ಹಳೆಯ ಋತುವೊಂದು ಮರಳಿದೆ
ನೆನಪುಗಳು ಪದೇ ಪದೇ
ಮರುಕಳಿಸುವಂತೆ...
ಈ ರೀತಿಯ ನೋವು ದಿನ ಉರುಳಿದಂತೆ
ನೋವು ಇಲ್ಲಿ ಏಕಾಂಗಿ
ನೆನಪುಗಳ ಹೊತ್ತು ತರುವವು
ಸಿಹಿಯ ಯಾತನೆಯಂತೆ...
ಎಷ್ಟು ಸೌಧಗಳ ಕಟ್ಟು ಕೆಡವಿದರು
ಹುಟ್ಟಿ ಸಾಯುವ ಪ್ರೀತಿಗೆ ಸ್ಮಾರಕ.
ನನ್ನ ಜೊತೆಗೂಡಿ ಅಲೆಯುತ್ತಿವೆ
ಸಾಗಿದಂತೆಲ್ಲಾ ಗುರಿಯಿಲ್ಲದೆ...!
ಮೌನವನು ಸಂತಯಿಸಲು
ಮತ್ತೊಂದು ಧೀರ್ಘ ಮೌನ
ಮೌನಗಳ ಮಾತು ಕೇಳಲು ನಾನಿರುವೆ
ನನ್ನ ಮಾತು ಕೇಳಲು ನೀನಿಲ್ಲ...
ಸ್ನೇಹಿತರ ಸಂಕೋಲೆ , ಬಿಡಿಸಲಾರದ ಅನುಬಂಧ
ಹಣದ ಅಹಂಕಾರವಿಲ್ಲ
ಗುಣದ ಝೇಂ ಕಾರ
ನೋವು ನಲಿವುಗಳ ಸಂಗಮೇ ಈ ಸ್ನೇಹ ಜೊತೆಗಿದ್ದಾಗ ನಲಿದ ಕ್ಷಣಗಳನ್ನು
ಬಿಚ್ಚಿದರೆ ಸಾಕು ಅರಳುವ ಮನಸ್ಸು
ದೂರವಾದರು ಮರೆಯಲಾಗದ ನೆನಪುಗಳು
ಮುನಿಸು ತಮಾಷೆಯಗಳು ಇಲ್ಲದ ಸ್ನೇಹವಿಲ್ಲ,
ಆ ಸ್ನೇಹವಿಲ್ಲದೇ ಬಾಳಲಾರವೇ ಈ ಜಗದೊಳಗೆ
ಪರಿಚಯವಾಗುವರು ಸ್ನೇಹಿತರು ಸಾವಿರಾರು ,
ನಮಗೆ ಇಷ್ಟವಾಗುವರು ನೂರಾರು ,
ಆ ಸ್ನೇಹಿತರ ಸಂಬಂಧ ಇರಲಿ ಜೀವನ ಪೂರ್ತಿ ,
ಎಲ್ಲರ ಬಾಳಲ್ಲಿ ಬೆಳಗುವ ಸ್ನೇಹ , ನೀ ಎಂದಿಗೂ ಚಿರನೂತನ.
ಎ ಜಿ ಶರಣ್
ಹೊರಗೆ ಸುರಿವ ಧೋ ಮಳೆ
ಒಳಗೆ ಹರಿಯಲಿಲ್ಲ ಪದಗಳ ಹೊಳೆ
ಎಷ್ಟು ಮುಳುಗಿದರೂ ಕಲ್ಪನಾ ಬಾವಿಯೊಳಗೆ
ತುಂಬುತ್ತಲೇ ಇಲ್ಲ ಕವನದ ಕೊಡ
ಬರಿದೇ ತುಳುಕಾಡಿದೆ, ಅದಕ್ಕೇನೋ ಜಡ!
ಮಿಂಚ ಬೆಳಕಿಗೆ ಹೊಳೆದ ಬೆಟ್ಟ ಸಾಲು
ಆದರೂ ಹೊಳೆದಿಲ್ಲ ಒಂದಾದರೂ ಕವನ ಸಾಲು
ಮಳೆ ತೊಳೆಯಿತು ಇಳೆಯ ಕೊಳೆ
ಕವಿ ಗೀಚಿ ಗೀಚಿ ಸಾಹಿತ್ಯದ ಕೊಲೆ
ಮಳೆಯ ಹೊಡೆತಕ್ಕೆ ತುಡಿವ ಹೃದಯದ ಗೋಳು
ಪದಕ್ಕೆ ತಡಕಾಡಿ ಸತ್ತ ಕವನವಿದು
ಕವಿಯ ನಿರಂತರ ಸೋಲು.