Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೂವು...!

ಅವಳು ನಡೆದು
ಬರುವ ಹಾದಿಯಲ್ಲಿ
ಕೋಗಿಲೆಯು ಕುಹೂ
ಎಂದು ಕೂಗುವ ಬದಲು
ಅವಳ ಹೆಸರನ್ನು
ಕೂಗಿತು ಹೂವು ಎಂದು....


--ಶ್ರೀ

- SHREEHARSHA BHAT

12 May 2016, 05:22 am

ದೇವತೆ...!!

ಬಾನಲ್ಲಿ ಚಂದಿರ ಕಂಡ
ತುಂಬಿಕೊಂಡು ಮೊಗವನ್ನು
ನನ್ನಾಕೆಯ ಮೊಗದಲ್ಲಿಯೂ ಕಂಡ
ಸದಾ ನಗುತ್ತಿದ್ದಾಗ ಮಾತ್ರವೇ

ಕೋಪಗೊಂಡರೆ ಅವಳು
ಆರ್ಭಟಿಸುವ ಮಳೆಗಾಲ
ತಾಳ್ಮೆ ಪಡೆದರೆ ಅವಳು
ತಣ್ಣನೆಯ ಚಳಿಗಾಲ

ಹೊಗಳಲು ಅವಳಂದವನು
ಪದಗಳಿಗೆ ಕೊರತೆಯಾಗಿಹುದು
ಅಪರೂಪದರಸಿಯಿವಳು
ಮನ ಬೆಳಗುವ ದೇವತೆಯಿವಳು..


--ಶ್ರೀ

- SHREEHARSHA BHAT

11 May 2016, 02:42 pm

ಚಿತ್ತ

ಜೀವ ಜೀವ ಸೇರಿ
ನುಡಿಸಿದಂತ ಸವಿಯಾದ
ರಾಗ ಕೊಳಲಿದು....

ರಾಗ ರಾಗ ಶೃತಿಯ ಒಳಗಿನ
ನಮ್ಮಿಬ್ಬರದೆ ಪ್ರೀತಿ
ಉಸಿರದು....

ಒಮ್ಮುವುದೆ ಪ್ರೇಮ ರಾಗ
ಅವಿರತ ಬೆಸುಗೆಯ
ನಮ್ಮ ಅನುರಾಗ....

ಉಸಿರ ಕಟ್ಟಿ ಕೊಳನುದಿದರು
ನಿನ್ನ ಹೆಸರು ನುಡಿದಿದೆ
ನೀನೆ ನಾನು ಎಂದಿದೆ....

ದೈವ ಚೀತ್ತ ನೋಡಿ ನಮ್ಮತ್ತ
ಪ್ರೇಮವಿತ್ತ ಜೋಡಿಯಾಗಿದೆ
ನಡೆಯಿರಿ ಜೊತೆಗೂಡಿ ಎಂದಿದೆ....

ಉಸಿರಿಸದಿರು ಹೆಸರಿಸದಿರು
ನನ್ನ ಮರೆಸದಿರು
ಮತ್ತೆ ನೆನಪಾಗಿ ಬಳಿ
ಬಂದು ನಿಲ್ಲದಿರು....


--ಶ್ರೀ

- SHREEHARSHA BHAT

11 May 2016, 02:36 pm

ಈ ಹೃದಯ... ನಿನ್ನನ್ನೇ ಪ್ರೀತ

ಗೆಳತಿ...
ಬಂದು ಹೋಗುವ...
ಬಂದುವಲ್ಲಾ ಈ ಪ್ರೇಮ....!!

ಈ ಬದುಕ ಪಯಣಕೆ ..
ನೀ ಜೊತೆಯಾಗುವೆಂದು ..
ನಂಬಿ ಕೈ ಹಿಡಿದೆ..!!
ಆದರೆ....?

ನೀ ಈ ಪಯಣಕ್ಕೆ ಹೆದರಿ..
ಮಧ್ಯದಲ್ಲೇ ಕೈ ಬಿಟ್ಟು ಹೋದೆ...
ಹಾಗೆಂದು ನಿನ್ನ ದ್ವೇಷಿಸುತ್ತಿಲ್ಲ ...!!

ಈಗಲೂ ಈ ಹೃದಯ...
ನಿನ್ನನ್ನೇ ಪ್ರೀತಿಸುತ್ತಿದೆ ಒಲವೇ !!...!

--ಶ್ರೀ

- SHREEHARSHA BHAT

11 May 2016, 02:32 pm

ಕೊನೆಯಾಸೆಯ ಕನವರಿಕೆ,

ಕೊನೆಯಾಸೆಯ ಕನವರಿಕೆ
ನೀ.... ನನ್ನವಳಾದರೆ...
ಸಾಕೆನ್ನುವೆ ಗೆಳತಿ..!

ಕೊನೆಯುಸಿರಿನ ಆ ಬಯಕೆ
ಕೊನೆಯುಸಿರಿರುವ ವರೆಗು
ನಾ... ನಿನ್ನವನೇ ಆಗಿರಬೇಕೆನ್ನುವ
ಬಯಕೆ.....!!

love you.... ಗಿಳಿ.!!

