Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬಳೆಗಾರ

ಅಮ್ಮ ತಾಯೇ ಮುತೈದೇಯರೇ ಬನ್ನಿರೇ
ಮುತೈದೇ ಬಳೆ ಕೊಳ್ಳಿರೇ
ಮುತ್ತಿನ ಬಳೆ ತೊಟ್ಟರಲ್ಲ ಮುತೈದೇ
ಚಿನ್ನದ ಬಳೆ ತೊಟ್ಟರಲ್ಲ ಮುತೈದೇ
ಮಣ್ಣಿನ ಬಳೆ ಕಂಡಿರಾ ಇದು ಮುತೈದೇ ಮುತ್ತು ಬಲ್ಲಿರಾ ಬಳೇ ಬಳೇ ಬಳೇ.......
ಓಹೋ ಓ ಬಳೇಗಾರ ಬಾ ಬಳೇಗಾರ
ಅಹಾ ಅಂದ ಚೆಂದ ಸುಂದರಾಂಗ ಬಾರೋ ಬಳೆಗಾರ
ಓಹೋ ಚೆನ್ನಯ್ಯ ಬಾ ಅಹಾ ಚೆಲುವಯ್ಯ ಬಾ
ಓಹೋ ಬಳೆಗಾರ ಬಾ ಬಳೆ ಮಲ್ಲಾರ ತಾ ಚೆಂದಾ ಮುತೈದೇ ಬಳೆ ತೋಡಿಸು ಬಾ......ಹ
ಬಳೆ ಬಳೆ ಬಳೆ..........ಮುತೈದೆಯರೇ
ಬಂದೇನು ಮುತೈದೇ ಬಳೆ ತಂದೇನು

- ಮಂಜುನಾಥ ಡಿ.ಸಿ.ಪಲ್ಲಾಗಟ್ಟೆ

23 Apr 2015, 02:22 am

ಟೆನ್ಶನ್

ನಲವತ್ತರ ನಂತರ ಖಂಡಿತ ಬರುವುದು ಬಿಪಿನ್ ಶುಗರ್ ಹೈಪರ್ ಟೆನ್ಶನ್

ಏಕೆಂದರೆ ಖಾಸಗಿಯವರಿಗೆ
ಇಲ್ಲವೆ ಇಲ್ಲ ಸರ್ಕಾರಿ ಪೆನ್ಶನ್

ಐವತ್ತರೊಳಗೆ ಕಟ್ಟದರೆ ಕನಸಿನ ಮ್ಯಾನಶನ್
ಸಂಸಾರ ಜೀವನ
ಸಂತಸದ ಓಶನ್

........ಮಧುಗಿರಿ ಬದರಿ

- K.Badarinatha

22 Apr 2015, 06:15 am

ವಿಪರ್ಯಾಸ

ಒಂದೂ
ಗಿಡವ
ನೆಡದೆ
ಯಾರೋ
ನೆಟ್ಟು
ಬೆಳೆದ
ಮರವ
ಕಡಿದು
ಬೇಡುವರು
ಎಲ್ಲರೂ
ಶುದ್ಧ
ಗಾಳಿ

- ishak

22 Apr 2015, 04:53 am

ಜೈ ಭಾರತ

ಯಾವ ದೇಶದಲ್ಲಿ
ಅಂಬುಲೆನ್ಸ್ ಬರುವ ಮುನ್ನ
ಪಿಜ್ಜ ಮನೆಗೆ ತಲುಪಿರುತ್ತದೋ

ಯಾವ ದೇಶದಲ್ಲಿ
ದೇವತೆಗಳ ಪೂಜಿಸಿದರೂ
ಹೆಣ್ಣಿಗೆ ರಕ್ಷಣೆ ಇಲ್ಲವೋ

ಯಾವ ದೇಶದಲ್ಲಿ
ಚಪ್ಪಲಿಯನು ಎಸಿ ರೂಮಲ್ಲಿಟ್ಟು
ತರಕಾರಿಯನು ರಸ್ತೆ ಬದಿಯಲಿ ಮಾರುತ್ತೇವೋ

ಯಾವ ದೇಶದಲಿ
ಬ್ಯಾಟನಿಡಿದು ಚೆಂಡನೊಡೆಯವಗೆ ಕೋಟಿ ಕೊಟ್ಟು
ಗನ್ನನಿಡಿದು ದೇಶ ಕಾಯುವವನ ನೋಯಿಸುತ್ತೆವೆಯೋ

