Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮಾನವ ಆಡಂ
ಕಾಲದಿಂದಲೂ ತುಂಟ!
ಬೇಡದ್ದನ್ನೇ ಮಾಡುವ ತರಲೆ
ನೋಡದ್ದನ್ನೇ ಹುಡುಕುವ ತೀಟೆ
ಇಲ್ಲದ್ದನ್ನೇ ಕಲ್ಪಿಸುವ ಮುಕ್ಕಣ್ಣ
ಹುಟ್ಟೂರ ಬಿಡುವ ಅಲೆಮಾರಿ!
ನೆಲವೆಲ್ಲಾ ತಿರುಗಿ
ನೀರೆಲ್ಲಾ ಈಜಿ
ಗಗನಕ್ಕೆ ಹಾರಿ
ವಿಶ್ವದ ಅಂಚು
ಹುಡುಕುವ ತುಂಟ!
ಮಾನವ ಆಡಂ
ಕಾಲದಿಂದಲೂ ತುಂಟ!
ವಿಷ್ಣುವಿನ ಹೊಕ್ಕಳಿಂದ
ಬ್ರಹ್ಮನ ತೆಗೆದ!
ಆ ಬ್ರಹ್ಮನಿಗೆ ಮಗಳನ್ನೇ ಕಟ್ಟಿದ!
ವಿಷ್ಣುವಿಗೆ ಸೀರೆ ಉಡಿಸಿ
ಶಿವನ ಕೈಗೆ ಅಯ್ಯಪ್ಪನ ಕೊಟ್ಟ!
ಮಾನವ ಆಡಂ
ಕಾಲದಿಂದಲೂ ತುಂಟ!
ಸಿಕ್ಕಿದ್ದನ್ನೆಲ್ಲಾ ಒಡೆದೊಡೆದು
ಆಟಂ ಹುಡುಕಿದ!
ಅದನ್ನೂ ಅಸ್ತ್ರ ಮಾಡಿ
ಕಾದಾಟಕ್ಕೆ ಹೊಸ ರೂಪ ಕೊಟ್ಟ!
ಬದುಕುವ
ಬದುಕೇ ಇರುವ ಆಸೆ ಹೊತ್ತ.
ಸಾಯುವ ಸಾಯಿಸುವ
ಹೊಸ ಹೊಸ ದಾರಿ ಕಂಡ.
ಮಾನವ ಆಡಂ
ಕಾಲದಿಂದಲೂ ತುಂಟ!
- ನಂದೀಶ
21 Jul 2015, 10:43 am
ಎಲ್ಲವೂ ಸಾಧ್ಯ ಗುರೂ!
-------------------------------
ಹುಲ್ಲುಗಾವಲಿನಲ್ಲಿ ಒಂಟೆ
ಮರಳುಗಾಡಿನಲ್ಲಿ ಜಿಂಕೆ
ಎಲ್ಲವೂ ಸಾಧ್ಯ ಗುರೂ!
ಬೆಟ್ಟಗುಡ್ಡಗಳಲ್ಲಿ ಬೆಕ್ಕು
ಹೊಲಗದ್ದೆಗಳಲ್ಲಿ ಮೀನು
ಎಲ್ಲವೂ ಸಾಧ್ಯ ಗುರೂ!
ಐಐಟಿಗಳಲ್ಲಿ ದಡ್ಡರು
ರಾಜಕಾರಣದಲ್ಲಿ ಸಂತರು
ಎಲ್ಲವೂ ಸಾಧ್ಯ ಗುರೂ!
ಪಿಎಚ್ ಡಿ ಪೀವನ್
ಡಿಗ್ರಿಯಿಲ್ಲದ ಮಂತ್ರಿ
ಎಲ್ಲವೂ ಸಾಧ್ಯ ಗುರೂ!
ವೈದ್ಯರಲ್ಲಿ ಕಟುಕರು
ಅರ್ಚಕರಲ್ಲಿ ನಾಸ್ತಿಕರು
ಎಲ್ಲವೂ ಸಾಧ್ಯ ಗುರೂ!
ಹಾಲಿನಲ್ಲಿ ಯೂರಿಯ
ಕೋಲಾದಲ್ಲಿ ಹಾಲಾಹಲ
ಎಲ್ಲವೂ ಸಾಧ್ಯ ಗುರೂ!
ನಿರಕ್ಷರಿಗೆ ಡಿಗ್ರಿ
ಅದಕ್ಷನಿಗೆ ಪದಕ
ಎಲ್ಲವೂ ಸಾಧ್ಯ ಗುರೂ!
ರಿಲೀಫ್ ನಿಧಿಗೆ ಲಕ್ಷ ದಾನ
ಅಪ್ಪ ಅಮ್ಮನಿಗೆ ವೃಧ್ಧಾಶ್ರಮ
ಎಲ್ಲವೂ ಸಾಧ್ಯ ಗುರೂ!
