Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
* ಬುದ್ಧ *
ಇಪತ್ತಾರು ನೂರು ವರ್ಷ ಕಳೆದಿಂದಿಗೆ.
ಬುದ್ಧ ಬಂದಾ ಧರೆಗೆ.ಅಶಾಂತಿ ,ಅತೀಯಾಸೆ ,ಮೋಹದ ಪ್ರೀತಿಯ ನಸೇ ದಾರಿಗೆ.
ಮುಗ್ಧ ಪ್ರಾಣಿ-ಪಕ್ಷಿಯ ಕೀರ್ತಿ ತನ್ನದೇನಿಲ್ಲದೆ ಹಿಂಸೆಯಲ್ಲಿ ನಸಿಸುತ್ತಿರುವ ಸರ್ತಿ.
ನೊಂದ ,ಆಸೆಯೇ ದುಃಖದ ಮೂರ್ತಿ.
ಜಗವೇಲ್ಲ ಮಾನುಷ್ಯನ ಕಂಠ ಪೂರ್ತಿ.
ಬೋಧಿಸುವ ಖಾವಿ,ಗಡ್ಡಧಾರಿ,ಬಿಳಿಧಾರಿ,
ಮಾಲಾಧಾರಿ,ಜಿನಿವಾರ ಎಲ್ಲರಲ್ಲೂ ಸಿದ್ಧಿ ವಿಚಾರವೇಲ್ಲ ಹೊದ್ದಿ.
ಇನ್ನಿಲ್ಲದ ಗಳಿಕೆ,ಗಣ,ಗುಂಪು ಎಲ್ಲವೂ.ಹಡೆದವರು ಅನಾಥರು ,ಪ್ರತಿಷ್ಠೆಯೇ ಪೂಜೇಗಿವು.
ಸೂದ್ದವಿಲ್ಲ ಹೊನ್ನು,ಹೆಣ್ಣು, ಮಣ್ಣಿನ ಮನಸ್ಸು.
ಸರಿದದ್ದು ಸರಿಮಾಡಲು ಸಿದ್ಧನಾದ ಬುದ್ಧ,
ಬೋಧಿವೃಕ್ಷದ ಬುಡದಲ್ಲಿ ಮತ್ತೊಂದು ಜ್ಞಾನೋದಯಕ್ಕೆ.
ಕಟ್ಟಲಿಲ್ಲ ಗೆದ್ದಲು ಹುತ್ತ ಕರುಣಿಸಲಿಲ್ಲ ಈ ಮಾನುಜ ಮಣ್ಣಾ....
- ಈಶ.ಎಂ,ಸಿ,ಹಳ್ಳಿ.
- ಈಶ, ಎಂ.ಸಿ.ಹಳ್ಳಿ
11 Aug 2015, 03:35 pm
ಕೊಡವದಿರಿ ನನ್ನ. ದುಪ್ಪಟೆಯನ್ನು ಅದರಲ್ಲಿ
ರಾತ್ರಿ ಹೆಣೆದ ಕನಸುಗಳ ರಾಶಿ ಇದೆ
ಚೆಲ್ಲಿ ಛಿದ್ರವಾಗಿ ನಲುಗಿ ಹೋಗುತ್ತವೆ
ಅವು ಭಾವದ ಕಾವಿನಲ್ಲಿ
ಕಂಗಳ ಗೂಡಿನೊಳಗೆ
ಕಣ್ತೆರೆಯುವ ಹಸಿ ಕನಸುಗಳು
ಕೊಲ್ಲದಿರಿ ಕೊಡವದಿರಿ ಜೋರಾಗಿ, ಜೋಕೆ ಜಾರಿ ಹೋಗಿ,ಬರದಿರಬಹುದು ಮತ್ತೆ
ಬಿಟ್ಟು ಹೋದ ಈ ಗೂಡಿನೊಳಗೆ
ಧೂಳಿದ್ದರೇನು ಆ ಧೂಳಿನ ತುಂಬಾ ನನ್ನ.
