Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬಣ್ಣದ ಚಿಟ್ಟೆಗಳ ಮೋಜಿನ ಆಟ

ಏತಕೊ ತಮ್ಮ ನಿನಗಿಂತ ಚಿಂತಿ
ನೂರಾರು ಹೂಗಳ ಹಾವಳಿಯ ಸಂತಿ !!ಪ!!

ಬಣ್ಣ ಬಣ್ಣದ ಈ ಚಿಟ್ಟೆಗಳು ಚೆಂದ
ಮುಟ್ಟಲು ಹೋದರೆ ಮುಗಿಲಿನೆತ್ತರ

ಮನಸಿಗೆ ತಲೆಯಿಟ್ಟು ಮಣೆಹಾಕಬೇಡ
ಕಣ್ಮುಂದಿನ ಕತ್ತಲೆ ಕಾಣದಾಗಿತೋ

ಮಾಯದ ಜಿಂಕೆಗೆ ಆಸೆಯ ಪಡಬೇಡ
ಆಸೆಯು ನಿನಗೆ ಕಣ್ಣೀರು ತಂದಿತು

ಹದಿಹರೆಯ ಬಂದಾಗ ಹರಕೆಯು ಹೆಚ್ಚಿತು
ಮೋಹದ ಬಲೆಯು ಮೊಟಕು ಹಾಕಿತು ನಿನ್ನ

ಆರೆರಿದಮ್ಯಾಲ ಮೂರಕ್ಕಿಳಿಯಲಿಲ್ಲ
ಮದನ ಮಲ್ಲನು ನಿನ್ನ ಮನದಲ್ಲಿ ಕಾಡುವನು

ಮೋಹಿನಿಯ ಕಾಮನೆಯು ಕೆರಳಿಸುವುದು ನಿನ್ನ ಮನವ
ಬೆಂಕಿಯ ಜೊತೆ ಸರಸ ಭಸ್ಮದ ಫಲ ನಿನಗೆ...

- Irayya Mathad

28 Nov 2015, 02:51 am

ನಿಶಬ್ಧ...

ಏಳು ಸುತ್ತಿನ ಪರದೆಯ ಕೋಟೆ ಮನದೊಳು
ಒಂದೊಂದೆ ಪದರವ ತಳ್ಳಿ ತಲುಪಲು
ಹುಟ್ಟಿನ ಗುಟ್ಟಿನ ಆ ನಿರಂಜನ ಗರ್ಭಗುಡಿಯೋಳು
ಹೃದಯ ಸಮರದಲಿ ಸೋತ, ರಕ್ತಪಾತದ ಗೋಳು...

- ಮನರಂಗ

27 Nov 2015, 02:59 am

ನೂಲಿಲ್ಯಾಕ ಚೆನ್ನಿ?

ಗಂಡ : ನೂಲಿಲ್ಯಾಕ ಚೆನ್ನಿ ನೂಲಿಲ್ಯಾಕ ಚೆನ್ನಿ ?
ಹೆಂಡತಿ : ಮೊಬೈಲ್‌ ಇಲ್ವೊ ಜಾಣ, ಮೊಬೈಲ್‌ ಇಲ್ವೊ ಜಾಣ.
ಕತೆಗಾರ : ಮೊಬೈಲ ತೆಗಿಸಿ ಕೊಟ್ಟ, ಮೊಬೈಲ ತೆಗಿಸಿ ಕೊಟ್ಟ||

ಗಂಡ : ನೂಲಿಲ್ಯಾಕ ಚೆನ್ನಿ ನೂಲಿಲ್ಯಾಕ ಚೆನ್ನಿ ?
ಹೆಂಡತಿ : ಇಂಟರ್‌ನೆಟ್‌ ಇಲ್ವೊ ಜಾಣ, ಇಂಟರ್‌ನೆಟ್‌ ಇಲ್ವೊ ಜಾಣ.
ಕತೆಗಾರ : ಇಂಟರ್‌ನೆಟ್‌ ಹಾಕಿಸಿ ಕೊಟ್ಟ, ಇಂಟರ್‌ನೆಟ್‌ ಹಾಕಿಸಿ ಕೊಟ್ಟ||

