Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೇಪಾಳ

ಭೂತಳದಿ ಬೇತಾಳ
ಕುಣಿದಿರಲು
ಪರ್ವತದ ನೇಪಾಳ
ಸೇರಿತು ಪಾತಾಳ

ಹಚ್ಚ ಹಸಿರಾಗಿ ಕಂಗೊಳಿಪ
ಭೂರಮೆಯೆ
ನೀ ಅತಿ ಸುಂದರ
ನಿನ್ನ ಅಂತರಾಳ
ಏಕಿಷ್ಟು ಭಯಂಕರ

ಸಾವು ನೋವು ಸಾಕಾಗಿ
ಬಾಳು ಬರಡಾಗಿದೆ
ಕಣ್ಣನಲಿ ಮಣ್ಣು ಸೇರಿ ಕಣ್ಣೀರೆ ಕಾಣದಾಗಿದೆ

ಕಂಡರೂ ಕಾಣದು
ಅಡಿಯಲ್ಲಿ ಅವಶೇಷ
ಕರೆದರೂ ಕೇಳದು
ಎಲ್ಲವೂ ನಾಮಾವಶೇಷ

ಕಂಪನಗಳ ನಿಲ್ಲಿಸು
ಕರುಣೆಯ ತೋರಿಸು
ಕಂದಮ್ಮಗಳ ರಕ್ಷಿಸು
ಹರಹರಾ ಮಧುಗಿರಿಯ
ಮಲ್ಲೇಶ್ವರಾ...

.........ಮಧುಗಿರಿ ಬದರಿ

- K.Badarinatha

30 Apr 2015, 01:32 pm

ಎಂದು ಬರುವೆ

ಕೂಗಿದೆ ಕೂಗಿದೆ ಕೂಗಿದೆ
ಅವಳು ಮಾತನಾಡಲಿಲ್ಲ
ತಿರುಗಿ ನೋಡಲಿಲ್ಲ
ನೆನ್ನೆ ತೋರಿದ ಪ್ರೀತಿಯ
ಇಂದು ಮರೆತಳಲ್ಲ
ನನ್ನ ಮೇಲಿನ ಮುನಿಸೋ
ನಡೆದದ್ದೆಲ್ಲಾ ಕನಸೋ
ಏನೆಂದು ತಿಳಿಯಲಿ
ಹೃದಯ ಒಡೆದಳಲ್ಲ
ಕನಸಿಗೆ ಕನಸನು ಸೇರಿಸಿ
ನನ್ನನು ಪ್ರೀತಿಸಿ
ಕನಸಿನರಮನೆಯಲಿ
ನನ್ನ ಕೂರಿಸಿ
ಬರುವೆನೆಂದು ಹೋದವಳು
ಇನ್ನೂ ಬರಲಿಲ್ಲವಲ್ಲ
ಎಷ್ಟು ಕೂಗಲೀ ನಾ
ಗಂಟಲು ಹರಿದಿದೆ
ಜೀವ ಬಳಲಿದೆ
ಉಸಿರು ಹೋಗುವ ಮುನ್ನ
ನೆನಪಾಗಿ ನನ್ನ
ಬಂದು ನೋಡುವೆಯಾ ಚಿನ್ನ

- ಚೇತನ್ ಬಿ ಸಿ

29 Apr 2015, 01:10 am

ಅರ್ಪಣೆ ನಿನಗೆ

ಮನಸು ನನ್ನದು
ಕನಸು ನಿನ್ನದು
ಕಣ್ಣು ನನ್ನದು
ನೋಟ ನಿನ್ನದು
ಮೂಗು ನನ್ನದು
ಸುವಾಸನೆ ನಿನ್ನದು
ನಾಲಗೆ ನನ್ನದು
ರುಚಿ ನಿನ್ನದು
ಹೃದಯ ನನ್ನದು
ಮಿಡಿತ ನಿನ್ನದು
ದೇಹ ನನ್ನದು
ಕಣಕಣವೂ ನಿನ್ನದು
ನನ್ನ ದೆನ್ನುವುದೆಲ್ಲವು ನಿನ್ನದೇ

