Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮೊದಲ ತೊದಲು ನುಡಿನೀನು
ನನಗಾಗಿ ನೊಂದು ನಲಿವ ಜೀವನೀನು
ನನ್ನ ನಗುವ ಮೊದಲ ಆನಂದಕಾಂತಿ ನೀನು
ಮಮತೆ ವಾತ್ಸಲ್ಯದ ವಡತೆನೀನು...............
- Prashanth
19 Nov 2015, 01:23 pm
ನಾನಗುವೆ ನ್ನನ ಕನಸುಗಳಿಗೆ ಬಡಗಿ
ಕೊಡುವೆಯ ನಿನ್ನ ನೆನಪುಗಳ
ಕಳೆಯುವೆ ದಿವಸಗಳ ಬಡಗಿಯಾಗಿ
ನೀನಿರುವೆಯ ಜೊತೆ ಮಡದಿಯಾಗಿ............
- Prashanth
19 Nov 2015, 01:13 pm
ಕನ್ನಡಿಯ ಬಿಂಬದಂತೆ
ಮನಸಿನ ಭಾವನೆಯಂತೆ
ಹೃದಯದ ಮಿಡಿತದಂತೆ
ಜೋತೆಗಿರು ನೀ ನನ್ನ ಜೀವದಂತೆ ..........
- Prashanth
19 Nov 2015, 01:02 pm
ಕಂಡಳೆನಗೆ ಕನ್ಯೆ
ತಾವರೆಯಂತಿಹ ಕೆನ್ನೆ
ಅವಳ ನೋಟಕೆ ನಾನಾದೆ ಸೊನ್ನೆ
ಮುಟ್ಟಲು ಹೋದರೆ ಅವಳು ಬರೀ ಮಣ್ಣೇ
- Irayya Mathad
18 Nov 2015, 06:52 am
ಅಮ್ಮ .........ಊರೇನೇ ಅಂದರೂ
ನೀ ನನ್ನ ದೇವರು ...!
ಜ್ಞಾನಕ್ಕೂ ದೊಡ್ಡದು ಮಣ್ಣಿನ ಋಣ
ಪ್ರಾಣಕ್ಕೂ ದೊಡ್ಡದು ತಾಯಿಯ ಋಣ...!
ಓ ಜನನಿ ಜೀವಕ್ಕೆ ಮೂಲ ನೀ
ತ್ಯಾಗಕ್ಕೆ ಕಳಸ ನೀ........!
ಓ ಜನನಿ ಎಲ್ಲಕ್ಕೂ ಮೊದಲು ನೀ
ಪ್ರೇಮಕ್ಕೆ ಕಡಲು ನೀ ......!
ಜಗಕ್ಕೆ ಮುಕ್ಕೋಟಿ ದೇವರು
ನೀ ನನ್ನ ದೇವರು ..........!
ಇಂತಿ ನಿಮ್ಮ ಮಗ
- ಯಲ್ಲು ....!
- ಯಲ್ಲು ಅರವಳ್ಳಿ !
17 Nov 2015, 08:13 am
ಕಣ್ಣೇಂಬ ಆಗಸದಲ್ಲಿ
ಕನಸ್ಸೆಂಬ ಮೋಡಕವಿದು
ಮನಸ್ಸೆಂಬ ಭೂಮಿಮೇಲೆ
ಮಳೆಯಾಗಿ ಸುರಿದಾಗ
ಹೃದಯದಲ್ಲಿ ಮೊಳಕೆ
ಒಡೆಯುವುದೇ ........" ಪ್ರೀತಿ " .!
- ಯಲ್ಲು ಅರವಳ್ಳಿ !
17 Nov 2015, 03:52 am
ನಯನಗಳು ಹುಡುಕುತಿವೆ ಬಾಲೆಯನ್ನು
ಕಾಣದೆ ತತ್ತರಿಸುತ್ತಿದೆ ಮನಸ್ಸು ಇನ್ನು,
ಕಂಡರೆ ಸಾಕು ಕಂಡಂತೆ ಸ್ವಗ್ಗವನ್ನು
ಕಂಡಳು ಬಾಲೆ ಕಂಡವು ನಯನಗಳು
ಸಾಕು ಇಷ್ಟು ಮನಸ್ಸಿಗೆ ಇನ್ನು....