ಕೈನೆಕ್ಕುವ ಹುಲಿಮರಿ
ಕತ್ತು ಕುಯ್ಯುವ ಕೆಲಸದಾಳು
ಎಲ್ಲವೂ ಸಾಧ್ಯ ಗುರೂ!
ಇಂಟರ್ನೆಟ್ ಲೋಕದಲ್ಲಿ ಧ್ಯಾನ
ಮನೆ ತುಂಬಾ ಮೌನ
ಎಲ್ಲವೂ ಸಾಧ್ಯ ಗುರೂ!
ಕಾಡಿನಲ್ಲಿ ರೆಸಾರ್ಟ್
ಊರಿನಲ್ಲಿ ಚಿರತೆ
ಎಲ್ಲವೂ ಸಾಧ್ಯ ಗುರೂ!
- ನಂದೀಶ
21 Jul 2015, 10:41 am
ಕೊಲ್ಕಾತಾ
----------------
ಬಿಟ್ಟು ಬಂದರೂ ಮನಸು ಬಿಡದ ಊರು
ಕಣ್ಣು ಮುಚ್ಚಿದರೂ ಕಾಣುವ ಹೂಗ್ಲಿ ನೀರು
ಊರೆಲ್ಲಾ ಝಗಝಗಿಸುವ
ದುರ್ಗಾಷ್ಟಮಿಯ ಜೋರು
ಹರಟೆ ವಾದಗಳ ನಿಪುಣ ಸೋಮಾರಿ ಜನರು.
ಬಿಟ್ಟು ಬಂದರೂ ಬಿಡದ ಊರು.
ಫ್ಲೈಓವರ್ ಕೆಳಗೆ ಜನರ ಕೇರಮ್ಮು
ಧಡಧಡ ತೆವಳುವ ಪಳೆಯುಳಿಕೆ ಟ್ರಾಮು
ರವೀಂದ್ರ ಗಾನ ಚಿತ್ರಣದ ಮೆಟ್ರೋ ಟ್ರೇನು
ಜನ ಮೀನು ಹೊರುವ ಲೋಕಲ್ ಟ್ರೇನು.
ಬಿಟ್ಟು ಬಂದರೂ ಬಿಡದ ಊರು.
ಕೈರಿಕ್ಷಾದಲ್ಲಿ ಕೂತಿರುವ ಡುಮ್ಮಿ ಸ್ಲೀವ್ಲೆಸ್ಸು
ಏದುತ್ತ ಎಳೆಯುವ ಬಿಹಾರಿ ಷೂಲೆಸ್ಸು
ಗಡಗಡಿಸುವ ಅಗ್ಗದ ನೀಲಿ ಬಸ್ಸು
ಕೆಲವೊಂದು ಕೆಂಪು ಮಿನಿಬಸ್ಸು.
ಬಿಟ್ಟು ಬಂದರೂ ಬಿಡದ ಊರು.
ರೋಡಿಗೆ ಅರಿಶಿನ ಹಚ್ಚುವ ಅಂಬಾಸಡರ್ ಟ್ಯಾಕ್ಸಿಗಳು
ಟ್ರಾಫಿಕ್ ತಡೆದು ತಲೆತಿನ್ನುವ ದಾರಿ ಸಭೆಗಳು
ಫುಟ್ಪಾತಿನ ಅವಲಕ್ಷಣದ ಅಂಗಡಿಗಳು
ಕೊಳಕಿನ ಮಧ್ಯೆಯೇ ಕಾಳಿ ಗುಡಿಗಳು.
ಬಿಟ್ಟು ಬಂದರೂ ಬಿಡದ ಊರು.
ಅರಮನೆ ನಾಚಿಸುವ ವಿಕ್ಟೋರಿಯ ಸ್ಮಾರಕ
ನೇಶನಲ್ ಲೈಬ್ರರಿಯ ಕರುಚರ್ಮ ಹೊದಿಕೆಯ ಪುಸ್ತಕ
ನೇಶನಲ್ ಮ್ಯೂಸಿಯಂನ
ಕಳೇಬರಗಳ ಕೌತುಕ
ತೂಗಾಡುವ ಹೌರಾ ಸೇತುವೆಯ ಪುಳಕ.
ಬಿಟ್ಟು ಬಂದರೂ ಬಿಡದ ಊರು.
ಐದಕ್ಕೇ ಮುಳುಗುವ ಸೂರ್ಯನ ಚಂದ
ಪಾರ್ಕಿನಲ್ಲಿ ಪ್ರೇಮಿಗಳ ಎಗ್ಗಿಲ್ಲದ ಚಕ್ಕಂದ
ಅದ ನೋಡಿ ಅಸೂಯೆ ಪಡುತ್ತ ಅಸಭ್ಯ ಗೊಣಗುವ ಹಿರಿಮಂದಿ.
