Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನ ಸ್ನೇಹಿತ

ನಗು ನಲಿಯುತ ನಗು
ಜೀವನವೆಲ್ಲ ನೀ ನಗುತಾಯಿರು

ಸ್ನೇಹ ಪ್ರೀತಿಗೆ ನೀನು ಆಧಾರ ದೀಪವಾದೆ
ನನ್ನ ಹೃದಯಕ್ಕೆ ಹತ್ತಿರವೇ ಹರಿದಾಡಿದೆ ನೀ
ರಕ್ತ ಕಣವೆಲ್ಲ ಸೇರಿ ಕುಣಿದಾಡಿತು

ಸೋಲು ಗೆಲುವನು ಮೀರಿ
ಗೆಳೆತನ ಕೂಡಿ ಗೆಲುವಾಯಿತು
ಹಾಸ್ಯ ಸೊಗಸಾಗಿ ನೆಲೆನಿಂತು ನಲಿದಾಡಿತು
ನಮ್ಮ ಬಾಳಲ್ಲಿ ಹೊಸ ಶೃತಿಯು ಶುರುವಾಯಿತು

ಅರಿಯದ ಈ ಸಂಬಂಧ ಸ್ನೇಹವಾಗಿ ಮನೆಮಾಡಿತು
ನಮ್ಮ ಉಸಿರಲ್ಲಿ ಉಸಿರಾಗಿ ಉಸಿರಾಡಿತು
ಗೆಳೆಯ ನಿನ್ನನ್ನು ಕಾಣದೆ ಹಲುಬಿದೆ ನಾ

ರಕ್ತ ಸಂಬಂಧಗಳಾಚೆ ನನಗಾಗಿ ಧರೆಗಿಳಿದು ಬಂದೆ
ನಿನ್ನ ಒಂದೊಂದು ಮಾತುಗಳು ನೆನಪಾಯಿತು
ಇಂದು ಕಣ್ಣಲ್ಲಿ ಕಂಬನಿಯು ನಿನ್ನದಾಯಿತು...

- Irayya Mathad

28 Jan 2016, 01:45 pm

೪ಲ್ವರು

ನಾವು ೪ಲ್ವರು ಮಾರಾಯ್ರೆ
ನಮ್ಮ ಕತೆ ಕೇಳಿ ರಾಯರೇ

ಮೊದಲು ನಾನು , ಇಲ್ಲ ಮೊದಲು ನಾನು, ಅಲ್ಲಲ್ಲ ನಾನು
ಎಲ್ಲರ ಜಗಳದಲ್ಲಿ ಬಡವಾದವನು ಇವನು

ಅದೇ ಮಾರಾಯ್ರೆ ನಾನು ೧ನೇಯವನು, ಇನ್ನೇನು ಪೂಜೆಗೆ ನೈವೇದ್ಯ ಮಾಡಿ ಕೊಡಿಸುವಷ್ಟರಲ್ಲಿ
ಪೂಜಾರಿಯಲ್ಲದವನು, ಮೈಲಿಗೆ ಮನಸ್ಸಿನವನು ಮಾಡುವ ವಾದ ನಿಮ್ಮ ಖಾದ್ಯ ನಮ್ಮ ದೇವರಿಗೆ ಖೇದ್ಯ

ಅದೇ ಮಾರಾಯ್ರೆ ನಾನು ೨ನೇಯವನು, ಅಲ್ಲಾ, ಗುಡಿಗೋಪುರ ನನ್ನದು ನೈವೇದ್ಯ ನನ್ನಿಷ್ಟದ್ದು
ಅವನ್ಯಾರು ನಡುವಿನವನು ಇಷ್ಟವಿಲ್ಲದ ನೈವೇದ್ಯ ಮಾಡುವವನು, ಖಂಡಿಸುವ ಹಕ್ಕು ನನದು

