ಬರೆಯುವುದಕ್ಕೆ ಸಾಲುಗಳಿಲ್ಲ ಆದರು ಅವಳೆ ನಾಯಕಿ
ಕನಸುಗಳು ಸ್ಪಷ್ಟವಾಗಿಲ್ಲ ಆದರು ಅವಳೆ ಅಲ್ಲು
ನೆನಪುಗಳು ಮಾಸಿಲ್ಲ ಅವಳಿಲ್ಲದೆ
ಮೊದಲ ಪುಟವೆ ಖಾಲಿಹಾಳೆ
ಮುನ್ನುಡಿಯು ಅವಳೆ ಖಾಲಿಯಾಗಿಯೆ
ಎಲ್ಲವು ಅಸ್ಪಷ್ಟ ಅವಳ ನಗುವೊಂದಿಗೆ
ಏನು ಹೊಳೆಯದು ಬರೆಯಲು ಆದರು ಬರೆಯೊ ಚಪಲ
ಎಲ್ಲವೂ ಅವಳಿಂದಾನೆ ಬರೆದೆ ಬರೆದೆ ಅಂತ್ಯವೇ ಇಲ್ಲ
ಗೀಚಿದೆ ಬಿಳಿಯ ಹಾಳೆಯ ಮೇಲೆ
ಅದು ಬಣ್ಣ ಬಳಿದೊಡನೆ ಕುಣಿದಾಡಿತು
ಮುನ್ನುಡಿ ಖಾಲಿ ಹಾಳೆಯಾದರು
ಕಥೆಗೆ ಅಂತ್ಯ ಕಾಣಲಿಲ್ಲ...
ಕವಿತೆಯ ಪದಗಳೆಲ್ಲವು ಖಾಲಿಯಾದವು
ಅವಳ ವರ್ಣನೆಯ ವಾಕ್ಯಗಳೆಲ್ಲವು ಮುಗಿದುಹೋದವು
ಇನ್ನು ಮುಂದೆ ಅವಳು ಮತ್ತು ನಾನೆ
ಖಾಲಿ ಹಾಳೆಗಳೆ ಸಂಭಾಷಣೆ
ಉಳಿದಿದ್ದ ಪದಗಳ ಹುಡುಕಾಟ
ಬಿಳಿ ಹಾಳೆಯು ಬಣ್ಣ ಬಳಿದುಕೊಳ್ಳುತ್ತಿತ್ತು
ನನ್ನ ಲೇಖನಿ ನಿಂತು ನೋಡುತ್ತಿತ್ತು
ಬರೆಯಲು ಕೈ ಚಾಚಲಿಲ್ಲ
ಅವಳು ಮೌನವಾಗಿದ್ದಳು...
ಅವನು ಬಲು ಮುದ್ದಾದ ಹುಡುಗ
ಅವಳ ಕನಸಿಗೆ ಇವನೆ ಪಯಣಿಗ ಪ್ರೇಮದ ಹೂವುಗಳ ಮಳೆಗೆ
ಇಬ್ಬರ ಒಲವಿನ ಅಪ್ಪುಗೆಗೆ
ಆ ಚಂದ್ರನು ತನ್ನ ಕಾಂತಿಯ
ಸೊಗಸಾದ ನಗುವನ್ನು ಚೆಲ್ಲುತಿರುವನು!!!
ಮೌನದ ಹುಡುಗಿ ನಾಚುತ್ತಿರಲು
ಚೆಂದದ ಹುಡುಗ ಸೊಲುತ್ತಿರುವನು
ಕಣ್ಣುಗಳು ಅರಿಯದ ಮಾತನ್ನು
ಹೃದಯ ಕೂಗಿ ಹೇಳುತಿದೆ
ಕಳೆದುಕೊಂಡ ಮನಸ್ಸುಗಳನ್ನು ಹುಡುಕುವ ಈ ಜೋಡಿ
ಪ್ರೀತಿ ಇವರಿಗೆ ಮಾಡಿತೆ ಮೊಡಿ!!!!!!
ನೀಲಿ ಆಕಾಶದ ಕೆಳಗೆ .....
ಪ್ರೆಮೀಯೊಬ್ಬ ಪ್ರೀತೀಯ ಅಮಲೀನೊಳಗೆ
ಕನಸೀನ ಹುಡುಗಿಯಾ ಹೆಜ್ಜೆ ಯ ಸದ್ದಿಗೆ
ಹೃದಯದಲ್ಲಿ, ಆಸೆಗಳು ಅವಳ ಕಡೆಗೆ!!!!
ಕಂಡು ಕಾಣದಂತೆ ಮರೆಯಾದ ವನೀತೆ ಬಡಪಾಯೀ ಹುಡುಗ, ಹುಚ್ಚನಾದ ಪ್ರೀಯಾತಮೆಗೆ
ಮನಸ್ಸಿನಲ್ಲಿ ನೊವೀನ ಅಲೆಗಳ ವೇಗಕ್ಕೆ
ಪ್ರೆಮೀಯೊಬ್ಬ ಮತ್ತೆ ಕುಳಿತನು
ನಕ್ಷತ್ರ ಗಳನ್ನು ದಿಟ್ಟಿಸುತ್ತ
ಕತ್ತಲಾದ ಆಕಾಶದ ಕೆಳಗೆ...............