- ಚೇತನ್ ಬಿ ಸಿ

29 Apr 2015, 12:55 am

ಧರ್ಮದ ಹಾದಿ ಭಾಗ.2

ಭವದಿ ಹುಟ್ಟಿ ಬರುವಾಗ ನೀನು ಬರಿಗೈಲಿ ಬಂದೆಯಲೋ
ಹೋಗಬೇಕು ಬರಿಮೈಲಿ ಎಂದು ತಿಳಿದುಕೊಳೋ ಮೊದಲು
ಬಂಧು ಬಳಗವು ಗಳಿಸಿದಾಸ್ತಿಯು ಜೊತೆಗೆ ಬರುವುದಿಲೋ
ಧರ್ಮ ಕರ್ಮದ ಪಾಪ ಪುಣ್ಯದ ಫಲವೇ ಸಿಗುವುದಿಲೋ ನೀನು ಮಾಡಿದ ಪಾಪವಂತು ನಿನ್ನ ಕಾಡದೇ ಬಿಡದಲ್ಲ
ವಿಧಿಯು ಮಾಡಿದ ನಿಯಮವೆಂದು ತಿಳಿ ಯಾರಿಗೂ ಬಿಟ್ಟಿಲ್ಲ
ಪುಣ್ಯ ಕರ್ಮಕ್ಕೆ ಯೋಗ್ಯ ಫಲವು ಸಿಗದಂತೆ ಹೋಗೊದಿಲ್ಲ
ಧರ್ಮವ ನಂಬಿ ನಡೆಯುವ ದಾರಿಯಲ್ಲಿ ಕಲ್ಲು ಮುಳ್ಳು ಇಲ್ಲ
ನೀ ಧರ್ಮ ಕರ್ಮದ ಅರಿವನು ಮರೆತು ಮಾಡಬೇಡೋ ನಕಾರ
ಮುಂದೆ ಸಮಯ ಸಿಗದಂತೆ ಓಡುತ್ತಿದೆ ಕಾಲವೆಂಬ ಕುದುರೆ

- ಮಂಜುನಾಥ ಡಿ.ಸಿ.ಪಲ್ಲಾಗಟ್ಟೆ

27 Apr 2015, 05:42 am

ಧರ್ಮದ ಹಾದಿ

ನೀ ಧರ್ಮ ಕರ್ಮದ ಅರಿವನು ಮರೆತು ಮಾಡಬೇಡೋ ನಕಾರ
ಮುಂದೆ ಸಮಯ ಸಿಗದೆಂದು ತಿಳಿಯೋ ಉರುಳುತ್ತಿದೆ ಕಾಲಚಕ್ರ
ಸತ್ಕಾರ್ಯಗಳಿಗೆ ಸವಣವಿಲ್ಲವೆಂದು ನೀ ಮಾಡಬೇಡೋ ನಿದ್ರೆ ನಿನ್ನ ಕೈಗೆ ಸಿಗದಂತೆ ಓಡುತ್ತಿದೆ ಕಾಲವೆಂಬ ಕುದುರೆ
ನೀ ಧರ್ಮ ಕರ್ಮದ ಅರಿವನು ಮರೆತು
ಮಾಡಬೇಡೋ ನಕಾರ
ಆಟ ನೋಟದಿ ವ್ಯರ್ಥ ಸಮಯವ ಕಳೆದುಕೊಂಡೆಯಲೋ ಮೋಜು ಮಜವನು ನಂಬಿ ದೇಹವ ವ್ಯರ್ಥ ಗಳಿಸಿದಲೋ
ಮುಪ್ಪು ಅಡಗಿತು ನಡೆಯಲಾಗದೆ ಕೋಲು ಹಿಡಿದೆಯಲೋ
ಕಾಲ ಯಮನ ಕರೆ ಬರುವ ಮುನ್ನ ಆ ಶಿವನನ್ನು ನೆನೆಯಲಿಲೋ
ನೀ ಧರ್ಮ ಕರ್ಮದ ಅರಿವನು ಮರೆತು ಮಾಡಬೇಡೋ ನಕಾರ ಮುಂದೆ ಸಮಯ ಸಿಗದೆಂದು ತಿಳಿಯೊ ಉರುಳುತ್ತಿದೆ ಕಾಲಚಕ್ರ
ಜ್ನಾನಿಯೋಡನೆ ಒಡನಾಡಿ ನೀನು ಸುಜ್ನಾನಿ ಆಗಲಿಲೋ ಮಾನವ ಕುಲದಲಿ ಹುಟ್ಟಿ ಬಂದು ಅದರರ್ಥ ತಿಳಿಯಲಿಲೋ ಜ್ನಾನದ ಜ್ಯೋತಿಯ. ಬೆಳಗಿಸದೆ ಆ ಶಿವನು ಕಾಣಲಾರ
ದೇವನೋಲಿದರೆ ಹತ್ತುವೆ ನೀನು ಕೀರ್ತಿ ಎನ್ನುವ ಶಿಖರ
ನೀ ಧರ್ಮ ಕರ್ಮದ ಅರಿವನು ಮರೆತು ಮಾಡಬೇಡೋ ನಕಾರ
ಮುಂದೆ ಸಮಯ ಸಿಗದೆಂದು ತಿಳಿಯೋ ಉರುಳುತ್ತಿದೆ ಕಾಲಚಕ್ರ

