ಅಮ್ಮಯೆಂದರೆ ಎನೊ ಹರುಷವು ನನ್ನ ಪಾಲಿಗೆ ಅವಳೇ ದೈವವು, ಶತಕೋಟಿ ದೇವರು ಹಾರೈಸಿದರೆನು ಅಮ್ಮನ ಹಾರೈಕೆಗೆ ಸರಿಸಾಟಿ ಅಗುವುದೆನು,
ಅಮ್ಮ ನೀನು ನಮಗಾಗಿ ಸಾವಿರ ವರ್ಷ ಸುಖವಾಗಿ ಭಾಳಲೇಬೇಕು ನಮ್ಮನೆ ಬೆಳಕಾಗಿ
ಅದೆಷ್ಟೊ ವ್ರದ್ದಾಶ್ರಮಗಳು
ಹರಿಯುತ್ತಿವೆ ಹೆತ್ತವ್ವಳ
ಕಣ್ಣೀರುಗಳು
ದೇವರ ಶಾಪವಿದೆ ಉದ್ದಾರವಾಗಲ್ಲ
ಆ ನೀಚ ಮಕ್ಕಳು
ಅಳುತ್ತಿರುವರು ತಾಯಿಲ್ಲದ
ಮಕ್ಕಳು
ದೇವರು ನೆರವೇರಿಸಲಿ ಅವರ
ಆಸೆಗಳು
ನೆನಪಾಗುತ್ತಿದೆ ತಾಯಿ ನನಗೆ
ಆ ನಿನ್ನ ತ್ಯಾಗಗಳು
ಕಣ್ಣೀರ ಪ್ರಾರ್ಥನೆ ಯಿದೆ ನೀ
ಆರೋಗ್ಯವಾಗಿರಳು
ಬರುವೆನು ಅತೀ ಶೀಘ್ರದಲಿ ಮಡಿಲಲ್ಲಿ
ತಲೆಯಿಟ್ಟು ನಿದ್ರಿಸಲು
ಮರಿಬ್ಯಾಡ ಅವ್ವ ಈ ನಿನ್ನ ಕಂದನ
ಹಣೆಗೆ ಪ್ರೀತಿಯ ಮುತ್ತಿಕ್ಕಳು
ಹೊರಟು ಹೊದಳು ಹೆತ್ತವರ ಬಿಟ್ಟು
ಕೇಳಿದರು ಯಾಕೋದೆ ಮಾನ ಹರಾಜಿಗಿಟ್ಟು
ಹೋದಳವಳು ಕಪಟ ಪ್ರೀತಿಯ ಮುಂದಿಟ್ಟು
ಕೈ ಕೊಟ್ಟಾಗ ಗೊತ್ತಾಗಿತ್ತು ತನ್ನ ಎಡವಟ್ಟು
ತಲೆ ತಗ್ಗಿಸಿ ನಿಂತಳು ಬಾಗಿಳಲಿ ಕಣ್ಣೀರಿಟ್ಟು.
ನೋಡಯ್ಯ ಕಡು ಬಡವರ ಮಕ್ಕಳನ್ನ
ತೊಳೆಯುತ್ತಿರುವರು ಹೋಟೆಲೊಂದರ
ತಟ್ಟೆಗಳನ್ನ
ಉಣ್ಣಲು ಅನ್ನವಿಲ್ಲ ದೂಡುವರು ಕಷ್ಟದಲಿ
ದಿನವನ್ನ
ಯಾಕೆಂದರೆ ಇವರು ಹತ್ತಿಲ್ಲ ಶಾಲಾ
ಮೆಟ್ಟಿಲನ್ನ
ಪ್ರತಿಭೆ ಇದೆ ಇವರಲ್ಲು ಕಲಿತಿಲ್ಲ
ವಿದ್ಯೆಯನ್ನ
ಕಡುಬಡವರಿವರು ಎಲ್ಲಿಂದ ಕೊಡಲಿ
ಹಣವನ್ನ
ನೀಡಬೇಕಿದೆ ನಾವು ಹಣದ ನೆರವನ್ನ
ಕಟ್ಟಬೇಕಿದೆ ಪ್ರತಿಭೆಗಳ ಭವಿಷ್ಯವನ್ನ.
ಕಷ್ಟದಿ ಸಾಗಿಸುವನು
ಜೀವನ ಬಂಡಿಯನ್ನು
ದಿನಕೂಲಿ ಕಾರ್ಮಿಕನು
ದೇಹದ ಬೆವರಿಳಿಸಿರುವನು
ರೂಪಿಸಲು ಭವಿಷ್ಯವನು
ಧನಿಕನೇ ಸತಾಯಿಸದಿರು
ನೀಡು ನೀ ಸಮಯಕ್ಕೆ ಕೂಲಿಯನು
ಯಾಕಂದರೆ ನಮ್ಮನ್ನು ನೋಡುತ್ತಿರುವನು
ಭೂಮಿಯ ಸ್ರಿಷ್ಟಿಕರ್ತನು