎಲ್ಲಾ
ಸಾಕ್ಷಿಯು ಅವನೆ
ನಿರ್ವಿಕಲ್ಪನು ಅವನೆ
ಎಲ್ಲಾ ಬಲ್ಲ ಸರಸಿಜಾಕ್ಷನು
ಅವನೆ ಸರ್ವೋತ್ತಮನು
ಅವನೆ ಆ ದೈವೋತ್ತಮನೆ.

ಅವನ ದಾಸನಾದರೆ
ನಾ ಅವನ ಸೇವಕನಾದಾಗಲೆ
ಬದುಕು ಧನ್ಯ.

- shashishekar ng

10 Apr 2015, 01:27 am

ಹೆಣ್ಣೆ - ಹೆಣ್ಣು

ನಿನ್ನ ಮುಖವ ಕಂಡು ದಾರಿ ತಪ್ಪಿದೆ
ನಿನ್ನ ಬಳ್ಳಿ ಮತಡಿ ಫೊನ್ ಬಿಲ್ ಮರೆತೆ
ನಿನ್ನನು ನಗ್ಗಿಸಲ್ಲು ನಾ ಅತ್ತೆ
ನಿನ್ನಗೆ ತಿನಿಸಲ್ಲು ನಾ ತಿನುವೊದ ಬಿಟ್ಟೆ
ನೀನ್ನ ನೇನ್ನಪಲ್ಲಿ ನನ್ನ ನೇನ್ನಪನ್ನು ಮರೆತೆ
ಹೆಣ್ಣೆ ನಿನ್ನು ಅರಿಯಲು ಹೋಗಿ ನನ್ನಾ ನಾ ಅರಿತೇ

- ಪ್ರೆಮ್ ಕುಮರ್. ಎಮ್

09 Apr 2015, 05:58 pm

ನಿನ್ನ ಸವಿ ಗಾನ

" ನಿನ್ನ ಸವಿ ಗಾನದಿಂದ ನನ್ನ ಹೆದೆಯ ಆಸೆಗಲು ಹಲೆಯಗಿ ಕಪಲಿ
ಮನಾದ ಬಯಕ್ಕೆಗಳು ಕನಸಗಿ ಕಡಲರಂಬಿಸಿದೆ "
" ಈ ನಿನ್ನ ಸವಿ ಗಾನಕೆ "

- ಪ್ರೆಮ್ ಕುಮರ್. ಎಮ್

09 Apr 2015, 04:31 pm

ಕಪ್ಪು

ಕಪ್ಪು ಮೈಬಣ್ಣವ
ದೂರುವಾತನು
ಯಾರ ದೂರುವನು?
ಕಪ್ಪಗಿನ ವ್ಯಕ್ತಿಯನ್ನೋ
ಅದೋ ಕಪ್ಪಾಗಿ ಸೃಷ್ಟಿಸಿದ
ದೇವರನ್ನೋ

ಎಂ ಇಸ್ಹಾಕ್ ಕೌಸರಿ

- ishak

09 Apr 2015, 02:14 pm

ಚಿತ್ರ

@ನಾನಂದು ಕವನ ಬರೆದೆ
ಅವಳಿಗೆ ಕೊಡುವ ಮುನ್ನ ಹರಿದೆ@

@ಅವಳ ತುಂಟನಗೆ
ಅದರಲ್ಲಿದೆ ಹಲವು ಬಗೆ
ನೀ ಅರಿಯದಿದ್ದರೆ ಹೊಗೆ@

@ಹೌದು ನನ್ನೋಲವೆ
ನನಗಿಂತಲೂ
ನೀನೆ ತುಂಬಾ ಚಲುವೆ ಎಂದೆನು ಒಮ್ಮೆ
ಶಾಪಿಂಗ್ ಮಾಲ್ ನ ಒಳಗೆ ಹೋದವಳು ಇನ್ನೂ ಬಂದಿಲ್ಲ @

- ಚೇತನ್ ಬಿ ಸಿ

08 Apr 2015, 03:58 pm