ಗಂಡ : ನೂಲಿಲ್ಯಾಕ ಚೆನ್ನಿ ನೂಲಿಲ್ಯಾಕ ಚೆನ್ನಿ ?
ಹೆಂಡತಿ : ಫೇಸ್‌ಬುಕ್‌ ಇಲ್ವೊ ಜಾಣ, ಫೇಸ್‌ಬುಕ್‌ ಇಲ್ವೊ ಜಾಣ.
ಕತೆಗಾರ : ಫೇಸ್‌ಬುಕ್‌ ಹಾಕಿಸಿ ಕೊಟ್ಟ, ಫೇಸ್‌ಬುಕ್‌ ಹಾಕಿಸಿ ಕೊಟ್ಟ||

ಗಂಡ : ನೂಲಿಲ್ಯಾಕ ಚೆನ್ನಿ ನೂಲಿಲ್ಯಾಕ ಚೆನ್ನಿ ?
ಹೆಂಡತಿ : ವಾಟ್ಸಾಪ್‌ ಇಲ್ವೊ ಜಾಣ, ವಾಟ್ಸಾಪ್‌ ಇಲ್ವೊ ಜಾಣ.
ಕತೆಗಾರ : ವಾಟ್ಸಾಪ್‌ ಹಾಕಿಸಿ ಕೊಟ್ಟ, ವಾಟ್ಸಾಪ್‌ ಹಾಕಿಸಿ ಕೊಟ್ಟ||

ಗಂಡ : ನೂಲಿಲ್ಯಾಕ ಚೆನ್ನಿ ನೂಲಿಲ್ಯಾಕ ಚೆನ್ನಿ ?
ಹೆಂಡತಿ : ಕ್ಯಾಂಡಿಕ್ರಶ್‌ ಇಲ್ವೊ ಜಾಣ, ಕ್ಯಾಂಡಿಕ್ರಶ್‌ ಇಲ್ವೊ ಜಾಣ.
ಕತೆಗಾರ : ಕ್ಯಾಂಡಿಕ್ರಶ್‌ ಹಾಕಿಸಿ ಕೊಟ್ಟ, ಕ್ಯಾಂಡಿಕ್ರಶ್‌ ಹಾಕಿಸಿ ಕೊಟ್ಟ||

ಗಂಡ : ನೂಲಿಲ್ಯಾಕ ಚೆನ್ನಿ ನೂಲಿಲ್ಯಾಕ ಚೆನ್ನಿ ?
ಹೆಂಡತಿ : ನಂಗೆ ಬರೋದಿಲ್ಲ ಜಾಣ, ನಂಗೆ ಬರೋದಿಲ್ಲ ಜಾಣ!
[ಹಳೆಯ ಜಾನಪದ ಹಾಡಿನ ನಕಲು]

- ಶ್ರೀಗೋ.

25 Nov 2015, 04:04 pm

ಕೊಲ್ಲು ಒಮ್ಮೆ ನನನ್ನು…..