ಪರಿಸರ ಕೊಂದ ಮಾನವ ಮೋಡಗಳ ಕೊಲ್ಲಲು ಹೊರಟಿದ್ದಾನೆ
ತನ್ನ ದುರಾಸೆಯಿಂದ ನಿಸರ್ಗವೆಲ್ಲವನ್ನು ಲೂಟಿ ಮಾಡಿದ
ತನಗೆ ಇಷ್ಟವಾದದನ್ನೆಲ್ಲ ಕೊಂಡ
ಅಗತ್ಯ ಇಲ್ಲದೆಯೂ ಪ್ರಾಣಿ ಪಕ್ಷಿಗಳ ಕೊಂದ
ತನ್ನವರ ಏಳಿಗೆ ಸಹಿಸದೆ ಮಾತು ಬಿಟ್ಟು ಕೊಂದ
ಜಾತಿ ಧರ್ಮ ಸೃಷ್ಟಿಸಿ ಸಂಸ್ಕೃತಿಯ ಕೊಂದ
ಕೊನೆಗೆ ಏನಾಯಿತು ಪ್ರಕೃತಿ ಮಾತೆ ಮುನಿದಿದ್ದಾಳೆ ಎಲ್ಲವು ಕೈಗೆಟುಕದ ಸಾಗಿವೆ.
ಮಳೆಯಿಲ್ಲದೆ ಬೆಳೆಯಿಲ್ಲದೆ ಮನುಷ್ಯ ಸಾಯುತ್ತಿದ್ದಾನೆ ಇದು ಭೂಮಾತೆಯ ಶಾಪ.
ಎಷ್ಟು ದಿನ ತಾನೆ ಮೋಡಗಳ ಹಗ್ಗ ಹಾಕಿ ಬಂದಿಸುತ್ತಾನೆ.
ಕೊನೆಯ ದಿನಗಳು ಸಮೀಪಿಸುತ್ತಿವೆ ಈಗಾಲಾದರು ಬುದ್ದಿಕಲಿ ಮಾನವ.
.
ಓ ಗೆಳತಿ ಮತ್ತೆ ಬರ ಬೇಡ ಬಾಳಲ್ಲಿ
ನನಗೆ ಕೊಡುವುದಕ್ಕೆ ಮತ್ತೊಂದು ಹೃದಯವಿಲ್ಲ
ಹೊಸ ಪಾಠದ ಜೋತಗೆ ಸಾಕಸ್ಟು ಅನುಭವ ನೀಡಿದೆ
ಸತ್ತು ಹುಟ್ಟಿ ಬಂದಿದೆನು ಸಾಧನೆ ಮಾಡಲು
ಈ ಜೀವ ಸಾಧನೆ ಮಾಡಿ ಸಾಧಕನಾಗಲು ಗಳತಿ.............
ಬರೆಯದ ಎಷ್ಟೋ ಸಾಲು
ಮನದಲ್ಲಿಯೆ ಉಳದಿದೆ
ಹೇಳದ ಎಷ್ಟೋ ಮಾತು
ತುಟಿಯಂಚಿನಲಿ ನಿಂತಿದೆ
ಕಣ್ಣಲ್ಲಿಯೆ ಹೆಪ್ಪುಗಟ್ಟಿರುವ
ಕಂಬನಿ ಹೊರಗೆ ಬರಲು
ತವಕಿಸುತಿದೆ
ನನ್ನ ಕಿರಿ ಬೆರಳು ನಿನ್ನ
ಬೆಸುಗೆಗೆ ಹಾತೊರೆಯುತಿದೆ
ಆದರೂ ನಾನು ಕಾಯಬೇಕಿದೆ ಇದಕ್ಕೆಲ್ಲಾ
ಬಿಡುಗಡೆ ಎಂದಿಗೆ ಎಂದು
ಸೂರ್ಯ ಚಂದ್ರರೆ ನಿನ್ನ ನಯನಗಳಾಗಿ
ತಾವರೆಯೆ ನಿನ್ನ ಮೊಗವಾಗಿ
ಮಿನುಗುವ ತಾರೆಗಳೆ ನಿನ್ನ ಮುಡಿಗೆ ಹೂವಾಗಿ
ಏಳು ಬಣ್ಣಗಳ ಕಾಮನ ಬಿಲ್ಲೆ ನಿನ್ನ ಅಂದದ ಪ್ರತಿಬಿಂಬವಾಗಿ
ಸಪ್ತ ಲೋಕಗಳ ಸುಂದರಿ ನೀನಾಗಿ
ಆ ಮೇಘವೆ ನೀ ನಡೆದಾಡುವ ರತ್ನಗಂಬಳಿಯಾಗಿ
ತಾಯಿಯೊಡಲ ಮಗುವಾಗಿ
ನಿನ್ನ ನಗುವೆ ನನ್ನ ಜಗವಾಗಿ
ಚಿರಕಾಲ ನಗುತಿರು ನನ್ನ ಪಟ್ಟದರಸಿ ನೀನಾಗಿ...