Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಂಟು

ತಾಯಿ
ಕರಳು !
ಮಡದಿ
ನೆರಳು !!!!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

08 Feb 2016, 02:24 pm

ಮುಖವಾಡ

ಏಕ್ಯತೆಯ ವೃಕ್ಷದಿ
ಮಾನವೀಯ ಮೌಲ್ಯಗಳ
ಎಲೆಗಳುದುರಿ
ಬಿದ್ದಿವೆ !
ವಸಂತದ ಸೋಗಿನಲ್ಲಿ
ಹೊಸ ಚಿಗುರು ಎನ್ನುತಲಿ
ವಿಕಾರಗಳು ವಿಶ್ವದೆಲ್ಲೆಡೆ
ಪಸರಿವೆ !!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

08 Feb 2016, 02:16 pm

ಚಂಚಲೆ

ಪ್ರೇಯಸಿ
ಭಾವನೆಗಳ ನಡುವೆ
ಸೇತುವೆ ನಿರ್ಮಿಸಿದಾಗ
ಆದದ್ದು ನಮ್ಮ
ಅನುಬಂಧ !
ಆದರೆ
ಅರಿಯದಾಯಿತು
ನಮ್ಮ ನಡುವೆ
ಆವನೇಕೆ ಬಂದ!!!?

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

08 Feb 2016, 01:50 pm

ನಿಸ್ವಾರ್ಥ

ಇರುಳಿನಲಿ
ಬೆಳಗುವನು
ಅರ್ಧ
ಚಂದಿರ !
ಬೆಳಕು ಮಾತ್ರ
ತುಂಬಿಹುದು
ಬಾನ
ಹಂದರ !!!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

08 Feb 2016, 01:43 pm

ಕರ್ಮಬಲ

ಪುಣ್ಯ
ಮಣ್ಣು ಮುಕ್ಕಿಹುದು
ಪಾತಾಳದಲಿ !
ಪಾಪ
ರಣಹದ್ದು ದಿಟ
ಹಾರಾಡಲು
ಗಗನದಲಿ !!!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

08 Feb 2016, 12:29 pm

ಪಾತ್ರ

ವಸುಂಧರೆ
ಮಹಾನ್
ರಂಗ ಮಂದಿರ !
ಜಿವಾತ್ಮರೆ
ಪಾತ್ರ ಹಸನಾಗಿಸಿಕೊಳ್ಳಿ
ಸುಂದರ !!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

08 Feb 2016, 12:18 pm

ಹುಡುಗಾಟ

ರಾಜಕಾರಣಿಗಳು
ಕಲಾವಿದರು !
ಮತದಾರರು
ಪ್ರೇಕ್ಷಕರು !!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

08 Feb 2016, 12:13 pm

ಪರಿಶುದ್ದತೆ

ನಾಡ
ವನಸುಮವು
ಬಿರಿಹುದು
ಪರಿಮಳ !
ಆದರೋಳು
ನಾವಾಗಬೇಕು
ಒಂದೊಂದು
(ಎಸಳು) ದಳ !!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

08 Feb 2016, 12:09 pm

ಅನುಭವ

ಬಾಳ
ಪಯಣಕೆ
ಬೇಕಾದ
ಹರಿಗೋಲು !!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

08 Feb 2016, 12:04 pm

ಹೃದಯ...

ನಾ ಸತ್ತ ಮೇಲೂ ಹೇಳುವೇ
ಗೆಳತಿ ಆ ಯಮರಾಜನಿಗೂ,
ನನ್ನಳಗೇ ಇರುವ ನಿನ್ನಯ
ಕಹಿ ನೆನಪುಗಳ ಹೃದಯವ
ಜೋಪನವಾಗಿಡು ಎಂದು .....
ನನಗೇನಾದರು ಮರು ಜನುಮ
ಇದ್ದರೆ ಮತ್ತೆ ಅದೇ ಹೃದಯವ
ಪಡೆಯುವ ಸಲುವಾಗಿ ...

- ಪ್ರಸನ್ನ ಕುಮಾರ್

07 Feb 2016, 06:23 pm