ಯಾವ ದೇಶದಲಿ
ಹಾಲು ಮೊಸರನು ಕುಡಿದು
ಬೆಣ್ಣೆ ತುಪ್ಪ ವನು ತಿಂದು
ಕೊನೆಗೆ ಅವಳನೆ ಕೊಂದು ತಿನ್ನುತ್ತೆವೆಯೋ

ಯಾವ ದೇಶದಲಿ
ಭಿಕ್ಷೆ ಪಡೆದು ಓಟನು ಒತ್ತಿ
ಗುಲಾಮರಂತೆ ಬದುಕುತ್ತಿದ್ದೆವೆಯೋ

ಆ ದೇಶವೇ ನನ್ನದು
ಜೈ ಭಾರಂತಾಬೆ....

- ಚೇತನ್ ಬಿ ಸಿ

22 Apr 2015, 01:45 am

ನನ್ನವಳು

ಹೇಳದ ಮಾತು ನನ್ನೊಳಗೆ ಉಳಿದಿರಲು
ಕಾಣದೇ ಹೋದಳು ನನ್ನವಳು ಇಂದು
ಶಿವನ ಮುಂದೆ ಓಂಕಾರದ ನಾದ
ನನ್ನವಳ ಮುಂದೆ ಪ್ರೇಮಂಕುರದ ಬಾವ

ಬಾನಂಗಳದಿ ಚಂದಿರನು ಹೊಳೆದಿರಲು
ನನ್ನೆದೆಯ ಅಂಗಳದಲಿ ನನ್ನವಳ ನಗುವಿರಲು
ಕಾಲ್ಗೆಜ್ಜೆಯ ನಿನಾದ ನನ್ನನು ಕಾಡಿರಲು
ಬಾರದೆ ಹೋದಳು ನನ್ನವಳು ಇಂದು
:- ಸಂತೋಷ್

- santhosh

21 Apr 2015, 04:24 pm

ಬಯಕೆ

ಅಂಬರದ ತುಂಬೆಲ್ಲ
ಚಿತ್ತಾರ ಬಿಡಿಸೆಂದು
ಬೆಳ್ಳಕ್ಕಿ ಕೂಗೈತೆ
ನಕ್ಕು ನಲಿದಾಡ್ಕೊಂಡು

ಮುಂಬೆಳಕೆ ಸಾಕೆಂದು
ಮುಂಗಾರು ಬೇಕೆಂದು
ದುಂಬಾಲು ಬಿದ್ದೈತೆ
ಪೈರು ಪರ್ದಾಡ್ಕೊಂಡು

ಬಂಗಾರಿ ಬಾಳ್ನಾಗೆ
ಮಂದಾರ ಕನಸೊಂದು
ಚಿಗುರೊಡೆದು ಕೂಗೈತೆ
ಚೆಲುವಯ್ಯ ಬಾ ಎಂದು

ಸಿಂಗಾರಿ ನೀನೇಯ
ಸಂಗಾತಿ ನನಗೆಂದು
ನಗುನಗುತಾ ಬತ್ತಾವ್ನೆ
ಕುಡಿ ಮೀಸೆ ತೀಡ್ಕೊಂಡು

..........ಮಧುಗಿರಿ ಬದರಿ

- K.Badarinatha

21 Apr 2015, 08:23 am

ದಾರಿ

ನಾರಿ
ಮುನಿದರೆ
ಮಾರಿ
ಬೇಕಿಲ್ಲ
ಅವಳಿಗೆ
ನಿಮ್ಮ
ಸ್ವಾರಿ
ತೃಪ್ತಿ
ಪಡಿಸುವುದೊಂದೇ
ಉಳಿದ
ದಾರಿ

- ishak

21 Apr 2015, 06:47 am

ರಾಧಾ ಪ್ರಲಾಪ :



ಕಾದು ಕಾದು ಹಾದಿ ಕೊರಗಿದೆ


ಹೊತ್ತು ಹೋಗದೆ ಸಮಯ ಸೊರಗಿದೆ

ನೀ ಬಾರದೆ ಮನ ನೊಂದು ಬಳಲಿದೆ
ಕ್ರಿಷ್ಣಾ.......


