Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮನಸನು ಮೆರೆಸಿದೆ ಪ್ರೇಮದ ಹೂನಗೆ ನೀನೆ..
ಹೃದಯವ ಕಸಿದಿದೆ ರಾಗದ ಸರಪಳಿ ನೀನೆ..
ಉಸಿರಲ್ಲೇ ಹಸಿರಾಗಿದೆ ನಲ್ಲೆ..
ಹೆಸರಲ್ಲೆ ಹಸಿವಾಗಿದೆ ಬಾಲೆ...
ಅನುರಾಗದ ಸ್ಪರ್ಷವು ನೀನೆ..
ಅಲೆಮಾರಿಯ ತವಕವು ನೀನೆ..
ಹುಸಿನಗೆಯ ಭಾವವು ನೀನೆ..
ಹದಿಹರೆಯದ ಅಲೆಗಳು ನೀನೆ...
ಕಾರ್ಮೋಡದ ನಾಚಿಕೆ ನೀನೆ..
ಕಣ್ಣಂಚಿನ ಬೆಳಕಲ್ಲು ನೀನೆ..
ಮಳೆಹನಿಯ ಇಬ್ಬನಿಯು ನೀನೆ..
ತಿಳಿನೀರಿನ ಸ್ಪರ್ಶವು ನೀನೆ...
ಸನಿಹದ ಬಯಕೆಯ ಮೋಹದ ತವಕವು ನೀನೆ..
ಪ್ರಣಯದ ಮನಸಿಗೆ ಮೌನದ ಚಿಲುಮೆಯು ನೀನೆ..
ಕನಸಲ್ಲೆ ನಿನ್ನ ಬಚ್ಚಿಡುವಂತೆ..
ಮುಗಿಲಲ್ಲೆ ನಿನ್ನ ಹಿಡಿದಿರುವಂತೆ..
ನೆನಪೋ ಬಯಕೆಯೋ ತಿಳಿಯದೆ ಮೌನದಿ ನಾ...
- Shreepadh
12 Apr 2016, 08:39 pm
ಏನು ಮಾಡಲಿ ಹರಿಯೆ
ಭವದೊಳು ಬೆಂದು ನಿನ್ನ ಕಾಣಲಿಲ್ಲ
ಏತಕೆ ಈ ಜನುಮ ನಿನ್ನ ನೋಡದೆ || ಪ||
ಸಪ್ತ ಸಾಗರಗವ ದಾಟಲಾದೆ
ಸಪ್ತ ಶೃಂಗವ ಏರಲಾದೆ
ಸಪ್ತ ಲೋಕವೆ ಬೇಡವಾಗಿಹೆ
ನಿನ್ನ ನೋಡುವ ಆಸೆಯು ಇನ್ನೂ
ಮೊಳಕೆಯೊಡೆದು ಕಾಯುತಿದೆ ನಿನ್ನ
ಹನುಮನ ಹಾಗೆ ಶಕ್ತಿಯು ಇಲ್ಲ
ಅವನ ರೂಪದ ಭಕ್ತಿಯು ಮೂಡಲಿಲ್ಲ
ಅಜ್ಞಾನ ಅಂಧಕಾರ ತುಂಬಿದ ಈ ಗಡಿಗೆ
ಸೋರುವ ಮುನ್ನ ಸೋಸಲೆ ಇಲ್ಲ
ನಾನು ಎನ್ನುವ ಭೂತ ಬಡಿಯಿತಲ್ಲ
ನನ್ನದೆನ್ನುವ ಸ್ವಾರ್ಥ ತುಂಬಿತಲ್ಲ
ನಿನ್ನನರಿಯುವ ಪರಿಯ ಹುಡಕಲಿಲ್ಲ
ಹೋಗುವ ಮುನ್ನ ಏನನ್ನು ತರಲಿಲ್ಲ
ಭಕ್ತನಾಗಿಸು ಶಕ್ತನಾಗಿಸು
ಮರುಜನ್ಮ ನೀನು ಕರುಣಿಸೆನಗೆ
ನಿನ್ನ ಸೇವೆ ಮಾಡುತ ಮುಕ್ತಿಯ ಪಡೆವೆನು
ಬೇಡೆನು ಇನ್ನೂ ಬೇರೆ ವರವನ್ನು....
- Irayya Mathad
10 Apr 2016, 04:33 pm
ಕಡಿಯದಿರಿ ವೃಕ್ಷರಾಶಿ
ಸಕಲ ಜೀವರಾಶಿಗೆ
ಕಂಪು!
ನೆತ್ತರು ಇದ್ದಿದ್ದರೆ
ಆಗಿರುತ್ತಿತ್ತು ಇಳೆಯೆಲ್ಲ
ಕೆಂಪು!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
10 Apr 2016, 05:23 am
ಗಾಳಿಮಳೆ ತಾಗದ
ಬೊಳು ಮರಕ್ಕೆ
ಆಕಾರ ಕೊಟ್ಟು ಬಣ್ಣಲೇಪಿಸಿದ್ದಾನೆ
ಕಲೆಗಾರ!!