ಕೊಲ್ಲು ಒಮ್ಮೆ ನನನ್ನು…..
ತಂಪಾದ ಸವಿ ಹೊತ್ತಿನಲ್ಲಿ,
ರಾತ್ರಿಯ ಕತ್ತಲೆಯ ನಡುವಲ್ಲಿ,
ಬೆಚ್ಚಗೆ ಮಲಗಿಹೆನು ನಾನು,
ನಿದಿರೆಯು ಏಕೋ ಬಾರದು ನನಗಿನ್ನೂ,
ಮನದಲ್ಲಿ ಕೂತು ನೀ ಕಾಡುತ್ತಿರುವೆ,
ಕಣ್ಣ ಮುಚ್ಚಿದರೆ ನೀ ಬರುವೆ,
ನನ್ನಲ್ಲಿ ಮುಗುಳ್ನಗೆಯ ಹೊತ್ತು ತರುವೆ.
ಹೇ ನಲ್ಮೆಯ ನಲುಮೆಯೇ,
ಏಕೆ ನನ್ನ ಕೊಲ್ಲುವೆ ಪ್ರೀತಿಯ ವಿಷವ ಬಿತ್ತಿ,
ತಾಳಲಾರೆನು ಇ ಮಧುರ ನೋವನ್ನು,
ಕಾಣಬಯಸುವೆ ನಿನ್ನದೆ ಕನಸನ್ನು.
ಎಸ್ಟೇ ಸಲ ತಿವೀದರು ನೀನು,
ಜಾಗವಿಹುದು ನನ್ನ ಹೃದಯದಲ್ಲಿ ಇನ್ನೂ.
ಸವಿ ಪ್ರೀತಿಯ ಇರಿತಕ್ಕೆ ಕಾದು ಕುಳಿತಿರುವೆ,
ನಲ್ಲ ಬಾ ಕೊಲ್ಲು ಒಮ್ಮೆ ನನನ್ನು.
ಮನಸು ಕೋರಿದೆ ಜಾಗವನ್ನು,
ನಿನ್ನ ಮನಾದರಾಸಿನಗಲು ಎಂದು.
ರಾಣಿನಾದರೂ ಸವಿಯೆ,
ಕೂಲಿಯಾದರೂ ಸವಿಯೆ,
ಕೊಟ್ಟು ನೋಡು ನೀ ಜಾಗವನ್ನು,
ಮರೆತೇ ಬಿಡುವೆ ನೀನನ್ನು ನೀನು.

- ವಿನುತ ಕಿರಣ್ ಗೌಡ

25 Nov 2015, 02:14 pm

ಮುಗಿಲ ಮೀರಿ.....

ಸಾವಿನಲ್ಲೂ ಜೊತೆಗಿರುವೆ ಎಂದು ಹೇಳಿ ನೂರು ಸಾರಿ.

ಹೋದೆಯಾ ಗೆಳತಿ ನೋಡದೆ ತಿರುಗಿ ಒಂದು ಬಾರಿ..

ಮನ ಮುಗಿಲಲ್ಲಿ ನೀ ಬಿಟ್ಟ ಸುಂದರ ಪಟ ಹಾರಿ ಹಾರಿ..

ಹಾರಿ ಹೋಯಿತೇ ಸಿಗದೆ ಪ್ರೇಮಿಯ ಕೈಗೆ ಮುಗಿಲ ಮೀರಿ.....

#ಕವನಯೋಗಿ

- ಕವನ ಯೋಗಿ

24 Nov 2015, 07:18 pm

ಪ್ರೀತಿ ಎಂದರೆ....?

ಪ್ರೀತಿ ಎಂದರೆ....
ನೋವುಕೊಡೋದಲ್ಲ.
ಇದ್ದ ನೋವನ್ನು ಮರೆಸಿ ಬಾಡಿದ ಜೀವನವನ್ನು ಅರಳಿಸೋದು…!

ಪ್ರೀತಿ ಎಂದರೆ.....
ಉಸಿರುಗಟ್ಟಿಸಿ ಕೊಲ್ಲೋದಲ್ಲ.
ಬದುಕಲು ಉಸಿರುಕೊಡೋದು...!

ಪ್ರೀತಿ ಎಂದರೆ....
ಭಾವನೆಗಳೊಂದಿಗೆ ಆಟವಾಡುವುದಲ್ಲ.
ಭಾವನೆಗಳನ್ನು ಮೂಡಿಸುವುದು…!

ಪ್ರೀತಿ ಎಂದರೆ....
ಪಲಾಯನವಲ್ಲ.
ಮನದ ನೋವಿಗೆ ಹೆಗಲು ಕೊಡೋದು…!

ಪ್ರೀತಿ ಎಂದರೆ....
ಕಣ್ಣೀರು ತರಿಸುವುದಲ್ಲ.
ಕಣ್ಣೀರನ್ನು ಒರೆಸಿ ನಗುಮೂಡಿಸುವುದು…!