ದೇವು ಹೂಗಾರ್
- devhoogar
16 Nov 2015, 06:45 pm
ಆಟೋ ಬಂತೊಂದು ಆಟೋ
ಯಾವೂರ ಆಟೋ
ಬೆಂಗಳೂರಿನ ಆಟೋ
ಕಲ್ಲು ಮರಳು ಏರಿತು
ಸೊಂದಿಗೊಂದಿ ತೂರಿತು
ಕಾರುಗಳನ್ನು ಹಿಂದೆ ಹಾಕಿತು
ಪೊಂ ಪೊಂ ಹಾರ್ನ್ ಮಾಡಿತು
ಎಂಥಹ ಟ್ರಾಫಿಕ್ ಇದ್ರೂನು
ಜೋರಾಗಿ ಹೊರಟೆ ಹೋಯಿತು
ಒಂದೇ ಚಕ್ರಕ್ಕೆ ಜಾಗ ಸಿಕ್ಕಿದರಾಯ್ತು
ಅಲ್ಲೇ ಆಟೋ ಮುಂದೆ ಹೋಯ್ತು
ಆಟೋ ಪ್ರಯಾಣ ಅಂದ್ರೆ ಆಯ್ತು
ಚಾಲಕನ ಕೈಗೆ ಪ್ರಾಣ ಕೊಟ್ಟಹ್ಯಾಂಗ್ ಆಯ್ತು
ಭೀತಿಲಿ ಸುಮ್ಮನೆ ಕೂತಿರಬೇಕು
ಅವನು ಹೇಳಿದಷ್ಟು ಬಿಲ್ ತೆರಬೇಕು
ನಾವ್ ಹೋಗೋ ಜಾಗಕ್ಕೆ ಬರೋದಿಲ್ಲ ಯಾರೂನು
ಆಟೋ ಹೋಗೋ ಜಾಗಕ್ಕೆ ಹೋಗ್ಬೇಕು ನಾವೂನು
ಬಸುರಿಯರಿಗೆ ಹೆರಿಗೆ ಆಗೋಯ್ತು
ಹಲವರಿಗೆ ಹೃದಯ ಬಡಿತ ನಿಂತೇ ಹೋಯಿತು
ಸೂರ್ಯ ಮುಳುಗಿದರೆ ಮೀಟರ್ ಡಬಲ್
ಬರೋದೆ ಇಲ್ಲ ಕರೆದರೆ ಸಿಂಗಲ್
ಅದ್ರೂನು ಅದೇ ನಮ್ಮ ನೆಚ್ಚಿನ ಸಂಗಾತಿ
ಮೂರೇ ಚಕ್ರದ ಮಾಯಗಾತಿ
- ಘಾಟ್ vidya
16 Nov 2015, 06:11 pm
ಅಳಿದ ಮೇಲೆ ಉಳಿದುದೇನೊ
ಹಾರಿ ಹೋದ ಹಕ್ಕಿಗೆ ಗೂಡಿನ ಆಸರೆ ಏನು
ಪ್ರೀತಿ ಅರಳಿ ಮಾಯೆ ಮಾಡಿ
ಹೃದಯದಲ್ಲಿ ವಿಷವು ಕಕ್ಕಿ
ಮೋಸ ಮಾಡಿ ಕಾಣದಾಯಿತೊ
ಕಡಲ ಅಂಚಿನ ದೋಣಿಯಲ್ಲಿ
ಮೀನ ಹಿಡಿಯುವ ಗಾಳದಲ್ಲಿ
ಸಿಲುಕಿದ ನಾನು ಸಿಲುಕಿದೆ ನಾನು
ಮಿಂಚಿನ ಹುಳದಂತೆ ನೀನು
ಕೊಂಚು ಪ್ರೀತಿಯ ನೀಡದೆ
ಪ್ರೀತಿ ಅರಮನೆಗೆ ಕಿಚ್ಚು ಹಚ್ಚಿದೆ ನೀ
ನನ್ನನೆ ನಿನಗೆ ಎರವಲು ಇಟ್ಟೆ
ಪ್ರೀತಿ ಅಕ್ಷಯ ಪಾತ್ರೆ ಕೊಟ್ಟೆ
ಕೊನೆಗೆ ನೀ ನನ್ನ ಒಂಟಿ ಮಾಡಿಟ್ಟೆ....
- Irayya Mathad
15 Nov 2015, 05:42 am
ಕಂಜಸಖನ ಕಣ್ಣಿನ ತೇಜದಂತೆ
ಚಂದಿರನ ಮುಗ್ಧ ನಗುವಿನಂತೆ
ಕಮಲದ ಕಾಂತೀಯ ಕುಡಿಯಂತೆ
ಹುಣ್ಣಿಮೆಯ ಬೆಳಕಿನ ದೀಪದಂತೆ
ಬಾನಾಡಿಯಲ್ಲಿ ತೇಲಾಡುವ ಬೆಳ್ಳಕ್ಕಿಯಂತೆ
ಕಾಮನಬಿಲ್ಲಿನ ಬಣ್ಣದೋಕುಳಿಯಂತೆ
ವಸಂತ ಮಾಸದಿ ಹಾಡುವ ಕೋಗಿಲೆಯಂತೆ
ನನ್ನೆದೆಯಲಿ ಬೀಸಿದ ಪ್ರೀತಿಯ ತಂಗಾಳಿಯಂತೆ
ಸೌಂದರ್ಯವೆಂಬ ಇಂದ್ರಜಾಲದ ಮಂತ್ರದಂತೆ
ಕಾಡದಿರು ಕನಸಲಿ ನನ್ನ ದೇವಲೋಕದ ಕನ್ಯೆಯಂತೆ
- Irayya Mathad
13 Nov 2015, 09:04 am