- ಮಂಜುನಾಥ ಡಿ.ಸಿ.ಪಲ್ಲಾಗಟ್ಟೆ

27 Apr 2015, 05:24 am

ನನ್ನ ಬಿಟ್ಟು ಹೋದೆಯಾ

ಮೂರು ವರುಷದ ಪ್ರೀತಿಯ
ಮೂರೆ ದಿನದಲಿ ಮರೆತು
ನನ್ನ ಬಿಟ್ಟು ಹೋದೆಯಾ

ಕಾಣದ ಕೈಗೆ ನಿನ್ನ ಕೈಯನಿತ್ತು
ಮರೆತು ನಾನು ಕೊಟ್ಟ ಮುತ್ತು
ನನ್ನ ಬಿಟ್ಟು ಹೋದೆಯಾ

ಮಾತಿನಲ್ಲೆ ಮನೆಯ ಕಟ್ಟಿ
ಎಣೆದು ಒಲವಿನ ಬುಟ್ಟಿ
ನನ್ನ ಬಿಟ್ಟು ಹೋದೆಯಾ

ಮದುವೆ ಯಾಗುವೆನೆಂದು ನಂಬಿಸಿ
ಕೊನೆಯವರೆಗೊ ಚುಂಬಿಸಿ
ನನ್ನ ಬಿಟ್ಟು ಹೋದೆಯಾ

ನೀನೆ ನನ್ನ ಬಾಳ ಜೀವ
ಎಂದು ಮುಡಿಸಿ ಹೂವ
ನನ್ನ ಬಿಟ್ಟು ಹೋದೆಯಾ




- ಚೇತನ್ ಬಿ ಸಿ

25 Apr 2015, 02:01 pm

ಪ್ರೀತಿಯ ಗಳತಿಯ ನೆನಪು

ಒಂದು ಹುಣ್ಣಿಮೆ ಚಂದ್ರನ ಊರಿನಲ್ಲಿ
ಕದ್ದು ನೋಡುವ ಇಂದ್ರನ ತೇರಿನಲ್ಲಿ
ಹೆಜ್ಜೆ ಹೆಜ್ಜೆಗೂ ಪ್ರೀತಿಗೆ ಹುಟ್ಟಿದ ಹಬ್ಬ
ಇಂತ ಪ್ರೀತಿಯ ಕಣ್ಣಲೆ ಬದುಕು ಆರಂಭ

ಒಂದು ಹುಣ್ಣಿಮೆ ಚಂದ್ರನ ಊರಿನಲ್ಲಿ
ಕದ್ದು ನೋಡುವ ಇಂದ್ರನ ತೇರಿನಲ್ಲಿ
ಆಸೆಗಳು ಹುಟ್ಟೋದು ಅಂಧದ ಕಣ್ಣಿಂದ
ಈ ಅಂಧಗಳು ಹುಟ್ಟೋದು ವಯಸ್ಸಿನ ಕಣ್ಣಿಂದ ಬಯಸೀ ಹುಟ್ಟೋದೆ ಎರಡು ಮನಸ್ಸಿನ ಕಣ್ಣಿನಿಂದ
ಮನಸ್ಸು ಹುಟ್ಟೋದೆ ಒಪ್ಪಿದ ಒಲವಿನ ಕಣ್ಣಿಂದ ಈ ಒಲವಿನ ಸುಂದರ ಹೂಗಳು 
ನಾವಿಲ್ಲಿ
ಒಂದು ಹುಣ್ಣಿಮೆ ಚಂದ್ರನ ಊರಿನಲ್ಲಿ
ಕದ್ದು ನೋಡುವ ಇಂದ್ರನ ತೇರಿನಲ್ಲಿ
ಸಂಬಂಧ ಹುಟ್ಟೋದು ಸ್ಪರ್ಶದ ಕಣ್ಣಿಂದ
ಸ್ಪರ್ಶಗಳು ಹುಟ್ಟೋದು ಬಯಕೆಯ ಕಣ್ಣಿಂದ ಬಯಕೆಯೇ ಹುಟ್ಟೋದೇ ಬಣ್ಣದ ಕನಸಿನ ಕಣ್ಣಿಂದ ಕನಸು ಹುಟ್ಟೋದೆ ನಾಳೆಯ ಭರವಸೆ ಕಣ್ಣಿಂದ
ಈ ಭರವಸೆ ಕಾಯುವೇ ಪ್ರೀತಿಯ ಕಣ್ಣಲ್ಲಿ
ಒಂದು ಹುಣ್ಣಿಮೆ ಚಂದ್ರನ ಊರಿನಲ್ಲಿ
ಕದ್ದು ನೋಡುವ ಇಂದ್ರನ ತೇರಿನಲ್ಲಿ

