Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ವೆಕ್ಯಾನ್ಸಿ ಇಲ್ಲ ?

SSLC ಮುಗಿಸಿ ಪಿಯುಸಿ ಸೇರಿದ ಸಮಯ ಆಗ
ಪ್ರೀತಿ ಬೇಡುತಿತ್ತು ಹೃದಯದೊಂದು ಭಾಗ
ಕಣ್ಣಿಗೆ ಬಿದ್ದಳೊಬ್ಬಳು ಸುಂದರಿ, ಅರಳಿತು ಪ್ರೀತಿ ಅನುರಾಗ
ಪ್ರಿಯತಮನ post ಇದೆಯಾ ಎಂದು application ಹಾಕಿದಾಗ
ಹೇಳಿದಳು, vacancy ಇಲ್ಲ, "ಖಾಲಿ ಇರೋದು ಅಣ್ಣನ ಜಾಗ"

✍? ಯಕ್ಷ

- pavan

24 Jan 2025, 10:17 am

ಹೇಗೆ ಬಣ್ಣಿಸಬಲ್ಲಿರಿ

ಹೇಗೆ ಬಣ್ಣಿಸಬಲ್ಲಿರಿ ಗುಣಗಳನ್ನು
ಅವರು ಸಜ್ಜನರು ಇವರು ದುಷ್ಟರೆಂದು
ಶಕುನಿ ಇಲ್ಲದಿದ್ದರೆ ಮಹಾಭಾರತ ಎಲ್ಲಿ ನಡೆಯುತ್ತಿತ್ತು
ಧರ್ಮ ಅಧರ್ಮಗಳಲ್ಲಿ ವ್ಯತ್ಯಾಸ ಎಲ್ಲಿರುತಿತ್ತು
ಮಂತರೆ ಇಲ್ಲದಿದ್ದರೆ ರಾವಣನ ಅಟ್ಟಹಾಸಕ್ಕೆ ಕೊನೆ ಎಲ್ಲಿರುತಿತ್ತು
ರಾಮನ ಅವತಾರಕ್ಕೆ ಅರ್ಥವೆಲ್ಲಿರುತಿತ್ತು

ಹೇಗೆ ಬಣ್ಣಿಸಬಲ್ಲಿರಿ
ಅಗ್ನಿಯಷ್ಟು ಶುದ್ಧಳಾದ ಸೀತೆಗೆ ಅಪಮಾನ ಹೊರಿಸಿದ ರಾಮ ದೇವರೆಂದು
ಜೂಜಿಗೆ ಪತ್ನಿಯನ್ನು ಪಣವಿಟ್ಟ ಪಾಂಡವರು ಧರ್ಮದ ಪಾಲಕರೆಂದು

ನಾನು ಒಳ್ಳೆಯವಳು ನಾನು ಧರ್ಮ ಪಾಲಿಸುವವಳು
ಎಂದು ಹೇಗೆ ಹೇಳಬಲ್ಲಿರಿ
ನಿಮ್ಮ ಅಂತರಂಗದಲ್ಲೇ ಯುದ್ಧ ನಡೆಯುತ್ತಿರುವಾಗ
ನಿಮ್ಮ ಅರಿಷಡ್ವರ್ಗಗಳ ಮೇಲೆ ಹಿಡಿತ ಇಡಲಾಗದವರು
ಹೇಗೆ ಅಳೆಯಬಲ್ಲಿರಿ ಹೊರಗಿನ ಪ್ರಪಂಚವನ್ನು