ದಿನಂಪ್ರತಿ ಇವರ ಮಧ್ಯೆ ನೈವೆದ್ಯವಿಲ್ಲದೆ ಬರಿ ಢೊಳ್ಳು ಘಂಟೆ ನಾದ
ಹುಚ್ಚಪ್ಪಗಳಿರ ಅರೆಪಾವು ಮನಿಸ್ಸಿನವರಾ ಬೇಡುವುದಿಲ್ಲ ನಾ ನಿಮ್ಮ ಗುಡಿಗೋಪುರವ
ನಿಮ್ಮಿಷ್ಟದ ಖಾದ್ಯವ


ನಾನಿಲ್ಲಿ ಬರುವುದು ಭಕ್ತಿಗೆ, ಸಿಗದು ಇಲ್ಲಿ ಅದು ಇನ್ನೆಂದಿಗೆ
ಬಡವಾಗುವುದು ಖಚಿತ ಎಂದು ಹೊರಟೆನಿಲ್ಲಿಂದ ಬಾರದೆ ಇನ್ನೆಂದಿಗೆ

- ಆನಂದ್ ಕುಮಾರ

28 Jan 2016, 12:29 pm

ಸುಂದರ ಕನ್ಯೆ

ನೀನು ಬಲೂ ಬ್ಯೂಟಿ.......
ನಿನ್ನ ನೋಡುವುದೇ ನನ್ನ ಡ್ಯೂಟಿ.......
ನೀನು ಬರಬಾರದೇ ನಿಮ್ಮ ಮನೆ ದಾಟಿ......
ಹೇಗಿದೆ ನಮ್ಮಿಬ್ಬರ ಭೇಟಿ......

- Kalappa

27 Jan 2016, 02:31 pm

ಧರ್ಮ

ಸತ್ತ ಮೇಲೆ ಸೌದೆಯಂತೆ
ಮಣ್ಣಿನ ಹೆಂಟೆಯಂತೆ
ಇರುವ ಶವವನ್ನು ಬಿಟ್ಟು
ಜನರು ಅವರವರ ಮನೆಗೆ ಹೋಗುತ್ತಾರೆ
ಆದರೆ
ಆತನ ಧರ್ಮ ಮಾತ್ರ ಅವನವನ್ನು
ಹಿಂಬಾಲಿಸುತ್ತದೆ.

- ಚೇತು ಕಲಾವಿದ

26 Jan 2016, 04:34 pm

ಕಣ್ಣೋಟ

ಕಣ್ಣ೦ಚಲ್ಲೆ ನೀ ಸೆಳೆಯುವೆ
ಕರೆಯಲಾಗದೆ ನಾ ಸೋತಿಹೆ
ಅವಳ ಕಣ್ಣೋಟಕ್ಕೆ ಮನಸೋತ
ಓ ಹೃದಯವೆ ನಿನಗೆ
ಆ ನಯನಗಳು ಅಷ್ಟಿಷ್ಟವೆ ???

- Dharmaraj Uppi

26 Jan 2016, 03:05 pm

ಕಲಾವಿದ

ಕಲೆಗಾರ ನಾನಲ್ಲ
ಸಕಲ ಕಲೆಗಳು ತಿಳಿದಿಲ್ಲಾ

ಕಿರಿದಾದ ಕುಂಚವನ್ನಿಡಿದು
ಭಾವನೆಗಳ ವ್ಯಕ್ತ ಪಡಿಸುವೆ

ಬಣ್ಣವ ಬಳಿದು
ಈ ಖಾಲಿ ಕಾಗದದ ಮೇಲೆ.
- ಕಲಾವಿದ

- ಚೇತು ಕಲಾವಿದ

25 Jan 2016, 06:45 pm

ಹೆಜ್ಜೆ ಗುರುತು

ಬೆಳದಿಂಗಳ ರಾತ್ರಿಯಲಿ,
ಆ ಸುಂದರ ಕಡಲಂಚಿನಲಿ...
ನೀ ಸಾಗುವ ಹಾದಿಯ....
ಹೆಜ್ಜೆಗುರುತನರಸಿ ಹೊರಟಿರುವೆ ನಾನು....
ಆದರೆ ಅಲೆಗಳೆ ಅಣಕಿಸಿ ಹೇಳುತ್ತಿವೆ
ಅವಳೆಂದು ಸಿಗುವುದಿಲ್ಲ ನಿನಗಿನ್ನು...