ದೇವರೆಂದು ನಂಬಿ
ಕೈ ಮುಗಿದು ಜನ ಕಾಸಿಟ್ಟು
ಹೋಗ್ತಾರ!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
10 Apr 2016, 05:15 am
ಜನ್ಮದಿನ
ಏನ್ನ ದಿನ
ಎಂದು ಬೀಗ ಬಾರದು!
ಕೊಡುಗೆ ನೀಡು
ಅನುದಿನ
ನಾಡು ಮರೆಯಬಾರದು!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
05 Apr 2016, 02:08 am
ಕತ್ತಲು ಕಗ್ಗತಲ ಕಾಡು,
ಹಗಲಿರುಳು ಎನ್ನ ಕಾಡು.
ಜಗನ್ಮಾತೆಯ ಜೇಷ್ಟ ಪುತ್ರನೇ,
ಸೃಷ್ಟಿ ಕ್ರಿಯೆಯ ಕ್ಲಿಷ್ಟ ಕರ್ಣನೇ,
ಹಗಲಿರುಳು ಮಾಡುವೆ ನಿನ್ನ ಸ್ಮರಣೆ,
ತೋರಿಪು ನಿನ್ನ ಅಘಾದ ಶಕ್ತಿಯನ್ನೇ.
ನಿನ್ನ ಕೆಡವಲು ಬಂದವರನ್ನು ಬೆದರಿಸು,
ನಿನ್ನ ಬೇಡಲು ಬಂದವರನ್ನು ರಕ್ಷಿಸು,
ನಿನ್ನ ವಿಕ್ರಿಯ ಮಾಡಲು ಬಂದವರನ್ನು ಶಿಕ್ಷಿಸು,
ನಿನ್ನ ನೋಡಲು ಬಂದವರನ್ನು ರಂಜಿಸು,
ನಿನ್ನ ಒಲವಿಗೆ ಬಂದವರನ್ನು ಮುದ್ದಿಸು,
ನಿನ್ನ ತಂಟೆಗೆ ಬಂದವರನ್ನು ಕಡೆಗಾಣಿಸು.
ಕತ್ತಲು ಕಗ್ಗತಲ ಕಾಡು,
ಹಗಲಿರುಳು ಎನ್ನ ಕಾಡು.
ಕೋಟಿ ಜೀವಿಗಳ ಜನನಿ,
ಕಟ್ಟಲೆ ಜನಗಳ ಗುಪ್ತಗಾಮಿನಿ,
ಕವಿಗಳ ಪ್ರಥಮ ಸ್ಫೂರ್ತಿ ನೀ,
ರಸಿಕರ ಅಪ್ರತಿಮ ಪ್ರೇಯಸಿ ನೀ.
ಮನುಗಳ ದೃಷ್ಟಿಯ ಹೊನ್ನಿನ ಸಿರಿ,
ಕಲೆಗಳ ಸೃಷ್ಟಿಯ ನಯನ ಪರಿ,
ಮನುಗಳ ಸ್ವಾರ್ಥಕ್ಕೆ ಬಲಿಯಾಗಬೇಡ,
ಕಲೆಗಳ ನಯನಗಳಿಗೆ ಕೊನೆಯಾಗಬೇಡ.
ಕತ್ತಲು ಕಗ್ಗತಲ ಕಾಡು,
ಹಗಲಿರುಳು ಎನ್ನ ಕಾಡು.
- ಅನಿಕೇತನ
30 Mar 2016, 10:29 am
ತಿಂಗಳ ಬೆಣಕಿನ ತಂಪಿನ ರಾತ್ರಿ,
ಚಂದಿರ ಸೊಬಗಿನ ಮಲೆನಾಡ ಮೈತ್ರಿ,
ನೋಡುಬಾ ನನ್ನರಸಿ,
ಸುಂದರ ರಾತ್ರಿಯೊಳು ಒಡಲನು ಸೊಂಕಿಸಿ.
ಇಲ್ಲಿ ಬಂದು ಎನ್ನ ತಬ್ಬಿ ಕೂರು,
ತಂಗಾಳಿಯ ತಂಪಿನೊಳು ನಿನ್ನ ಪ್ರೀತಿ ಸಾರು,
ಸುತ್ತಲು ಸವರಲಿಬಿಡು ತಣ್ಣನೆ ಚಳಿಯು,
ನೀ ಎನ್ನ ಬಿಟ್ಟು ಸರಿಯದಿರೆಲ್ಲಿಯು.