- rashmi maladkar

23 Jan 2025, 06:53 pm

ಅವಳ ಆ ಪುಟ್ಟ ಡೈರಿ

ಅವಳ ಆ ಪುಟ್ಟ ಡೈರಿ ಹೇಳಿತ್ತು ಅವಳ ಕಥೆಯನು
ಅದರಲ್ಲಿ ಅವಳ ಕಣ್ಣೀರಿನ ಗುರುತಿತ್ತು ನಗುವಿನ ನೆನಪಿತ್ತು
ಯಾರಿಗೂ ಹೇಳಲಾಗದ ಎಷ್ಟೋ ಗುಟ್ಟಿನ ಮಾತಿತ್ತು
ಅದರಲ್ಲಿ ಒಣಗಿದ ಗುಲಾಬಿ ಹೂವಿತ್ತು
ಅದು ಅವಳ ಮೊದಲ ಪ್ರೀತಿಯಾ ಕಂಪು ಸೂಸುತಿತ್ತು
ಅವಳಿಗೆ ಅದೆಷ್ಟು ಜೀವನೋತ್ಸಾಹ
ನೂರು ಕನಸುಗಳಾ ಕಟ್ಟಿ ಎಲ್ಲಾ ಬರೆದಿಟ್ಟಳು
Cancer ಎಂದು ಅರಿತಾಗ ಅಳಲಿಲ್ಲ ಅವಳು
ನೋವನ್ನು ನಿರಾಸೆಯನ್ನು ಎಲ್ಲಾ ಬರೆದಿಟ್ಟಳು
ಬಿಡಲಿಲ್ಲ ಅವಳು ಉತ್ಸಾಹವನ್ನು
ಎಲ್ಲೋ ಒಂದು ಪುಟ್ಟ ಭರವಸೆ ಬದುಕುವೆನೆಂದು
ಆದರೆ........
ಅಪೂರ್ಣವಾದ ಡೈರಿಯಂತೆ ಅವಳ ಕಥೆಯೂ ಅಪೂರ್ಣವಾಗಿ ಹೋಯಿತು

- rashmi maladkar

23 Jan 2025, 06:47 pm

ನಾನು

ನಾನು ನಾನು ಎಂದು ಅಹಂಕಾರ ಪಡುವ ನೀನು
ಮರೆತುಹೋದೆಯಾ ನೀನೊಂದು ಕಣವೆಂದು
ನೀನೊಂದು ಆತ್ಮವೆಂದು, ಆತ್ಮವೇ ಸತ್ಯವೆಂದು
ನಾನು ಒಂದು ಸುಳ್ಳು ಎಂದು

ನಿಮಷಗಳು ಗಂಟೆಗಳಾಗಿ, ಗಂಟೆಗಳು ದಿನಗಳಾಗಿ,
ದಿನಗಳು ವರುಷಗಳಾಗಿ, ನಾನು ಎಂಬುದು ಹುಟ್ಟಿ,
ನಾನು ಎಂಬುದು ಹೆಮ್ಮರವಾಗಿ ಬೆಳೆದು,
ನಾನು ಎಂಬುದು ಅಸ್ಥಿತ್ವವಾಗಿ
ಒಂದು ದಿನ ಅಸ್ಥಿತ್ವ ನಾಶವಾಗಿ ಅಜೀವವಾಗಿ ಹೋದರೂ
ಮರೆತು ಹೋದೆಯಾ
ನೀನೊಂದು ಆತ್ಮವೆಂದು, ಆತ್ಮವೇ ಸತ್ಯವೆಂದು
ನಾನು ಒಂದು ಸುಳ್ಳು ಎಂದು

ಜೀವನದ ಜಂಜಾಟದಲ್ಲಿ ನಾನು ನಾನೆಂಬ ಅಹಂ ಬೆಳೆದು
ಆಸೆ ದುರಾಸೆಯಾಗಿ, ದುರಾಸೆ ನಿರಾಸೆಯಾಗಿ,
ಸೋತು ನೊಂದು ಬೆಂದರು
ಮರೆತು ಹೋದೆಯಾ
ನೀನೊಂದು ಆತ್ಮವೆಂದು, ಆತ್ಮವೇ ಸತ್ಯವೆಂದು
ನಾನು ಒಂದು ಸುಳ್ಳು ಎಂದು

ನನ್ನವರನ್ನು ಪಡೆದುಕೊಂಡು ಸಂತೋಷವಾಗಿ
ನನ್ನವರನ್ನು ಕಳೆದುಕೊಂಡು ಕಣ್ಣೀರು ಹರಿಸಿ
ಮತ್ತೆ ಜೀವನ ಚಕ್ರದಲ್ಲಿ ಒಂದು ಕಣವಾಗಿ ತಿರುಗಿ
ಎಲ್ಲೋ ಕಳೆದು ಹೋದರೂ
ಮರೆತು ಹೋದೆಯಾ
ನೀನೊಂದು ಆತ್ಮವೆಂದು, ಆತ್ಮವೇ ಸತ್ಯವೆಂದು
ನಾನು ಒಂದು ಸುಳ್ಳು ಎಂದು

- rashmi maladkar

23 Jan 2025, 06:46 pm

ಹಾವು ಏಣಿ ಆಟ

ನೂರು ಹಾವು ಕಚ್ಚಿದರು ನಿಲ್ಲದು ಏಣಿಯ ಹುಡುಕಾಟ
ಇದೆ ಅಲ್ಲವೆ ಜೀವನ ಕಲಿಸುವ ಪಾಠ
ಹಾವು ಏಣಿ ಅದೃಷ್ಟದ ಆಟವಂತೆ
ಜೀವನವಲ್ಲವೆ ನಿಜವಾದ ಅದೃಷ್ಟದಾಟ