ಕನಸುಗಳ ಕಂಪು ಹರಡಿದೆ
ಚೆಲ್ಲಿದ ಕನಸುಗಳನ್ನು ಒಟ್ಟು ಮಾಡಿ ಮನದ ಮೂಲೆಯಲ್ಲಿ ರಾಶಿ ಹಾಕಿ
ಮತ್ತೆ ರಾತ್ರಿಯ. ತಂಪಿನಲ್ಲಿ
ಕಾವು ಕೊಡುತ್ತೆನೆ
ಬೆಚ್ಚಗಿಡುತೇನೆ ಜೋಪಾನ
ಮಾಡುತೇನೆ
ಮಧ್ಯರಾತ್ರಿಯ ಮಬ್ಬುಗತ್ತಲಿನ ಮಡಿಲಲ್ಲಿ
ಚುಕ್ಕಿಗಳ. ಹೊಳಪನ್ನು ನಾಚಿಸುವಂತೆ
ಕಣ್ಣು ಬಿಡಬಹುದು ಒಮ್ಮೆ
ನನ್ನ. ಈ ಕನಸ್ಸುಗಳು
ಎಂಬ ನಿರೀಕ್ಷೆ ಯಲ್ಲಿ.
....
-ಆಶಾದೀಪಾ
(ನಿರೀಕ್ಷಿತ)
- ashadeepa
10 Aug 2015, 06:01 pm
ವರ್ಷ ಹೊಸದು
ವರ್ಷ ಹೊಸದು ಹೊಸೆವ ಹರ್ಷ
ಬಾನಿನ ಕಿರಣ ಸೇರಲಿ ಕರಣ
ಬಣ್ಣ ಸುಣ್ಣ ಬಳೆವ ಮನ
ನಡೆಗಳೆಲ್ಲ ನುಡಿಯಲಿ ದಿನ ದಿನ.
ಮೂಡಣ ಪಡುವಣ ಪಡೆಯಲಿ
ಕಂಕಣ
ಗಂಗ ತುಂಗ ಅರಿಯಲಿ ಹಸಿರಿಗೆ
ಸಯ್ಯಾದ್ರಿ ಹಿಮಾದ್ರಿ ಬೆಳೆಯಲಿ ಉಸಿರಿಗೆ
ಬೆರಳು ಕಡೆಯಲಿ ಕೆಸರಿನ ಮೊಸರಿಗೆ.
ವಸಂತ ಕೋಗಿಲೆ ವಂದಿಸಲಿ
ನಿಷಯಲಿ ನೆಂದವರ ಬಂಧಿಸಲಿ
ಪಾತರಗಿತ್ತಿ ಪೂಷ್ಪ ಸಂಧಿಸಲಿ
ಉಸಿರು ಗಾಳಿ ಘಮ ಘಮ ಗಂಧಿಸಲಿ.
ಉಳಿ ಸುತ್ತಿಗೆ ಸ್ಪರ್ಷಸಲಿ ಕಲೆಗೆ
ರಾಗದ ಬಿದಿರು ಕರೆಯಲಿ ಕೊಳಲಿಗೆ
ನುಡಿವ ಪದ ಪದ್ಯವಾಗಲಿ ಹಾಡಿಗೆ
ಹಗಲು ಇರುಳು ಗದ್ಯವಾಗಲಿ ಜಾಡಿಗೆ.
-ಈಶ, ಎಂ.ಸಿ.ಹಳ್ಳಿ
- ಈಶ, ಎಂ.ಸಿ.ಹಳ್ಳಿ
09 Aug 2015, 04:12 pm
ಜಂಗುಳಿಯಲೊಬ್ಬ ಜಂಗಮ
ತುಂಬಿ ತುಳುಕುತಿಹ ರಸ್ತೆಯೊಂದರಲಿ ಚೈನು ಕಿತ್ತ ಬೈಸಿಕಲ್ಲಿನಲಿ ಅದೃಷ್ಟವನ್ನು ಹೊತ್ತು ಹೊರಟವನು ನಾನು....
