ಆ ನೀರ ನೋಡು ಗೆಳತಿ ,ಆ ನೀರ ನೋಡು. ...
ಆ ನೀರಿನಲ್ಲಿರುವ ಆ ಮೀನಾ ನೋಡು ಗೆಳತಿ,
ಆ ಮೀನಾ ನೋಡು ...
ಆ ನೀರ ಬಿಟ್ಟು ಎಂದೆಂದಿಗೂ ಇರಲಾರದು ಆ ಮೀನು..
ಆ ಮೀನಿನಂತೆ ನ ನಿನ್ನ ಬಿಟ್ಟು ಎಂದೆಂದಿಗೂ ಇರಲಾರೆನು..
ನೀ........ ನನ್ನ ಉಸಿರಿನ ವಡತಿ.
ನಿನಗಾಗಿಯೆ ಕಾಯುತಿರುವೆ ಬರುವೆಯ ನನ್ನ ಬಿಟ್ಟು ಹೋಗುವೆಯ,ಇಷ್ಟ ಪಟ್ಟ ಈ ಪುಟ್ಟ ಹೃದಯದ ನೋವು ತಿಳಿಯದಾಯಿತೆ ನನ್ನ ನೆನಪು ಬಾರದಾಯಿತೆ, ನಿನ್ನ ನೆನಪಲ್ಲೆ ರಾತ್ರಿ ಹಗಲಿನಂತೆ ಕಳೆಯುತಿರುವೆ,ನೀನು ಹಗಲು ಸಹ ರಾತ್ರಿಯಂತೆ ಕಳೆಯುತಿರುವೆ ತಿಳಿಯದಾಯಿತೆ ನನ್ನ ಮನದಾಳದ ನೋವು? ಒಮ್ಮೆಯು ಅನಿಸಲಿಲ್ಲವೆ ನಾ ಹೇಗಿರುವೆನೆಂದು, ಮೊದಮೊದಲು ನಿದ್ರೆ ಮಾಡಲು ಬಿಡಲಿಲ್ಲ,ಈಗ ಮಾಡಬೇಕೆಂದರು ನಿನ್ನ ನೆನಪು ಬಿಡುತ್ತಿಲ್ಲ,ಬಾ ಒಮ್ಮೆಯಾದರು ಈ ಉಸಿರಾಡೊ ಉಸುರಿಗೆ ಉಸಿರು ಕೊಟ್ಟು ಹೋಗು. ಇಂತಿ ನಿನ್ನ ಪ್ರೀತಿಯ ಹುಡುಗ