ನೀ ಹೀಗೇಕೆ ನಾಚಿ ನಿಂತಿರುವೆ ಗೆಳತಿ,
ನೀ ನಾಚಿ ನಿಂತರೆ ನನ್ನ ಉಸಿರಿನಿಂದ
ನಿನ್ನ ಹೇಗೆ ಬನ್ನಿಸಲಿ.
ಬನ್ನಿಸಿದರು ಅದು ನಿನ್ನ ನೆನಪುಗಳನ್ನು
ಕುರಿತು ಬನ್ನಿಸಬೇಕು.
ನೀ ನಿಂತೆ ಹೀಗೇಕೆ ನಾಚಿ
ನನ್ನ ಕನಸುಗಳ ಮೇಲೆ ಕಲ್ಲನ್ನೆರಿ...
ನನ್ನ ಪ್ರೀತಿಯಾ ಕುಸುರಿ ನಾಚುತಿದೆ ಏಕೆ ....?
ನನ್ನ ಮೇಲಿನ ಕೋಪಕೋ
ಪ್ರೀತಿಗೋ ನಾ ಅರಿಯೇ.........
ಓ ಜೀವನ ಶಿಲ್ಪಿಯೇ...
ನಿನಗೆ ಕೊಡೆನು ಅವಕಾಶ..
ನನ್ನ ಪ್ರತಿಯೊಂದು ತಪ್ಪಿಗೂ
ನನ್ನಿಂದಲೇ ಉಳಿಯೇಟು...
ಒಂದೊಂದು ಏಟು
ನನ್ನ ತಪ್ಪಿಗೆ ನೀತಿಪಾಠ....
ಪಾಠ ಕಲಿತಾಗೆಲ್ಲ ಮೂಡುವ
ನನ್ನ ಸುಂದರ ಆಕೃತಿ...
ನೀನೇ ಬೆರಗಾಗುವೆ
ಸುಂದರ ಕೆತ್ತನೆ ನೋಡಿ...
ಬದುಕು ಬೇವು ಬೆಲ್ಲದ ಪಯಣ,
ಕಹಿಯಿಲ್ಲದ ಬೇವು
ಸಿಹಿಯಿಲ್ಲದ ಮಾವು
ಇರಲಾರವು
ಏಳುಬೀಳುಗಳ ನಡುವೆ ಸಾಗುತಲಿರಲಿ
ನಮ್ಮ ಈ ಪಯಣ,
ಕಹಿ ನೆನಪುಗಳ ಮರೆತು
ಸಿಹಿ ನೆನಪುಗಳ ಸವಿಯುತ
ಸಾಗುವ ಎಂದೆಂದು
ನಮ್ಮ ಗುರಿಯ ತನಕ...
ತುಂಬಾ ದೂರ ಸಾಗಿದೆ
ನನ್ನ ಪಯಣ, ಬಂಧಗಳನ್ನು
ಬೆಸೆಯುತ್ತಾ ಬೆಸೆಯುತ್ತಾ....
ಎಲ್ಲಿ ಕಳೆದುಹೋದೆನೋ
ತಿಳಿದಿಲ್ಲ, ನನ್ನವರನ್ನು
ಹುಡುಕುತ್ತಾ ಹುಡುಕುತ್ತಾ....
ಜನರು ಹೇಳುತ್ತಾರೆ ನಾನು
ತುಂಬಾ ನಗುತ್ತೇನೆ ಎಂದು....
ಆದರೆ ತುಂಬಾ ಬಳಿಲಿದ್ದೇನೆ
ಆ ನಗುವಿನ ಹಿಂದೆ ನನ್ನ ನೋವ
ಬಚ್ಚಿಡುತ್ತಾ ಬಚ್ಚಿಡುತ್ತಾ........