ಅಲ್ಲಿ ಯಾರೋ ಅರಮನೆಯಲ್ಲಿ ಹುಟ್ಟಿದರು
ಇಲ್ಲಿ ಯಾರನ್ನೋ ಮುಳ್ಳಿನ ಬಲೆಯಲ್ಲಿ ಬಿಸಾಡಿದರು
ಅಲ್ಲಿ ಯಾರಿಗೋ ತಾಯಿಯೇ ದೇವತೆ
ಇಲ್ಲಿ ಯಾವುದೋ ಮಗುವಿಗೆ ತಾಯಿಯೇ ಮುಳ್ಳಾದಳು
ಜೀವನವಲ್ಲವೆ ನಿಜವಾದ ಅದೃಷ್ಟದಾಟ

- rashmi maladkar

23 Jan 2025, 06:45 pm

ನದಿ ಮತ್ತು ಕಡಲು ............

ಭವದ ಬಾವ ಬಾವನೆಗಳ ನೆನಪುಗಳ ಸರಮಾಲೆ
ತಂಗಾಳಿಯಂತೆ ಬೀಸುತಿತ್ತು ಮನಸ್ಸಿಗೆ ನೆಮ್ಮದಿ ತರುತ್ತಿತ್ತು ಅಲೆಯಲ್ಲಿ ಅಲೆ ಅಲೆಯಾಗಿ ತೇಲುವ ಮೋಡಗಳಲ್ಲಿ ಅವಿತರುವ ಆ ಬೆಟ್ಟಗುಡ್ಡಗಳನ್ನೆಲ್ಲ ಅಲೆಮಾರಿಯಂತೆ ಅಲೆದೆಲದು ಅದೇ ಸಾಲಿನ ಯಾವುದೋ ಬೆಟ್ಟವನ್ನು ಹತ್ತಿ ತುದಿಯಲ್ಲಿರುವ
ಆ ಒಂಟಿ ಬೇವಿನ ಮರದ ನೆರಳಲ್ಲಿ ಹರಡಿಕೊಂಡ
ಶತಮಾನಗಳ ಕಂಡ ಬಂಡೆಯ ಮೇಲೆ ಕುಳಿತು
ಸುತ್ತಲೂ ನೋಡಿದೆ ಆ ಹಚ್ಚ ಹಸುರಿನ ಪ್ರಕೃತಿಯ ಮಡಿಲು ಮೌನವನ್ನು ಮರೆಯುವಂತೆ ಮಾಡುವ
ಹಕ್ಕಿಗಳ ಚೆಲಿಪಿಲಿಯ ನಿನಾದ ಗಂದರ್ವ ಗಾನ
ಬದುಕಿನ ಅರ್ಥ, ನಿರರ್ಥಕತೆಯ ಬಗ್ಗೆ ಯೋಚಿಸುತ್ತ
ಆಕಾಶವನ್ನೊಮ್ಮೆ ದಿಟ್ಟಿಸುತ್ತ ಮಲಗಿದೆ.
........... ......... .........,

ಅನಾದಿಕಾಲದಿಂದ ಬೀಳುತ್ತಿರುವ ಸುರಿಮಳೆ,
ಜಡಿಮಳೆ, ಬಿರುಮಳೆ, ತುಂತುರು ಮಳೆ
ಜಿನಗು ಮಳೆಗಳ ಹನಿಗಳೆಲ್ಲ ಸೇರಿ ಚಿಕ್ಕ ಚಿಕ್ಕ
ತೊರೆಗಳಾಗಿ ಬಾಗಿ,ಬಳುಕಿ ಜಿಗಿದು ನಲಿದು ದುಮ್ಮಿಕ್ಕಿ ಪುಟಿದೆದ್ದು ಜಲಪಾತಗಳಾಗಿ ಯಾವುದೋ ಕಂದಕ
ಕಣಿವೆಗಳಲ್ಲಿ ಒಂದಾಗಿ ವರ್ತಮಾನದರೂಪ ಪಡೆದುಕೊಳ್ಳುತ್ತ ಎಲ್ಲ ಅಡೆತಡೆಗಳನ್ನು ದಾಟಿ ಋತುಮಾನ, ಕಾಲಮಾನಗಳಿಗೆ ತಕ್ಕಂತೆ ಹಿಗ್ಗುತ್ತ, ಕುಗ್ಗುತ್ತ, ಕರಗಿ, ಮರೆಯಾಗಿ, ಮರುಹುಟ್ಟು ಪಡೆಯುತ್ತ , ಅಲ್ಲಲ್ಲಿ ಹರಿವ ಹಳ್ಳಕೊಳ್ಳಗಳೆನ್ನೆಲ್ಲ ಒಡಲ್ಲಲ್ಲಿ ತುಂಬಿಕೊಳ್ಳುತ್ತ ಹರಿವು, ಹರವುಗಳನ್ನು ಬದಲಿಸುತ್ತ ಕ್ರಮಿಸುವಹಾದಿಯನ್ನು ಅನ್ವೇಷಿಸುತ್ತ ಸಕಲ ಜೀವರಾಶಿಗಳ ಜೀವಗಂಗೆಯಾಗಿ ಬದುಕಿನ ಸ್ಪೂರ್ತಿಯಾಗಿ ಸೃಷ್ಟಿಗೆ ಮರುಸೃಷ್ಠಿಯ ಕೊಡುಗೆಯ ನೀಡುತ್ತ ತನ್ನದೇ ಪ್ರಭಾವಳಿಯೋಂದನ್ನು ಬೆಳಸುತ್ತ
ತನ್ನ ಗುರಿ ಕಡೆಗೆ ಸಾಗುತಿತ್ತು.
...... ....... .......



