Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕನ್ನಡ

ನನ್ನ ಮನವು ಕನ್ನಡ
ನನ್ನ ತನವು ಕನ್ನಡ
ನಾ ಬಳಸುವ ಭಾಷೆ ಕನ್ನಡ
ಪೂರ್ಣವಾಗಿ ನನ ತಾಯಿ ಕನ್ನಡ

- shiva

18 Oct 2015, 05:36 pm

ಅಮ್ಮನ ಪ್ರೀತಿ

ಅಮ್ಮನ ಪ್ರೀತಿಯ ಮುಂದೆ
ನಿನ್ನ ಪ್ರೀತಿ ಬರಿ ಸೊನ್ನೆ

ಅದು ಹೇಗೆ ಹೇಳುವೆ ಕನ್ಯೆ
ಅಮ್ಮನ ಬಿಟ್ಟು ಬಾ ಎಂದು

ಕೊಡುವೆಯ ನೀ ನನಗೆ
ಅಮ್ಮನ ಅಕ್ಕರೆಯ ಕೈತುತ್ತನ್ನು

ಹಾಡುವೆಯ ನೀ ನನಗೆ
ಅಮ್ಮನ ಪ್ರೀತಿಯ ಜೋಗುಳವ

ಅದು ಹೇಗೆ ಮರೆಯಲಿ ಅಮ್ಮನ
ಹೇಳೇ ಓಹ್ ನನ್ನ ನಲ್ಲೆ.

- mahesh

18 Oct 2015, 03:47 pm

ಅಮ್ಮ

ಜೀವಕೆ ಜೀವ ನನ್ನ ತಾಯಿ
ನಾ ತಪ್ಪು ಮಾಡಿದರೆ ಕ್ಷಮಿಸಿ ತಿದ್ದುವ
ಮಹಾಮಯಿ
ಬಾಳಿಗೆ ಅವಳೆ ಮರದ ಬೇರು
ಅವಳಿಲ್ಲದೆ ಹೋದರೆ ಬಾಳೇ ಗೋಳು

- shiva

18 Oct 2015, 11:41 am

ಬತ್ತಳಿಕೆ,,,,,

ಕೊನೆ ಗಿರಾಕಿ....


ನನ್ನ ತಲೆಯ ಬತ್ತಳಿಕೆಯಲ್ಲಿ
ಅನೇಕ ಬಾಣಗಳು ಇರಬಹುದು
ಯುದ್ಧದ ಸಂದರ್ಭದಲ್ಲಿ
ಪ್ರಯೋಗಿಸಿದರೆ ಗುರಿಯನ್ನು
ತಲುಪುವ ಭರವಸೆ ಇಮ್ಮಡಿಸುತ್ತದೆ.

ವಿದರ್ಭದಲ್ಲಿ ವಿನಿಯೋಗಿಸಿದರೆ
ಸಂದರ್ಭ ಕೇಡು ಮಾಡಬಹುದಾಲ್ಲವೆ
ಬತ್ತಳಿಕೆ ತುಂಬುವ ಕಾರ್ಯ ಸಾಗುತ್ತಿದೆ
ಪುಟಗಳ ಪುಸ್ತಕದಿಂದಲ್ಲ
ಪೃಥ್ವಿಯ ಅನೇಕ ಪುಟಗಳಿಂದ.

ಒಂದಾಂತು ಹೊಂದಿಕೆಯ ವಿಷಯ
ಕೇಡಂತು ನಮ್ಮಿಂದಾದರು
ಪೃಥ್ವಿಯಿಂದಲ್ಲ
ಹಾಸಿಗೆಯಲ್ಲೆ ಅರುಳುತ್ತಿದೆ
ಕೇಡಿನ ಗಂಟ್ಟು
ವಂಶವೆಂಬ ಗುಟ್ಟು
ಅದರೆ ಹೂ ಅರಳಿಸಿ ಸುವಾಸನೆ ಪಸರಿಸಿದರಾಗದೆ.

ಆಗಬಹುದೆನೊ ಪ್ರಯತ್ನಿಸಬೇಕಷ್ಟೆ
ನಾವೆಲ್ಲ ಮೊದಲ ಗಿರಾಕಿಯಾಗಿ......

