Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬೆರೆತಾಕ್ಷಣ

ಅವನ ಕಣ್ಣೊಳಗೆ ಬಿಂಬವಾಗಿ ಬೆರೆತೆ
ಅವನ ಉಸಿರೊಳಗೆ ಎದೆಯ ಬಡಿತವಾಗಿ ಬೆರೆತೆ
ವಿಶಾಲ ಮನಸ್ಸಿನ ಪುಟ್ಟ ಎದೆಗೆ ಒರಗಿ
ಬಿಸಿ ಮುತ್ತ ನೀಡಿ ಅವನೊಳಗೆ ಬೆರೆತು ಹೋದೆ
ಹಣೆಯ ಮೇಲೆ ಸಿಹಿಮುತ್ತ ನೀಡಿ ನಡು ಬಳಸಿ ಬರಸೆಳೆದು ಮಾಯದ ಕನಸೊಳಗೆ ಬಿಗಿದಪ್ಪಿ ಪ್ರೀತಿಯ ಬಲೆಯಲ್ಲಿ ಬಂಧಿಸಿ ಹೃದಯ ಬಡಿತದೋಳಗೆ ಬೆರೆಸಿದನು

- ರವಿಕುಮಾರ

11 Sep 2015, 06:01 pm

ಸೆರಗಂಚು

ಅವಳು ನಾಚುವ ಮೋಡಿಗೆ ನನ್ನ ಎದೆಯೊಳಗಿನ ಮನ ಚಿತ್ತಾರ ಬಿಡಿಸಿತ್ತು
ಕಣ್ಣಂಚಿನ ನಡುವೆ ಹಾರಡುತ್ತಿದ್ದ ಕೂದಲ ಹಿಂದೆ ಸರಿಸಿ ನಾಚುವ ತುಟಿಗಳ ತುಂಟ ನಗೆಗೆ
ನನ್ನ ತುಟಿಗಳಲ್ಲಿ ನಗೆಯ ಕಡಲು
ಸೆರೆಗ ಅಂಚ ಎಳೆದು ಹಿಂಡಿ ತಲೆ ಬಗ್ಗಿಸಿ ಸಣ್ಣ ಕಿರುಗಣ್ಣಿನಲಿ ಮೌನ ನಗೆ ಬೀರಿದರೆ
ತುಟಿಯಂಚಿನಲಿದ್ದ ಸಿಹಿಜೇನ ಹೀರಲು ಕಾತರ.

- ರವಿಕುಮಾರ

11 Sep 2015, 05:50 pm

ಏನೆಂದು ಬಣ್ಣಿಸಲಿ...

ಏನೆಂದು ಬಣ್ಣಿಸಲಿ....!

ಏನೆಂದು ಬಣ್ಣಿಸಲಿ...!
ಇದ್ದವುಗಳ.,
ಹೊಸದೊಂದು ಸೃಷ್ಟಿಸಲಾಗದಕ್ಕೆ,
ದೃಷ್ಟಿಯಲ್ಲಿ ಎಲ್ಲವೂ ಅದ್ಭುತ
ಗಮನಿಸಲು ದೃಷ್ಟಿದೋಷ.

ಏನೆಂದು ಬಣ್ಣಿಸಲಿ.....!
ನಿನ್ನ ರಂಗವನ್ನು.,
ನಿಮ್ಮ ನಿಮ್ಮ ರಂಗಕ್ಕೆ ಶ್ರೇಷ್ಟ ನೀವೆ,
ಗುಂಡಿ ತೋಡುವವರು ಬೇರೆಯವರೆ
ನಿನ್ನ ಎತ್ತರದಲ್ಲಿ ನೋಡಲಾಗದ ದೋಷ.

ಏನೆಂದು ಬಣ್ಣಿಸಲಿ ....!
ಭಕ್ತಿಯನ್ನು.,
ತನ್ನ ಹಿತಕ್ಕಾಗಿ ಬೇರೆಯವರ ಬೆವರಿಂದ
ಅಭಿಷೇಕ ಮಾಡಿ ತಾನು ಅರ್ಚಕನಾಗಿ
ನಾನೆ ಸರ್ವನೆಂಬ ಅಧಿಕಾರ ದೋಷ.

