Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕನ್ನಡದ "ಕೇಸರಿ"

ಮಿಂಚಿನ ಓಟದಂತೆ
ಸಿಡಿಲಿನ ಆರ್ಭಟದಂತೆ
ಸೂರ್ಯನ ಪ್ರಕಾಶದಂತೆ
ಸಮುದ್ರದ ಅಲೆಯಂತೆ
ಸಹ್ಯಾದ್ರಿ ಬೆಟ್ಟದ ದಿಟ್ಟತೆಯಂತೆ
ಗರ್ಜಿಸು ನೀನು ಕನ್ನಡದ 'ಕೇಸರಿ'ಯಂತೆ

- Irayya Mathad

03 Nov 2015, 12:25 am

ಕರುಣೆಯ ಕಡಲು ಕನ್ನಡ

ಕನ್ನಡ ಇದು ಕನ್ನಡ ನರನಾಡಿಯಲ್ಲೂ ಕನ್ನಡ ನನ್ನುಸಿರಿನಲ್ಲೂ ಕನ್ನಡ
ಬೆಳೆ ಸಿರಿಯಲ್ಲೂ ಕನ್ನಡ ನಡೆನುಡಿಯಲ್ಲೂ ಕನ್ನಡ

ವಿಷವನ್ನರಗಿಸಿ ಅಮೃತ ನೀಡೊ ಮಾತೆ ಮಧುರ ಕನ್ನಡ
ಜಾತಿ ಮತಗಳ ಮೀರಿ ನಡೆಯುವ ಪ್ರೀತಿ ಸ್ನೇಹದ ಕಂಕಣ ಬೆಸೆಯುವ ಒಂದೇ ಮತವು ಕನ್ನಡ

ಉಸಿರ ಉಸಿರಲಿ ನೀತಿ ಕಲಿಸುವ ನನ್ನ ನುಡಿಯೆ ಕನ್ನಡ
ಸುಮಧುರ ವಾಣಿಯ ಮುದವನು ನೀಡುವ ಸವಿನುಡಿಯೆ ಕನ್ನಡ

ಮೈಮನ ಮರೆಯಿಸಿ ಮನವನು ಪುಳಕಿಸಿ ನಾಕವ ತೋರಿಸೊ ಕನ್ನಡ
ಅಂದದ ನಾಡಿದು ಚೆಂದದ ಬೀಡಿದು ಗಂಧದ ಗುಡಿಯಿದು ಕನ್ನಡ

ಶಾಂತಿ ಸೌಹಾರ್ದ ಪ್ರೀತಿಗೆ ಮುನ್ನುಡಿ ಬರೆದಿಹ ಕನ್ನಡ
ಶರಣ ದಾಸರ ಹಿತವಚನಕ್ಕೆ ಮೇರು ನುಡಿಯೆ ಕನ್ನಡ

ಭೂದೇವಿಯ ಸೌಂದರ್ಯಕ್ಕೆ ಹೊನ್ನಿನ ಮುಕುಟವೆ ಕನ್ನಡ
ಅಲಂಕಾರದಿ ತ್ರಿಪದಿ ಷಟ್ಪದಿ ಪದಗಳ ರಾಶಿಯೇ ಕನ್ನಡ

ಅನ್ಯರೆನ್ನದೆ ಅಂಗುಲ ನೀಡಿ ತಲೆ ಕಾಯುವುದು ಕನ್ನಡ
ಸಿರಿತನವೆಂಬುದು ಮನದಿಂದರಿತು ಬೆರೆತು ಬಾಳುವ ಕನ್ನಡ

ಕಪ್ಪು ಮಣ್ಣಿನ ಕಬ್ಬಿನ ರಾಶಿಯ ಕರುಣೆಯ ಮೂರ್ತಿಯು ಕನ್ನಡ
ಸಾವಿನಲ್ಲಿಯೂ ನೋವಿನಲ್ಲಿಯೂ ಒಳಿತನು ಬಯಸುವ ಕನ್ನಡ

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
ಜೈ ಕರ್ನಾಟಕ ಮಾತೆ








- Irayya Mathad

03 Nov 2015, 12:18 am

ನಿನ್ನ ನೆರಳು ನನ್ನ ಬಾಳು

ನೀ ಬಂದೆ ಕತ್ತಾಲಾದ ಜೀವನದಲ್ಲಿ
ಪ್ರೀತಿಯಾ ಬೆಳಕು ಚೆಲ್ಲಿ
ನಿನ್ನ ನಗೆಯ ಹೊಳಪು
ತಂದಿದೆ ನನ್ನಗೆ ಹೊರುಪು
ಸಾಧಿಸಲು ನಿರ್ಧರಿಸಿರುವೆ ನಾ
ಪ್ರೀತಿಯ ಬಾಳ್ವೆನಾ ನಡೆಸೋಣಾ
ಪ್ರೀತಿಯಿಂದ ಗೆಲ್ಲೂಣ ಜಗವ

- Shriram

01 Nov 2015, 06:38 am

ಪರಿಹಾರ

ಸಾಲ ಸೊಲ ಮಾಡಿ
ತಿರಿಸಲಾಗದೆ
ಆತ್ಮಹತ್ಯೆಗೆ ರೈತ ಶರಣಾದ!?
ಪರಿಹಾರ ಪಡೆಯಲು
ಆತನ ಕುಟುಂಬದವರು
ಅಲೆದು ಅಲೆದು
ಸುಸ್ತಾಗಿ ಹೈರಾಣದ್ರು!?.

