ವಸಂತ ಋತುವಿನಲಿ
ನಿನ್ನ ದನಿಯ ಕೇಳುತ ಮರೆತೆನು
ನಾ ನನ್ನನೆ - ಓ ಕೋಗಿಲೆ...
ಹೋಲಿಕೆಯಲಿ ನೀ ನೋಡಲು ಕಾಕನಂತಿದ್ದರೂ,
ನಿನ್ನ ದನಿಯೇ ಅತಿಮಧುರ...
ಮಾವಿನ ಚಿಗುರ ತಿಂದು ನೆಲೆಸಿರುವೆ
ನೀ ಕಾನನದಲ್ಲಿ...
ನಿನ್ನ ದನಿಗೆ ಮರುಳಾಗದಿಹನಿಲ್ಲ
ಈ ಜಗದಲ್ಲಿ....
ಏನಿದ್ದರೂ ಸಾಕಿಲ್ಲವೆಂಬಂತೆ ಬದುಕಿಹೆವು ನಾವಿಲ್ಲಿ....
ನೀಡು ನಿನ್ನ ಸೌಮ್ಯತೆ
ಈ ಜನರಲ್ಲಿ....
ನಿನಗಾರು ಸಾಟಿಯೇ ಕೋಗಿಲೆ...
ನಿನಗೆ ನೀನೇ
ಸಾಟಿಯು - ಓ ಕೋಗಿಲೆ...
ಬಂದೊಮ್ಮೆ
ಹಾಡೇ - ಓ ಕೋಗಿಲೆ.....
ನಾನೀದ್ದೇ ನನ್ನದೇ ಗುಂಗಿನಲಿ,
ನೀನೇಕೆ ಬಂದೆ ಎನ್ನ ಮನಸಿನಲಿ,
ಹುಚ್ಚು ಹಿಡಿಸುವ ಮುನ್ನ,
ಬಿಚ್ಚಿ ಹೇಳು ನನ್ನ ಹುಚ್ಚು ಗೆಳತಿ,
ನೀನಾಗಿ ಬಾ ನನ್ನ ಬಾಳ ಸಂಗಾತಿ,
ಇದೇ ನನ್ನ ಕೇೂನೆಯ ವಿನಂತಿ.
ಮುಸುಕಿನ ವೇಳೆಯಲಿ ನಡೆಯುವಾಗ
ಬಳ್ಳಿಯನು ಕಂಡು
ತಣ್ಣಗೆ ಬೀಸುವ ಗಾಳಿಗೆ ಬಳ್ಳಿ
ಬಳುಕುವ ಪರಿಗೆ ಮುದಗೊಂಡು
ನಿಂತ ನನಗೆ,
ಅದಕ್ಕಿಂತ ಸರಿಸಾಟಿ ನಾನಿಲ್ಲವೆ!
ಎಂಬಂತೆ ನಿನ್ನ ರೂಪು ನನ್ನ ಕಣ್ಣಿಗೆ ಲೇಪಿಸಿತು.