ಏನೆಂದು ಬಣ್ಣಿಸಲಿ....!
ಎಲ್ಲದಕ್ಕೂ ಬಾಗಿಲು ಬೀಗ.,
ತನ್ನದಲಾದಾಲ್ಲೆವು ತನ್ನದೆಂದು ಅಪ್ಪುವ
ತಾನು ಇಲ್ಲಿನವನಲ್ಲ ಎಂಬುದಾ ಮರೆತ
ಮಾಸಿದ ಕಣ್ಣು, ನಂಬಿಕೆ ದೋಷ.

ಏನೆಂದು ಬಣ್ಣಿಸಲಿ ...!
ಸೂರ್ಯನ ಕಿರಣ ದಿಕ್ಕು ಬದಲಿಸಿದರೆ.,
ಗುರತ್ವಾಕರ್ಷಣೆ ಬಲ ಬತ್ತಿದರೆ.,
ಭೂಗೋಳ ಇನ್ನಿಲ್ಲದೆ ಜಾರಿದರೆ.,
ನಾನ್ನಿಲ್ಲದ ನಾನು, ಭ್ರಮೆಯ ದೋಷ.

ಏನೆಂದು ಬಣ್ಣಿಸಲಿ.....!
ದುರ್ನಾತದ ಸವಿಯ ತನ್ನೋಡಲೋಳಗೆ
ಇಟ್ಟು .ಸವಿಗಾಳಿ ನೀಡಿ ಜೀವಿಗಳ ಬದುಕಿಗೆ.
ಬೇಕಾದನೆಲ್ಲ ಬದಿಗಿರಿಸಿ ಬೇಡದ್ದನೆಲ್ಲ ಬದುಕಿಸಿ ಬಂಡಾಗಿರುವ ನಾ, ಅತಿಯಾಸೆ ದೋಷ


-- ಈಶ,ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

10 Sep 2015, 04:10 pm

ತಿಳಿ ಮನಸ್ಸು .....

ತಿಳಿ ಮನಸ್ಸು .....

ಎಲ್ಲದರೂಳಗು ಭಾವನೆ ಅಸ್ವಾದಿಸಿದಾಗ
ಭಕ್ತಿ ತನ್ನತಾನೆ ತೆರೆದು ಹೊಳಸೂತ್ರವ
ಮನ ಮಂತ್ರದ ದೇಹ ಹಾಗುರಾಗುವ ಈ
ತಿಳಿ ಮನಸ್ಸು....
ಅಕ್ಕಿಯೋಳಗೆ ಅನ್ನದ ಭಾವನೆ ಅಸ್ವಾದಿಸಿದಾಗ
ಶಕ್ತಿ ದೇಹದೊಳಗೆ ಸಂಚಾರಸೂತ್ರವ
ಅಭಿಧಮಿಸಿ ಅಲಾಂಕರದ
ತಿಳಿ ಮನಸ್ಸು...
ಗಾಳಿಯೊಳಗೆ ಜೀವದ ಭಾವನೆ ಅಸ್ವಾದಿಸಿದಾಗ
ಯುಕ್ತಿ ಕಣ್ಣೊಳಗೆ ಚಿತ್ರಸೂತ್ರವ
ಆಕಾರ ವಿನ್ಯಾಸ ಅರ್ಥೈಸುವ
ತಿಳಿ ಮನಸ್ಸು ....
ಬೆಳಕಿನೊಡನೆ ಬಣ್ಣದ ಭಾವನೆ ಅಸ್ವಾಧಿಸಿದಾಗ
ನವರಸದ ಚಲನೆ ಬದುಕಿನಸೂತ್ರವ
ಒಳ ಹೊರವು ಬಣ್ಣಿಸುವ
ತಿಳಿ ಮನಸ್ಸು .....

-- ಈಶ,ಎಂ.ಸಿ.ಹಳ್ಳಿ ..

- ಈಶ, ಎಂ.ಸಿ.ಹಳ್ಳಿ

09 Sep 2015, 07:02 pm

ಜ್ಯಾತ್ಯತಿತ

ಜಾತಿ ಗೀತಿ ಬಿಟ್ಟು ಒಂದಾಗಿರಿ
ಮಾನವ ಜಾತಿ ಒಂದೇ ಎಂದರು ಅಬ್ದುಲ್ ಕಲಾಂ !
ಆದರೂ ಯಾವುದೇ ಅರ್ಜಿ ಫಾರಂ
ನೋಡಿ ಅಲ್ಲಿದೆ ಜಾತಿ ಕಾಲಂ!!

