Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬಿಸಾಡಿ

ಯಾರಾದ್ರೂ ನಿಮಗೆ ಕಲ್ಲು ಬಿಸಾಡಿದರೆ....

ನೀವು ಅವರಿಗೆ ಹೂವು ಬಿಸಾಡಿ....

ಆದರೆ ಅವರು ಪುನಃ ಕಲ್ಲು ಬಿಸಾಡಿದರೆ ಆಗ ಯೋಚಿಸಬೇಡಿ....

ನೀವು ಹೂವಿನ ಚಟ್ಟಿ ಬಿಸಾಡಿ !

- ಶಾಕೀರ್ ಅಕ್ಕರಂಗಡಿ

02 Sep 2015, 09:41 am

ಹಿಂದಿನ ದಿನಗಳಲ್ಲೇ

ಹಿಂದಿನ ದಿನಗಳಲ್ಲೇ ಇರುವುದೇಕೆ? ಪ್ರತಿ ದಿನವೂ ಹೊಸ ಅಧ್ಯಾಯವೇ.ಅಧ್ಯಯನ ಮಾಡುತ್ತಲೇ ಅಂದಿನ ಕೆಲಸ ಅಂದೇ ಪಯೂರೈಸೋಣ.

- Kanakareddy

30 Aug 2015, 03:56 am

ಕ್ಷಣ ಕ್ಷಣ ಪ್ರೀತಿ

೧+೧=೨ ನಿನ್ನ ನೋಡುವ ಕಣ್ಣುಗಳು,
೩+೩=೬ ಅರ್ಥದಲ್ಲಿ ಭಾವನೆ ನೀವು,
೧೨+೧೨=೨೪ ಗಂಟೆಗಳು ನಿಮ್ಮ ಸಂದೇಶಕ್ಕಾಗಿ ಕಾಯುವುದು,
೫೦%+೫೦%=೧೦೦% ನಿಮ್ಮ ಬಗ್ಗೆ ಚಿಂತೆ,
೧೮೨.೫+೧೮೨.೫=೩೬೫ ದಿನಗಳು ನಿಮ್ಮನ್ನ
ತಂಬಾ ಮಿಸ್
ಮಾಡ್ಕೊತಿದ್ದೀನಿ ಅಂತಾ ಅನ್ನಿಸ್ತಿದೆ ಕಣ್ರೀ.

ಇಂತಿ
ಲಾಹುಕುಮಾರ

- Lahukumar

29 Aug 2015, 03:06 pm

ಸಂದೇಶ

ಪೇಟೆಯಲ್ಲಿದ್ದ ಅಪ್ಪನಿಗೆ
ಮನೆಯಿಂದ. ಫೊನು
"ಏನಮ್ಮಾ, ಏನು ತರಲಿ?
ಪಪ್ಪಾ ಮರೆಯದೆ ಬರುವಾಗ ತನ್ನಿ
ಪಿ.ಪಿ(ಪಾನಿ ಪೂರಿ) ಸಾಧ್ಯವಾದರೆ
ಜೊತೆಯಲ್ಲಿ ಜಿ.ಎಮ್.(ಗೋಬಿ ಮಂಚೂರಿ)!!.

- Satyasagar

29 Aug 2015, 10:46 am

ಪಯಣ

ಹರಿಯುವ ನೀರಿನ
ಜುಳು ಜುಳು ನಾದದ ಬೆನ್ನೆರಿ
ಮಿರಿ ಮಿರಿ ಮಿಂಚುವ ಮೀನುಗಳು
ಬಳ. ಬಳ. ನುಗ್ಗಲು ಸಾಲಾಗಿ
ಸೇರಿದವು ರೆ್ಷಮೆಯ. ಬಲೆಯೊಳಗೆ!!

- Satyasagar

29 Aug 2015, 10:36 am

ಹರಕೆ

ರೇಟು ಗಗನಕ್ಕೆ ಏರಿದರಿಂದ
ಇಬ್ಬರು ಸೇರಿ ಮಾಡಿದರು ಉಪಾಯ!!
ಹಣ್ಣು ಒಬ್ಬರದು -ಕಾಯಿ ಒಬ್ಬರದು!
ದೇವರಿಗೆ ಆಯಿತು ನೆಯ ವೇದ್ಯ!!

- Satyasagar

29 Aug 2015, 08:54 am

ಆಯ್ಕೆ

ಚೆಲುವ ಚೆನ್ನಿಗ ರಾಯನನ್ನು
ಹುಡುಕಿ ಮಾಡಿದರು ಮದುವೆ!!
ಅವನ ಬೇಡಿಕೆ ಪೂರೈ್ಸಿದಾಗ ಗೊತ್ತಾಯಿತು
ಆತ ಚಪಲ ಚೆನ್ನಿಗರಾಯ ಅಂತ!!

- Satyasagar

29 Aug 2015, 08:45 am

ಎಚ್ಚರಿಕೆ !!

ವಿಜ್ಞಾನಿಗಳ ಎಚ್ಚರಿಕೆ :
"ಸಮುದ್ರದ ಮಟ್ಟದಲ್ಲಿ ಭಾರೀ ಏರಿಕೆ."
ಚಿಂತೆ ಯಾಕೆ ?
ಜ್ಯೋತಿಷಿ, ಪೂಜಾರಿಗಳಿಗೆ ಹೆಚ್ಚಲಿದೆ ಬೇಡಿಕೆ !

- ಶ್ರೀಗೋ.

29 Aug 2015, 02:19 am

ಮಧುರ ಕ್ಷಣಗಳು

ಪ್ರೀತಿ ಹ್ರದಯದ ಆಸ್ತಿ
ಸಂಬಂಧ ಮನಸ್ಸಿನ ಆಸ್ತಿ
ಜೀವನದ ಆಸ್ತಿ ಭೂಮಿ ಮೇಲೆ
ಪವಿತ್ರವಾದ ಬಡತನ - ಸಿರಿತನ
ಜಾತಿ -ಧರ್ಮಗಳ ಭೇದವಿಲ್ಲದೆ
ಕಷ್ಟ -ಸುಖಗಳಲ್ಲಿ ಜೊತೆಯಾಗಿರುವ
ಒಂದೇ ಒಂದು ಸಂಬಂಧ -ಪ್ರೀತಿ.
ನಾವಿಬ್ಬರೂ ಕೂಡಿ ಕಳೆದ ದಿನಗಳು
ನಾನು ಇಂದಿಗೂ ಮರೆಯಲಾರೆ
ನೀ ನನ್ನ ಕೊನೆಯುಸಿರಿರೋವರೆಗೂ
ನನ್ನೊಂದಿಗೆ ಇರುವಂತೆ ಆ ದೇವರಲ್ಲಿ
ಬೇಡಿಕೊಳ್ಳುತ್ತೇನೆ.

ಇಂತಿ
ಲಾಹುಕುಮಾರ

- Lahukumar

28 Aug 2015, 01:35 pm

ಹೊರಿಸದಿರು ತಪ್ಪು

ಇನ್ನಾವ ತಪ್ಪು ಹೊರಿಸದಿರು ಎನಗೆ
ನಿನ್ನ ನಾ ಬಯಸಿದ್ದೆ
ಇದೊಂದೇ ತಪ್ಪು ಸಾಕೆನಗೆ.

(ಸಿರಾಜ್ ಗಡಿಯಾರ್.

- ಸಿರಾಜ್

28 Aug 2015, 10:15 am