ಬಿಟ್ಟು ಬಂದರೂ ಬಿಡದ ಊರು.
- ನಂದೀಶ
21 Jul 2015, 10:38 am
ಯಾವ ದೇಶದಲ್ಲೆ ದುಡಿ
ಯಾವ ಮಣ್ಣಿನಲ್ಲೆ ಮಡಿ
ನಿಂತ ನೆಲವು ಹಿಡಿದ ಹುಡಿ
ಭರತ ಭೂಮಿಯೆಂದು ತಿಳಿ
- ಉಮೇಶ ಶಿವಪ್ಪ ಲಮಾಣಿ
20 Jul 2015, 05:30 pm
ಏಳಿ ಎಚ್ಚರಗೊಳ್ಳಿ ಕೆಚ್ಚೆದೆಯ ರೈತರೆ
ನೆತ್ತರೋಕುಳಿಯಲ್ಲಿ ನಾಟ್ಯವಾಡಿ
ತಾಯೆದೆಯ ರಂಗದಲಿ ಬಾಳ ನೆತ್ತವನಾಡಿ
ಕರುಣೇ ಇಲ್ಲದ ಸರಕಾರದೆದುರು ಮೆಟ್ಟಿ ನಿಲ್ಲಿ
ಎತ್ತಿ ಹಿಡಿಯಿರಿ ಹೊಸ ಕಹಳೆಯನ್ನು
ನಾಡ ನರನಾಗಳೆಲ್ಲಾ ಮಿಡಿಯುವಂತೆ
ನೂತನ ಚೇತನ ಉಕ್ಕಲಿ ಹರಿಯಲಿ
ಸತ್ತ ರೈತನ ಆತ್ಮಕ್ಕೆ ಶಾಂತಿ ಸೀಗುವರೆಗೆ
ಸರಕಾರಕ್ಕೆ ಮೇಟ್ಟಿ ನಿಲ್ಲಿರಯ್ಯಾ ಮೇಟ್ಟಿ ನಿಲ್ಲಿರಯ್ಯಾ,........
- ಉಮೇಶ ಶಿವಪ್ಪ ಲಮಾಣಿ
20 Jul 2015, 04:57 pm
ಎಲ್ಲಲ್ಲೂ ನಮ್ಮವರೆ ಕೆಲಸಕ್ಕಾಗಿ ಕಾಯ್ದವರು
ಮನೆಯ ಮನಗಳಿಗೆ ಹೊರೆಯಾಗಿ,
ಮನಸು,ಭಾವನನೆಗಳ ಬಿರಿಗೊಳಿಸಿ,
ನರಳಾಡಿ,ಹೊರಳಾಡಿ ಜೀವ ತೇಯ್ದವರು.
ಎಲ್ಲೇಂದರಲ್ಲಿ "ವೃತ್ತಿಶಿಕ್ಷಣದ್ದೆ"ಹೆದ್ದಾರಿ
ಕಲಿತ "ಕಲಾ"ವಿಭಾಗ ಬರಿಮುಳ್ಳುದಾರಿ.
ನೈತಿಕತೆ,ಭಾವಕತೆ ತುಂಬಿತುಳಿಕಿದ್ದರು
ಕೇಳುವವರಾರಿಲ್ಲ,ಅಣಿಕಿಸುವವರೆ ಇಲ್ಲೆಲ್ಲ
ಕಲಯುವಿಕೆಯಲಿ ಕಲ್ಮಷವಿಲ್ಲ ಬೆರಗಾಗದಿರಿ
ಕಲಿತರೂ ಕೈಯಲ್ಲಿ ಕಾರ್ಯವಿಲ್ಲ ಮಂಕಾಗದಿರಿ,
ಸರ್ಕಾರಿ,ಅರೆಸರ್ಕಾರಿ,ಅನುದಾನಿತ,ಅನುದಾನರಹಿತ
ಬೇಕು,ಬೇಕುಗಳೆ ಎಲ್ಲ ಕೊಡುವವರಾರಿಲ್ಲ.
ಕಣ್ಣಿರು ಕಂಬನಿಗಳೆ ನಮ್ಮ ಸ್ನೆಹಿತರು
ಬದುಕಿನಾ ನಿಜ ತಿಳಿಯುವಾ ದಾರಿಯಲಿ.
ನನಸಾಗದಿರುವ ಕನಸುಗಳೆ ನಮ್ಮೊಡನಾನಾಡಿಗಳು
ನೆಲೆಯ ಹುಡುಕವ ಪ್ರಯಾಸದ ಈ ಪ್ರಯಾಣದಲಿ.
