Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರೀತಿ

ಅಕ್ಕಿ ಸೊಸಿದರೆ ಕಲ್ಲು ಇರಬಾರದು
ದೀಪ ಹಚ್ಚಿದರೆ ಕತ್ತಲು ಇರಬಾರದು
ಪ್ರೀತಿ ಮಾಡಿದರೆ ಕೈ ಬಿಡಬಾರದು

ಜೀವನಕ್ಕಿಂತ ಜೀವ ಮುಖ್ಯ
ಪ್ರೀತಿಗಿಂತ ಪ್ರೀತಿಸುವರು ಮುಖ್ಯ
ಅದಕ್ಕೆ
ಪ್ರೀತಿಸುವವರಿಗೆ ಜೀವನ ಕೊಡಿ
ಪ್ರೀತಿಗೆ ಜೀವನ ಕೊಡಿ

- ಹೊಳಲೇಶ ವಾಲೇಕಾರ

12 Oct 2015, 02:11 pm

ನೊವು

ಮನಸ್ಸಿಗೆ ನೊವಾದರೆ
ಮನಸ್ಸಲ್ಲಿ ಇರುವವರಿಗೆ ಹೇಳಬಹುದು
ಆದರೆ ಮನಸ್ಸಲ್ಲಿ ಇರುವವರು ಮನಸ್ಸಿಗೆ ನೋವು ಮಾಡಿದರೆ
ಮನಸ್ಸಲ್ಲಿ ಇರುವ ನೋವನ್ನು ಯಾರಿಗೆ ಹೇಳುವುದು

- ಹೊಳಲೇಶ ವಾಲೇಕಾರ

12 Oct 2015, 02:03 pm

ಸ್ನೇಹ

ಮಂಜು ಕರಗಬಹುದು
ಮುತ್ತು ಒಡೆಯಬಹುದು
ನೀವು ನನ್ನನು ಕರೆಯಬಹುದು
ಆದರೆ ನಾನು ನಿಮ್ಮ ಸ್ನೇಹವನ್ನು ಮರೆಯುವದಿಲ್ಲಾ
ಇಂತಿ ನಿಮ್ಮ ಸ್ನೇಹ ಜೀವಿ
"ಹೊಳಲೇಶ"

- ಹೊಳಲೇಶ ವಾಲೇಕಾರ

12 Oct 2015, 01:58 pm

ಲಕ್ಷ್ಯಕೊಡಬಾರದೆ?

ಬೆಂಕಿ ಹತ್ತುತ್ತಿರಲು
ಕಾಡು ಉರಿಯುತ್ತಿರಲು
ವನ್ಯ ಮೃಗಗಳಿಕ್ಕಟ್ಟಿನಲ್ಲಿರಲು
ಸ್ವಲ್ಪ ಇತ್ತಕಡೆ ಲಕ್ಷ್ಯಕೊಡಬಾರದೆ?


ಹಸಿರು ನಾಶವಾಗುತ್ತಿರಲು
ಕಪ್ಪು ವಕ್ಕರಿಸುತ್ತಿರಲು
ಮೃಗಗಳಿಗೆ ದಿಕ್ಕು ತಪ್ಪಿರಲು
ಸ್ವಲ್ಪ ಅವುಗಳು ಶೋಕಕಥೆ ಆಲಿಸಬಾರದೆ?


ಕಪ್ಪು ನದಿಯು ಹರಿಯುತ್ತಿರಲು
ಪ್ಯಾಕ್ಟಿರಿಗಳು ರಸಾಯನಿಕಗಳ ವಿಸರ್ಜಿಸುತ್ತಿರಲು
ಜಲಚರಗಳು ಎದ್ದೆದ್ದು ಬೀಳುತ್ತಿರಲು
ಸ್ವಲ್ಪ ಈ ಬಗ್ಗೆ ಯೋಚಿಸಬಾರದೇ?

--ಕೋಟಿ ಬೀರೇಶ

- BIRESH KOTI

11 Oct 2015, 01:30 pm

ಕೊನೆ ಗಿರಾಕಿ...2

-- ಕೊನೆ ಗಿರಾಕಿ


ಸತ್ತವತಿಯ ಚರ್ಮದಲ್ಲಿ ಡಂಗುರ ಮಾಡಿ
ನಮ್ಮದೇ ರಾಗಕ್ಕೆ ಹೊಂದಿಸಿ ಹಾಡಿ
ಸತ್ತ ಚರ್ಮ ಮತ್ತೆ ಇಂಪಂತೆ ಹುಟ್ಟಿ
ಅರಿವಿಲ್ಲದೆಯೇ ಸಾಯುತ್ತದೆ
ಆದರೆ ಕಂಪನ ಕಂಪಿಸಿ.