- Satyasagar

30 Oct 2015, 04:38 pm

ಮಾತಿಲ್ಲದೆ

ಕವಿತೆಯ ಒಳಗೊಂದು ಕವಿತೆ
ಕನಸ ಒಳಗೊಂದು ಕನಸು
ಮೌನದೊಳಗೊಂದು ಮೌನ
ಏಕಾಂಗಿಯ ಬದುಕಲೊಂದು ಏಕಾಂಗಿಯ ಜೊತೆಗಾರ
ಕವಿತೆಗೆ ಸಾವಿರ ಪದಗಳ ಮಾಲೆ
ಕನಸಿಗೆ ಸುಂದರ ಕ್ಷಣಗಳ ಬಣ್ಣ
ಮೌನಕ್ಕೆ ಮಾತಿಲ್ಲದೆ ಸಾಗಿದೆ ಹೃದಯದೊಳಗಿನ ಹೃದಯ
ಮೌನ

- ರವಿಕುಮಾರ

30 Oct 2015, 11:07 am

ಚಾಟ್ಸ್ ಚಿಟ್ಟೆಗಳು

ಓ ತಳ್ಕಂಬಳ್ಕ ನೋಡೋ ಮಗಾ
ಹೇಳೊರಿಲ್ಲ ಕೇಳೊರಿಲ್ಲ ಮಾಡ್ತಾರಲ್ಲ ಮೋಡಿಯನ್ನ
ಅರೆಬರೆ ಚಡ್ಡಿ ಹಾಕ್ತಾರಲ್ಲ ಹಾಳಾಗೊಯ್ತು ಸಂಸ್ಕೃತಿಯಲ್ಲ ಯಾಕೋ ಮಗಾ ಕುರಿಯಂಗೆ ಮಾಡ್ಬಟ್ರಲ್ಲ

ಮೈತುಂಬ ಮೇಕಪ್ ಹಾಕಿ ನನ್ನೆ ನೋಡು ಅಂತಾರಲ್ಲ
ಕಣ್ಣಿನ ತುಂಬ ಕಾಡ್ಗೆ ಹಚ್ಚಿ ದೃಷ್ಟಿ ಬೊಟ್ಟು ಇಡ್ತಾರಲ್ಲ
ಹುಡುಗುರ ಮನಸ್ಸು ಸೆಳೆಯೊಕಿನ್ನು ಏನೇನೋ ಮಾಡ್ತಾರಲ್ಲ

ರಾತ್ರಿಯಾದ್ರು ಕಣ್ಮುಚ್ಚಲ್ಲ ಮೋಬೈಲ್ ಲೈಟು ಆಪಾಗೊಲ್ಲ
ಅಪ್ಪ ಅಮ್ಮಗೆ ಹೇಳ್ತಾರಲ್ಲ ಕಾಗೆ ಹಾರಿಸೊ ಮಾತುಗಳನ್ನ
ದಿನಾವೆಲ್ಲಾ ಕೊಲ್ತಾರಲ್ಲ ವಾಟ್ಸಪ್ ಅನ್ನೋ ಚಾಟ್ ಬೂತಿಂದ

ಗೆಜ್ಜೆ ಇಲ್ಲದ ಹೆಜ್ಜೆ ಇಟ್ಟು ಡೇಟಿಂಗ್ ಅಂತಾ ಹೋಗ್ತಾರಲ್ಲ
ಪಾಕೆಟ್ ಮನಿಗೆ ಕನ್ನ ಹಾಕಿ ಕೈಯಲ್ಲಿ ಚಂಬು ಇಡ್ತಾರಲ್ಲ
ಖಾಲಿಯಾದ ಪಾಕೆಟ್ ನೋಡಿ ಪಕ್ಕದ ಕುರಿಗೆ ಕಾಳಾಕ್ತಾರೆ
ಯಾಕೋ ಮಾಗಾ ಕುರಿಯಂಗೆ ಮಾಡ್ಬಿಟ್ರಲ್ಲ

