Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಪ್ರೇಮ ವಿಮೆ
ಪಡೆಯಲು
ಬಯಸಿದ್ದೇನೆ !
ಏಕೆಂದರೆ
ಭಾವನೆಗಳನ್ನು
ಉಸಿರುಗಟ್ಟಿಸಿ
ಕೊಂಡಿದ್ದೇನೆ !!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
07 Feb 2016, 11:15 am
ಗೆಳತಿ
ಅಂದು ಬಿಟ್ಟುಹೊದೆ
ನಿನ್ನ ನೆನಪುಗಳ
ಕಂತೆ !!
ಇಂದಿಗೂ
ಅದೇ
ಚಿಂತೆ !
ಭಕ್ಷಿಸಲು
ಹಾತೊರೆಯುತಿವೆ
ಚಿಂತೆಗಳ
ಚಿತೆ !!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
07 Feb 2016, 11:11 am
ಅರಿತರೆ ಜಿಹ್ವೆಯ
ಸುಂದರ
ಸೋಗು !!
ಇರಬಲ್ಲದು
ಬದುಕಲ್ಲಿ ಸದಾ
ನಗು !!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
07 Feb 2016, 11:05 am
ಸ್ಪಂದಿಸು
ಪ್ರೀತಿಗೆ !
ಸಂಧಿಸು
ಎದೆಗೆ !!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
07 Feb 2016, 10:58 am
ಎನ್ನ
ಬದುಕಿನ
ದಾರಿ
ಕವಲು !
ಕಾರಣ
ನಿನ್ನ
ಪ್ರೀತಿಯ
ಅಮಲು !!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
07 Feb 2016, 10:56 am
ಹೃದಯದ
ಪ್ರತಿ
ಮಿಡಿತದಲಿ
ನನ್ನವಳನ್ನು ಕಾಣುವ
ತುಡಿತ !
ಕಾರಣ
ಪ್ರತಿ ಮಿಡಿತಕು
ಅವಳೇ
ಹಿಡಿತ !!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
07 Feb 2016, 10:52 am
ಗೆಳತಿ
ನಿನ್ನ
ಮನಸಲ್ಲುಂಟು
ಚಂಚಲತೆಯ
ಕವಲು !
ಅದಕ್ಕಾಗಿ
ಕಾಯುತಿರುವೆನು
ಕಾವಲು !!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
07 Feb 2016, 10:34 am
ಪ್ರೀತಿಯ ಸಾಗರದ ಅಲೆಗಳ ನಡುವೆ
ಬಚ್ಚಿಟ್ಟು ಕೊರಗಿದೆ ಹೇಳಲಾರದೆ
ಸಾಗುತ್ತ ದೂರ ದೂರ ಕುಪ್ಪಳಿಸಿ
ಜಿಗಿದು ಕಲ್ಲು ಬಂಡೆಗೆ ಗುದ್ದಿದೆ
ನೋವು ತಡೆಯಲು
ಪ್ರೀತಿ ಬಳ್ಳಿ ಬಚ್ಚಿಟ್ಟ ಕ್ಷಣ ಸೊರಗಿತ್ತು ಅಲೆಯ ನಿನಾದ
ಬಂಡೆಯು ಕರಗದು ಮನಸ್ಸು ಮಾಸದು
ಅವಳ ನಗೆಯ ಬಗೆಗೆ
- ರವಿಕುಮಾರ
07 Feb 2016, 04:10 am
ಅಭಿವೃದ್ದಿಯ
ನೇಪಕ್ಕೆ
ಬಿಂದಿಗೆಗೆ
ರಂದ್ರ
ಕೊರೆದವರು. !!
ತಮ್ಮ
ದಾಹಕ್ಕೆ
ರೈತರ
ರಕ್ತ
ಕುಡಿದವರು !!.
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
07 Feb 2016, 02:46 am
ಮೋಡಗಳು
ನಗುತಿರಲು
ಮುಗಿಲಲಿ !!
ವಸುಂಧರೆಯು
ಅಪ್ಪಿಕೊಲ್ಲುವಳು
ತಂಪಾದ
ತೋಳಲಿ !!!
ನಿಸರ್ಗವೇ ನಾಚುವುದು
ವಸುಂಧರೆಯ ಅಪ್ಪುಗೆಯ
ತೋಳಲಿ !!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
07 Feb 2016, 02:33 am