ಯಾರೋ ಕೂಗಿ ಕರೆದಂತಾಗಿ ಎಚ್ಚರಗೊಂಡು
ಆ ದಿಕ್ಕಿನ ಕಡೆ ಹೋದೆ..............
ಆ ದನಿ ನದಿಯ ಸಮೀಪಕ್ಕೆ ಕರೆದೊಯ್ದಿತ್ತು.
ನದಿ ತನ್ನಷ್ಟಕ್ಕೆ ತಾನೆ ಆ ಪರಿಸರದ ತಾಳಕ್ಕೆ ತಕ್ಕಂತೆ
ರಾಗಬದ್ಧವಾಗಿ ಸುಶ್ರಾವ್ಯಾಗಿ ಹಾಡೊಂದನ್ನು ಹಾಡಿಕೊಳ್ಳುತಿತ್ತು. ನಾನು ಬಂದ ಕ್ಷಣಕ್ಕೆ ಹಾಡು
ನಿಲ್ಲಿಸಿ ಎಂದೋ ಪರಿಚಯವಿದ್ದಂತೆ ಮಾತೆಗಳೆದು
ತನ್ನ ಕಥೆಗಳನ್ನು ಹೇಳತೊಡಗಿತು .......,
........ ........ ........,

ನದಿ ತನ್ನ ಪಾತ್ರ ಹಿಗ್ಗಿಸುತ್ತ ವೇಗ ಹೆಚ್ಚಿಸುತ್ತ
ಗಮ್ಯ ಅಂದರೆ ಕಡಲನ್ನು ಸೇರುವ ಬಯಕೆ
ನಾನು ಅದನ್ನು ಅನುಸರಿಸುತ್ತ ಹೋದೆ
ಆ ತೀರದಲ್ಲಿ ನೆಡೆದು ಸಮುದ್ರಡದೆಗೆ
ನೇರವಾಗಿ ಹೊರಟೆ ಅವಳ ನಗು
ನಗುವಿನ ಅಲೆಗಳಾಗಿ ಮಾರ್ಪಟ್ಟು
ನನ್ನ ಪಾದಗಳನ್ನು ಸೋಕುತ್ತ ತನ್ನ ಎತ್ತರವನ್ನು
ಹೆಚ್ಚಿಸಿಕೊಳ್ಳುತ್ತಾ ಸಾಗುತ್ತಿದ್ದವು
ಅವಳು ಮತ್ತು ಅವಳ ನಗು ದೃಶ್ಯಕಾವ್ಯದಂತೆ
ಗೋಚರವಾಗತೊಡಗಿತು ನಾನು ತಿರುಗಿ ನೋಡದೆ
ಅವಳತ್ತ ಸಾಗಿದೆ ಆ ನಗುವಿನ ಅಲೆಗಳು
ನನ್ನ ಎದೆಯನ್ನು ಸ್ಪರ್ಶಿಸುತ್ತಿದ್ದಂತೆ ಬೆಳಕು ಚಿಮ್ಮಿದಂತಾಯಿತು ಅವಳು ತುಂಬಾ ಪ್ರೀತಿಯಿಂದ ಅರ್ದ್ರವಾಗಿ ನೋಡುತ್ತ ನನ್ನೆಡೆಗೆ ಕೈ ಚಾಚಿದಳು
ನಾನು ಕೈ ಚಾಚಿದೆ ಅಷ್ಟೇ.........
........, .......... ........,.
ಕಡಲು ಕೇಳಿತು " ನಾನೆಂದರೆ ಯಾಕೆ ಇಷ್ಟೊಂದು ಇಷ್ಟ ನಿನಗೆ?"
ನಾನು ಹೇಳಿದೆ "ನೀನು ನನ್ನ ಮನಸ್ಸಿನ ಅಭಿವ್ಯಕ್ತಿ ".
........,..............
(ದಿ.ಶ್ರೀ ನಾ ಡಿಸೋಜರವರ ಸ್ಮರಣೆ ಮತ್ತು ಆ
ಪಶ್ಚಿಮಘಟ್ಟಗಳ ನೆನಪು)

