ಮನುವಾದಿಗಳು
ಏನಾದರೂ ಹೇಳಲಿ
ಹೆಣ್ಣು ಹುಣ್ಣೆಂಬುದುಮಹಾ ತಪ್ಪು...
ಮಹಿಳೆಯೆಂಬುವವಳು ನಿಸ್ಸಾರ ಊಟದಲಿ ಇದ್ದಂತೆ ಉಪ್ಪು...
ಅವಳ ಇರುವಿಕೆ ಅರಿವಾಗುವುದು
ಆಕೆ ದೂರವಾದಾಗ...
ಎಂತಹುದೇ ಇರಲಿ ಭೋಜನ ಸಪ್ಪೆಯೆನಿಸುವುದು
ಉಪ್ಪು ಇಲ್ಲವಾದಾಗ...
ಕೆಲವೊಮ್ಮೆ ಉಪ್ಪು ಹೆಚ್ಚಾಗಬಹುದು ಅಡುಗೆಗೆ ಸಹಿಸಿಕೊಳ್ಳಬೇಕು...
ಕಡಿಮೆಯಾದರೂ ಉಪ್ಪು
ನಾಳೆ ಸರಿ ಹೋಗಬಹುದೆಂದು
ತಿಳಿದುಕೊಳ್ಳಬೇಕು...
ಉಪ್ಪಿಲ್ಲದ ಊಟ ಇದ್ದರೆಷ್ಟು ಇರದಿದ್ದರೆಷ್ಟು..
ಸಂಗಾತಿ ಇಲ್ಲದ ಬದುಕು
ಅಪೂರ್ಣವೆಂದರಿತವರೆಷ್ಟು...?
ನಿನ್ನ ಬೆನ್ನ ಮೇಲೆ ಧೂಳು ಇದೆ ನಾ ವರೇಸಲೇ..,
ನನ್ನ ಕೈ ಬೆರಳು ಖಾಲಿ ಇದೆ ಒಂದು ಕವನ ಅಲ್ಲಿ ಬರೇಯಲೇ..,
ಕಾರಣ ಹೇಳದೇ ಕಾಲ್ಗೆಜ್ಜೆ ಉಡುಗೊರೆ ಕೊಡಲೇ..,
ನಿನ್ನ ಅನುಮತಿ ಕೇಳದೆ ಕೈ ಬಳೆ ತೋಡಿಸಲೇ..,
ನೀ ನಡೆವಾಗ ಬರುವ ಗೆಜ್ಜೆಯ ಸದ್ದನ್ನು ಕೇಳಲು ನಿನ್ನ ಹೀಂಧೇ ಬರಲೇ..,
ನಿನ್ನ ಹೀಂಧೇ ಬರುತ್ತಾ, ನಿನ್ನ ಬೆನ್ನಿನ ಮೇಲಿರೊ ಕವನ ಓದುತ್ತ ಕಾಲ ಕಳೆಯುತೀರುವೇ.....
ಮೆಲಕುತಿರೆ ನಾ ನೆನಪು.....
ಮನದಲ್ಲೇನೊ ಒಂದು ಹೊಸ ಉರುಪು....
ಮುಂಜಾನೆ ಸೂರ್ಯನಿಗೆ ಮೈಯೊಡ್ಡಿ ಬಿಸಿಲುಕಾಯುವಾಸೆ..
ಪೂರ್ಣಚಂದಿರನ ಜೊತೆ ಕನಸುಕಾಣುವಾಸೆ....
ಮತ್ತೆ ಮಗುವಾಗಿ ಜೋಗುಳದ ಕೈತುತ್ತು ತಿನ್ನುವಾಸೆ......