Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಹುಡುಕುತ
ಹೋದೆ
ಹುಡುಗಿಯ
ಎದೆಯಾಳ !
ಬರಮಾಡಿಕೊಂಡೆ
ಆರು
ತಿಂಗಳ
ಬರಗಾಲ !!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
07 Feb 2016, 02:14 am
ಕವಿತೆ
ನೀನೆಲ್ಲಿ
ಅವಿತೆ !?
ನಿನ್ನ
ಹುಡುಕಾಟದಲಿ
ಕುಳಿತೆ..!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
07 Feb 2016, 02:06 am
ಮತ್ತು ಬರಿಸುವ ಮುತ್ತು ಸುರಿಯಲೆ
ಮತ್ತೇ ಬರಿಸದಿರುವ ಮುತ್ತು ಪೋಣಿಸಲೆ
ಮತ್ತು ಮುತ್ತಿಲ್ಲದ ಮಾತು ನುಡಿಯಲೆ
ಮೆಲ್ಲನೆ ಏದುಸಿರಿನ ಗಮ್ಮತ್ತು ತೋರಿಸಲೆ
ಮಾತಿಲ್ಲದ ಮುತ್ತಿನ ಮಳೆಯಿಂದ ಮನ ತಣಿಸಲೆ
ಮೋಡಿಯ ಪಿಸುಮಾತಿನ ಸವಿ ನುಡಿಯಲೆ
ಮಧು ಇಂಗದ ಮುತ್ತಿನ ಮಾಯೆ ಕಲಿಸಲೆ
ಮುತ್ತಿನ ಮಂದಿರದಲಿ ಮತ್ತೇರಿಸುವ ಮುತ್ತು ಜೋಡಿಸಲೆ
ಮನವನ್ನು ನವಿರಾದ ಮುತ್ತಿನಿಂದ ಮುದಗೊಳಿಸಲೆ
ಮನೋಹರ ಕಂಗಳಲಿ ಮುತ್ತಿನ ಮಿಂಚು ಬರಿಸಲೆ
ಮುತ್ತಿನಿಂದ ಮತ್ತೇರಿಸುವ ಮುಖರವಿಂದವ ಹೆಚ್ಚಿಸಲೆ
ಮುತ್ತಿನ ಮನೆಯಲಿ ಮತ್ತಿಳಿಯದಂತೆ ಮುತ್ತಿಕ್ಕಿ ಮಲಗಿಸಲೆ
- ಆನಂದ್ ಕುಮಾರ
05 Feb 2016, 01:11 pm
ಮಾತಲ್ಲಿ ವೈರಾಗ್ಯ ಸರಿಯಲ್ಲ..
ಮನಸಲ್ಲಿ ಇರುವುದು ಹೇಳುವುದು ತಪ್ಪಲ್ಲ...
ನಿನ್ ಹಾಗೆ ಇರೋಕೆ ನಾನು ನೀನಲ್ಲ ...
- ಕೀರ್ಥನ್ ಗೌಡ
03 Feb 2016, 06:06 am
ಅರಿಯದಿರುವ ನನಗೆ ನೀನು
ಮೋಡಿ ಮಾಡಿ ಮರುಳನಾಗಿಸಿ
ಕದ್ದೆ ನನ್ನ ಮನಸ್ಸನ್ನು
ಗೆದ್ದೆ ನನ್ನ ಹೃದಯವನ್ನು
ಮೊದ ಮೊದಲು ಮಾತು ಇಲ್ಲ
ಮೌನವೆ ಕೂಡಿತಲ್ಲ
ಕಣ್ಣಾರೆ ಕಂಡೆ ನಾನು ನಿನ್ನ ತಳುಕು ಬಳುಕನು
ಸೋತು ಹೋದೆ ನಾನು ನಿನ್ನ ಅಂದಕೆ
ನೋಡುವ ನೋಟಕ್ಕಿಂತ ಆಡುವ ಮಾತಿಗಿಂತ
ನನ್ನನು ಕಾಡಿತು ನಿನ್ನ ಕನಸದು
ಕಣ್ಣಲ್ಲಿ ತುಂಬಿಕೊಂಡೆ ಮನಸ್ಸಲ್ಲಿ ಬಚ್ಚಿಕೊಂಡೆ
ಹೇಳಲಾಗದೆ ಪ್ರೀತಿ ಮಾತು
ಓಡಿ ಬಂದೆ ನೀನು ಹೃದಯದಲ್ಲಿ
ಜಿಂಕೆಯಂತೆ ಜಿಗಿದು ಜಿಗಿದು
ಮುತ್ತಿನ ಮದ್ದು ನೀಡಿ ನಿನ್ನಲಿ ನಾನಾಗಿ
ಸಿಲುಕಿದೆ ನಾ ಪ್ರೀತಿ ಸುಳಿಗೆ....
- Irayya Mathad
03 Feb 2016, 01:42 am
ಕನಸನು ಸುಟ್ಟಳು
ಹೃದಯದ ಒಡತಿ...
ಕಮಾನು ಕಟ್ಟಲು ಇತ್ತು
ಅವಳದೇ ಆಣತಿ...
- ಗಾಯಾಳು
29 Jan 2016, 10:14 am
ಕಣ್ಣು ಕಂಬನಿ ಇಡುವುದು ಸಹಜ,
ಸೇರದೆ ಇದ್ದರೆ
ರೆಪ್ಪೆಗಳು ತುಸು ಹೊತ್ತು ....
ಮನಸ್ಸು ಅಳುವುದಾದರು ಏಕೆ!,
ನೀ ನನ್ನ ಸೇರುವುದೇ ಇಲ್ಲ
ಎಂದು ಅದಕ್ಕೂ ಗೊತ್ತು ....
- ಗಾಯಾಳು
29 Jan 2016, 10:11 am
ಹೊತ್ತಿಲ್ಲ ಗೊತ್ತಿಲ್ಲ,
ಕಣ್ಣೆದುರು ಬಂದು ನೀ ಕಾಡುವೆ...
ಕಣ್ರೆಪ್ಪೆ ಅಂತು ಮುಚ್ಚಿಲ್ಲ,
ನೀ ಜೊತೆಗಿರುವ ಹಗಲು
ಕನಸ ನಾ ಕಾಣುವೆ...
- ಗಾಯಾಳು
29 Jan 2016, 10:05 am
ನನಗೇ ಇರಲಿ ಬಿಡು
ನೀನಿಲ್ಲದ ನೋವು...
ಪ್ರೀತಿಸುವೆ ನಿನ್ನ ಎಂದೂ,
ಬಂದರೂ ಕೂಡ ಸಾವು...
- ಗಾಯಾಳು
29 Jan 2016, 10:00 am
ಅರಿವೇಕೆ ಬಣ್ಣಿಸಲು ಪ್ರೀತಿಯ ಪರಿಯ....
ಅರಿತಿರಲು ಮನಸ್ಸು ನಿನ್ನೋಲುಮೆ ಸಿರಿಯ...
- ಗಾಯಾಳು
28 Jan 2016, 06:37 pm