Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಹಿಂದು -ಮುಸ್ಲಿಂ ಕಲಹವೇತಕೆ
ಹೊಂದಿ ಬಾಳಬಾರದೇ
ಮೇಲು -ಕೀಳು ಜಗಳವೇತಕೆ
ಮನುಜನಾಗಿರಬಾರದೇ
ರಕ್ತ ಹರಿಸುತ ದ್ವೇಷ ಬೆಳೆಸುತ
ಧರ್ಮ ರಕ್ಷಣೆ ನ್ಯಾಯವೇ
ಮತಾಂಧತೆಯ ಗುಲಾಮನಾಗದೆ
ಮಾನವತೆಯ ಸಾರಬಾರದೇ
ಸರ್ವ ಧರ್ಮದ ಶಾಂತಿಯ ಸಾರಿದ
ಸರ್ವ ಶ್ರೇಷ್ಠ ಭೂಮಿ ನಮ್ಮದು
ಹಸಿರು -ಕೇಸರಿ ಭೇದವೇತಕೆ
ಉಸಿರು ಭಾರತವೆನ್ನಲಿ
ಪುಣ್ಯ ಮಣ್ಣಿನ ಪ್ರಜೆಗಳಾಗುತ
ಬಾ ..ಬೆರೆತು ಬಾಳುವ ಗೆಳೆಯನೆ ..!!
✒ಸಿರಾಜ್ ಗಡಿಯಾರ್
- ಸಿರಾಜ್
23 Oct 2015, 07:51 pm
ಎಲ್ಲರಂತಲ್ಲ ಎನ್ನ ಜನಕ,
ಅರಿತಿರಲಿಲ್ಲ ಇಲ್ಲಿಯ ತನಕ,
ಹೆಮ್ಮೆ ಇದೆ ಮಗನಾಗಿರಲು,
ಪಣ ತೊಡುವೆ ಋಣಿಯಾಗಿದೆ.
~ಸಚೇತನ
- ಚೇತನ ಸಾಸನೂರ
23 Oct 2015, 12:18 pm
ಹಸಿತಿದೆ, ನಿನ್ನ ಕೈ ತುತ್ತು ತಿನ್ನಲು;
ತೂಕಡಿಸಿದೆ, ನಿನ್ನ ಒಡಲನು ಬಯಸಿ;
ನೆನೆಯುತಿದೆ, ನೀನಿದ್ದ ಕ್ಷಣಗಳನು;
ಹಸಿದು ತೂಕಡಿಸುತ ನಿನ್ನನ್ನೇ ನೆನೆಯುತಿದೆ, ಈ ತಬ್ಬಲಿ ಮನ. . .
~ಸಚೇತನ
- ಚೇತನ ಸಾಸನೂರ
23 Oct 2015, 12:04 pm
ಜೋರಾಗಿ ಸುರೀಯುತೀರುವ ಮಳೆಯಲ್ಲಿ ಕೂಗಲೇ ನಿನ್ನ ಹೇಸರ.,
ಮಳೆಯ ಸದ್ದಿಗೆ ಕೇಳಿಸುವುದಿಲ್ಲ ಬೇಡ ಬಿಡು..
ಸಮೂದ್ರದ ದಡದ ಮರಳಲ್ಲಿ ಬರೇಯಲೇ ನಿನ್ನ ಹೆಸರ.,
ಅಲೆಗಳ ಓಡಾಟಕ್ಕೆ ಅಳಿಸಿ ಹೋಗುವುದು ಬೇಡ ಬಿಡು...
ನನ್ನ ದೇಹದ ಉಸಿರಿನಲ್ಲಿರುವ ನಿನ್ನ ಹೆಸರ.,
ನನ್ನ ಹೃದಯದ ಬಡಿತದಲ್ಲಿರುವ ನಿನ್ನ ಹೆಸರ.,
ನಾ ಸಾಯುವ ವರೆಗೂ ಯಾರು ಅಳಿಸಲಾಗದು ಇರಲಿ ಬಿಡು....
- Rakesh
23 Oct 2015, 03:53 am
ಹಾರುತಿಹವು ಹಕ್ಕಿಗಳು ಸ್ವತಂತ್ರವಾಗಿ
ಹಳ್ಳಿಯ ಆಗಸದಲ್ಲಿ
ನರಳುತಿದೆ ಹಕ್ಕಿಗಳು ಪೇಟೆಯ
ಚಿನ್ನದ ಪಂಜರದಲಿ
ಗದ್ದೆಯ ಮೇಲೆ ಖುಷಿಯ ಹೊಳೆ
ರೋಡಿನ ಮೇಲೆ ಗಾಡಿಗಳ ಹೊಗೆ
ಹಳ್ಳೀಲಿ ಪ್ರಶಾಂತದ ಸಿಹಿಗಾಳಿ
ಪೇಟೇಲಿ ಮಾಲಿನ್ಯದ ಹಾವಳಿ
ನಗರದಲಿಹುದು ಹೆಚ್ಚಿನ ಅವಸರ
ಹಳ್ಳಿಯಲಿ ಸುಂದರ ಸುಮಧುರ ಪರಿಸರ
ಪೇಟೆಯಲ್ಲಿ ಅರ್ಥವಾಗದ ಮಾರ್ಗ
ಹಳ್ಳಿಯ ಪ್ರತಿ ಬೀದಿಯಲೂ ನಗುವಿನ ಸ್ವರ್ಗ
ನಗುತಿವೆ ಮುದ್ದೆ ತಿಂದ ಬಾಯಿಗಳು
ನರಳುತಿವೆ ಫಿಜ್ಜಾ ತಿಂದ ಬಾಡಿಗಳು
ಉಸಿರಿನ ಉಸಿರೇ ಅಲ್ಲಿಯ ಹಸಿರು
ಹೊಗೆಗೆ ಕಟ್ಟುವುದು ಇಲ್ಲಿಯ ಉಸಿರು
- shiva
22 Oct 2015, 03:07 pm
ನಕ್ಕರೆ ಸುಕುಮಾರಿ
ಬಿಂಕದ ನಡಿಗೆಯ ಬಂಗಾರಿ
ನಟಿಸಿದರೆ ನಾಟ್ಯಮಯೂರಿ
ನನ್ನವಳು ಹಠಮಾರಿ
- Irayya Mathad
22 Oct 2015, 08:08 am
ಬ್ರಹ್ಮ ರೂಪ ಬ್ರಹ್ಮ ಕಮಲ ಬ್ರಹ್ಮ ದೇವನ ಪಿತ
ಹರಿ ಓಂ ನಾರಾಯಣನೆ ಕಾಪಾಡು ಕರುಣಾಳು ಜನಕನೆ !!ಪ!!