ಹೆಜ್ಜೆ ಹೆಜ್ಜೆಗಳ ನಡುವಿನ ಸಮಯದಲಿ ಹಾದು ಹೋಗಿವೆ ಅಪರಿಮಿತ ಮೋಟರು ವಾಹನಗಳು ಇನ್ನಾವುದೋ ಇಂಧನವು ಹೊತ್ತು...
ಅದೋ ಅಲ್ಲಾರೋ ನೆಡೆದೆ ಹೋಗುತಿಹ ನನಗಿಂತ ಮುಂದೆ ಅದಾವುದೋ ಚೀಲವ ಹೆಗಲಿಗೇರಿಸಿ....
ಭಾಗಶಃ ಅವನ ಕೊಳೆತ ಬಟ್ಟೆಗಳ ನೋಡಿದರೆ ಅದವನ ಪರಿಶ್ರಮದ ಮೂಟೆಯೇ ಇರಬೇಕು....
ಇಲ್ಲಾರೋ ನಾನು ಚೈನು ಸರಿಮಾಡಹೊರಟಾಗ ಕುಂಟುತ್ತ ಹೋದವ ಕಣ್ಣಿಗೆಟುಕದಷ್ಟು ದೂರ ಸಾಗಿಹನು.....
ಅದೋ ಬಂತು ಇಳಿಜಾರು ನಾನು ಹೋಗಬಹುದೀಗ ಬೈಸಿಕಲ್ಲ ಏರಿ ಎಲ್ಲರಿಗಿಂತ ವೇಗವಾಗಿ......
ಆದರೇ ಆ ವೇಗ ತಗ್ಗಿತ್ತು ಇಳಿಜಾರು ಮುಗಿಯುವುದರೊಳಗಾಗಿ...
ತಲುಪಲಿಲ್ಲ ನಾ ಇದ್ದ ಸಮಯ ಮುಗಿಯುದೊರಳಗಾಗಿ....
ಪ್ರೀತಿಯಿಂದ
ನಯನ್ ಅರೇಹಳ್ಳಿ
- ನಯನ್ ಅರೇಹಳ್ಳಿ
09 Aug 2015, 04:03 pm
ಅನ್ವೇಷಣೆ
ದೂರದೂರಿನ ಜನರ ಗುಂಪಿನಲಿ ನಮ್ಮವರು ಯಾರಾದರೂ ಕಾಣಬಹುದೆಂಬ ಅನ್ವೇಷಣೆ ....
ಕಪ್ಪು ಬಿಳುಪಿನ ಈ ಬದುಕಲಿ ಬಣ್ಣವ ತುಂಬುವ ಯಾರಾದರೂ ಸಿಗಬಹುದೆಂಬ
ಅನ್ವೇಷಣೆ ....
ಬದುಕ ಜಂಜಾಟಗಳ ದೂರವಿಟ್ಟು ನೆಮ್ಮದಿಯನೆಲ್ಲಿ ಹುಡುಕಬಹುದೆಂಬ ಅನ್ವೇಷಣೆ.....
ಸುಖದ ಕಾರಣಗಳ , ದುಃಖದ ಮೂಲಗಳ, ಹುಟ್ಟು ಸಾವುಗಳ ಅನ್ವೇಷಣೆ ...
ಸತ್ತ ಮೇಲೆ ಏನೇನಾಗಬಹುದು.. ??
ಸ್ವರ್ಗದ ದಾರಿಗಳ ಹುಡುಕಲು , ನರಕದ ಕೂಪಗಳ ಮರೆಮಾಚಲು , ಅನ್ವೇಷಣೆ.........
ಅನ್ವೇಷಣೆಗಳೆಲ್ಲ ಮುಗಿದ ದಿನ ಯಾತ್ರೆ ಸಾಗುತ್ತಿರೆ ... ಅನ್ವೇಷಣೆಗಳಲ್ಲಿ ಕಳೆದುಕೊಂಡ ಸ್ನೇಹ - ಸಂಬಂಧಗಳಿಗೆ ಅನ್ವೇಷಣೆ........