- Satyasagar

06 Sep 2015, 07:22 am

ತ್ಯಾಗ

ನ್ಯಾಯ ನೀತಿ ಧರ್ಮಕಾಗಿ
ಎಲ್ಲಾ ತ್ಯಾಗ. ಮಾಡಿದ. ಅಪ್ಪ !!
ಇವೆಲ್ಲವನ್ನು ತ್ಯಾಗ ಮಾಡಿದ
ಖುರ್ಚಿಗಾಗಿ ಮಗ, !!.

- Satyasagar

06 Sep 2015, 07:12 am

ವ್ಯತ್ಯಾಸ

ನೀವಿಲ್ಲದಿದ್ದರೆ ಊಟನೆ ಮಾಡಲ್ಲ
ಅಂತಿದ್ಲು ನನ್ನ ಪ್ರೀತಿಯ ಪಿಚಲು ಅರ್ಧಾಂಗಿ!!
ನಾನೀಗ. ವರ್ಗವಾಗಿ ದೂರದಲ್ಲಿದ್ದೆ್ನೆ.
ನಾನಿಲ್ಲದೆ ಊಟ ಮಾಡಿ
ಆಗಿದ್ದಾಳೆ ಗಜಗಮನೆ!!.

- Satyasagar

06 Sep 2015, 07:03 am

ಪ್ರಣಯ.

ನೀನೆ ನನ್ನ ಚಿನ್ನಾ
ಅಂತಾ ಅಪ್ಪಿಕೊಂಡು ಮುದ್ದಾಡುತ್ತಿದ್ದ!!
ಹೆಂಡತಿ ಅಂದಳು "ನಂಗೆ ನೆಕ್ಲೆಸ್ ಮಾಡ್ಸಿ!!
ಈತ ಬೆವರಿ ಒದಾಡುತ್ತಿದ್ದ!!.

- Satyasagar

06 Sep 2015, 06:48 am

ಮದರಂಗಿ ಚಿತ್ತಾರದಲಿ

ಮದರಂಗಿ ಚಿತ್ತಾರದಲಿ
ಅಂಗೈಯಲಿ ಅವನ ಹೆಸರ
ಬಿಡಿಸುವಾಗ ...
ನೆನಪಿಸದಿರು ನನ್ನ
ಕಂಬನಿಯ ತಡೆಯಲು ನಾನಿರಲಾರೆ ಜೋಕೆ ...!!!

ಮದುವೆಯ ಸಡಗರದಿ
ಸಖಿಯರ ಸರಸದಿ
ನೀ ನಗುವಾಗ
ನೆನಪಿಸದಿರು ನನ್ನ
ನನ್ನೆದೆಯ ಕೂಗು
ಕೇಳಿಸೀತು ಜೋಕೆ...!!!

ಅವನು ಕಾದು ಕುಳಿತಿರಲು
ಒಳಸೇರಿ ಕದ ಹಾಕುವ ಮುನ್ನ
ನೆನಪಿಸದಿರು ನನ್ನ
ಕೈ ಹಿಡಿದು ರಮಿಸಲು
ನಾನಿರಲಾರೆ ಜೋಕೆ ..!!!

ನಾವಂದು ನಡೆದ ಬೀದಿಯಲಿ
ಹೆಗಲಿಗೆ ಜೊತೆಯಾಗಿ
ಅವನ ಜೊತೆ ನಡೆವಾಗ
ನೆನಪಿಸದಿರು ನನ್ನ
ಹೆಜ್ಜೆಗಳು ತಾಳ ತಪ್ಪಬಹುದು
ಎಡವದಂತೆ ಕಾಯಲು
ನಾನಿರಲಾರೆ ಜೋಕೆ ...!!!

✒ಸಿರಾಜ್ ಗಡಿಯಾರ್

- ಸಿರಾಜ್

04 Sep 2015, 07:57 pm

ಕಣ್ ಕಪ್ಪು

ನಿನ್ನ ಕಣ್ ಕಪ್ಪಲಿ ಕಳೆದುಹೋಗಿದೆ,
ನನ್ನದೊಂದು ನೋಟ,
ಒಮ್ಮೆ ತಿರುಗಿ ನೋಡಿ ಕೊಟ್ಟು ಹೋಗುವೆಯಾ
ನನ್ನೆದೆಯ ಬಾಗಿಲಿಗೆ ಸುತ್ತಿಗೆಯಾ ಏಟ...

- ಸಚಿನ್ ಜಿಜೆ

04 Sep 2015, 02:39 am