Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕೆಲವೊಮ್ಮೆ...

ಕೆಲವೊಮ್ಮೆ ಬೇಜಾರಾದಾಗ, ಏನೂ ತಿಳಿದಿದ್ದಾಗ...
ನೋವು ಮನವ ಜಡವಾಗಿಸಿ, ಮಂಪರಿಗೆ ತುತ್ತಾದಾಗ...

ನಿನ್ನ ಸುಳ್ಳುಗಳವು, ನಿನ್ನ ಕಟ್ಟಿ ಹಾಕಿಹವು...
ನಿನ್ನ ಕ್ಲಿಷ್ಟ ಸತ್ಯಗಳು, ನಿನ್ನ ಒಡೆದು ಹಾಕುವವು...

ಆದರೂ ಆ ನೋವೇ ಸತ್ಯ, ಅದರಲ್ಲೆ ಅಡಗಿದೆ ಅದರ ಮಹತ್ವ...

ಕೆಲವೊಮ್ಮೆ...

- ಮನರಂಗ

23 Nov 2015, 07:10 am

ಮಳೆಯಲ್ಲಿ ಮನವೂ ಮುದ್ದಾಗಿದೆ

ಮಳೆಯಲ್ಲಿ ಮನವೂ ಮುದ್ದಾಗಿದೆ,
ನಿನ್ನ ಅಪ್ಪುಗೆಯೊಂದನು ನಾ ಬಯಸಿದೆ.

ಇಳಿ ಸಂಜೆಯ ತಾಂಗಾಳಿಯಲ್ಲಿ,
ನಿನ್ನಾ ಕೈ ಹಿಡಿದು ನಡೆಯುವಾಸೆ.

ಏನೆ ಬರೆಯ ಹೋದರು,
ನಿನ್ನಾ ಚಿತ್ರಾವಾ ಬಿಡಿಸುವಾಸೆ.

ನಾ ಆಗಾಲೆ ಕಟ್ಟಿರುವೆ ಕನಸೊಂದನು,
ನಿನ್ನೊಡನೆ ಸಾಗುವ ನನ್ನಾ ಬದುಕೊಂದನು.

ಆಡಂಭರದ ಅರಮನೆಯ ರಾಣಿಯು ನಾನಲ್ಲ,
ನೀನ್ನಾ ಕಣ್ಣಾ ಸನ್ನೆಯ ಪಾಲಿಸುವ ಪ್ರೀಯತಮೆಯು ನಾನು..

- ವಿನುತ ಕಿರಣ್ ಗೌಡ

23 Nov 2015, 06:45 am

ಪ್ರೀತಿ

ಬೀಸುವ ಗಾಳಿಯ ಹಿಡಿಯುವೆಯ?
ಗಾಳಿಯಲ್ಲಿ ತೇಲಿಬರುವ ಎಲೆಗಳ ಎಣಿಸುವೆಯ?
ರಾತ್ರಿಯ ಆಗಸಾದಿ
ತಾರೆಯಾ ಎಣಿಸುವೆಯ?
ಎಣಿಸಿನೋಡು ನೀನು,
ಎಣಿಸಿ ಲೆಕ್ಕವ ಹೇಳು ನನಗೆ ನೀನು,
ಎಣಿಸಲಾಗದೆ ಕುಳಿತರೆ
ನೀನು,
ಪ್ರೀತಿಸುವೆ ಎಂದು ಹೇಳುವೆ ಅದರಸ್ಟು ಎಂದು ನಾನು.
ಅಳೆಯಲಾಗದ ಪ್ರೀತಿಯ ನೀ ಅಳೆಯುವೆಯ,
ಉಸಿರ ನೀಡುವ ಪ್ರೀತಿಯ ನೀ ಬಿಟ್ಟು ಹೋಗುವೆಯ,
ಬಂದನದಲ್ಲಿ ಇರಿಸಿರುವೆ ನಾ ನಿನ್ನ,
ಹೃದಯವೆಂಬ
ಕೋಟೆಯ ಒಡೆದು ನೀ ಹೋಗುವೆಯ ಚಿನ್ನ?
ಆಗಸದಷ್ಟು ಪ್ರೀತಿಯ ಹೊತ್ತು ಕಾದಿರುವೆ,
ಉಸಿರು ನಿಲ್ಲುವವರೆಗೂ ನಿನ್ನೊಂದಿಗೆ ನಾನಿರುವೆ,
ಪ್ರೀತಿ ಇಂದ ನಾ ಇಲ್ಲಿ ಇರುವೆ,
ನಿನ್ನ ಮನದಲ್ಲಿ ಕುಳಿತು ನಾ ನಲಿಯುತ್ತಿರುವೆ.

- ವಿನುತ ಕಿರಣ್ ಗೌಡ

23 Nov 2015, 03:03 am

ನಿನ್ನ ನಶೆ

ಅರ್ಥವಿರಲಾರದು ನಿನ್ನಲ್ಲಿ
ಇವತ್ತು ನನ್ನ ರೋದನೆಗಳಿಗೆ,
ನಾನಂತು ನಂಬಿರುವೆ
ಕಾಲನ ಕಾಲಜ್ನಾನದಲ್ಲಿ.
ಬರಬಹುದು ನೀ ನನ್ನತ್ತ
ನಿನ್ನ ನಶೆ ಇಳಿದು
ಮಧ್ಯರಾತ್ರಿಯ ಬಟಾಬಯಲಿನಲ್ಲಿದ್ದಾಗ.