ಡಿ.ಎಸ್
- Dharmu.s.m
18 Jul 2015, 09:12 am
ಹಾರ ತುರಾಯಿಗಳು ಸರಳು ಸರಪಣಿಯಂತೆ
ಭವ್ಯದರಮನೆಯು ಅರಗಿನರಮನೆಯಂತೆ
ನೀನಿಲ್ಲದ ನನ್ನಬಾಳು ಹಗ್ಗ ಜಗ್ಗುವ ನಾಯಿಯಂತೆ
ತವರೆಂಬ ತಾಣವು ನನಗೆ ಸವತಿಯ ಸೆರಗಂತೆ
ಮತ್ತೆ ಮತ್ತೆ ತವರ ಸೆರಗಿನ ಹಿಂದೆ
ನೀ ಹೀಗೆ ಸುತ್ತಿ ಸುತ್ತಿ
ಮಿತಿ ಮೀರಿದರೆ ಎಲ್ಲೆ
ನಾನಾವ ಸೆರಗ ಸುತ್ತಲಿ ನಲ್ಲೆ ?
ಪುಟ್ಟ ಕಂದನ ನೆನಪು
ನಿನ್ನ ನಗುವಿನ ಒನಪು
ವಿರಹದ ಅರಗಿನ
ಅರಮನೆಯ ತೊರೆದು
ನನ್ನೆದೆಯ ಅರಮನೆಯಲ್ಲರಳಿದೆ
ಹೊತ್ತು ಜಾರುವ ಮುನ್ನ
ಹಕ್ಕಿ ಗೂಡು ಸೇರುವ ಮುನ್ನ
ಗೋಧೂಳಿ ಹಾರುವ ಮುನ್ನ
ಮನೆಗೆ ಬಾ ಚಿನ್ನ ...
..........ಮಧುಗಿರಿ ಬದರಿ
- K.Badarinatha
15 Jul 2015, 04:56 am
ನಿನ್ನ ಸ್ನೇಹಿತ ಎಷ್ಟೇ ಕೆಟ್ಟವನಾದರು, ಅವನ ಜೊತೆ ಸ್ನೇಹವನ್ನು ಮುರಿಯ ಬೇಡ......
ಏಕೆಂದರೆ, ನೀರು ಎಷ್ಟೇ ಕಲುಷಿತವಾದರು ಬೆಂಕಿನಿಂದಿಸಲು ಉಪಯೋಗಿಸಬಹುದು.
✒ಶಾಕೀರ್ ಅಕ್ಕರಂಗಡಿ ���
- ಶಾಕೀರ್ ಅಕ್ಕರಂಗಡಿ
14 Jul 2015, 03:34 pm
ಜನನವು ಒಂದೆ,
ಜೀವನವು ಒಂದೆ,
ಮತ್ತೆಕೆ ಹುಟ್ಟಿದಾ ಮೆಲೆ ಬೆನ್ನೆರಿದ
ಈ ಜಾತಿ ಬೆಗೆ .
ಬೆಳಕ ಸೂರ್ಯನು ಒಂದೆ
ಇರುಳ ಚಂದ್ರಮನು ಒಂದೆ
ಇವರನಾಶ್ರಯಸಿದ ನಮ್ಮೊಳಗೆ
ಎಕಿದು ಜಾತಿ ಬೆಗೆ.
ಕಣ್ಣು ಎರಡಾದರು ನೊಟ ಒಂದೆ,
ಕುಡಿವ ನೀರು,ಉಸಿರ ಗಾಳಿ ಒಂದೆ
ನಮ್ಮವರನೆ ಹೊರಗೆ ತಳ್ಳವ
ಇ ಹೊಲಸು ಜಾತಿ ನಮಗೆ ಬೆಕೆ.
ಅಂತರಾಳದ ಮನದ ಚಹರೆಯು ಒಂದೆ
ಜನನ ಜನ್ಮ ನಿಡಿದ ಸ್ಥಳ ಒಂದೆ,
ನಮ್ಮಂತಿರುವವರನು ಮುಟ್ಟಸಿರುವ ಇ ಹೊಲಸು ನಿತಿ
ನಮಗೆ ಬೆಕೆ ನಮಗೆ ಬೆಕೆ...
ಎಮ್. ಎಸ್.ದರ್ಮು.
- Dharmu.s.m
11 Jul 2015, 02:18 pm
ಕನಸ್ಸಿನಲ್ಲಿ ಬಂದು ಕಣ್ತುಂಬಾ ಓಡಾಡಿ ಕರಗಿ ಹೋದೆ ಚಲುವೆ ನಿನ್ಯಾರು ಎಲ್ಲಿರುವೆ?
- ravikiran
11 Jul 2015, 11:39 am