# ಈಶ,ಎಂ,ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

18 Oct 2015, 10:46 am

ಅಮ್ಮ ನನ್ನಮ್ಮ

ತನ್ನ ಜೀವವ ಸವೆಸಿ
ನನ್ನ ದೇಹವ ಬೆಳೆಸಿ
ಸಾಕಿ ಸಲುಹಿದವಳು ನನ್ನಮ್ಮ

ತಾನು ಹಸಿವನು ದಹಿಸಿ
ನನಗೆ ಅನ್ನವ ಉಣಿಸಿ
ಸಾಕಿ ಸಲುಹಿದಳು ನನ್ನಮ್ಮ

ಪೈಸೆಪೈಸೆಯನು ಕೂಡಿಟ್ಟು
ನನಗೆ ರೂಪಾಯಿನು ಕೊಟ್ಟು
ಸಾಕಿ ಸಲುಹಿದವಳು ನನ್ನಮ್ಮ

ತಾನು ಹರಕಲು ಸೀರೆಯನುಟ್ಟು
ನನಗೆ ಹೊಸ ಬಟ್ಟೆಯಕೊಟ್ಟು
ಸಾಕಿ ಸಲುಹಿದವಳು ನನ್ನಮ್ಮ

ತಾನು ನೋವನು ಸಹಿಸಿ
ನನಗೆ ನನಗೆ ನಗುವನು ತರಿಸಿ
ಸಾಕಿ ಸಲುಹಿದಳು ನನ್ನಮ್ಮ

ತನ್ನ ಆಸೆಗಳ ಒಣಗಿಸಿ
ನನ್ನ ಆಸೆಗಳ ಚಿಗುರಿಸಿ
ಸಾಕಿ ಸಲುಹಿದವಳು ನನ್ನಮ್ಮ

ತಾನು ಬದುಕಿರುವವರೆಗೂ
ತನ್ನ ಕಂದನ ಪ್ರೀತಿಸುವ
ಭೂಮಿಯ ಮೇಲೆ ವಾಸಿಸುವ
ಏಕೈಕ ಜೀವಿ ಎಂದರೆ "ಅಮ್ಮ"

"ತಾಯಿ ದೇವರ ಮುಂದೆ
ಎಲ್ಲಾ ದೇವರು ಹಿಂದೆ "

- ಚೇತನ್ ಬಿ ಸಿ

18 Oct 2015, 01:51 am

ನೆನಪಿದೆ, ,,,

ನೆನಪಿದೆ,,,,,

ನೆನಪಿದೆ , ಹಣ್ಣೆಲೆ ಉದುರಿ
ಗಾಳಿಯಲ್ಲಿ ತವಳುತ್ತ
ಕೊನೆ ಉಸಿರೆಳೆದುಕೊಳ್ಳುವಾಗ
ಬೋಳಾದ ಮರಗಳ ದುಃಖವ .

ನೆನಪಿದೆ , ಮರ ಕೆತ್ತಿ ನೇಗಿಲ
ಮಾಡಿ ಕಲ್ಲು ಮಣ್ಣುಗಳ ಜೊತೆ
ಅಲಾಂಗಿಸಿ ಅಳುವಾಗ ಕಣ್ಣೀರು
ಮಳೆಯಂತೆ ಬಂದ ನಗು ಮುಖವ.

ನೆನಪಿದೆ, ಶ್ರಮದ ಬೆವರು
ನನ್ನೂರಿನ ಸುಗಂಧ ವಾಸನೆ.
ಗುಡಿಸಲಲ್ಲಿ ಇಣುಕುವ ಮಳೆ ಹನಿ
ಪಾತ್ರೆಯಲ್ಲಿ ಧುಮುಕಿ ಸಂಗೀತವಾಗಿದ್ದು.

ನೆನಪಿದೆ , ಕತ್ತಿ ಮಸೆವ ಕಲ್ಲು
ಗೆಯುವ ಕೈಗಳ ಯಜಮಾನ.
ಗೋಣಿಚೀಲದ ದವಸ
ದಿನ ನಿತ್ಯ ನಮಗೆ ಸಾಹುಕಾರ.