ನಯನ್ ಅರೇಹಳ್ಳಿ
- ನಯನ್ ಅರೇಹಳ್ಳಿ
09 Aug 2015, 04:00 pm
ಭಕ್ತರ ತೊಂದರೆ ನಿವಾರಣೆಗೆಂದೆ
ಚಿಂಚಲಿ ಮಾಯಕ್ಕ ನೀ ಬಂದೆ
ಉತ್ತರದ ಮತ್ತೋರ್ವ ಶಕ್ತಿದೆೇವತೆ
ಮಾಯವ್ವ,ಮಹಾಕಾಳಿ,ಮಾಯಕಾರತಿ.
ಹಳ್ಳದ ಬಳಿ ಕುರಿಕಾಯುವ ಕಂಡೆ
ಅವನಲ್ಲಿ ಕುರಿಹಾಲು ಬೇಡಿದೆ
ಹಾಲು ಕೊಡಲು ಅವನು ನಿರಾಕರಿಸಲು
ಶಕ್ತಿಯಿಂದ ಹಳ್ಳವನ್ನೆ ಹಾಲು ಮಾಡಿದೆ
ಕುರಿಗಳೆಲ್ಲ ಕಲ್ಲಾಗೆಂದು ಶಾಪಕೊಟ್ಟೆ
ಕುಕಿೀ
- santoshBP
09 Aug 2015, 04:44 am
ಬಣ್ಣ
.....
ಬಣ್ಣ ಲೇಪಿಸುವ ಕೈ, ಬಣ್ಣದಲ್ಲೇ ಬಣ್ಣಿಸುವ ಕೃತಿ.
ತೆರೆದ ನೋಟದ ಕಣ್ಣು, ಓದುತ್ತಿದೆ ಆಕೃತಿ.
ತನ್ನೆಲ್ಲ ಭಾವನೆಯ ಬಯಕೆ ಬರೆಯಬಲ್ಲದು ಪುಟಗಟ್ಟಲೆ.
ಪ್ರಕಾಶಕರ ಚೌಕಾಸಿ ಪ್ರಖರವಾದಗ ಕಟ್ಟುವುದು ಗಂಟಲೆ.
ಬೇರು ಬುಡದಲ್ಲಿ ಮಣ್ಣ ಮಡಿಲಲ್ಲಿ ಸಂಚಾರ.
ಇನಿಯನ ಪಾತ್ರೆಯಲ್ಲಿ ಮೈಮನಗಳ ಆಚಾರ.
ಕಣ್ಣಿನ ಅಂದಕೆ ಕಾಡಿಗೆಯ ಕೊಡುಗೆ
ಕಾಮನಬಿಲ್ಲಿನ ರುಚಿ ಯಾವ ಪಾತ್ರೆಯ ಅಡುಗೆ .
ನಿತ್ಯ ಸತ್ಯದೊಡನೆ ಚಲಿಸುವ ಗಾಳಿಯ ಮನ
ಎಲ್ಲರ ಎಲ್ಲದೊರಳಗಿನ ಧ್ವನಿ ವರಸೂಸುವ ಗಾನ.
ಅಂತಿಮ ಯಾತ್ರೆಯಲ್ಲಿ ಬಣ್ಣ ಲೇಪಗಳ ಜಾತ್ರೆ .
ದೇರಾದರು ನಮ್ಮಳಗಲ್ಲ ಫೋಟೋ ಕಟ್ಟಿ ನಲ್ಲಿ ನಿತ್ರೆ.
--ಈಶ,ಎಂ.ಸಿ.ಹಳ್ಳಿ ...........