ನಿನ್ನ ನವನಿತ ಸಾರದ ಕೆನ್ನೆಯ ತೋರಿಪು,
ನನ್ನ ತಣ್ಣಣೆ ತುಟಿಯದನು ಮುಟ್ಟಲು ಬಿಡು,
ನಿನ್ನ ತಣ್ಣಣೆಯ ತುಟಿಯನನಗೆ ತೋರಿಪು,
ನನ್ನ ತುಟಿಯದನು ಚುಂಬಲಿ ಬಿಡು.
ತಿಂಗಳ ಬೆಣಕಿನ ತಂಪಿನ ರಾತ್ರಿ,
ಚಂದ್ರಿಕೆ ಬಾ ಆಗಿಲಿ ನಮಗೆ ಮಲೆನಾಡಿನಲ್ಲಿ ಮೈತ್ರಿ.
- ಅನಿಕೇತನ
29 Mar 2016, 02:12 pm
ಬಯಲುಸೀಮೆಯಿಂದ ಮಲೆನಾಡಿಗೆ,
ಬಿಸಿಲಬೇಗೆಯಿಂದ ಮಳೆಕಾಡಿಗೆ,
ಕೆಲಸದ ಓಟದಿಂದ ಮರಸು ಬೇಟೆಗೆ,
ಯಂತ್ರಗಳಿಂದ ಶಾಂತಿ ಮಂತ್ರಕ್ಕೆ,
ಕತ್ತಲಿಂದ ಬೆಳಕಿಗೆ,
ಕವಿಶೈಲದ ಸಗ್ಗವೀಡಿಗೆ,
ಕ್ಷಣ ಮಾತ್ರದಲ್ಲೆ ಸಂಚರಿಸುವ ಗೋಜಿಗೆ,
ನಡೀ ನೀ ಉದಯರವಿ ಪ್ರಕಾಶನಕ್ಕೆ,
ಹಿಡೀ ನೀ ಕವಿಯ ಕಿರುಬೆರಳು ಮುಂದಕ್ಕೆ,
ಮತ್ತೆಂದು ಬಾರದಿರು ಹಿಂದಕ್ಕೆ,
ನಡೆಯುತ್ತಿರು ವಿಶ್ವಮಾನವನ ಪಥಕ್ಕೆ,
ತಲೆಬಾಗು ಗುರುಗಳ ಆಶೀರ್ವಾದಕ್ಕೆ.
- ಅನಿಕೇತನ
28 Mar 2016, 06:38 pm
ಅವಳೊಂದಿಗೆ ರಾತ್ರಿ ಕಳೆಯುವುದೆಂದರೆ
ಅವಳೆ ನನ್ನ ಕೈ ಹಿಡಿದು
ಆಗಸದ ಚುಕ್ಕಿಗಳ ಮಧ್ಯೆ ರಂಗೋಲಿ ಹಾಕುತ್ತಾಳೆ
ಚಂದ್ರನ ನೋಡೋ ಮನಸ್ಸೇ ಬಾರದು
ಮಡಿಲಲ್ಲಿ ಮಲಗಿಸಿದ ಅವಳು
ತಂಗಾಳಿಯ ಜೊತೆ ಇಂಪಾಗಿ ಹಾಡುತ್ತ
ಮೌನರಾಗವು ಅವಳ ಮೂಗಿನ ಮೂಗುತಿಯಲ್ಲು
ಪಳ ಪಳ ಹೊಳೆಯುವುದು.
ಅದೊಂದೇ ಸಾಕು ಮುತ್ತುಗಳಿಗೆ ಬರ ಎಂದು ಬಾರದು...
- ರವಿಕುಮಾರ
28 Mar 2016, 02:31 pm
ಕೂಗದಿರು ಕರೆಯದಿರು,
ಕುತೂಹಲದಿಂದ ಅತ್ತಿತ್ತ ಹೋಗದಿರು,
ಕುಂತವನು ನಿಲ್ಲದಿರು,
ಪಿಸುಮಾತಿನ ಸದ್ದು ಮಾಡದಿರು.
ಕಣಿವೆಯ ಕಂಡರು ಸುಮ್ಮನಿರು,
ಕಾನನದೊಳು ನೀ ಒಂದಾಗಿರು,
ಮಳೆಯಲಿ ಮಿಂದರು ನಡುಗದಿರು,
ಸುತ್ತ ಹಸುರನು ಕಂಡು ಕುಣಿಯದಿರು.
ನೀ ಏನೇ ಮಾಡಿದರು,
ಮನುಜನ ಮನದ ಮೈಲಿಗೆಯ ತಗಲಿಸದಿರು,
ಮಲೆನಾಡ ಕಾನನದ ಕಮರಿಯೊಳಿಲಿಯಲು,
ಮಲೆನಾಡ ಮೌನದಲಿ ನೀ ಒಂದಾಗಿರು.
- ಅನಿಕೇತನ
28 Mar 2016, 10:04 am