ಜಿಪುಣ ಜನರ ನಡುವಿನ ಈ ಬಾಳು
ರೂಪಾಯಿ ಖರ್ಚಿಗೂ ಕೇಳುವರು ಕಾರಣ
ನಾಳೆಯ ಸುಖಕ್ಕಾಗಿ ತ್ಯಜಿಸುವರು ಈ ದಿನವಾ
ಸುರಿಸುವರು ಬೆವರ ಹನಿಯಾ ಎಣಿಸುವರು ಬೆವರು ಬೆಲೆಯಾ
ಅರಿವಿಲ್ಲದೆ ಕಳೆಯುತಿಹರು ಎರಡು ದಿನದ ಸಂತಸವಾ
ತಿಳಿದಿಲ್ಲ ಅವರು ಈ ಜೀವಕ್ಕೆ ಹೊಣೆಯಾರಿಲ್ಲಾ
ತುಸು ನೋಟ ಮೆಲ್ಲಗೆ ಜಾರಿ ಕನಸುಗಳ ಬೆಸೆಯುತ್ತಿತ್ತು
ಮಾಯದ ಕಣ್ಣೊಳಗೆ ಕಂಡ ಕನಸ್ಸಿನ ಬಣ್ಣ
ಆಗಸದಾಚೆ ಚಿಮ್ಮಿತ್ತು ಮೌನದೊಡನೆ
ಪಿಸುಮಾತಿನ ಕಿರನಗೆಗೆ ಕಳ್ಳನೋಟವ ಬೀರುವ ಚಲುವೆಗೆ ಕಂಬವು ಸಾಟಿಯಾಗಬಲ್ಲದೆ
ಮಳೆಬಿಲ್ಲಿಗೆ ಬಣ್ಣವ ಕಟ್ಟಿ ನನ್ನವಳ ನಗು ನೋಡಬೇಕು
ಹುಣ್ಣಿಮೆಯ ಚಂದಿರನ ಬೆಳಕು ನಾಡೆಲ್ಲ ಎರಚಿದಂತೆ
ತಂಗಾಳಿಯಲ್ಲಿ ಸಾಗಿದ ನಲ್ಲೆಯ ಸೊಬಗ
ಆಗಸದ ಅಂಚಿಂದ ಜಾರಿದ ಬೆಳ್ಳಿ ಮೋಡದ ಎಳೆಯ
ಅವಳ ಸಿಬ್ಬಂದಿ ನೋಡಲು ಕಾತರಿಸುತ್ತಿತ್ತು
ಕಣ್ತೆರೆದು ನೋಡುತ್ತಿರುವೆ ಆಗಸವನು
ನಿನಗೆ..
ಕಣ್ಮುಂದೆ ನೀ ಬರಬಾರದೆ
ಕಾಣದಾಗಿ ಹೋದೆಯಾ ಇಂದು ನನಗೆ..
ಕಣ್ರೆಪ್ಪೆ ಕೆಳಗೆ ನೀ ನಿಲಬಾರದೆ
ವಿರಹದಲಿ ಹೊತ್ತು ಹೋಯಿತು ಅಯ್ಯೋ..
ಕ ಸಂಜೆ ಎಂದೂ
ಬರಬಾರದು ಮುಂದೆ..
-ನವೀನ
ನಾನು ಹೋಟೆಲ್ ನಲ್ಲಿ ತೊಳೆವೆನು
ಊಟದ ಪ್ಲೇಟು
ಎಕೆಂದರೆ ನಾನು ಶಾಲೆಗೆ ಹೋಗಿ ಹಿಡಿಯಲಿಲ್ಲ
ಬರೆಯಲ್ಲಿಕೆ ಸ್ಲೇಟು
ನನಗೆ ಓದಬೇಕೆಂಬ ಯೋಚನೆ ಬಂದಿದ್ದೆ ಲೇಟು
ಅದರೆ ನನ್ನ ಪಾಲಿಗೆ ಶಾಶ್ವತ ವಾಗಿ ಮುಚ್ಚಿ ಹೋಗಿತ್ತು
ನಮ್ಮೋರ ಶಾಲೆಯ ಗೇಟು !