ತಾವರೆಗಳೆ ನಿನ್ನ ನಯನಗಳಾಗಿ
ಧೃವತಾರೆಯೆ ನಿನಗೆ ಸಿಂಧೂರವಾಗಿ
ಚಂದಿರನೆ ನಿನ್ನ ಅಂದವಾಗಿ
ಶ್ರೀಗಂಧದ ಗೊಂಬೆ ನೀನಾಗಿ
ನನ್ನ ಪ್ರೀತಿ ಪಯಣದಲ್ಲಿ
ಸಪ್ತಪದಿ ತುಳಿದು ನನ್ನ ಬಾಳ ಸ್ನೇಹಿತೆ ನೀನಾದೆ...
ಕೊರಗು ನೀನೇಕೆ ಮೂಡಿಸಬಾರದು ನನ್ನ
ಬಾಳಿನಲ್ಲಿ ಹೊಂಬೆಳಕು
ಸದ್ದಿಲ್ಲದೇ ಮನದಲಿ ಬಂದು
ಕಳೆದುಹೋದ ನೆನಪುಗಳನ್ನು ಮತ್ತೆ ಕೆದಕಿ
ಕಾಲಹರಣ ಮಾಡದೇ ತೋರು ಭರವಸೆಯ ಬೆಳಕು
ಬೇಜಾರಿನ ಗಡಿ ದಾಟಿಸಿ ಸಂತೋಷದ ದಾರಿಯಲ್ಲಿ
ಮುನ್ನಡೆಸುತ್ತಾ
ನನ್ನ ಜೀವನದಲ್ಲಿ ತೋರು ಅಚ್ಚರಿಯ ಬೆರಗು!!!
ಮೂರಂಕಿ ನಾಲ್ಕಂಕಿ ಎಂಟಂಕಿ ಲೆಕ್ಕವ ನಾನೊಲ್ಲೆ
ಅಗೆದಗೆದು ತೆಗೆದ ಸಂಪತ್ತಿನ ಸೂರು ನಾನೊಲ್ಲೆ
ಮಾನ ಸನ್ಮಾನಗಳ ಹೊರೆಯು ನಾನೊಲ್ಲೆ
ಇರುವ ಈ ಮೂರು ದಿನದಲ್ಲಿ ಪರಧನ ಪರಕಾಯದ
ಮೋಹವ ನಾನೊಲ್ಲೆ
ಮಣ್ಣಲ್ಲಿ ಹುಟ್ಟಿ ಮಣ್ಣಾಗಿ ಹೋಗುವ ಈ ದೇಹಕೆ
ಮಣ್ಣಿನ ಋಣ ತೀರಸುವ ಭಾಗ್ಯವ ನೀಡೆನಗೆ ಶ್ರೀ ಹರಿಯೆ ಸಾಕೆನಗೆ ಆಸೆಗಳ ಗಾಳಿ ಗೋಪುರವ...