ಪ್ರೀತಿ ಎಂದರೆ.....
ದ್ವೇಷಿಸುವುದಲ್ಲ
ಪ್ರೀತಿಸಿದ ಜೀವವನ್ನು ಆರಾಧಿಸುವುದು...!!

- ವಿನುತ ಕಿರಣ್ ಗೌಡ

24 Nov 2015, 04:52 am

ಗೆಳತಿ

ಏನೆಂದು ವರ್ಣಿಸಲಿ ನಿನ್ನ ಒಲವಿನ ಚೆಲುವ.

ಕವಿಯ ಕಲ್ಪನೆಗೂ ಸಿಗದ ಅಂದದ ಮೊಗವ.

ಕಲಾವಿದನ ಕುಂಚದಲೂ ಮೂಡದ ನಿನ್ನ ನಗುವ.

ಬರೆಯಲು ಕುಳಿತೆ ಪದಗಳೇ ಸಿಗುತಿಲ್ಲ ನಾ ಬಡವ..
#ಕವನ ಯೋಗಿ.

- ಕವನ ಯೋಗಿ

24 Nov 2015, 02:47 am

ಓ ಪ್ರೀತಿಯೇ

ನನ್ನ ಪ್ರೀತಿಯನ್ನು
ಎಷ್ಟು ಪ್ರೀತಿಸುವೆನೆಂದು
ಹೇಗೆ ಹೇಳಲಿ?

ನಾಲಿಗೆಗೆ ಪ್ರೀತಿ ತಿಳಿಯದು,,,,,,,,,,,,,,

ಹೃದಯಕೆ ಮಾತು ಬಾರದು,,,,,,,,,,,

- ವಿನುತ ಕಿರಣ್ ಗೌಡ

23 Nov 2015, 11:06 am

ಓ ಪ್ರೀಯತಮೆ

ಮನ ನೊಂದಾಗ ಮನಸ್ಸಿಗೆ ಕಾಣುವುದು ನೀನೆ
ಕಣ್ಣಲ್ಲಿ ಕಂಬನಿ ತುಂಬಿದಾಗ ಕಣ್ಣ ತುಂಬುವುದು ನೀನೆ
ಉಸಿರು ಬಿಗಿಯಾದಾಗ ಬಿಸಿಯುಸಿರಾಗಿ ಬರುವುದು ನೀನೆ
ಹೃದಯ ಬಡಿತ ಹೆಚ್ಚಾದಾಗ ನೆನಪಾಗುವುದು ನೀನೆ
ಮಾತು ನಿಂತು ಮೌನವಾದಾಗ ಮಧುರ ಮಾತಾಗಿ ಬರುವುದು ನೀನೆ
ದೇಹ ಸೋತು ಸೊರಗಿ ನಿಂತಾಗ ಆಧಾರವಾಗುವುದು ನೀನೆ
ಸವಿಯಾದ ಮಾತಾಗಿ ಮುತ್ತಿನ ಮಣಿಯಾಗಿ ನನ್ನ ಮನದರಮನೆಯಲ್ಲಿ ಮನೆಮಾಡಿ ನಿಂತ ಕಳ್ಳಿ ನೀನೆ
ಓ ನನ್ನ ಚೆಲುವೆ ಓ ನನ್ನ ಚೆಲುವೆ.....

- Irayya Mathad

23 Nov 2015, 07:24 am

ಜೇಡರ ಬಲೆ

ಕಟ್ಟುತ್ತ, ಕೂಡುತ್ತಾ...
ಹೆಣೆಯುತ್ತಾ, ಹೆಣಗುತ್ತಾ...
ಅರಸುತ್ತಾ, ಆರಿಸುತ್ತಾ...
ಬೇಡನಾದ ಜೇಡ...

ಕೂಡುತ್ತಾ, ಕಟ್ಟುತ್ತಾ...
ಹೆಣಗುತ್ತಾ, ಹೆಣೆಯುತ್ತಾ...
ಆರಿಸುತ್ತಾ, ಅರಸುತ್ತಾ...
ಬೇಡವಾದ ಜೇಡ...

- ಮನರಂಗ

23 Nov 2015, 07:15 am