- ಶಶಿಧರ ಹೆಚ್ ಎನ್

23 Jan 2025, 09:31 am

ಒಲವು

ನವಿರಾದ ಭಾವನೆಗಳ ಕಲರವ...... ಕಣ್ಣ ಪ್ರತಿ ಕಂಬನಿ ಭೂ ಸ್ಪರ್ಶಿಸುವ ಮೊದಲೆ ಸಾಂತ್ವನ ನೀಡುವ ಜೀವ..... ಪರಿಶುದ್ದ ಹೃದಯಗಳ ಸಮಾಗಮ.........

...........ಪ್ರೀತಿಯಾ ಅಮ್ಮ & ಅಪ್ಪ ?

- Chaitra Patil

22 Jan 2025, 10:47 pm

ಜೀವನ?

"ಸೋಲು ಗೆಲುವುಗಳ ಅನಿರೀಕ್ಷಿತ ಬಂಧನ..... ವ್ಯಕ್ತಿಗಳ ವ್ಯಕ್ತಿತ್ವ ತಿಳಿಸುವ ಮೊದಲ ಕನ್ನಡಿ.......... ಭಾವನೆಗಳ ಭೂಗತ ಲೋಕದ ಧೋರೆ........ ಅಪರೂಪದ ಬಂಧನಗಳ ಸಮಾಘಮ...ವೆ... ನಮ್ಮ ಈ ಅಪರೂಪದ ಜೀವನ............."

.........ನಂದನ?

- Chaitra Patil

21 Jan 2025, 11:06 pm

ಜವಾಬ್ದಾರಿ

ರೆಕ್ಕೆ ಕಟ್ಟಿ ಬಾನೆತ್ತರಕ್ಕೆ ಹಾರಿದ್ದೆ ಅಂದು

ರೆಕ್ಕೆ ಮುರಿದು ಕೂತಿಹೆ ನಾನಿಂದು

ನನಸಾಗದೇ ನನ್ನಲ್ಲೇ ಉಳಿದಿದೆ ಕನಸೊಂದು

ಒಡೆದೋಗುತಿದೆ ಕನಸ್ಸು

ಜವಾಬ್ದಾರಿಯು ಹೆಗಲೇರಿ

ಧೈರ್ಯ ಮಾಡುತಿಲ್ಲ ಮನಸ್ಸು

ಕಾಲು ಚಾಚಲು ಹಾಸಿಗೆ ಮೀರಿ

✍? ಯಕ್ಷ

- pavan

18 Jan 2025, 10:16 am

ಶಿವನೇ ಕೇಳಿಸುತ್ತಿರುವುದೇನಪ್ಪ...

"ಕೊಟ್ಟಾದರು ಕೋಡು ಶಿವನೇ..
ಅವಳ ಸೂಚನೆಯೆನ್ನೆ.!
ಎಷ್ಟು ಕಾಯೋದು ನಾ_ಅವಳನ್ನ.!
ಇನ್ನೆಷ್ಟು ಪರೀಕ್ಷೆ ಮಾಡ್ತಿಯಪ್ಪ..
ನನ್ನ ತಾಳ್ಮೆಯನ್ನ.!
ಆದಷ್ಟು ಬೇಗನೆ ಕರಣಿಸೋ ಶಿವನೇ..
ನನ್ನವಳನ್ನ.!
ಅವಳಿಗೂ ತಿಳಿಸೋ ಶಿವನೇ..
ನಾ_ಅವಳ ಆಗಮನವ
ನಿರೀಕ್ಷಿಸುತ್ತಿರುವುದನ್ನ.!!"
ಎಮ್.ಎಸ್.ಭೋವಿ...✍️
.
.
.
.
.
.

- mani_s_bhovi

18 Jan 2025, 12:07 am