ಮಧುರ ಮಾತಿಗೆ ಮಾರುಳಾದೆ
ಬೆಳದಿಂಗಳ ಬೆಳಕಿನ ಚಿತ್ತಾರ ನೀನಾದೆ
ಪೂರ್ಣ ಚಂದ್ರನ ಕಾಂತೀಯ ಹೂವಾಗಿ
ಬಂಗಾರದೆಲೆಯ ಮೇಲೆ ನಸು ಇಬ್ಬನಿ ನೀನಾದೆ
ಕಾಣದ ಕಂಗಳಿಗೆ ದೇವತೆ ನೀನಾದೆ
ಪ್ರೀತಿ ಮಮತೆಯ ಸಾಕಾರ ರೂಪವಾದೆ
ತಂಗಾಳಿಯ ತಿಳಿ ಕಂಪಿನ ನಾದ ನೀನಾದೆ
ಪ್ರೀತಿಯ ಅರಮನೆಗೆ ಮಹಾರಾಣಿ ನೀನಾದೆ
ಅರಿಯದೆ ಕದ್ದ ನನ್ನ ಹೃದಯಕೆ ಒಡತಿ ನೀನಾದೆ
ಬಂದೆಯಾ ನನ್ನ ಕನಸಿನ ರಾಣಿ ನೀನಾಗಿ ಓ ರತಿಯೆ....
೧) ವಿಷವೆರೆದವರಿಗೆ ಹಾಲೆರೆಯುವ ಗುಣದವರು
೨) ನಿರಾಶ್ರಿತರಿಗೆ ಆಶ್ರಯದಾತರು
೩) ಪರಕೀಯರಿಗು ಪರಮಾನ್ನ ನೀಯುವವರು
೪) ತಾಯ್ನಾಡಿಗಾಗಿ ತಲೆ ನೀಡುವವರು
೫) ದಾನ ಧರ್ಮದಲ್ಲಿ ಕರ್ಣನನ್ನೆ ಮೀರಿಸುವವರು
೬) ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ, ಅಡಿಯಿಂದ ಮುಡಿಯವರೆಗೂ ಹಿಂದೂಸ್ತಾನದ ಹಿರಿಮೆಯನ್ನು ಮೆರೆದವರು
೭) ವಿಶ್ವದಾದ್ಯಂತ ವಿಶ್ವಮಾನವತೆಯ ಮೆರೆದವರು
೮) ವಿಶ್ವ ಭಾಷಾ ಸಾಹಿತ್ಯದ ಶಿಖರಕ್ಕೆ ಹೊನ್ನ ಕಳಸವ ನೀಡಿದವರು
೯) ವಿವಿಧತೆಯಲ್ಲಿ ಏಕತೆ ಮೆರೆದ ವಿಶ್ವ ಮಾನ್ಯರಿವರು
೧೦) ಸಂಗೀತ ಲೋಕಕ್ಕೆ ಸಾಮ್ರಾಟರನ್ನು ನೀಡಿದವರು
೧೧) ಕಲೆ, ಸಂಸ್ಕೃತಿ, ವಿಜ್ಞಾನ, ತಂತ್ರಜ್ಞಾನಕ್ಕೆ ಆದಿ ಮೂಲ ಇವರು
೧೨) ಸರ್ವ ಧರ್ಮಗಳಲ್ಲಿ ಸಮಾನತೆಯ ಮೆರೆದವರು
೧೩) "ದಯವೇ ಧರ್ಮದ ಮೂಲವಯ್ಯ " ಎಂಬ ವಚನದಂತೆ ಸಕಲ ಚರಾ ಚರ ಜೀವಿಗಳಿಗೆ ಜೀವಾಮೃತವ ನೀಡಿದವರು
೧೪) ಜ್ಞಾನಿಗಳಿಗೆ ಜ್ಞಾನಿಗಳಾಗಿ ಜ್ಞಾನಾಮೃತವ ಹರಡಿದವರು