- ಅಪ್ಪು ಹೇಳವರ್

10 May 2016, 07:21 pm

ಪ್ರಾರ್ಥನೆ

ಕಳಂಕಿತ ಹೃದಯದಿ
ಬೇಗುದಿಯ ಕಟ್ಟೆಯೊಡೆದು
ಮುಗ್ಗರಿಸಿ ಮುಂದೆ ನಡೆಯಲಾಗದೆ...

ಬೇಸತ್ತ ಮನದಿ
ದುಃಖದ ಕಟ್ಟೆಯೊಡೆದು
ಜಾರಿದ ಕಣ್ಣೀರ ತಡೆಯಲಾಗದೆ...

ಬಾಡಿದ ಜೀವದಿ
ನಿಶ್ಯಕ್ತಿಯ ಬೆವರೊಡೆದು
ಭಾರವಾದ ಕೖೆಗಳೆರಡನು ಎತ್ತಲಾಗದೆ...

ನಿನ್ನ ಸಮ್ಮುಖದಿ
ನಿಲ್ಲಲಾಗದ ಭಯ ಮಿಡಿದು
ಮುಂದೇನೆಂದು ದಾರಿ ಕಾಣದೆ...

ಹಲುಬುತಿದ್ದೇನೆ ನಾನಿಂದು
ನನ್ನನೀ ಕ್ಷಮಿಸೆಯಾ...
ಓ ದೇವಾ..?

- Mohammad Hassan

09 May 2016, 05:45 pm

ಮುದ್ದು ಮನಸ್ಸು

ಮನಸೆ ಮುದ್ದು ಮನಸೆ ‌‌
ಒಂಟಿತನವೆ ನಿನ್ನ ಆಸೆ
ಎದುರೆ ನಿಂತರು
ನೀ ನೊಂದು ಬರಿ ಕನಸೆ
ನಿಶ್ಬ್ದ ಪ್ರೀತಿಗೆ ಮೌನದ ಮಾತಿಗೆ
ಕಂಡ ಕನಸೀಗೆ
ಈ ಕ್ಷ ಣ ಏನೋ ಚಿಂತೆ!

- Ranjitha

09 May 2016, 02:58 pm

ಬೆಳದಿಂಗಳ ಬಾಲೆ

ಬೆಳದಿಂಗಳ ಬಾಲೆ ನಿನ್ನನ್ನು ನಾ ಕಾಣೆ
ಬಂಗಾರ ಗೆಜ್ಜೆ ತೊಟ್ಟು ಶೃಂಗಾರ ಹೆಜ್ಜೆ ಹಾಕಿ
ಎಲ್ಲಿ ಹೋಗಿರುವೆ ನೀನು
ತನುವೆಲ್ಲ ನೀನಾಗಿ ಮನವೆಲ್ಲ ನೀ ತುಂಬಿ
ಬಳಿಬಾರದೆ ಪ್ರೀಯೆ ಬಳಿಬಾರದೆ...

- Irayya Mathad

06 May 2016, 06:08 pm

ಅವಳು

ಅವಳ ಕಣ್ಣಂಚಿನ ಕಾಡಿಗೆ
ಏಕೊ ಇಂದು ಎಡೆಬಿಡದೆ ಕಾಡುತ್ತಿದೆ
ಅವಳ ನಗೆಯಲ್ಲೊಂದು
ಮೋಗ್ಗಿನ ಹೂ ಅರಳುವ ಹಾಗರ
ತುಟಿಯ ಅಂಚಲೊಂದು ದೃಷ್ಟಿ
ಬಟ್ಟು ಮೊಗದಲ್ಲಿ ಹೂಮಳೆ ಚಲ್ಲಿದೆ
ಕೆನ್ನೆಯ ಗುಳಿ ಕನಸನ್ನು ಕದ್ದಿದೆ
ಕಿವಿಯಲ್ಲಿ ಮಿಂಚುತ್ತಿದ್ದ
ಓಲೆಯೊಂದು ಕೂಗುತ್ತಿದೆ
ಮೂಗ ಮೇಲಿನ ಮೂಗುತಿಯೊಂದು
ಮಿಂಚಂತೆ ಮಿಣುಕುತ್ತಿದೆ
ತುಟಿಯ ಕಡಲು ನಗುವಿನ
ಹೊಳೆಯಾಗಿ ಸೇರಿದೆ..

- ರವಿಕುಮಾರ

01 May 2016, 06:29 pm

ಅಂತರಾತ್ಮನ ತೃಪ್ತಿ

ಮಾಯದ ಹೊಳೆಗೆ ಮೋಹದ ಕಣ್ಣೇಕ
ಚಿರಕಾಲ ಜೊತೆಗಿರದ ಸಂಪತ್ತಿನ ಲೋಭವೇಕೆ
ಮಾಸಿಹೋಗುವ ವಸ್ತುಗಳ ವ್ಯಾಮೋಹವೇಕೆ
ಇತಿಮಿತಿಯೊಳಗಿದ್ದರೆ ಅಂತರಾತ್ಮನ ತೃಪ್ತಿಗೆ ಬರವೇಕ ಜಗದಲಿ ಶ್ರೀ ಹರಿಯೆ ನಿನ್ನ ನಾಮದ ಮಂತ್ರವಿದ್ದರೆ ಸಾಕು ಮುಕ್ತಿಯ ಪಥ ಸೇರುವೆ..

- Irayya Mathad

27 Apr 2016, 02:10 am