ಇದಂತ್ತೆ ಇದ್ದು ಎದ್ದು ಹೋಗದ ಹೋಗಲೋಲ್ಲದ
ಋಣವಂತೆ ಕಣದಲು ಕಾಯುವುದರಲ್ಲು
ಗಣಗಳ ಗುಂಪು ದೊಡ್ಡದಾಗಿರಲು
ಕಾರ್ಮೋಡದ ಕಪ್ಪು ಕುತ್ತಿಗೆಯ ಸಂಮುಖದಲ್ಲಿ.

ಗಾಳಿಪಟನು ದಾರದಿಂದ ಹಾರಿ ದೂರಹೋದಂತೆ
ಪಟದ ಹುಟ್ಟಿಗೆ ಕಾರಣ ಕಡ್ಡಿಗಳಂತೆ
ದಾರವು ಕಡ್ಡಿಯೋ ತೋರಣದ ಆಟವಷ್ಟೆ
ನೋಟದ ಆಂತರಿಕ ಕಣ್ಣುಗಳ ಜೊತೆಯಲ್ಲಿ .

ಇವೆಲ್ಲವೂ ಮುಂದು ಇನ್ನು ಮುಂದು
ಎಂದು ಮುಂದೆ ಮುಖಮಾಡಿ ನಡೆದರೆ
ಕೊನೆಯ ದಾರಿ ಮುದುಡಿ ಮುಪ್ಪಾಗಿ ಹೋದರೆ
ಇರುವರೆಲ್ಲರಲು ಕೊನೆಗಿರಾಕಿ ಯಾರು . ?

## ಈಶ,ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

10 Oct 2015, 07:45 pm

ಲೋಕದ ಎಲ್ಲವೂ

ಲೋಕದ ಎಲ್ಲವೂ
ನನ್ನ ಕಂಗೆಡಿಸಿವೆ ರೂಹೀ
ನಾನೀಗ ಕಾವ್ಯದ ಗರ್ಭ ಹೊಕ್ಕು
ಕವಿತೆಯಾಗಿ ಜೀವತಳೆಯಬೇಕು
ನನ್ನೆಲ್ಲಾ ಹಸಿ ಕನಸು
ಹುಸಿ-ಮುನಿಸಿಗೂ ನೀನೀಗಾ ತಾಯಾಗಬೇಕು

ಯಾ ರೂಹೀ
ನಾನೀಗ ನಿನ್ನೆದೆ ಕೂಸಾಗಬೇಕು
ಮತ್ತೆ ಮತ್ತೆ ರಚ್ಚೆ ಹಿಡಿದು ನಿನ್ನ ಕಾಡಬೇಕು

ಬಾ
ಅರೆಗಳಿಗೆ ಎದಿರುಗೊಳ್ಳು
ಕವಿತೆ ಕಾರುವ ನಿನ್ನ ಕಣ್ಣಿನಾಳದಿಂದ
ಕಾವ್ಯದ ಗರ್ಭ ಹೊಕ್ಕುತ್ತೇನೆ
ಲೋಕದ ಸೂತಕಗಳಾವು ತಾಗದಂತೆ
ನನ್ನ ಹಡೆದು ಆಡಿಸು

ಲೋಕದ ಕಾವು ತಾಗುವ ಮೊದಲೇ
ಕವಿತೆಯ ಗರ್ಭದೊಳಗೇ ನನಗೆ ಗೋರಿ ಕಟ್ಟಿಸು
ನಿನ್ನೆದೆಯ ಜಡವಾಗಿ ಉಸಿರಾಡಬಲ್ಲೆ ರೂಹೀ
ಕಾವ್ಯ ಕಾರುಣ್ಯದ ನಿನ್ನೆದೆಯಲ್ಲಿ
ನನ್ನ ಅಳಿವು-ಉಳಿವಿನ
ಸಹಿಯಾಗಬೇಕು..

- malappa

07 Oct 2015, 07:05 am

ಸುಖ???

ಎಲ್ಲಿದೆ ಸಖವು???
ಅಲ್ಲಿ? , ಇಲ್ಲಿ?
ಮತ್ತೆಲ್ಲಿ??

ಹುಡುಕಿದೆ ಹಣದಲಿ
ಅಲ್ಲೂ ಇಲ್ಲ,
ಜನರ ನಡುವಂತು
ಇಲ್ಲವೇ ಇಲ್ಲ.

ಕೆಣಕಿದೆ ಒಲವ
ಇಲ್ಲ,
ಸ್ನೇಹವ ತಡಕಿದೆ
ಇಲ್ಲ.