" ಶಕುಂತಲಾಮಂಜುನಾಥ್ " ಪಲ್ಲಾಗಟ್ಟೆ

- ಮಂಜುನಾಥ ಡಿ.ಸಿ.ಪಲ್ಲಾಗಟ್ಟೆ

25 Apr 2015, 06:00 am

ನನ್ನವಳು...

ನನ್ನವಳು ಒಮ್ಮೆ ಅಳುವಳು
ಮತ್ತೊಮ್ಮೆ ನಗುವವಳು
ಶ್ರೀಮಂತಿಕೆಯ ಸೊಗು ಹೊಂದದೆ
ಹೃದಯ ಶ್ರೀಮಂತಿಕೆ ಹೊದ್ದವಳು.

ದಿನವಿಡಿ ನನಗಾಗಿ ಕಾಯ್ದವಳು
ಮುಸುಕಿನಲ್ಲೂ ನನ್ನನ್ನು ಮರೆಯದವಳು
ಕಂಡಾಗ ನಾನು ಕೆನ್ನೆ ಕೆಂಪಾಗಿಸಿ
ನನ್ನ ಹೆಜ್ಜೆಯನ್ನೆ ಹಿಂಬಾಲಿಸಿದವಳು.

ಸೊಂಪಾದ ಕೂದಲನು ಚಂದಾದಿ ಹದಮಾಡಿ
ನನಗಾಗಿ ಹೊಸ ಜಡೆಯನು ಹಾಕಿದವಳು
ತಾನುಡುವ ಸೀರೆಯ ಬಣ್ಣವನು ನನಕೇಳಿ
ನನಗಾಗಿ ಹೊಸ ಸೀರೆಯಾ ತೊಟ್ಟವಳು.

ಕಷ್ಟಾದಿ ನನ್ನಿ ಮನ ಮರುಗಿದಾಗ
ಹದಮಾಡಿ,ನಿಜನುಡಿದು ತಿಳಿಹೆಳಿದವಳು
ಕರುಣೆ, ಕ್ಷಮತೆ ಹೊಂದಿದವಳು,ಶಾಂತಿಪ್ರಿಯಳು
ನನಗಾಗೆ ಕಾದವಳು ನನ್ನವಳು ಇವಳು ನನ್ನವಳು...
DS

- Dharmu.s.m

23 Apr 2015, 03:18 pm

ಹಳತು

ಹಳತು ಬೇಡವೆಂಬ ಭಾವ
ಎಲ್ಲವೂ ಹೊಸತೆನಿಸುವ
ಅಹಂಭಾವ
ಹಳೆಯ ಎಲ್ಲವನ್ನೂ
ಗೋಣಿಯೊಂದರಲ್ಲಿ
ತುರುಕಿಸಿತು
ರಾತ್ರಿ ಮಳೆಯೋ ಮಳೆ
ಕರೆಂಟು ಕೈಗೊಟ್ಟಿತು
ಹಾಳಾದ ಬ್ಯಾಟರಿಯು
ಖಾಲಿ
ಬರಿಯ ಕತ್ತಲು
ಇನ್ನೇನೆಂದು
ಯೋಚಿಸಿ ಕುಳಿತಾಗ
ಗೋಣಿಯೊಳಗೆ ತುರುಕಿದ
ಹಳೆಯ ಲ್ಯಾಂಪಿನ
ನೆನಪಾಯಿತು
ಹಾಗೇ
ಹಳತು
ಮನವ, ಇರುಳ ಎರಡನ್ನೂ
ಬೆಳಗಿತು

