ವಸಂತ ಮಾಸದಲ್ಲಿ ನಮ್ಮಿಬ್ಬರ ಭೇಟಿ
ನೀ ತಂದು ಕೊಟ್ಟಿಯಲ್ಲೆ ಆ
ಮೊದಲ ಪ್ರೇಮ ಚೀಟಿ...
ಇರಲಿಲ್ಲ ಹುಡುಗಿ ನಂದು
ಮನಸ್ಸು ತುಂಬ ಗಟ್ಟಿ...
ಜೋತೆ ಇರುವೆ ಎಂದು ನೀನು
ನನಗೆ ಮಾತು ಕೊಟ್ಟಿ....
ಇನ್ನೊಂದು ಜನ್ಮದಲ್ಲಿಯೂ ನಾ
ಬರುವೆ ನೀನಗಾಗಿ ಮತ್ತೆ ಹುಟ್ಟಿ...
ಜನರ ಪಾಲಿಗೆ ಜಗದ ಸೃಷ್ಟಿಗೆ ಪ್ರೀತಿ
ಮರೆತೆನೆಂದರು ಮರೆಯಲಾಗದ ರೀತಿ
ಮರೆತು ನಿಂತರು ಬದುಕಲಾಗದ ಸ್ಥಿತಿ
ಸಿರಿತನ ಇದ್ದರು ಬಡವನಾದರು ಪ್ರೀತಿಗೆ ಇಲ್ಲ ಜಾತಿ
ಜಗದ ಸೃಷ್ಟಿಗೆ ಶಾಶ್ವತ ಈ ಪ್ರೀತಿ
ಪ್ರತಿ ಹಾಳೆಯಲ್ಲು ಬರೆದೆ ನಿನ್ನ ಪುಟ
ಪ್ರತಿ ಗಳಿಗೆಯಲ್ಲು ನಿನ್ನದೆ ನೋಟ
ಪ್ರತಿ ಉಸಿರಿನಲ್ಲು ನಿನ್ನದೆ ಮಿಡಿತ
ನನ್ನ ಹೃದಯದಲ್ಲು ನಿನ್ನದೆ ಓಟ
ನಿ ನನಗೆ ಒಲ್ಲ್ಯೆ ಎಂದಾಗ ನ ಕಲಿತೆ ಕುಡಿವ ಚಟ
ಅವಳ ಮಾತಲ್ಲಿ ಹೃದಯ ಅರಳಿತು ಅಂದು
ಅವಳ ನಗು ಅಲ್ಲಿ ಮನ ಕರಗಿತು ಇಂದು
ನನ್ನ ಹೃದಯ ಬಯಸಿತು ಪ್ರೆತ್ಸೋಣ ಎಂದು
ತಿಳಿಯದೆ ಹೋಯಿತು ಅವಳು ಮಾಯಾ ಜಿಂಕೆ ಎಂದು
ಅವಳ ನೆನಪಲಿ ನಾ ಆದೆ ದೇವದಾಸ
ಕುಡುಕರ ಪಾಲಿಗೆ ನಾನೀಗ ಕೇಂದ್ರ ಬಿಂದು