ಕೆಣಕದಿರು ಕೆದಕದಿರು ಮದುವೆಯ ಸಮಯದಲ್ಲಿ
ಹಾರಿ ಹೋದ ಪ್ರೀತಿಯ ನೆನಪುಗಳ ಮೆಲುಕು
ಹಾಕದೇ ಮರೆತುಬಿಡು
ನಿನ್ನ ಅರಿಯದೇ ನಾನು ಆದೇ
ಪ್ರೀತಿಯಲ್ಲಿ ಅಲೆಮಾರಿ
ಜೀವನದಲಿ ಸೋಮಾರಿ
ಕನಸ್ಸುಗಳ ಬದಿಗಿಟ್ಟು ತೂಗಿದೆ ಜೋಕಾಲಿ
ನೀ ಅಮಾವಾಸ್ಯೆಯಲ್ಲಿ ತೋರಿಸಿದೆ ಚಂದ್ರ
ಬಿಂಬ
ತಮಾಷೆಯಂದು ಕೈ ಕೊಟ್ಟೆ ಚಂಬು
ಕಂಗಳ ನೋಟದಿಂದ ಕಂಗೆಡಿಸಿ
ದಿಕ್ಕು ಅರಿಯದಾಗ ಎಳೆದ ಬರೆ
ಧರೆಯಲ್ಲಿ ಮತ್ತೊಮ್ಮೆ ನಾ ಆಗಬೇmಕು
ಪ್ರೀತಿಯಲ್ಲಿ ದೊರೆ
ಮತ್ತೊಮ್ಮೆ ಹಣಿಯದಿರು ನಿನ್ನ ನಗುವಿನ ಬಲೆ
ಅದು ಎಂದಿಗೂ ನನ್ನ ಮನದಲಿ ಮತ್ತೆ ಅರಳದು
ಪ್ರೀತಿಯ ಅಲೆ
ನಗುವಿನ ಕಿಚ್ಚು ಹಚ್ಚದೇ ಇರು ಸುಮ್ಮನೆ
ನಾ ಕುಳಿತರುವೇ ಹಸಮಣೆಯ ಮೇಲೆ
ಕೊಚ್ಚಿ ಹೋದ ಪ್ರೀತಿ
ಬಿಚ್ಚಿ ಹುಡಕದ ಮನಸ್ಸು
ಹುಚ್ಚು ಹಿಡಿಸದ ಕನಸು
ನಿನ್ನ ಪ್ರೀತಿಯ ನೆನಪಿನ ಸಂಚಿಕೆಯಲ್ಲಿ
ಪುಟ ತಿರುವಲು ಈಗ ನನಗೆ ಅಂಜಿಕೆ
ಇಟ್ಟಿರುವೇ ಸ್ನೇಹದ ಮೇಲೆ ಒಂದಿಷ್ಟು
ನಂಬಿಕೆ..
ಎ ಜಿ ಶರಣ್
ಅಬ್ಬರದ ಭಾಷಣದಿಂದ
ದೇಶದ ದಿಶೆ ಬದಲಿಸಬಹುದು
ಹಸಿವಿಗೆ ಅನ್ನವೇ ಬೇಕು ..
—
ಅವನು ಮಸೀದಿಯೊಳಗೆ,
ಇವನು ಮಂದಿರದೊಳಗೆ,
ಮತ್ತಿಬ್ಬರು ಅವುಗಳ ಗೇಟಿನ ಹೊರಗಡೆ
ಬೇಡುತ್ತಲೇ ಇದ್ದರು..
—
ಮಗ ಬೈಕಿನ ಮೊದಲನೇ
ರೈಡಿಗೆ ಕೂಗಿ ಕರೆಯುತ್ತಿದ್ದ;
ಅಪ್ಪ ಅದರ ಸಾಲದ ಮೊದಲಿನ
ಕಂತಿನ ಲೆಕ್ಕಾಚಾರದಲ್ಲಿ ಮೈಮರೆತಿದ್ದ;
—
ಮೊದಲ ರಾತ್ರಿಯ ಮರುದಿನ
ಈರುಳ್ಳಿಯ ಒಂದೊಂದೇ
ಸಿಪ್ಪೆ ತೆಗೆಯುತ್ತಿದ್ದ ಹುಡುಗಿ
ಒಳಗೊಳಗೇ ಲಜ್ಜೆಯಿಂದ ಕಂಪಿಸುತ್ತಿದ್ದಳು;
—
ಬಟ್ಟೆ ತೊಟ್ಟು ಸಭ್ಯ
ಎನಿಸಿಕೊಂಡ ಮನುಷ್ಯನ
ಪರಮಾನಂದಗಳು
ಬೆತ್ತಲೆ ದೇಹವನ್ನು ಬೇಡುತ್ತದೆ;
ನಿನ್ನ ನೆನಪಿನಿಂದ
ಹುಟ್ಟಿದ ಈ
ಕವನ
ನಿನ್ನದೋ
ನನ್ನದೋ ..
ಗೊಂದಲವಿದೆ!
———
ನಿನ್ನ ಎದೆಯಾಳದ
ಹಂದರಕ್ಕೆ
ಈಜು ಬಾರದೆ
ಇಳಿದು
ದಿಕ್ಕಾಪಾಲಾದ
ನನ್ನ ಸ್ಥಿತಿಗೆ
ಪರಿಭ್ರಮಿಸುತ್ತೇನೆ…
ಕೆಲವೊಮ್ಮೆ
ಸಂಭ್ರಮಿಸುತ್ತೇನೆ..!
———
ನೀ ನನಗೆ
ನಷ್ಟವಾಗಬಹುದು ..
ಎಂದಲ್ಲ..
ನಾನಿನಗೆ
ನಷ್ಟವಾದರೆ
ನನ್ನಷ್ಟು ನಿನ್ನ
ಯಾರು ತಾನೇ
ಪ್ರೀತಿ ಮಾಡಿಯಾರು
ಎಂಬ ಭಯವಿದೆ….!
———
ನಿನ್ನೊಲುಮೆಯ
ರಾಗವನ್ನು
ಪದಗಳಲ್ಲಿ
ಕಟ್ಟಿ ಹಾಕುವ
ವ್ಯರ್ಥ ಪ್ರಯತ್ನ
ಈ ಕವನ
———
ನಿನ್ನ ಕಾಡುವ
ನೆನಪುಗಳಿಗೆ
ಲಗಾಮು ಹಾಕುವ
ಪ್ರಯತ್ನದಲ್ಲಿ
ಪ್ರತೀ ಬಾರಿ
ಸೋಲುತ್ತಿದ್ದೇನೆ..
———