ಆದಿಯಿಲ್ಲದ ಅಂತ್ಯವಿಲ್ಲದ ಅನಂತಸ್ವರೂಪನೆ
ಸಕಲ ಜೀವ ರಾಶಿ ಕುಲದ ಜೀವದಾತನೆ
ಕಾಪಾಡು ಎನ್ನನೆ ನೀನು
ಅಂಕೆ ಇಲ್ಲದ ಸಂಖ್ಯೆ ಇಲ್ಲದ ಮಹಾಮಹಿಮನೆ
ಸರ್ವರೂಪನು ಸರ್ವಶಕ್ತನು ಸರ್ವಂತರ್ಯಾಮಿಯೆ
ಕಾಪಾಡು ಎನ್ನನೆ ನೀನು
ಬೀಸು ಗಾಳಿಗೆ ದಿಕ್ಕು ತೋರಿಸೊ ದಿಕ್ಸೂಚಕನೆ
ಭೋರ್ಗರೆವ ಕಡಲ ಅಲೆಗೆ ಸೂತ್ರಧಾರನೆ
ಅಗ್ನಿ ವಾಯು ವರುಣ ದೇವರ ಅವತಾರನೆ
ಏನು ಮಾಡಲು ಅರಿಯನು ನಾ ಈ ಜಗದಲಿ
ಕಣ್ತೆರೆದು ನೋಡಲು ಬರಿ ಕತ್ತಲೆ ಮನೆ
ಕರುಣಿಸು ಜ್ಞಾನದ ಬೆಳಕನ್ನು
- Irayya Mathad
22 Oct 2015, 07:33 am
ನಾ ಮೊದಲು ಹುಟ್ಟಿದ್ದು ಭೂಮಿಯ ಮೇಲಲ್ಲ
ತಾಯಿಯ ಗರ್ಭದಲ್ಲಿ
ನಾ ಬಿದ್ದಾಗ ನೋವಾದಾಗ ಕೂಗಿದ್ದು
ಆ ದೇವರನ್ನಲ್ಲ ಅಮ್ಮ ಎಂದು
ದುಡ್ಡಿದ್ದ ಮಂದಿ ಸೇರಿಸುವರು ವೃಧ್ದಾಶ್ರಮ
ಬಡ ಮಂದಿ ಖುಷಿಯ ಕೊಡುವರು ಪಟ್ಟು ಶ್ರಮ
ತಾಯಿ ಕಣ್ಣೀರು ಹಾಕಿದರೆ ಬಾಳಿಗಿಲ್ಲ ಬೆಲೆ
ಜನನಿ ಇಲ್ಲದೇ ಹೋದರೆ ನಮಗಿಲ್ಲ ನೆಲೆ
- shiva
21 Oct 2015, 09:34 am
ಪ್ರೀತಿಯ ಹಾದಿಯಲಿ
ಮುಳ್ಳು ತುಳಿಸಿ,,
ಕೊಟ್ಟ ಮಾತನು ಮರೆತು,
ನಮ್ಮಿಬ್ಬರ ಪ್ರೀತಿಯನು
ಉಳಿಸಿಕೊಳ್ಳುವಂಥ ಮನಸೇ
ನಿನಗೆ ಇಲ್ಲದ ಮೇಲೆ,,,,
ಕಳೆದುಕೊಂಡೆನೆಂಬ ಹತಾಷೆಯಲಿ
ನಾ ನೊಂದು, ನೆನಪುಗಳನ್ನು
ಅಳಿಸಿಹಾಕುವಂತಹ ಮನಸಿನಲಿ
ನಾ ಬದುಕುತಲಿರಲು,,
ಮತ್ತೆ ನನ್ನನ್ನೇ ನಿಂದಿಸುವೆ
ನಿನದೆಂತಹ ಕಲ್ಲು ಹೃದಯ,,
- ನಿಶಾ ರೂಪ
21 Oct 2015, 03:48 am
ಕಾವ್ಯ ಪ್ರಯೋಗಕ್ಕೆ
ಎಂದು ಲಗಾಮು ಹಾಕಲಾಗದು
ರಮ್ಯ ಪ್ರಯಾಗದಲ್ಲಿ
ಮಿಂದೆದ್ದು
ಪಾವನವಾಗುವಂತೆ ಮಾಡುವ
ಖಾಲಿ ಹಾಳೆಯ ಮೇಲಿನ
ಲೇಖನಿಯ ನಿರಂತರ
ಯಾತ್ರೆ ಅದು
- ರವಿಕುಮಾರ್ ಎಂ ಜಿ
19 Oct 2015, 06:39 am