ಸುಖವೇಂಬುದು
ಇಲ್ಲದ ಸಂಗತಿಯೇ?.
ಹುಡುಕಲು ಸಿಕ್ಕಿತೇ?
ತಡಕಲು ದಕ್ಕಿತೇ?

ಹುಡುಕುವ ಗೋಜೆ
ದುಖಃಮಯ,
ಯಾಕೆ ಬೇಕು
ಸುಖ ಮಾಯಾ.

ಬೇಕಿದೆ ಸುಖ ದುಖಃಗಳ
ಹೊರತಾದ ಶೂನ್ಯ ಮನ,
ಮತ್ತೆ
ಆಶಯೇ ದುಖಃಕ್ಕೆ ಕಾರಣ ........


- ಪೀ. ಎಸ್. ಪೀ

06 Oct 2015, 06:50 pm

ಕೊನೆ ಗಿರಾಕಿ...

ಕೊನೆ ಗಿರಾಕಿ.....


ಬರವಣಿಗೆ ಎಂದು ಬರೆದ ಅನೇಕ ಪದ ಅಳಿಸಿವೆ.
ಬದುಕು ಎಂದು ಬರೆದ ಅನೇಕ ಪದ ಆಳಿವೆ.

ಬರೆಯುವಂತ ಲೇಖನಿಯ ಮುಳ್ಳು ಮುರಿದಿದೆ.
ಬರೆದ ಲೇಖನಿಯ ತುದಿ ಷಯಿಯಿಂದ ಚಿತ್ರಿಸಿವೆ.

ಬಿಳಿ ಕಾಗದದ ತುಂಬೆಲ್ಲ ಅನುಭವದ ಆಕಾರ.
ಪುಟ್ಟ ತಿರುಗಿಸಿ ನೋಡಿದಾಗಲೆ ಇನ್ನೇನೂ ಬೇಕೆನ್ನೂವ ಸಹಕಾರ.

ಬಿಳಿ ಕಾಗದ ನೋಟಾದಗ ಉಕ್ಕುವ ಖುಷಿ.
ನೋಟೇಲ್ಲ ಸುಣ್ಣವಾದಗ ಅದೇನೋ ಘಾಸಿ.

ಎಲ್ಲವುಗಳ ,ಎಲ್ಲದರ ಲೇಖನಿಯೇ..ಮನಸ್ಸು.
ಬರವಣಿಗೆಯೇ,ಬದುಕು.
ಕೊನೆ ಗಿರಾಕಿ ಅಕ್ಷರವೇ.....?.ಅನುಭವವೇ....?ಇಲ್ಲ ಕುರುವೇ...?

## ಈಶ,ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

06 Oct 2015, 02:02 pm

ನಾನೇನು ಕಡಿಮೆಯಿಲ್ಲ

ನನಗಿಂತ ನೀ ಮೇಲೆಂದು
ಬೀಗಬೇಡ ಗೆಳೆಯ....
ನಿನಗಿಂತ ನಾನೇನು
ಕಡಿಮೆಯಿಲ್ಲ......

ನೀ ಮಾತಿನ ರಾಜ್ಯದ
ಸರದಾರನಾದರೆ,,
ನಾನು ಮೌನ ಸಾಮ್ರಾಜ್ಯವ
ಆಳುವ ಮಹಾರಾಣಿ.....

ನೀ ತಿಂಗಳಿಗೊಮ್ಮೆ
ಪ್ರಕಾಶಿಸುವ ಚಂದ್ರನಾದರೆ,,
ನಾನು ಪ್ರತಿದಿನ
ಮಿನುಗುವ ನಕ್ಷತ್ರ.....

ನೀನು ಮೈ ಪುಳಕಿಸುವ
ಬಿಸಿ ಅಪ್ಪುಗೆಯಾದರೆ,,
ನಾ ಎಲ್ಲರನ್ನೂ ಸೆಳೆವ
ನಿಷೆಯೇರಿಸುವ ಕಣ್ಣೋಟ....

- ನಿಶಾ ರೂಪ

06 Oct 2015, 02:25 am

ಪ್ರೀತಿ

ಗೆಳತಿ
ಮರೆಯಲಾರೆ ನಾ ನಿನ್ನ
ನನ್ನ ಕೊನೆಯ ಉಸಿರು ಇರುವರೆಗೂ,

ಅದು ಹೇಗೆ ಹೇಳಿ ಹೋದೆ ನೀ
ನಾ ನಿನಗೆ ಬೇಡವೆಂದು,

ಹೇಳಿ ಹೋಗು ಗೆಳತಿ
ಕಾರಣವ?.
















- mahesh

02 Oct 2015, 10:34 am