Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರ್ರಿತಿ

ಖಾನುವ ಕನ್ನಿಗೆ ಮಿನ್ನ ಅದಿ ಕೇನೆಗೆ
ಆ ಕೆನೆಗೆ ನಿನು ಬರುವ ಮುನ್ನ್ ನಾನು ನಿನಾದೆ ನಾನು

- ಸೀತು

15 Jun 2015, 03:57 pm

ಅಮ್ಮ

- ishak

11 Jun 2015, 07:54 am

ನೇಸರ

ಮೂಡಣದಿ ಮೂಡಿದಾ
ಪಡುವಣದಿ ಅಡಗಿದಾ
ಬಂದು ಹೋಗುವ ನಡುವೆ..
ಜಗವೆಲ್ಲಾ ಬೆಳಗಿದಾ.

- ಹನುಮಂತಸಿಂಗ

11 Jun 2015, 05:37 am

ಕನಸು ಮನಸು

ಸುಪ್ತ ಮನಸಿನಲಿ
ನಿನ್ನದೇ ಗುಂಗು
ಮಿಂಚುವ ನಯನದಲಿ
ನಾಚಿಕೆ ರಂಗು

ಹಾದಿಕಾಯುತ ಮನಸು
ಕನಸು ಕಂಡಿತು
ಕನಸುಕಾಣುತ ಮನಸು
ಮೈಮರೆಸಿತು

ಬಯಕೆಯ ಕನಸು
ಮನಸು ಬಯಸಿತು
ಕನಸು ನನಸಿನ ಮನಸು
ನಿನ್ನ ಬಯಸಿತು


ಕಣ್ಣುಬಿಟ್ಟರೆ ಕನಸು ಹಾರಿತು
ನನಸಾಗಿ ಮನಸು ಜಾರಿತು
ಜಾರಿದ ಮನಸಿನ ಕನಸಿನಲಿ
ಶೃಂಗಾರಮೂಡಿತು

.....ಮಧುಗಿರಿ ಬದರಿ

- K.Badarinatha

28 May 2015, 06:03 am

ಅಕ್ರಮ

ಮಾಡುವರು
ದೊಂಬಿ
ಕಾರಣ
ಇವರಿಗೆ
ಮಾಮೂಲಾಗಿದೆ
ಕಂಬಿ
ಹಲವರು
ಹಾಳಾದರು
ಇವರನ್ನು
ನಂಬಿ

- ishak

26 May 2015, 03:10 am

ಲಲ್ಲೆ

ಎದ್ದು ಬಿದ್ದು ಬಂದೆನಲ್ಲೆ
ಆಸೆ ತಡಿಯಲಾರೆ
ಕದ್ದು ಕದ್ದು ನೋಡಬ್ಯಾಡ
ಕನಸು ಕಾಣಲಾರೆ

ಕುಂಟುನೆಪವ ಹೇಳಿಕೊಂಡು
ನೀರಿಗಂತ ಬಾರೆ
ಅಪ್ಪ ಅಮ್ಮ ಮನೆಯಲಿಹರು
ಸುಳ್ಳು ಹೇಳಲಾರೆ

ಪ್ರೀತಿ ಪ್ರೇಮ ಮಾಡಿದ್ಮೇಲೆ
ಹೆದ್ರೊದಂತು ಏಕೆ ?
ಒಂಟಿಯಾಗಿ ಸಿಕ್ಕಿ ಬಿಟ್ರೆ
ತಂಟೆ ಮಾಡೋದ್ಯಾಕೆ ?

ತುಂಟ ನಗೆಯ ಬೀರಿ ಬಂದು
ನೆಂಟನಾಗ ಬಲ್ಲೆ
ಎಂಟದೆಯ ಭಂಟ ನೀನು
ಸುಮ್ನೆ ಬೇಡ ಲಲ್ಲೆ

ಪೈಪೋಟಿಯಾಟ ಬೇಡ ಜಾಣೆ
ನಿನ್ನ ಗೆಲ್ಲಲಾರೆ
ಪೋಲಿಯಾಟ ಬೇಡ ಜಾಣ
ಲಾಲಿ ಹಾಡಲಾರೆ

..........ಮಧುಗಿರಿ ಬದರಿ

- K.Badarinatha

21 May 2015, 04:32 am

ಗುರುವಿನಲ್ಲಿ ಭಕ್ತಿ

ವಿದ್ಯಯಲ್ಲಿ ಇರಲಿ ಆಸಕ್ತಿ
ತಲೆಯಲ್ಲಿ ಇರಲಿ ಬುದ್ದಿಶಕ್ತಿ
ಪುಂಡಲಿಂಗರ ಮೆಲೆ ಇರಲಿ ಬಯ ಬಕ್ತಿ
ನಿನಾಗುವೆ ದೊಡ್ಡ ವ್ಯಕ್ತಿ
ಕೊನೆಗೆ ಸಿಗುವುದು ನಿನಗೆ ಮುಕ್ತಿ