- Irayya Mathad

29 Oct 2015, 06:32 am

ಕಣ್ಣೋಟದ ಕಣ್ಮನಿ

ಮಿರಿ ಮಿರಿ ಮಿಂಚುತ ತಂಗಾಳಿ ಚಿಮ್ಮುತ
ನನ್ನೆದೆ ತೋಟಕೆ ನೀ ಬಂದೆ

ನೂರೊಂದು ಆಸೆ ಚಿಗುರುತಿದೆ ಈಗ
ತೋಳಲ್ಲಿ ನೀ ನನ್ನ ಸೋಕಿದಾಗ

ಮನಸುಗಳ ತುಡಿತ ಹೃದಯಗಳ ಬಡಿತ
ಒಂದಾಗಿ ಗೀಚಿದೆ ಹೊಸ ಕವಿತೆಯ

ಇರುಳಿನ ಇಬ್ಬನಿ ತಾಕುತ ಮನಕೆ
ಅರಳುತಿದೆ ತಾವರೆ ಮೊಗದಲ್ಲಿ ಕಾಣೆ

ಗಂಧದ ನಾಡಲ್ಲಿ ಗಿರಿ ಕನ್ಯೆ ನೀನಾಗಿ
ಮಲೆನಾಡ ಮುಡಿಗೆ ಮಲ್ಲಿಗೆ ಹೂವಾದೆ

ಚೆಲುವಿನ ಲೋಕಕೆ ಚಿನ್ನದ ಗೊಂಬೆಯಾಗಿ
ಲಗ್ಗೆ ಇಟ್ಟೆಯಾ ನನ್ನ ಬಾಳ ಸಂಗಾತಿ ನೀನಾಗಿ....

- Irayya Mathad

27 Oct 2015, 05:07 pm

ಕನಸು

ಕಾಡಬೇಡ ಗೆಳತಿ ನನ್ನ
ಕನಸಲ್ಲೂ ಇನ್ನು
ನಾ ಕಾಣಬೇಕು
ಗುರಿ ಮುಟ್ಟುವ ಕನಸನ್ನು

- shiva

25 Oct 2015, 05:50 pm

ಸತ್ತ ಪ್ರೀತಿ

ಕಳೆದು ಹೋದ ಪ್ರೀತಿಯು
ಹತ್ತಿರ ಬಂದಿದೆ ಇಂದು
ಅಳಲು ಆಗದೆ ನಗಲು ಆಗದೆ
ಬೆಂದು ಹೋದೆನು ಇಂದು

ಬಹಳ ಖುಷಿಯಿತ್ತು ಅಂದು
ನೀನು ಪ್ರೀತಿ ಮಾಡಿದೆ ಎಂದು
ಮತ್ತೆ ಬಂದಿದೆ ಸತ್ತ ಪ್ರೀತಿಯು
ಒಪ್ಪಿಕೊಳ್ಳುವ ಮನಸಿಲ್ಲ
ನಿನ್ನ ನೆನಪಲ್ಲೆ ಕಳೆಯುವೆ ಎಂದೆಂದೂ ಎಂದೆಂದೂ

- shiva

24 Oct 2015, 01:58 pm

ಮಳೆಯಲ್ಲಿ ತಣಿದ ಮನ

ದೇವರ ವರವೋ ಪೂರ್ವದ ಪುಣ್ಯವೋ
ತಣಿದಾ ಮನವು ಮಳೆಯಲ್ಲಿ ನೆನೆದು !! ಪ !!

ಕಾನನದಂಚಿಗೆ ಮಿಂಚಿನ ಓಟವೋ
ಸಿಡಿಲಿನ ಆರ್ಭಟವೋ ನನ್ನೆದೆ ಗೂಡಿನಲ್ಲಿ
ಪುಟಿದಾ ಮಳೆ ಹನಿಯು ನನ್ನನೆ ಸೋಕಲು

ಧಾವಿಸಿ ಬರುತಿಹ ಗುಡುಗಿನ ಸರಮಾಲೆ
ಚಾಮರ ಬೀಸುತ ತಣ್ಣೀರೆರೆಚುತ
ನಾಚಿದೆ ತಂಗಾಳಿ ನಸು ನಗೆ ಬೀರುತ

ವನ್ಯಕುಲ ಜೀವಿಯೋ ಹಕ್ಕಿಯ ರಾಗವೋ
ಮೇಘದ ಸಂದೇಶ ತಂದಿದೆ ಸಂತೋಷ
ಪುಳಕಿತ ನನ್ನ ಮನವು ಕುಣಿದಾಡಿದೆ ಈಗ

ಬೊಂಬೆಯಾಟ ಆಡಿಸುವ ಸೂತ್ರಧಾರಿ ನೀನಾದೆ
ನಟಿಸುವ ಪಾತ್ರಧಾರಿ ನಾನಾಗಿಹೆನು
ಕಳೆದು ಹೋದೆ ನಾನು ಕಲ್ಪನೆಯ ಲೋಕದಲ್ಲಿ.....

- Irayya Mathad

24 Oct 2015, 09:21 am