- ಅವಿನಾಶ್ ಚಕ್ರಸಾಲಿ

25 Jan 2016, 04:51 pm

ಬಲೂನು

ನನ್ನ ತುಟಿಗೆ
ನಿನ್ನ ತುಟಿಯ ಸೇರಿಸಿ
ಉಸಿರನು ಊದಿದೆ
ನಾ ಉಬ್ಬಿ ಉಬ್ಬಿ ದಪ್ಪನಾದೆ
ನನ್ನ ಬಾಯೊಳಗೆ ನಾಲ್ಕು ಕಾಳು ಹಾಕಿ
ಎಳೆದು ಸುತ್ತಿ ಗಂಟು ಹಾಕಿದೆ
ಗಂಟನು ತುರುಕಿ ಹೊಟ್ಟೆಯೊಳಗೆ ಸೇರಿಸಿ
ನುಲಿದು ರಬ್ಬರ್ ತುಂಡು ಕಟ್ಟಿದೆ
ಸೇಬು ಹಣ್ಣಿನಂತೆ ಕಾಣುವ ನನ್ನನು
ಜಾತ್ರೆಗೆ ಬಂದ ಹುಡುಗನೊಬ್ಬ ಕೊಂಡ
ನನ್ನ ಬಣ್ಣ ನೋಡಿ ಆಕಾರ ನೋಡಿ ಸಂತೋಸಗೊಂಡ
ರಬ್ಬರ್ ಹಿಡಿದುಕೊಂಡು ಎಳೆದು ಎಸೆದು
ಹೊಡೆದು ಬಡಿದು ಕೊನೆಗೆ ನನ್ನ ಜೀವ ತೆಗೆದ

- ಚೇತನ್ ಬಿ ಸಿ

24 Jan 2016, 02:36 pm

ಚಿಟ್ಟೆ

ಚಿಟ್ಟೆ ಚಿಟ್ಟೆ ಚಿಟ್ಟೆ
ಹಿಡುಕೊ ಹಿಡುಕೊ ಹಿಡುಕೊ
ಕೆಂಪುಬಣ್ಣದ ರೆಕ್ಕೆ
ರೆಕ್ಕೆ ಮೇಲೆ ಕಪ್ಚುಚುಕ್ಕೆ
ಹೂವಿಂದ ಹೂವಿಗೆ
ಗಿಡದಿಂದ ಗಿಡಕ್ಕೆ
ಹಾರುತಿಹುದು


- ಚೇತನ್ ಬಿ ಸಿ

23 Jan 2016, 05:33 pm

ಕೃತಿ..


ಕೆ0ದಾವರೆ ಕುಸುಮದ ತು0ಬ..
ಕರಿಮೋಡದ ಬಿಗುಮಾನ..
ಕಟುವಾದ ಮನದಲ್ಲೆಲ್ಲಾ ಸ್ಮ್ರುತಿಯೆ0ಬ ಸಿಹಿಗಾನ..
ಕುಸುಮಾ0ಕರಿ ಉಸಿರಲೆಲ್ಲಾ ಬಿಳಿ ಛಾಯೆ ಕರೆದಿಹುದು
..

ಕೆ0ಗಾಲಿನ ಕೊರಳಲ್ಲೆಲ್ಲಾ ಹಸಿರಾದ ಸೆರೆಮಾಲೆ..
ಕೆ0ಗಾಲಿಗೆ ಕನಸನು ಕೊಡುವ ಸ0ಗಾತಿಯ ಇ0ಷೌಧ....

- Shreepadh

22 Jan 2016, 08:33 pm