ರವಿಕಿರಣ ಕೆರುಟಗಿ

- ravikiran

18 May 2015, 10:28 am

ಪ್ರಾರ್ಥನಾ ರಾಗ ಲಹರಿ:

ಸುಚರಿತ ಚಿತ್ರಾಂಬರಿ
ಶ್ಯಾಮಲಾಂಗಿ ವಿಶ್ವಾಂಬರಿ

ರತ್ನಾಂಗಿ ಕನಕಾಂಗಿ
ರಸಿಕಪ್ರಿಯ ಸರಸಾಂಗಿ

ಕೀರವಾಣಿ ಗಾನಪ್ರಿಯೆ
ತಾನರೂಪಿ ಕೋಕಿಲ ಪ್ರಿಯೆ

ನಾಟಕಪ್ರಿಯೆ ರೂಪವತಿ
ಕಾಮವರ್ಧಿನಿ ಮಾನವತಿ

ರಾಗವರ್ಧಿನಿ ಗಾಯಕಪ್ರಿಯೆ
ನಟಭೈರವಿ ಭಾವಪ್ರಿಯೆ


ನಾಸಿಕಭೂಷಿಣಿ ಪಾವನಿ
ಶಣ್ಮುಖಪ್ರಿಯ ನಾಗನಂದಿನಿ

ಶಂಕರಾಭರಣ ಸುಂದರಿ
ಹಂಸಧ್ವನಿ ಕರುಣಿಸು
ಗೌರಿ ಮನೋಹರಿ

..........ಮಧುಗಿರಿ ಬದರಿ

- K.Badarinatha

18 May 2015, 04:39 am

ಚುಣಾವಣೆ

ಬಂತು ಬಂತು ಚುಣಾವಣೆ
ಎಲ್ಲೆಲ್ಲೂ ಹಣದ ಚಲಾವಣೆ
ಮಾಡುವರೆಲ್ಲ ಬಗೆ ಬಗೆ ಆಣೆ
ಆದರೂ ತೀರದು ಬಡವರ ಬವಣೆ
ಅರಿಯದೆ ಆದರೆ ಮತ ಚಲಾವಣೆ
ಅಭಿವೃದ್ಧಿ ಯನ್ನು ನೀ ಕಾಣೆ.

- ಚನ್ನಮಲ್ಲ ಸ್ವಾಮಿ ಎಂ ಎನ್.

17 May 2015, 02:29 am

ಬಾಲ್ಯದ ಒಂದು ಕನಸು

08072012
ಅಮ್ಮ ನಿನ್ನ ತೊಡೆಯ ಮೇಲೆ
ಸ್ವಲ್ಪಹೊತ್ತು ಮಲಗಲೆ
ಕಣ್ಣನು ಮುಚ್ಚಿ ಕನಸನು ಕಾಣುತ
ನನ್ನನು ನಾನು ಮರೆಯಲೆ
ತಲೆಯನು ಸವರು ಎದೆಯನು ತಟ್ಟು
ಕನಸಿನ ಲೋಕಕೆ ಹೋಗುವೆನು
ನನ್ನದೇ ಲೋಕದಿ ನಾನೆ ರಾಜನು
ಎಲ್ಲರು ನನ್ನ ಸೇವೆಯ ಮಾಡುವರು
ವಜ್ರದ ಕೀರೀಟ ಚಿನ್ನದ ಹಾರ
ಹಾಕಿಕೊಂಡು ಸಿಂಹಾಸನದಲಿ ಕೂರುವೆನು
ಬಗೆ ಬಗೆ ತಿಂಡಿ ಬಗೆ ಬಗೆ ಹಣ್ಣು
ತನ್ನಿರಿ ಎಂದು ಆಜ್ಞೆಯ ಮಾಡುವೆನು
ಒಂದೊಂದೇ ತಿಂಡಿ ಒಂದೊಂದೇ ಹಣ್ಣು
ಕಡಿಯುತ ತಿನ್ನುತ ಅಗಿಯುತ ನುಂಗುತ
ಕೊಬ್ಬುತ ಹಿಗ್ಗುತ ದೊಡ್ಡವನಾಗಿ ಬೆಳೆಯುವೆನು
ದುಡಿಮೆಯ ಮಾಡಿ ಹಣವನು ಗಳಿಸಿ
ಅಮ್ಮ ನಿನ್ನನು ನೋಡಿಕೊಳುವೆನು

- ಚೇತನ್ ಬಿ ಸಿ

16 May 2015, 03:07 pm