# ಈಶ,ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

17 Oct 2015, 08:54 pm

ಜೀವ

ನನ್ನ ಮನವು ಸಹಿಸಲಾರದು
ಕಷ್ಟದ ನೋವ
ಹೃದಯಕೆ ಮನಸೇ ಸರ್ವಸ್ವ
ಆದರೂ ಈ ಮನಕೆ ಬೇಕು
ಬಡಜೀವವ ಪ್ರೀತಿಸುವ ಜೀವ

- shiva

17 Oct 2015, 05:41 pm

ಏಕೋ ಕೋಪ

ಅವಳಿಗೆ ಏಕೋ ಕೋಪ
ನಗುವಲ್ಲೆ ಕೊಲ್ಲುವಳು.
ಆ ಕಿರು ನಗೆಗೆ
ಮನಸ್ಸು ಓಡುವುದು
ದಿಕ್ಕು ಕಾಣದೆ.
ಅಂತ ಕೋಪಕ್ಕೆ
ನಾನೇನು ಮಾಡಿದೆ ?

- ರವಿಕುಮಾರ

14 Oct 2015, 07:39 am

ಕಲಿಯುಗ ಕಾಲ ಕೆಟ್ಟತಿ!

ಕಲಿಯುಗ ಕಾಲ ಕೆಟ್ಟತಿ
ಸಂಸ್ಕೃತಿಯೆಂಬುದು ಮರೇತೈತಿ
ಹೆಣ್ಣು ಹೋಗಿ ಗಂಡಾಗೈತಿ
ಗಂಡಿಗೆ ದಿಕ್ಕು ತಪ್ಪಿ ಹೋಗೈತಿ !

ತಲೆಮೇಲಿನ ಸೆರಗ ಹೋಗೈತಿ
ಕ್ಯಾಪು - ಚಸ್ಮಾ ಅಂತ ಬಂದೈತಿ !!

ಹಣಸಿಣ ಬೊಟ್ಟು ಹೋಗೈತಿ
ಬದಲಾಗಿ ಟ್ಯಾಟೂ ಬಂದೈತಿ !!!

ಕುಂಕುಮ ಬೊಟ್ಟು ಹೋಗೈತಿ
ಮಿಂಚಿನ ಟಿಕಳಿ ಕಾಣತೈತಿ !!!!

ಸೀರಿ - ಕುಬುಸವೆಲ್ಲ ಹೋಗೈತಿ
ಜೀನ್ಸುಪ್ಯಾಂಟುಗಳ ಕಾಲೈತಿ !!!!!

ಉದ್ದುದ್ದ ಸೆರಗ ಮರೇತೈತಿ
ಎಳೆಯುವ ಬ್ಯಾಗು ಬಂದೈತಿ !!!!!!

ಅರಿಸಿಣ-ಕುಂಕುಮ ಹೋಗೈತಿ
ಸ್ನೋ - ಪೌಡರ್ ಹೋಳಿತೈತಿ !!!!!!!

ಬಸ್ಸು ಹತ್ತುವುದು ಮರೇತೈತಿ
ಸ್ಕೂಟಿ ಹಿಡಿಯುದು ಕಾಣತೈತಿ !!!!!!!!

ಹಾಡು ಹೇಳುವುದು ಹೋಗೈತಿ
ಕಮೆಂಟ ಮಾಡುವುದು ಹೇಚೈತಿ !!!!!!!!!

ಕಥೆಹೇಳುವುದು ಮರೇತೈತಿ
ಚಾಟ್ - ಗೀಟ್ ಅಂತ ಬಂದೈತಿ !!!!!!!!!!

ಕನ್ನಡ ಮಾತಡೊದ ಹೋಗೈತಿ
ಟಸು - ಪುಸು ಇಂಗ್ಲೀಷ್ ಬಂದೈತಿ !!!!!!!!!!!

ಭಾರತ ಸಂಸ್ಕೃತಿ ಮರೇತೈತಿ
ಪಾರೆನ ಪ್ಯಾಶನ ಹೇಚೈತಿ !!!!!!!!!!!!

- BIRESH KOTI

13 Oct 2015, 04:30 pm

ಸಹಾಯ

ಒಬ್ಬರಿಗೆ ಸಹಾಯ ಮಾಡಿ
ನೀವು ಒಳ್ಳೆಯದು ಬಯಸಿದರು
ಅವರು ನಿಮಗೆ ಕೆಟ್ಟದ್ದು ಮಾಡಿದರೆ
ಬೇಸರ ಮಾಡಿಕೊಳ್ಳಬೆಡಿ!!
ಜನ ಯಾವತ್ತು ಕಲ್ಲು ಎಸೆಯುವದು
ಮಾವಿನ ಮರಕ್ಕೆ ಬೇವಿನ ಮರಕ್ಕಲ್ಲ!!!

- ಹೊಳಲೇಶ ವಾಲೇಕಾರ

12 Oct 2015, 02:26 pm