ಮುಹಮ್ಮದ್ ಇಸ್ಹಾಕ್
ಕೌಸರಿ

- ishak

23 Apr 2015, 07:48 am

" ಅನುರಾಗದ ಬಂಧನಕ್ಕೆ ಬೆಲೆ ಕ

"ಅಲೆಯಾಗಿ ಬಂಧ. ಅನುರಾಗ "
ನೆಲೆಯಾಗಿ ನಿಂತು, ಸೆಲೆಯಾಗಿ ಕೇಳುತ್ತಿದೆ ಗೆಳತಿ ನನ್ನೆದೆಗೂಡಿನಲ್ಲಿ
ನೀ ಹಾಡಿದ ಈ ಬಂಧದ ಅನುರಾಗ ಆ
ನಿನ್ನ ರಾಗ ಅನುಕ್ಷಣ ಗೂಯ್ ಗುಡುತ್ತಿದೆ ನಾ ಯಾರು?ಹೇಗಿದ್ದವನು?
ಎಂಬುದನ್ನು ಮರೆತು ಆಲಿಸಿದೆ ಅಂದು
ಇಂದು ನನಗನ್ನಿಸಿದೆ ನಿನ್ನ ಮೊದಲ ಧ್ವನಿಗೆ
ಸೋತ ಮರುಳ ನಾನೇನ ಎಂದು
" ಅಲೆಯಾಗಿ ಬಂದ ಅನುರಾಗ "
ನೀಯಾರಾದರೇನು?ನಾ ಯಾರಾದರೇನು?ನಿನ್ನಮುದ್ದು ಮೊಗವ
ನೋಡಿ ಇಷ್ಟು ಅಂಬಲಿಸುತ್ತಿದೆ ನನ್ನ ಮನ ನಿನ್ನ ಇದು ಎಷ್ಟು ಜನ್ಮದ ಮೈತ್ರಿಯೋ ನಾ ಕಾಣದಾದೇನು ಚಿನ್ನ
" ಅಲೆಯಾಗಿ ಬಂದ ಅನುರಾಗ "
ಒಮ್ಮೆ ತಿರುಗಿ ನೋಡು ನಿನ್ನ ಮೊಗವ
ತೋರು ಇಂದು ನೀ ಯಾರಾದರೇನು?
ಮುಂದೆ ನೀನೆ ನನ್ನ ಮಡದಿ ಎಂದು
ಒಪ್ಪಿಕೊಂಡಿದೆ ನನ್ನ ಮನ................
" ಅಲೆಯಾಗಿ ಬಂದ ಅನುರಾಗ "
ನೀ ನನ್ನ ಒಪ್ಪಲೇ ಬೇಕೆಂದಿಲ್ಲ ನತದೃಷ್ಟ
ನಾನು ..............ನತದೃಷ್ಟ ನಾನು..........
ಮೆಚ್ಚಿದ ಪ್ರೀತಿಯ ಕಳೆದುಕೊಂಡೆ ಬೆಳೆದಾಗ ಪ್ರೀತಿ, ವಾತ್ಸಲ್ಯ, ಮಮತೆ ಕಳೆದುಕೊಂಡೆ ಇಂದು ನಿನ್ನ ಕಳೆದುಕೊಂಡರೆ ಬದುಕುಳಿಯುವೇನೇ
ಬರೆದಿಟ್ಟಹನು ಆ ಬ್ರಹ್ಮ ಹಿಂಗೆ ಬರೆದಿಟ್ಟಹನು ಆ ಬ್ರಹ್ಮ ಹಿಂಗೆ
" ಅಲೆಯಾಗಿ ಬಂದ ಅನುರಾಗ "
ಒಮ್ಮೆ ತಿರುಗಿ ನೋಡು ಸಾಕು ಮತ್ತೆಂದು
ಬರೆನು ತೊಂದರೆ ಕೊಡೆನು ಇದು ನನ್ನ
ಆಣೆ ನೀ...............ಕೇಳು ಜಾಣೆ............
" ಅಲೆಯಾಗಿ ಬಂದ ಅನುರಾಗ "
ಅಂದು ನೀ ಹಚ್ಚಿದ ನಂದಾದೀಪ ಹಾರಿ
ಹೋಗುವ ಮೊದಲು ತಿರುಗಿ ನೋಡು
ಒಮ್ಮೆ ತಿರುಗಿ ನೋಡು.........
" ಅಲೆಯಾಗಿ ಬಂದ ಅನುರಾಗ "

- ಮಂಜುನಾಥ ಡಿ.ಸಿ.ಪಲ್ಲಾಗಟ್ಟೆ

23 Apr 2015, 06:08 am