- chandrakanth

22 Nov 2015, 09:16 pm

ರಕ್ಷಾ ಕವಚ

ನೀನೊಂದು ದಿನ ಬರಬಹುದು
ಎನ್ನತ್ತ ಕೈಚಾಚಿ ;
ಬಾಜಾರದಲ್ಲಿ ನಿನ್ನ ಮೇಲೆ
ಬೋಲಿ ಹಚ್ಚುವರಿಲ್ಲದಿದಿದ್ದಾಗ.

ಇದ್ದರೂ ಆವತ್ತು ನಾ ನಿನ್ನ ವಾಸನೆಗಳಾಚೆ,
ಬಳಸಬಹುದು ನಾ ನಿನ್ನ ತೋಳ್ಗಳ
ನಿನ್ನ ಸಂತೋಷಕ್ಕೆ.

ನನಗಾದ ಗಾಯಕ್ಕೆ ಆವತ್ತು ನೀ
ಮುಲಾಮಂತು ಆಗಲಾರೆ,
ನಿನಗಾಗದಿರಲೆಂದು ಗಾಯ ಬೆಚ್ಚಗಿಸುವೆ
ನಿನ್ನ ರಕ್ಷಾ ಕವಚದಂತೆ.

- chandrakanth

22 Nov 2015, 09:15 pm

ಬೇಕಿಲ್ಲ

ನೀನಿರುವಾಗ ಮನಸು ಚಡಪಡಿಸಬೇಕಿಲ್ಲ,
ಕಿವಿ ನಿಮಿರಿಸಬೇಕಿಲ್ಲ,
ತೃಷೆ ತೀರಿಸಬೇಕಿಲ್ಲ.
ಹಸಿವು ಹಿಂಗಿಸಬೇಕಿಲ್ಲ.
ನಾಳೆ ಮೇಳೈಸಬೇಕಿಲ್ಲ.
ಜೀವನ ಅರ್ಥೈಸಬೇಕಿಲ್ಲ.

- chandrakanth

22 Nov 2015, 09:11 pm

ಓ ಮರುಳೆ

ಎಂಥಕನಮ್ಮಿ ಇದು ಏನ್ ಕನಮ್ಮಿ ಇದು
ಮುದಿ ವಯಸ್ಸಾಯಿತೆ ಮುರುಕಲಾಯಿತೆ ದೇಹ

ಹದಿವಯಸ್ಸಾಗೆ ಅಟ್ಟಹಾಸದಿ ಮೆರೆದು
ಕಾಣದಂತಾಯಿತೆ ಕಣ್ಣು ಪ್ರೀತಿಸುವ ಜನರನ್ನ

ನನ್ನವರು ತನ್ನವರೆನ್ನೊ ಕರುಳಿಲ್ಲದಂತಾಗಿ
ಮದ ತುಂಬಿತೋ ಮನದಲ್ಲಿ ಮದ ತುಂಬಿತೋ

ಹಣದ ಭೂತ ಬಡಿದು ಹಣೆಬರಹವು ಹಾಳಾಯ್ತು
ದರ್ಜನರ ಸಂಗದಿಂದ ದೂರವಾಯಿತೋ ಧ್ವನಿಯು

ತನ್ನವರಿಗೆಲ್ಲ ಬೇಸರವಾಗಿ
ಹೊತ್ತ ಭೂಮಿಗೆ ಇಂದು ಹೊರೆಯಾಯಿತೋ

ತಂದೆ ತಾಯಿಯನ್ನು ನೋಯಿಸಿದ ಈ ಜೀವ
ಮಸಣದ ಹಾದಿಯ ಹಿಡಿಯಿತು ಓ ಮರುಳೆ..

- Irayya Mathad

21 Nov 2015, 02:49 pm

ನಿನ್ನೊಡನಿದ್ದಾಗ


ಕನಸೇ ನೀ ಎಲ್ಲವ ನೆನಪಿಸಿದಾಗ
ನಿನ್ನೋಡನಾಟದ ದಿನಗಳು ಮುದ ನೀಡಿದಾಗ

ನೆನಪೆಲ್ಲ ಎಂದೂ ಕನಸಲ್ಲ ಎಂದು ನೀ ನುಡಿದಾಗ
ಸವಿ ಸವಿ ನೆನಪು ಸದಾ, ನಿನ್ನೊಡನಿದ್ದಾಗ

- ಘಾಟ್ vidya

21 Nov 2015, 11:03 am

ನಿನ್ನೊಡನಿದ್ದಾಗ


ಕನಸೇ ನೀ ಎಲ್ಲವ ನೆನಪಿಸಿದಾಗ
ನಿನ್ನೋಡನಾಟದ ದಿನಗಳು ಮುದ ನೀಡಿದಾಗ

ನೆನಪೆಲ್ಲ ಎಂದೂ ಕನಸಲ್ಲ ಎಂದು ನೀ ನುಡಿದಾಗ
ಸವಿ ಸವಿ ನೆನಪು ಸದಾ, ನಿನ್ನೊಡನಿದ್ದಾಗ

- ಘಾಟ್ vidya

21 Nov 2015, 10:35 am

ನಿನ್ನಡನಿದ್ದಾಗ

ಕನಸೇ ನೀ ಎಲ್ಲವ ನೆನಪಿಸಿದಾಗ
ನಿನ್ನೋಡನಾಟದ ದಿನಗಳು ಮುದ ನೀಡಿದಾಗ

ನೆನಪೆಲ್ಲ ಎಂದೂ ಕನಸಲ್ಲ ಎಂದು ನೀ ನುಡಿದಾಗ
ಸವಿ ಸವಿ ನೆನಪು ಸದಾ, ನಿನ್ನೊಡನಿದ್ದಾಗ

- ಘಾಟ್ vidya

21 Nov 2015, 10:33 am