ನಾಟ್ಯ ಮಯೂರಿ ಗರಿ ಮುಚ್ಚಿ ಮಲಗಿದೆ
ಗಾನ ಕೋಗಿಲೆಯ ಗಂಟಲು ಉಬ್ಬಿದೆ
ಚಂದಿರನ ಕಾದ ಚಕೋರಿಯಂತೆ
ಬ್ರುಂದಾವನದ ಬಾಗಿಲಿಗೆ ತಲೆಯಿಟ್ಡು ಮಲಗಿರುವೆ
ಶ್ಯಾಮ ನೀ ಬೇಗ ಬರಬಾರದೆ

ಕಾದು ಕಾದು ಹಾದಿ ಕೊರಗಿದೆ ಕ್ರಿಷ್ಣಾ.....

ಸಪ್ತ ಸಾಗರಗಳು ಸುಪ್ತವಾದಂತೆ
ಪಂಚಭೂತಗಳು ಗುಪ್ತವಾದಂತೆ
ಪಂಚೇಂದ್ರಿಯಗಳು ನಿರ್ಲಿಪ್ತವಾದಂತೆ
ಸಂಯಮ ಮೀರಿದೆ ಸಂತೋಷ ಕಾಣದೆ
ಗೋಪಾಲ ನೀ ಬೇಗ ಬರಬಾರದೆ

ಕಾದು ಕಾದು ಹಾದಿ ಕೊರಗಿದೆ ಕ್ರಿಷ್ಣಾ.....

.........ಮಧುಗಿರಿ ಬದರಿ

- K.Badarinatha

17 Apr 2015, 04:32 am

ದುಡುಕಿದ ಪ್ರೇಮಿ

ನನ್ನತ್ತ ನಾ ಹೊರಟಾಗ
ಅರಳಿದ ಗುಲಾಬಿ ಒಂದು ಕಾಡಿತು
ಆ ಅರಳಿದ ಗುಲಾಬಿಗೆ ಮನಸೊತು
ನನ್ನ ಮೈ ಮನಗಳೆಲ್ಲವು ಗರಿ ಬಿಚ್ಚಿ ಕುಣಿದವು
ಆದರೆ ಆ ಗುಲಾಬಿ ಸುತ್ತಲೂ ಮುಳ್ಳಿರುತ್ತವೆ ಎಂಬುದನ್ನ ಲೆಕ್ಕಿಸದೆ ಮನಜಾರಿ ಬಿದ್ದು ಆ ಮುಳ್ಳಿನ ಪ್ರತಿ ನೋವಿಗು ಉತ್ತರ ನಿಡದೇ ಮುಖನಾಗಿ
ಸುಮ್ಮನ ಕುಳಿತಿರುವೆ ಸುಮ್ಮನೆ ಕುಳಿತಿರುವೆ..............?

- ಬಾಲು ಶಿರಗುಂಪಿ

12 Apr 2015, 10:36 am

ಇಬ್ಬರೂ ನೀರಾದ ಬಗೆ

ನೆರೆ ಬಂದ ಕಾಲಕ್ಕೆ ನೀರ ತರಲು ಹೋದ ನೀರೆ ಬಾರದಿರೆ

ನೊಂದು ಬೆಂದು ಬಳಲಿ ಬಿಸಿಲಿಗೆ ಹಿಮ ಕರಗಿ ನೀರಿನಂತಾದ ನಲ್ಲ

ನೆರೆ ನಿಂತು ಪರರ ನೆರೆವಿನಲಿ ತನ್ನ ಮನದ ಅರಮನೆಯ ದೊರೆಯ ಬೆರೆಯಲು ಓಡೋಡಿ ಬಂದು

ದೊರೆಯ ಕರ ಪಿಡಿಯೆ ನಾಚಿ ನೀರಾದಾಳು ನಲ್ಲೆ

.........ಮಧುಗಿರಿ ಬದರಿ

- K.Badarinatha

11 Apr 2015, 02:05 pm