- ಈಶ, ಎಂ.ಸಿ.ಹಳ್ಳಿ
08 Aug 2015, 09:35 pm
- ಪಾರದರ್ಶಕತೆ
ಪಾರದರ್ಶಕತೆ ನನ್ನೊಳಗಿದೆ
ನನ್ನ ಆದರ್ಶ ನೆರವಿದೆ
ಆದರೂ ನೆರವಿಗೆ ಬರುತ್ತಿಲ್ಲ
ಮನಸ್ಸಿನ ಆಟವ....
ಸಂಸ್ಕಾರದ ಸುಳಿ ನನ್ನೊಳಗಿದೆ
ನನ್ನ ಆದರ್ಶ ನೆರವಿದೆ
ಆದರೂ ನೆರವಿಗೆ ಬರುತ್ತಿಲ್ಲ
ನಡತೆಯ ಕಾಟವ......
ದಿಟ್ಟತನ ದಾರಿ ನನ್ನೊಳಗಿದೆ
ನನ್ನ ಆದರ್ಶ ನೆರವಿದೆ
ಆದರೂ ನೆರವಿಗೆ ಬರುತ್ತಿಲ್ಲ
ದೃಷ್ಟಿ ದೋಷವ......
ಜಾತ್ಯಾತೀತ ಜನ್ಮ ನನ್ನೊಳಗಿದೆ
ನನ್ನ ಆದರ್ಶ ನೆರವಿದೆ
ಆದರೂ ನೆರವಿಗೆ ಬರುತ್ತಿಲ್ಲ
ಜಾತಿಯ ಬಂಧನವ.....
ಹೋರಾಟದ ಹೊಳಹೊರಮೈ ನನ್ನೊಳಗಿದೆ
ನನ್ನ ಆದರ್ಶ ನೆರವಿದೆ
ಆದರೂ ನೆರವಿಗೆ ಬರುತ್ತಿಲ್ಲ
ಹಣದ ಅಪ್ಪಣೆಯ......
--ಈಶ,ಎಂ.ಸಿ.ಹಳ್ಳಿ ....
- ಈಶ, ಎಂ.ಸಿ.ಹಳ್ಳಿ
08 Aug 2015, 09:29 pm
"ಸಿಗಲಾರದ ಫ್ರೆಂಡ್ ನ ಹುಡುಗಕಬೇಡಿ"
"ಸಿಕ್ಕಿರುವ ಫ್ರೆಂಡ್ ನ ಕಳಕೊಬೇಡಿ"
"ಕಾಯಿಸುವ ಫ್ರೆಂಡ್ ನ ನಂಬಬೇಡಿ"
"ನಂಬಿರುವ ಫ್ರೆಂಡ್ ನ ಯಾವತ್ತು ನೊಯಿಸಬೇಡ"
- ಶಾಕೀರ್ ಅಕ್ಕರಂಗಡಿ
07 Aug 2015, 02:48 pm
ಮರೆತಾದರೂ
ಮನೆಯಯ ಬಳಿ ಬರಬಾರದೆ
ಅತ್ತು ಕಾಡಿದವನಲ್ಲ
ಮುತ್ತು ಬೇಡಿದವನಲ್ಲ
ಚಿತ್ತ ನಿನ್ನೊಳು ಒತ್ತೆಯಿಟ್ಟೆನಲ್ಲ
ಮರೆತಾದರೂ ಒಮ್ಮೆ
ಮನಸಿನ ಕದ
ತಟ್ಟ ಬಾರದೆ
ಸಂತೆಯಲಿ ಒಂಟಿಯಾದಂತೆ
ಸೊಂಟ ಮುರಿದು
ಕುಂಟನಾದಂತೆ
ನೆಂಟರಿಷ್ಟರ ನಡುವೆ
ಕಂಠ ಬಿಗಿದು ಮೌನಿಯಾದೆ
ಮರೆತಾದರೂ ಒಮ್ಮೆ
ನಗೆಯ ಮಲ್ಲಿಗೆ
ಚೆಲ್ಲಬಾರದೆ
..........ಮಧುಗಿರಿ ಬದರಿ
- K.Badarinatha
07 Aug 2015, 02:11 pm