ಚಂದಮಾಮನು ನನಗಂದನು ನಿನ್ನ ಪ್ರೇಯಸಿ ಬಲು ಸುಂದರಿಯು
ಏಕೆಂದರೆ ಮೊದಲಿಂದಲು ಅವಳೆನ್ನಯ ಸೋದರಿಯು
ನಿಮ್ಮಿಬ್ಬರ ಸಂಗಮಕ್ಕೆ ಕಾಯುತ್ತಿದೆ ಈ ಧರೆಯು
ನನ್ನ ತಂಗಿಗೆ ನೀ ಸಿಗದಿರೆ ಖಂಡಿತ ನೀ ಕೊಲೆಯು
ದೇವರು ಇಲ್ಲದ ಭೂಮಿಯಲಿ
ಬದುಕೊ ಜನರ ಬಾಳಿನಲಿ
ಈ ಕಾಣದ ನೋವಿನ ಕೊನೆಯಲ್ಲಿ
ಆ ಸಾವಿನ ಅಂತ್ಯದ ಭಯವೆಲ್ಲಿ
ಬದುಕುವ ಜನರ ನೋಡಿಲ್ಲಿ
ನಾ ಕಾಣದ ದೇವನೇ ನೀನೆಲ್ಲಿ
ನೀ ಕಂಡರೆ ಕೊಲ್ಲುವೆ ನಾ ನಿಂತಲ್ಲೇ
ದೇವರು ಇಲ್ಲದ ಭೂಮಿಯಲಿ
ಬದುಕೊ ಜನರ ಬಾಳಿನಲಿ
ಈ ಕಾಣದ ನೋವಿನ ಕೊನೆಯಲ್ಲಿ
ಆ ಸಾವಿನ ಅಂತ್ಯದ ಭಯವೆಲ್ಲಿ
ಬದುಕುವ ಜನರ ನೋಡಿಲ್ಲಿ
ನಾ ಕಾಣದ ದೇವನೇ ನೀನೆಲ್ಲಿ
ನೀ ಕಂಡರೆ ಕೊಲ್ಲುವೆ ನಾ ನಿಂತಲ್ಲೇ
ಕಿಡಿಗೇಡಿಗೆ ಸಿಡಿಗುಂಡು,
ಕಾಯುತಿದೆ ನಮ್ಮ ದೇಶದ ಸೈನ್ಯದ ಹಿಂಡು, ನಮ್ಮಲ್ಲಿಯ ಪ್ರೀತಿಯ ಕಂಡು
ವಿದೇಶಿಯರ ಒಡಲಲ್ಲಿ ಬೆಂಕಿಯ ಚೆಂಡು,
ದೇಶಕ್ಕೋಸ್ಕರ ಶ್ರಮಿಸುವೆವು ನಾವು,
ದೇಶಕ್ಕೋಸ್ಕರ ಪ್ರಾಣ ಬಿಡುವೆವು ನಾವು,
ಈ ಮಣ್ಣಿನ ಹೆಮ್ಮೆಯ ಮಕ್ಕಳು ನಾವು,
ಯುವ ಸೈನ್ಯದ ಹುಲಿಮರಿಗಳು..
ಪರಿಸ್ಥಿತಿಗೆ ಅಂಜದೆ ಮುನ್ನುಗ್ವೆವು,
ನಾವು ಸಮುದ್ರದ ಅಲೆಗಳು,
ಗಾಳಿ ವೇಗದಿಂದ ನಡೆದೆವು,
ಒಗ್ಗಟ್ತಿನಲ್ಲಿ ಶ್ರಮ ಪಡುವೆವು,
ಶಿಸ್ತಿನಲ್ಲಿ ಸುಖ ಕಾಣ್ವೆವು,,,,,,,
ಎದೆಯ ಮಹಲೊಳಗೆ
ಮೂಡಿದ ನಿನ್ನ ಪ್ರೀತಿಯ ಗಜಲುಗಳಲ್ಲಿ ಎದೆ ಬಿರಿಯ ನೋವು.
ಸುಮ್ಮನೆ ನಿನ್ನ ಹೆಸರು ಹೇಳಿ
ಆಕಾಶದ ಅಂಗಳದಲ್ಲಿ ಕಣ್ಣಾಡಿಸಿದರೆ
ಅಲ್ಲಿ ಚಂದ್ರಮನಿಲ್ಲ.
ನಿನ್ನ ಹೆಸರಿಟ್ಟು ಕರೆಯುತ್ತಿದ್ದ ಅಷ್ಟು ಚುಕ್ಕಿಗಳೇಕೆ
ದೂರ ಹೋದವು ಗೆಳಯ?
ಈಗಂತು ಕಣ್ಣುಗಳಲ್ಲಿ ಕತ್ತಲೆಯ ರಾತ್ರಿಗಳ ಮೆರವಣಿಗೆ.
ಪ್ರೇಮಿ ನಾನೆನ್ನಲು ತಾಜಮಹಲ್ ಕಟ್ಟಬೇಕಿಲ್ಲ
ಪ್ರೀತಿ ಶಾಶ್ವತವೆನ್ನಲು ಜೀವ ನೀಡಬೇಕಿಲ್ಲ
ಪ್ರೇಮದೋಲೆಯ ಬರೆಯಲು ರಕ್ತ ಸುರಿಸಬೇಕಿಲ್ಲ
ಅಮರ ಪ್ರೇಮಿಗಳೆನ್ನಲು ಜಗತ್ತಿಗೆ ಸಾರಬೇಕಿಲ್ಲ
ಎರಡು ಹೃದಯಗಳ ಬಡಿತದ ಹೊಸ ಶೃತಿಯು ಒಂದಾಗಲು ಪ್ರತಿದಿನವು ಪ್ರೇಮಿಗಳ ದಿನವೆನ್ನಲು ಶಬ್ದಕೋಶವ ಹುಡುಕಬೇಕಿಲ್ಲ...